ಶ್ರೀರಾಮುಲು-ಜನಾರ್ದನ ರೆಡ್ಡಿ ಮತ್ತೆ ಒಂದಾದ್ರೆ ಲೋಕಸಭಾ ಚುನಾವಣೆ ಗೆಲುವು ಗ್ಯಾರಂಟಿ: ಮಾಜಿ ಶಾಸಕ ಸೋಮಶೇಖರ್ ರೆಡ್ಡಿ

By Ravi Janekal  |  First Published Jan 30, 2024, 12:23 PM IST

ಜನಾರ್ದನ ರೆಡ್ಡಿ ಬಿಜೆಪಿ ಬಂದ್ರೆ ಮುಕ್ತಕಂಠದಿಂದ ಸ್ವಾಗತ ಮಾಡುತ್ತೇನೆ. ಆದರೆ ಜನಾರ್ದನ ರೆಡ್ಡಿ ಇಲ್ಲಾಂದ್ರೆ ಬಳ್ಳಾರಿಯಲ್ಲಿ ಬಿಜೆಪಿ ಇಲ್ಲ ಅನ್ನೋದನ್ನ ನಾನು ಒಪ್ಪಲ್ಲ. ಅವರಿಂದಲೇ ನಾವೆಲ್ಲ ಸೋತಿದ್ದೇವೆ ಅನ್ನೋದೆಲ್ಲ ಸುಳ್ಳು ಎಂದು  ಜನಾರ್ದನ ರೆಡ್ಡಿ ಬಿಜೆಪಿ ಬರುವ ಚರ್ಚೆ ನಡೆದಿರೋ ಬೆನ್ನಲ್ಲೆ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆ.


ಬಳ್ಳಾರಿ (ಜ.30): ಜನಾರ್ದನ ರೆಡ್ಡಿ ಬಿಜೆಪಿ ಬಂದ್ರೆ ಮುಕ್ತಕಂಠದಿಂದ ಸ್ವಾಗತ ಮಾಡುತ್ತೇನೆ. ಆದರೆ ಜನಾರ್ದನ ರೆಡ್ಡಿ ಇಲ್ಲಾಂದ್ರೆ ಬಳ್ಳಾರಿಯಲ್ಲಿ ಬಿಜೆಪಿ ಇಲ್ಲ ಅನ್ನೋದನ್ನ ನಾನು ಒಪ್ಪಲ್ಲ. ಅವರಿಂದಲೇ ನಾವೆಲ್ಲ ಸೋತಿದ್ದೇವೆ ಅನ್ನೋದೆಲ್ಲ ಸುಳ್ಳು ಎಂದು  ಜನಾರ್ದನ ರೆಡ್ಡಿ ಬಿಜೆಪಿ ಬರುವ ಚರ್ಚೆ ನಡೆದಿರೋ ಬೆನ್ನಲ್ಲೆ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆ.

ಕೆಆರ್‌ಪಿಪಿ ಪಕ್ಷದ ಸಂಸ್ಥಾಪಕ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ಚರ್ಚೆ ಜೋರಾಗಿ ನಡೆದಿದೆ. ಜನಾರ್ದನ ರೆಡ್ಡಿ ಸಹ ಬಿಜೆಪಿಯೊಂದಿಗೆ ಮೈತ್ರಿ ಆಗುವ ಇಚ್ಚೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸುವರ್ಣನ್ಯೂಸ್ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

Tap to resize

Latest Videos

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಬಿಜೆಪಿ ಜೊತೆ ಕೈಜೋಡಿಸಲು ಸಿದ್ಧ ಎಂದ ಜನಾರ್ದನರೆಡ್ಡಿ!

