ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು. ಮಾಜಿ ಸಚಿವ ರೇಣುಕಾಚಾರ್ಯ, ಶಾಸಕ ಜ್ಯೋತಿ ಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ ಸೇರಿದಂತೆ ಬಿಜೆಪಿ ಮುಖಂಡರು ಸಾಥ್ ನೀಡಿದರು.
ತುಮಕೂರು (ಜ.28): ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು. ಮಾಜಿ ಸಚಿವ ರೇಣುಕಾಚಾರ್ಯ, ಶಾಸಕ ಜ್ಯೋತಿ ಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ ಸೇರಿದಂತೆ ಬಿಜೆಪಿ ಮುಖಂಡರು ಸಾಥ್ ನೀಡಿದರು.
ಶ್ರೀಗಳ ಗದ್ದುಗೆ ದರ್ಶನ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಗದೀಶ ಶೆಟ್ಟರ್, ಗದ್ದುಗೆ ದರ್ಶನ ಮಾಡಿ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ. ಬಿಜೆಪಿಗೆ ಮರುಸೇರ್ಪಡೆಯಾಗಿದ್ದೇನೆ. ನಿನ್ನೆ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಿದ್ದೆ. ಇಡೀ ರಾಜ್ಯದ ಬಿಜೆಪಿ ಕಾರ್ಯಕರ್ತರು, ಮುಖಂಡರು ನಾನು ಬಿಜೆಪಿಗೆ ಮರಳಿದ್ದಕ್ಕೆ ಪ್ರೀತಿ, ಗೌರವ ತೋರಿಸಿದ್ದಾರೆ. ನಾನು ಯಾವುದೇ ಜಿಲ್ಲೆಗೆ ಪ್ರವಾಸ ಹೋದ್ರೂ ಅಲ್ಲಿನ ಕಾರ್ಯಕರ್ತರು ಬಿಜೆಪಿಗೆ ವಾಪಸ್ ಬರುವಂತೆ ಒತ್ತಡ ಹಾಕುತ್ತಿದ್ದರು. ಅಲ್ಲದೆ ರಾಜ್ಯ ನಾಯಕರು ಮತ್ತು ರಾಷ್ಟ್ರೀಯ ನಾಯಕರು ಅದಕ್ಕೆ ಒತ್ತು ಕೊಟ್ಟರು. ಅವರು ಸಹಿತ ನೀವು ಬಿಜೆಪಿ ಮರಳಿ ಬರಬೇಕು ಎಂದು ಕರೆ ಕೊಟ್ಟಿದ್ದರಿಂದ ಪಕ್ಷಕ್ಕೆ ಮರಳಿ ಬಂದಿದ್ದೇನೆ ಎಂದರು.
undefined
ಯಾದಗಿರಿ: ಜೆಡಿಎಸ್ ಮಾಜಿ ಶಾಸಕ ನಾಗನಗೌಡ ಕಂದಕೂರ್ ಹೃದಯಾಘಾತದಿಂದ ವಿಧಿವಶ!
