ಐಟಿ ದಾಳಿಗೆ ಸಿಕ್ಕ ಭಾರಿ ಕುಳಗಳೆಷ್ಟು? ಅಧಿಕಾರಿಗಳು ವಶಕ್ಕೆ ಪಡೆದ ಹಣದ ಮೌಲ್ಯವೆಷ್ಟು? ವಿವರ ಇಲ್ಲಿದೆ ನೋಡಿ...

By Sathish Kumar KH  |  First Published Oct 16, 2023, 11:03 AM IST

ಕಳೆದೆರಡು ವಾರಗಳಿಂದ ಐಟಿ ಮೆಗಾ ಪೆರೇಡ್ ಪ್ರಕರಣದಲ್ಲಿ 15 ಕಡೆ ದಾಳಿ ಮಾಡಿ, 80ಕ್ಕೂ ಅಧಿಕ ಜನರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿ 100 ಕೋಟಿ ರೂ. ವಶಪಡಿಸಿಕೊಂಡಿದ್ದಾರೆ. 


ಬೆಂಗಳೂರು (ಅ.16): ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಳೆದೆರಡು ವಾರಗಳಿಂದ ಐಟಿ ಮೆಗಾ ಪೆರೇಡ್ ಪ್ರಕರಣದಲ್ಲಿ 15 ಕಡೆ ದಾಳಿ ಮಾಡಿ, 80ಕ್ಕೂ ಅಧಿಕ ಜನರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿ 100 ಕೋಟಿ ರೂ. ವಶಪಡಿಸಿಕೊಂಡಿದ್ದಾರೆ. 

ಕಳೆದ ಹದಿನೈದು ದಿನಗಳಿಂದ ಆದಾಯ ತೆರಿಗೆ ಅಧಿಕಾರಿಗಳು ರಾಜ್ಯಾದ್ಯಂತ ಕಪ್ಪುಕುಳಗಳಿಗೆ ಬಲೆ ಬೀಸಿದ್ದಾರೆ. ಪಕ್ಕಾ ಇನ್ಫಾರ್ಮೇಶನ್, ಬ್ಯಾಕ್ ಟು ಬ್ಯಾಕ್ ರೇಡ್, ಕೋಟಿ ಕೋಟಿ ಹಾರ್ಡ್ ಕ್ಯಾಶ್ ಸೀಜ್ ಮಾಡಿದ್ದಾರೆ. ಕಳೆದ ಎರಡು ವಾರದ ಐಟಿ ಮೆಗಾ ರೇಡ್ ಹೇಗಿತ್ತು ಗೊತ್ತಾ ಇನ್ ಕಮ್‌ಟ್ಯಾಕ್ಸ್ ಟೀಂನ ವರ್ಕ್ ಸ್ಟೈಲ್? ಕಳೆದ ತಿಂಗಳೇ ಕೋಟಿ ಕೋಟಿ ಹಣ ಸಂಗ್ರಹಣೆ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಆದಾಯ ತೆರಿಗೆ ಅಧಿಕಾರಿಗಳು, ದಾಳಿಯ ವೇಳೆ ಆದಾಯ ತೆರಿಗೆ ವಂಚನೆ ಮಾಡುತ್ತಿದ್ದ ಉದ್ಯಮಿಗಳು, ಜುವೆಲರಿ ಮಾಲೀಕರು, ಗುತ್ತಿಗೇದಾರರು ಸೇರಿ ಹಲವರ ಬಳಿ ಕೋಟಿ, ಕೋಟಿ ಕಪ್ಪು ಹಣ ವರ್ಗಾವಣೆ ಆಗುವುದರ ಮೇಲೆ ಕಣ್ಣಿಟ್ಟು ದಾಳಿ ಮಾಡಿದ್ದಾರೆ.

Tap to resize

Latest Videos

42 ಕೋಟಿ ಹಣದ ಮೂಲವನ್ನು ಬಾಯ್ಬಿಟ್ಟ ಅಂಬಿಕಾಪತಿ ಪುತ್ರ ಪ್ರದೀಪ್‌: 15 ವರ್ಷದ ಹಣವಂತೆ ಇದು!

