ಕೇಂದ್ರ ಸರ್ಕಾರದ ಮುದ್ರಾ ಯೋಜನೆ ಹೆಸರಲ್ಲಿ 1.63 ಲಕ್ಷ ರೂ. ವಂಚನೆ: ಈಗ್ಲೇ ನಿಮ್ಮ ಬಾಂಡ್ ಪೇಪರ್ ಪರಿಶೀಲಿಸಿ
ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಡಿ 10 ಲಕ್ಷ ರೂ. ಸಾಲ ಕೊಡುವುದಾಗಿ ಸೈಬರ್ ವಂಚಕರು ನಕಲಿ ವೆಬ್‌ಸೈಟ್ ಸೃಜಿಸಿ 1.63 ಲಕ್ಷ ರೂ. ವಂಚನೆ ಮಾಡಿದ್ದಾರೆ.
ಬೆಂಗಳೂರು (ಜ.24): ಕೇಂದ್ರ ಸರ್ಕಾರದಿಂದ ವಿದ್ಯಾವಂತ ಯುವಕರು ಉದ್ಯಮವನ್ನು ಆರಂಭಿಸಲು 10 ಲಕ್ಷ ರೂ.ವರೆಗೆ ನೀಡುವ ಸಾಲ ನೀಡುವ ಮುದ್ರಾ ಯೋಜನೆಯನ್ನೇ ನಕಲಿ ಮಾಡಿ ಅರ್ಜಿ ಸಲ್ಲಿಕೆ ಮಾಡಿದ ಫಲಾನುಭವಿಗೆ ನಕಲಿ ಬಾಂಡ್ ಪೇಪರ್, ನಕಲಿ ಲೆಟರ್ ಹೆಡ್ ಹಾಗೂ ನಕಲಿ ಸಾಲ ಅಪ್ರೂವಲ್ ಲೆಟರ್ ಸೃಜಿಸಿ ಬರೋಬ್ಬರಿ 1.63 ಲಕ್ಷ ರೂ. ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಮುದ್ರಾ ಯೋಜನೆಯಿಂದ ಉದ್ಯಮದ ಸಾಲ ಪಡೆಯಲು ಮುಂದಾಗಿ ಹಣ ಕಳೆದುಕೊಂಡ ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆದ್ದರಿಂದ ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಲ್ಲಿ ಲೋನ್ ಪಡೆಯಲು ಅನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಮಾಡುವವರು ಎಚ್ಚರವಹಿಸಬೇಕು. ಪ್ರಧಾನಮಂತ್ರಿ ಮುದ್ರಾ ಯೋಜನೆಯ ಹೆಸರಲ್ಲಿ ಸಾಲ ನೀಡೋದಾಗಿ ಸೈಬರ್ ಫ್ರಾಡ್ ಮಾಡಲಾಗಿದ್ದು, ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಾಗೂ ಮುದ್ರಾ ಯೋಜನೆಯ ನಕಲಿ ಲೆಟರ್ ಹೆಡ್ ಬಳಸಿ ವಂಚನೆ ಮಾಡಲಾಗಿದೆ. ಇನ್ನು ಎಲ್ಲ ಲೆಟರ್‌ಹೆಡ್‌ಗಳು ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಡಿ ನೀಡುವ ಓರಿಜಿನಲ್ ಲೆಟರ್ ಹೆಡ್ ಗಳನ್ನೂ ಮೀರಿಸುವಂತಿದ್ದು, ಇದನ್ನು ನೋಡಿ ಅರ್ಜಿದಾರ ಮೋಸ ಹೋಗಿದ್ದಾನೆ.
ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟ ತಪ್ಪಿಸಲು ಮುಂದಾದ ಕೆಎಎಸ್ ಅಧಿಕಾರಿಯದ್ದೇ ತಪ್ಪು: ಸಿಎಂ ಸಿದ್ದರಾಮಯ್ಯ!
ಸೈಬರ್ ಕಳ್ಳರು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮುದ್ರಾ ಯೋಜನೆಗೆ ಅರ್ಜಿ ಸಲ್ಲಿಕೆಗೆ ನಕಲಿ ವೆಬ್‌ಸೈಟ್ ಆರಂಭಿಸಿದ್ದಾರೆ. ಈ ನಕಲಿ ವೆಬ್‌ಸೈಟ್‌ನಲ್ಲಿ ಮುದ್ರಾ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ ದಾಖಲೆಗಳನ್ನೂ ಸಲ್ಲಿಕೆ ಮಾಡಿರುವುದನ್ನು ಗಮನಿಸಿ ಸೈಬರ್ ಕಳ್ಳರು ನಕಲಿ ಬಾಂಡ್ ಕಳಿಸಿ ಮೋಸ ಮಾಡಿದ್ದಾರೆ. ಅರ್ಜಿದಾರನಿಗೆ ಶೇ.2 ಪರ್ಸೆಂಟ್ ಬಡ್ಡಿ ಮೊತ್ತದಡಿ 10 ಲಕ್ಷ ರೂಪಾಯಿ ಸಾಲ ನೀಡೋದಾಗಿ ಹೇಳಿದ್ದಾರೆ. ನಂತರ, ಆರ್‌ಬಿಐನಿಂದ ಲೋನ್ ಸಾಂಕ್ಷನ್ ಆಗಿದೆ ಎಂದು ನಕಲಿ ಕನ್ಫರ್ಮೇಷನ್ ಲೆಟರ್ ಕಳುಹಿಸಿದ್ದಾರೆ.
