ಜಯದೇವ ಆಸ್ಪತ್ರೆಯ ನಿರ್ದೇಶಕನಾಗಿದ್ದಲೇ ನಾನು ಒಂದು ಫಾರಿನ್ ಟ್ರಿಪ್‌ಗೆ ಹೋಗಲಿಲ್ಲ. ಇನ್ನು ನಿವೃತ್ತಿ ನಂತರ ವೃತ್ತಿ ಮುಂದುವರಿಕೆಗೆ ವಿದೇಶಕ್ಕೆ ಹೋಗ್ತೀನಾ ಎಂದು ಡಾ.ಸಿ.ಎನ್, ಮಂಜುನಾಥ್ ಹೇಳಿದರು.
ಬೆಂಗಳೂರು (ಜ.24): ರಾಜ್ಯದಲ್ಲಿ 16 ವರ್ಷಗಳ ಕಾಲ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕನಾಗಿದ್ದರೂ ಒಂದು ಫಾರಿನ್ ಟ್ರಿಪ್‌ಗೆ ಹೋಗಲಿಲ್ಲ. ಇನ್ನು ನಿವೃತ್ತಿ ನಂತರ ವಿದೇಶಕ್ಕೆ ಹೋಗಿ ಸೇವೆಯನ್ನು ಮಾಡ್ತೀನಾ? ನಾನು ನಿವೃತ್ತಿ ನಂತರದ ಸೇವೆಗಾಗಿ ಯಾವುದೇ ವಿದೇಶಕ್ಕೆ ಹೋಗುವುದಿಲ್ಲ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ.
ರಾಜ್ಯದಲ್ಲಿ ಹೃದ್ರೋಗ ಚಿಕಿತ್ಸೆಗೆ ಸರ್ಕಾರ ಸ್ಥಾಪಿಸಿದ 300 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಹೈಟೆಕ್ ಮಾದರಿಯ ಆಸ್ಪತ್ರೆಯಾಗಿ ಪರಿವರ್ತಿಸಿದಿ 2,000 ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚಳ ಮಾಡಿ ಬಡವರಿಗೂ ಶ್ರೀಮಂತರು ಚಿಕಿತ್ಸೆ ಪಡೆಯುವಷ್ಟೇ ಸೌಲಭ್ಯವಿರುವ ಗುಣಮಟ್ಟದ ಚಿಕಿತ್ಸೆ ನೀಡುವಂತೆ ಮಾಡಿದ ಕೀರ್ತಿ ಡಾ.ಸಿ.ಎನ್. ಮಂಜುನಾಥ್ ಅವರಿಗೆ ಸಲ್ಲುತ್ತದೆ. ಅವರ ನಿರಂತರ ಆರೋಗ್ಯ ಸೇವೆಗಾಗಿ ಹಲವು ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಲಾಗಿದೆ. ಆದರೆ, ಈ ಹಿಂದಿನ ಸರ್ಕಾರ ಅವರನ್ನು ನಿವೃತ್ತಿ ನಂತರವೂ ಎರಡು ಬಾರಿ ಸೇವಾ ಅವಧಿಯನ್ನು ಮುಂದುವರೆಸಲಾಗಿತ್ತು. ಹಾಲಿ ಅಧಿಕಾರದಲ್ಲಿರುವ ಸರ್ಕಾರ ಡಾ. ಮಂಜುನಾಥ್ ಅವರನ್ನು ಒಂದು ಮಾತನ್ನೂ ಕೇಳದೆ ಬದಲಿ ನಿರ್ದೇಶಕರ ಆಯ್ಕೆಗೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವಧಿ ಮುಕ್ತಾಯ: ಸರ್ಕಾರದ ವಿರುದ್ಧ ಅಸಮಾಧಾನ!
ಜಯದೇವ ಆಸ್ಪತ್ರೆ ನಿರ್ದೇಶಕ ಸ್ಥಾನ ಜ.31ಕ್ಕೆ ಮುಕ್ತಾಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಮಂಜುನಾಥ್ ಅವರಿಗೆ, ಮಾಧ್ಯಮಗಳಿಂದ ನಿವೃತ್ತಿ ನಂತರ ವಿದೇಶಗಳಿಗೆ ಹೋಗಿ ಸೇವೆ ಮಾಡುತ್ತೀರಾ ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ಸಾದಾಸೀದಾ ಪ್ರತಿಕ್ರಿಯೆ ನೀಡಿದ ಮಂಜುನಾಥ್ ಅವರು 'ನಾನು ಜಯದೇವ ಆಸ್ಪತ್ರೆ ನಿರ್ದೇಶಕನಾಗಿ ಇದ್ದಾಗಲೇ ಯಾವುದೇ ಫಾರಿನ್ ಟ್ರಿಪ್ ಹೋಗಲಿಲ್ಲ. ಈಗ ವೃತ್ತಿ ಮುಂದುವರೆಸಲು ಫಾರಿನ್ ಹೋಗ್ತಾರೆ ಅನ್ನೋ ಮಾತು ಸತ್ಯಕ್ಕೆ ದೂರವಾದ ಮಾತು ಎಂದು ಹೇಳುವ ಮೂಲಕ ವಿದೇಶಗಳಿಗೆ ಸೇವೆಗಾಗಿ ಹೋಗಲ್ಲ ಎಂಬ ಮಾತನ್ನು ತಿಳಿಸಿದ್ದಾರೆ.