ನಾನು ಯಾವುದೇ ಬೇಡಿಕೆ ಇಟ್ಟಿಲ್ಲ, ಷರತ್ತುರಹಿತವಾಗಿ ಬಿಜೆಪಿಗೆ ಮರುಸೇರ್ಪಡೆಯಾಗಿದ್ದೇನೆ. ನಿಮಗೆ ಏನು ಗೌರವ ಸ್ಥಾನ ಸಿಗಬೇಕೋ ಅದನ್ನು ನಾವು ಕೊಡ್ತಿವಿ ಅಂತಾ ಹೈಕಮಾಂಡ್ ಹೇಳಿದೆ. ಹಾಗಂತ ನಾನು ಕಾಂಗ್ರೆಸ್‌ನಲ್ಲಿ ಸ್ಥಾನಮಾನ ಗೌರವ ಕೊಟ್ಟಿಲ್ಲ ಅಂತ ಹೇಳೋದಿಲ್ಲ. ನಾನು ನನ್ನ ಮನೆಗೆ ವಾಪಸ್ ಬಂದಿದ್ದೇನೆ. ನಾನು ಕಾಂಗ್ರೆಸ್‌ನವರನ್ನು ಟೀಕೆ ಮಾಡಲ್ಲ, ಟೀಕೆ ಮಾಡೋದಿಲ್ಲ. ಕಾಂಗ್ರೆಸ್ ನಲ್ಲಿ ಅನ್ಯಾಯವಾಗಿದೆ ಅಂತ ಪಾರ್ಟಿ ಬಿಟ್ಟಿಲ್ಲ. ಬಿಜೆಪಿಯಲ್ಲಿ ನಾನು 30-40 ವರ್ಷ ದುಡಿದಿದ್ದೇನೆ. ಕಾರ್ಯಕರ್ತರ ಅಭಿಲಾಷೆಯಿಂದ ವಾಪಸ್ ಬಂದಿದ್ದೇನೆ. ಬಿಜೆಪಿ ಮರುಸೇರ್ಪಡೆ ಕಾರ್ಯಕ್ರಮ ತುರ್ತಾಗಿ ನಡೆದಿದ್ದರಿಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಕ್ರಮಕ್ಕೆ ಬರಲು ಆಗಿಲ್ಲ. ಆದರೆ ಜೋಶಿಯವರಿಗೆ ಸಂತೋಷವಾಗಿದೆ ಎಂದರು.
ಲಕ್ಷ್ಮಣ ಸವದಿಯವರ ಜೊತೆ ನಾನು ಸಂಪರ್ಕದಲ್ಲಿಲ್ಲ. ಅವರ ಮನಸ್ಥಿತಿ ಏನಿದೆಯೋ ನನಗೆ ಗೊತ್ತಿಲ್ಲ. ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು, ಅವರೀಗಾಗಲೇ ದೇಶವನ್ನು ಬಲಿಷ್ಠಗೊಳಿಸಿದ್ದಾರೆ. ಇನ್ನಷ್ಟು ಬಲಿಷ್ಠಗೊಳಿಸಲು ಶ್ರಮಿಸಬೇಕಿದೆ. ಅವರ ಜೊತೆ ಒಂದಿಷ್ಟು ಅಳಿಲು ಸೇವೆ ಇರಲಿ ಅಂತ ಬಿಜೆಪಿಗೆ ಬಂದಿದ್ದೇನೆ ಎಂದರು.
ನೀತಿಗೆಟ್ಟ ರಾಜಕಾರಣಕ್ಕೆ ಜಗದೀಶ ಶೆಟ್ಟರ್ ಉದಹಾರಣೆ; ಬಿಜೆಪಿ ಮರುಸೇರ್ಪಡೆಯಾಗಿದ್ದಕ್ಕೆ ವೀರಶೈವ ಮುಖಂಡರು ಆಕ್ರೋಶ
ಇನ್ನು ಕೇಂದ್ರದ ಐಟಿ ಇಡಿ ದಾಳಿಗೆ ಬೆದರಿ ಬಿಜೆಪಿಗೆ ಸೇರಿದ್ದಾರೆಂದು ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ. ಆದರೆ ಅದೆಲ್ಲ ಸುಳ್ಲು ಹಾಗೇನಾದರೂ ದಾಳಿ ಮಾಡಬೇಕೆಂದಿದ್ದರೆ ಒಂಬತ್ತು ತಿಂಗಳ ಹಿಂದೆಯೇ ಮಾಡುತ್ತಿದ್ದರು. ಕಾಂಗ್ರೆಸ್ ಪಕ್ಷ ತೊರೆದಿರುವುದರಿಂದ ಬೇಸರದಲ್ಲಿ ಅವರು ಹಾಗೆ ಮಾತನಾಡುತ್ತಿದ್ದಾರೆ ಅಷ್ಟೇ ಎಂದು ಕಾಂಗ್ರೆಸ್ ನಾಯಕರ ಆರೋಪ ತಳ್ಳಿ ಹಾಕಿದರು.