ಇನ್ನು ಐಟಿ ಅಧಿಕಾರಿಗಳು ಒಂದೇ ಬಾರಿಗೆ ಬಿಗ್ ಪ್ಲಾನ್ ಹಾಕಿ ಮೆಗಾ ದಾಳಿ ಮಾಡಲು ಸಿದ್ಧರಾಗಿದ್ದರು. ಅದಕ್ಕಾಗಿ  120 ಇನೋವಾ ಕಾರುಗಳು, 350 ಜನ ಐಟಿ ಅಧಿಕಾರಿಗಳು ಸೇರಿ ದೊಡ್ಡ ತಂಡವನ್ನು ರಚಿಸಿಕೊಂಡು ಏಕಾಏಕಿ ರಾಜ್ಯಾದ್ಯಂತ ದಾಳಿ ಮಾಡಿದ ಕಪ್ಪುಹಣ ವಶಕ್ಕೆ ಪಡೆದಿದ್ದಾರೆ. ಅಕ್ಟೋಬರ್ 3ರ ಸಂಜೆಯೇ ಅಲರ್ಟ್ ಆಗಿದ್ದ ಐಟಿ ತಂಡವು, ಅಕ್ಟೋಬರ್ 4ರಂದು ಬೆಳಗ್ಗೆ 5 ಗಂಟೆಗೆ ಫಿಲ್ಡಿಗಿಳಿದಿದೆ. ಮೊದಲು 15 ಕಡೆ ಏಕ ಏಕಿ ದಾಳಿ ನಡೆಸಿದ್ದ ತಂಡವು ಮೊದಲ ದಿನವೇ 30 ಕೋಟಿ ರೂ.ಗಿಂತ ಅಧಿಕ ಹಣವನ್ನು ವಶಕ್ಕೆ ಪಡೆದುಕೊಂಡಿತ್ತು.

ವಿಜಯನಗರ, ಶಾಂತಿನಗರ, ಬಿಟಿಎಂ, ಹುಳಿಮಾವು, ಸದಾಶಿವನಗರ, ಸ್ಯಾಂಕಿ ಟ್ಯಾಂಕ್ ಸೇರಿ 15 ಕಡೆ ಮೊದಲ ದಾಳಿ ಮಾಡಿದ್ದರು. ಕಪ್ಪು ಹಣ ವರ್ಗಾವಣೆ ಮಾಡುತ್ತಿದ್ದ ವ್ಯಕ್ತಿಗಳ ಕಚೇರಿಗಳು, ಕೆಲ ಉದ್ಯಮಿಗಳು, ಜುವೆಲರಿ ಶಾಪ್ ಮಾಲೀಕರ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಲಾಗಿತ್ತು. ಮೊದಲ ದಿನವೇ 30 ಕೋಟಿ ರೂ, ವಶಕ್ಕೆ ಪಡೆದಿತ್ತು. ಇನ್ನು ಎರಡನೇ ಹಂತದಲ್ಲಿ ಗುತ್ತಿಗೇದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಮನೆ ಸೇರಿ ಹದಿನೈದು ಕಡೆ ದಾಳಿ ಮಾಡಲಾಗಿತ್ತು. ಗುತ್ತಿಗೆದಾರರ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಿದ ಐಟಿ ಅಧಿಕಾರಿಗಳು ಅಂಬಿಕಾಪತಿ ಮನೆಯೊಂದರಲ್ಲೇ 42 ಕೋಟಿ ರೂ. ಕಪ್ಪು ಹಣವನ್ನು (ಹಾರ್ಡ್‌ ಕ್ಯಾಶ್‌) ಪತ್ತೆ ಮಾಡಿತ್ತು. ಉಳಿದಂತೆ ಬೇರೆ ಬೇರೆ ಗುತ್ತಿಗೆದಾರರು, ಉದ್ಯಮಿಗಳ ಮನೆಯಲ್ಲೂ ಕೋಟಿ ಕೋಟಿ ಹಣ ಪತ್ತೆಯಾಗಿದೆ.