ಅರ್ಜಿದಾರನಿಂದ ಮೊದಲಿಗೆ ಫೀಸ್ ಎಂದು 10 ಸಾವಿರ ರೂ. ಹಣ ಹಾಕಿಸಿಕೊಂಡಿದ್ದಾರೆ.ಈ ವೇಳೆ ಅರ್ಜಿದಾರ ನಾರಾಯಣಸ್ವಾಮಿ ಫೀಸ್ ಹಣ ಕಟ್ಟಿದ್ದಾರೆ. ನಂತರ ಹಂದ ಹಂತವಾಗಿ ಪ್ರೊಸೆಸಿಂಗ್ ಫೀಸ್ ಎಂದು ನಕಲಿ ಬಾಂಡ್ ಪೇಪರ್‌ಗಳನ್ನು ನೀಡುತ್ತಾ ಹಣವನ್ನು ಪಡೆದುಕೊಂಡಿದ್ದಾರೆ. ಜೊತೆಗೆ, ನಾರಾಯಣ ಸ್ವಾಮಿಗೆ ನಂಬಿಕೆ ಬರಲು ನಕಲಿ ಅಗ್ರೀಮೆಂಟ್ ಕಾಪಿಯನ್ನೂ ಕಳಿಸಿದ್ದಾರೆ. ನಂತರ, ಲೋನ್ ಸ್ಯಾಂಕ್ಷನ್ ಕಾಪಿಯನ್ನು ನೀಡಲು ನೀವು ತೆರಿಗೆಯಾಗಿ 25 ಸಾವಿರ ರೂ. ಹಣ ಕಟ್ಟಬೇಕು ಎಂದು ಹೇಳಿದ್ದಾರೆ. ಈ ವೇಳೆ ಅರ್ಜಿದಾರ ತನ್ನ ಬೈಕ್ ಮಾರಿ ಹಣವನ್ನೂ ಕಟ್ಟಿದ್ದಾನೆ.
ಬೆಂಗಳೂರು: 5 ಜನ ವಾಹನ ಕಳ್ಳರ ಸೆರೆ: ₹55 ಲಕ್ಷ ಮೌಲ್ಯದ 51 ಬೈಕ್ ಜಪ್ತಿ!
ದೊಡ್ಡ ಮೊತ್ತದ ಹಣ ಪಾವತಿಸಿಕೊಂಡ ನಂತರ ವಂಚಕರು ನಕಲಿ ಲೋನ್ ಸ್ಯಾಂಕ್ಷನ್ ಅಪ್ರೂವಲ್ ಫಾರ್ಮ್ ಕಳಿಸಿದ್ದಾರೆ. ಹಂತ ಹಂತವಾಗಿ ವಂಚಕರು ಅರ್ಜಿದಾರ ನಾರಾಯಣಸ್ವಾಮಿಯಿಂದ 1 ಲಕ್ಷ 63 ಸಾವಿರ ರೂ. ಹಣವನ್ನು ಕಿತ್ತುಕೊಂಡಿದ್ದಾರೆ. ಇಷ್ಟಾದರೂ ಧನದಾಹ ತೀರದ ಸೈಬರ್ ಕಳ್ಳರು ಹಣ ಕಟ್ಟಿಸಿಕೊಂಡ ನಂತರ ಮತ್ತೆ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ. ಆಗ ಮುದ್ರಾ ಯೋಜನೆ ಫಲಾನುಭವಿಯೊಬ್ಬರನ್ನು ನಾರಾಯಣಸ್ವಾಮಿ ವಿಚಾರಿಸಿದಾಗ ಹಣ ಕಟ್ಟಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಆಗ ತಾನು ಅರ್ಜಿ ಸಲ್ಲಿಕೆ ಮಾಡಿದ ಬಗ್ಗೆ ಅನುಮಾನ ಬಂದು ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಎಲ್ಲವೂ ನಕಲಿ ಎಂಬುದು ತಿಳಿದುಬಂದಿದೆ. ಕೂಡಲೇ ಹೋಗಿ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.