ಕಲಬುರಗಿ ಆಸ್ಪತ್ರೆ ಉದ್ಘಾಟನೆ ಮಾಡಬೇಕೆನ್ನುವುದು ನನ್ನ ಬಯಕೆಯಾಗಿತ್ತು:
ಇನ್ನು ಕಲಬುರ್ಗಿಯಲ್ಲಿ ಜಯದೇವ ಕಾರ್ಯ ಬಹುತೇಕ ಮುಕ್ತಾಯ ಆಗಿದೆ. ಕಲ್ಬುರ್ಗಿ ಜಯದೇವ ಕೆಲಸ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಮುಗಿಬಹುದು. ಆದರೆ, ನನ್ನ ನಿರ್ದೇಶಕ ಸೇವಾ ಅವಧಿಯಲ್ಲಿಯೇ ಕಲಬುರಗಿಯ ಜಯದೇವ ಉದ್ಘಾಟನೆ ಮಾಡಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಅದರ ಉದ್ಘಾಟನೆಗೆ ನಾನು ಇರಬೇಕಿತ್ತು ಅನ್ನೋ ಆಸೆ ನನಗಿತ್ತು . ಸರ್ಕಾರಕ್ಕೆ ನನ್ನನ್ನು ಮುಮದುವರೆಸಿ ಅಂತ ನಾನು ಯಾವ ಕಾರಣಕ್ಕೂ ಕೇಳೋದಿಲ್ಲ. ಅದು ನನ್ನ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗುತ್ತದೆ. ಈಗ ಎಲ್ಲಾ ಮುಗಿದು ಹೋಗಿದೆ. ಇನ್ನೊಂದು ವಾರದಲ್ಲಿ ಹೊಸ ನಿರ್ದೇಶಕರು ಬರ್ತಾರೆ. ಯಾರು ಬರ್ತಾರೆ ನನಗೆ ಗೊತ್ತಿಲ್ಲ. ಆಯ್ಕೆ ಕಮಿಟಿಯಲ್ಲಿ ನಾನಿರಲಿಲ್ಲ. ನನ್ನನ್ನು ಯಾರು ಕೂಡ ಕೇಳಿಲ್ಲ ಎನ್ನುವ ಮೂಲಕ ಸರ್ಕಾರದ ನಡೆಯ ವಿರುದ್ಧ ಹಾಗೂ ತಮ್ಮನ್ನು ಹೀಗೆ ನಿವೃತ್ತಿ ಮಾಡುತ್ತಿರುವ ಬಗ್ಗೆ ಡಾ. ಸಿ.ಎನ್. ಮಂಜುನಾಥ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
ರಾಜಕಾರಣಕ್ಕೆ ನಾನು ಹೋಗಲ್ಲ:
ನಿವೃತ್ತಿ ನಂತರ ನಾನು ರಾಜಕೀಯಕ್ಕೆ ಹೋಗೋದಿಲ್ಲ. ನನ್ನ ವೃತ್ತಿಯನ್ನು ಮುಂದುರೆಸುತ್ತೇನೆ. ರಾಜಕೀಯಕ್ಕೆ ಆಫರ್ ಬಂದಿರೋದೆಲ್ಲಾ ಗಾಳಿಸುದ್ದಿಯಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಂಪುಟ ಸಹೋದ್ಯೋಗಿಗಳು ಯಾರು ಕೂಡ ನನ್ನ ಮಾತನಾಡಿಸಿಲ್ಲ. ನನ್ನನ್ನು ಯಾರೂ ಕೂಡ ಕೇಳಿಕೊಂಡಿಲ್ಲ. ಒಟ್ಟಾಗಿ ನನಗೆ ರಾಜಕೀಯದ ವಿಚಾರವೇ ಗೊತ್ತಿಲ್ಲ ಎಂದು ರಾಜಕೀಯ ಸೇರ್ಪಡೆಯನ್ನೂ ಕೂಡ ಅಲ್ಲಗಳೆದಿದ್ದಾರೆ.
ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟ ತಪ್ಪಿಸಲು ಮುಂದಾದ ಕೆಎಎಸ್ ಅಧಿಕಾರಿಯದ್ದೇ ತಪ್ಪು: ಸಿಎಂ ಸಿದ್ದರಾಮಯ್ಯ!
ಸರ್ಕಾರ ಗೌರವಯುತವಾಗಿ ಕಳಿಸಿಕೊಡ್ತಿಲ್ಲ:
ಜಯದೇವ ಆಸ್ಪತ್ರೆಯ ಮೂಲಕ ಉತ್ತಮ ಸೇವೆ ಮಾಡಿದ್ದರೂ ಸರ್ಕಾರದಿಂದ ಗೌರವಯುತವಾಗಿ ಕಳಿಸಿಕೊಡ್ತಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಜನ ಸಾಮಾನ್ಯರು, ಜನರು ನನಗೆ ಗೌರವ ಕೊಡುತ್ತಿದ್ದಾರೆ. ಎಲ್ಲರೂ ನನ್ನನ್ನು ಗೌರವಯುತವಾಗಿ ಕಳಿಸಿಕೊಡ್ತಾ ಇದ್ದಾರೆ. ಸರ್ಕಾರ ಹಾನರ್ ಮಾಡ್ತಿಲ್ಲ ಅಂದಿದ್ದಕ್ಕೆ ಡಾ. ಮಂಜುನಾಥ್ ಅವರು ಬೇಸರ ವ್ಯಕ್ತಪಡಿಸಿ ಉತ್ತರಿಸದೇ ಸುಮ್ಮನಾದರು. ಆದರೆ, ನನ್ನ ಆಸ್ಫತ್ರೆ ಸ್ಟಾಫ್ ನನಗೋಸ್ಕರ ಜ.31ಕ್ಕೆ ಕಾರ್ಯಕ್ರಮ ಮಾಡ್ತಾ ಇದ್ದಾರೆ. ಅವರು ಗೌರವಯುತವಾಗಿ ಕಳಿಸಿಕೊಡ್ತಾ ಇದ್ದಾರೆ ಎಂದು ಹೇಳಿದರು.