ಮೂರನೇ ಹಂತದಲ್ಲಿ ನಿನ್ನೆ ದಾಳಿ ನಡೆಸಿರೋ ಐಟಿ ಅಧಿಕಾರಿಗಳು ಬಿಲ್ಡರ್‌ ಸಂತೋಷ್ ಸೇರಿ ಹಲವೆಡೆ ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ. ಸಂತೋಷ್ ಮನೆಯಲ್ಲಿ 45 ಕೋಟಿ ರೂ.ಗಿಂತ ಅಧಿಕ ಮೊತ್ತದ ಕಪ್ಪು ಹಣ (ಹಾರ್ಡ್‌ ಕ್ಯಾಶ್‌) ಸಿಕ್ಕಿರುವ ಮಾಹಿತಿಯಿದೆ. ಮೂರನೇ ಹಂತದಲ್ಲಿ 15 ಕಡೆ ದಾಳಿ ನಡೆಸಿದ್ರೂ ಒಬ್ಬೊಬ್ಬರ ಮನೆಯಲ್ಲಿ 20 ಕೋಟಿ ರೂ., 30 ಕೋಟಿ ರೂ. ಹಾಗೂ 40 ಕೋಟಿ ರೂ. ಹಾರ್ಡ್‌ ಕ್ಯಾಶ್ ಪತ್ತೆಯಾಗಿತ್ತು. ಅತಿ ಹೆಚ್ಚು ಹಣ ಪತ್ತೆಯಾದ ಮನೆಗಳಲ್ಲಿ ಅಧಿಕಾರಿಗಳು ಹೆಚ್ಚು ಫೋಕಸ್ ಮಾಡಿದ್ದರು.

ಪಂಚರಾಜ್ಯ ಎಲೆಕ್ಷನ್‌ಗೆ ಕಾಂಗ್ರೆಸ್‌ನಿಂದ 1,700 ಕೋಟಿ ಕಳಿಸಲು ಸಂಚು: ಬಿಜೆಪಿ

ಈವರೆಗೆ 75 ರಿಂದ 80 ಜನರ ಮನೆ, ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ. ಅದ್ರಲ್ಲಿ 32 ಜನ ಜುವೆಲರಿ ಮಾಲೀಕರ ಮೇಲೆಯೇ ದಾಳಿ ಮಾಡಲಾಗಿದೆ. ಇನ್ನುಳಿದಂತೆ ಉದ್ಯಮಿ, ಗುತ್ತಿಗೆದಾರರು, ಬಿಲ್ಡರ್ ಗಳ ಮನೆ ಮೇಲೆ ದಾಳಿ ಮಾಡಲಾಗಿದ್ದು, 100 ಕೋಟಿಗೂ ಅಧಿಕ ಹಣ ಸೀಜ್ ಮಾಡಿದ್ದಾರೆ.  ಹಣ ಸೀಜ್ ಮಾಡಿ ನ್ಯಾಶನಲೈಸ್ಡ್ ಬ್ಯಾಂಕ್ ಗೆ ಡೆಪಾಸಿಟ್ ಮಾಡಲಾಗಿದೆ. ಯಾರಾರ ಮನೆ ಮೇಲೆ ದಾಳಿ ನಡೆದಿತ್ತು, ಅವರಿಗೆ ನೊಟೀಸ್ ನೀಡಲಾಗಿದೆ. ಇನ್ನು ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ‌‌ ನೀಡಲಾಗಿದೆ. ಸಿಕ್ಕಿರೋ ಹಣ, ದಾಖಲೆಗಳಿಗೆ ವಿವರಣೆ ನೀಡುವಂತೆ ಸೂಚನೆ ನೀಡಲಾಗಿದೆ. ವಿವರಣೆ ನೀಡೋದ್ರಲ್ಲಿ ತಪ್ಪಾದಲ್ಲಿ ತಕ್ಷಣವೇ ಪ್ರಕರಣವನ್ನು ಇಡಿಗೆ ವರ್ಗಾವಣೆ ಸಾಧ್ಯತೆಯಿದೆ.

click me!