ನೀವೇ ಹೇಳಿದ ಹಾಗೆ ಶಾಸಕರನ್ನು ಮಾಡಿದ್ರಿ, ಅದೇ ಶಾಸಕರನ್ನು ಸೋಲಿಸಿದ್ರಿ. ಇದರಿಂದ ಸದನದಲ್ಲಿ ನೀವೇ ಹಿಂದೆ ಕೂಡುವ ಹಾಗಾಯ್ತು. ಜನಾರ್ದನ ರೆಡ್ಡಿ ಅವರೊಬ್ಬರೇ ಗೆದ್ದು ಏನು ಸಾಧನೆ ಮಾಡಿದ್ರು? ಸದನದಲ್ಲಿ ಒಬ್ಬ ಸಣ್ಣ ಹುಡುಗ ಏನೆಲ್ಲ ಮಾತನಾಡಿದ(ಶಾಸಕ ಭರತ್ ರೆಡ್ಡಿ) ಅದೆಲ್ಲ ನೋಡಿ, ಕೇಳಿ ನಮಗೂ ಬೇಸರವಾಯ್ತು. ಮಂತ್ರಿಯಾಗಿ ಸದನದಲ್ಲಿ ಮುಂದೆ ಕೂಡಬೇಕಾದ ಜನಾರ್ದನ ರೆಡ್ಡಿ ತಾನೊಬ್ಬನೇ ಗೆದ್ದು ಹಿಂದೆ ಕೂಡುವಂತಾಗಿದೆ. ನಾವು ಸೋತಿರೋದು ಕಾಂಗ್ರೆಸ್‌ ಗ್ಯಾರಂಟಿಯಿಂದ ಹೊರತು ಜನಾರ್ದನ ರೆಡ್ಡಿಯಿಂದ ಅಲ್ಲ. ಅವರಿಂದಲೇ ನಾವು ಸೋತಿದ್ದೇವೆಂಬುದನ್ನು ನಾನು ಒಪ್ಪೊಲ್ಲ ಎಂದು ಪುನರುಚ್ಚರಿಸಿದರು.

ರಾಷ್ಟ್ರಧ್ವಜ ಹಾರಿಸೋದೇ ತಪ್ಪೆಂದರೆ ದುರಂತವೇ ಸರಿ -ಚಲುವರಾಯಸ್ವಾಮಿ, ಯಾವಾಗ ಹಾರಿಸಬೇಕು ಅನ್ನೋ ಪ್ರಜ್ಞೆ ಇಲ್ವಾ? ಮುತಾಲಿಕ್ ಕಿಡಿ!

ಚುನಾವಣೆ ಸ್ಟಾಟರ್ಜಿ ಮಾಡೋದ್ರಲ್ಲಿ ಜನಾರ್ದನ ರೆಡ್ಡಿ ಮಾಸ್ಟರ್ ಮೈಂಡ್, ಜನರ ಜೊತೆಗೆ ಇರೋದ್ರಲ್ಲಿ ಶ್ರೀರಾಮುಲು ನಂಬರ್ ಒನ್. ಇಬ್ಬರ ಕಾಂಬಿನೇಷನ್ ಆದ್ರೆ ಲೋಕಸಭಾ ಚುನಾವಣೆ ಗೆಲ್ಲೋದು ಗ್ಯಾರಂಟಿ. ಗೆದ್ರೆ ಶ್ರೀರಾಮುಲು ಕೇಂದ್ರ ಸಚಿವರಾಗಿ ಉನ್ನತ ಮಟ್ಟಕ್ಕೆ ಹೋಗುತ್ತಾರೆ ಎಂದರು.

ಯಾವುದೋ ಒಂದು ಕೆಟ್ಟ ಗಳಿಗೆಯಲ್ಲಿ ಹೊಸ ಪಕ್ಷ ಕಟ್ಟಿದ್ರು. ಇದೀಗ ಮತ್ತೆ ಜನಾರ್ದನ ರೆಡ್ಡಿ ಬಿಜೆಪಿಗೆ ಬಂದ್ರೆ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದು ಗ್ಯಾರಂಟಿ ಎಂದು ಭರವಸೆ ವ್ಯಕ್ತಪಡಿಸಿದರು.

click me!