ಪ್ರವಾದಿ ಮೊಹಮ್ಮದ್ ಸಮಾನತೆಯ ಸಮಾಜ ನಿರ್ಮಾತೃ ಎಂದರೆ ತಪ್ಪಾಗಲಾರದು ಎಂದು ಮುಸ್ಲಿಂ ಸಮಾಜದ ಧರ್ಮಗುರು ಮೌಲಾನಾ ಮುಫ್ತಿ ಹಸನ್ ಜಿಶಾನ್ ಖಾದ್ರಿ ಹೇಳಿದರು.
ಮಾನ್ವಿ (ಅ.16) : ಪ್ರವಾದಿ ಮೊಹಮ್ಮದ್ ಸಮಾನತೆಯ ಸಮಾಜ ನಿರ್ಮಾತೃ ಎಂದರೆ ತಪ್ಪಾಗಲಾರದು ಎಂದು ಮುಸ್ಲಿಂ ಸಮಾಜದ ಧರ್ಮಗುರು ಮೌಲಾನಾ ಮುಫ್ತಿ ಹಸನ್ ಜಿಶಾನ್ ಖಾದ್ರಿ ಹೇಳಿದರು.
ಪಟ್ಟಣದ ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಸಮಾನತೆ ಸಮಾಜದ ಶಿಲ್ಪಿ ಪ್ರವಾದಿ ಮೊಹಮ್ಮದ್ ಸಲ್ಲಲ್ಲಾಹುವಲಿ ಸಲ್ಲಂ ಸೀರತ್ ಅಭಿಯಾನದ ಪ್ರಯುಕ್ತ ಸಮಾನತೆ ಸಮಾಜ ಹೇಗೆ ಮತ್ತು ಏಕೆ ಎನ್ನುವಂತಹ ವಿಷಯದ ಕುರಿತು ಒಂದು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಮಾನತೆ ಸಮಾಜ ನಿರ್ಮಾಣವಾಗಬೇಕಾದರೆ ಎಲ್ಲಾ ಸಮಾಜದವರು ತಮ್ಮ ತಮ್ಮ ಧರ್ಮದ ಆಚರಣೆ ಜೊತೆಯಲ್ಲಿ ಇತರೆ ಧರ್ಮಗಳಿಗೆ ಗೌರವಿಸಬೇಕು. ಇತರೆ ಮನುಷ್ಯರಿಗೆ ಮನುಷ್ಯರೆಂದು ಅರ್ಥ ಮಾಡಿಕೊಂಡು ಹೊಂದಾಣಿಕೆ ಮಾಡಿ ಬದುಕಬೇಕು ಆಗ ಮಾತ್ರ ಸಮಾಜ ಸಮಾನವಾಗಿ ಬೆಳೆಯಲಿಕ್ಕೆ ಸಾಧ್ಯ ಎಂದರು.
undefined
ಎಂಪಿ ರೇಣುಕಾಚಾರ್ಯ ಸೇರಿ ಹಲವರು ಕೈ ನಾಯಕರ ಭೇಟಿ: ಸಚಿವ ಭೋಸರಾಜ್ ಸ್ಫೋಟಕ ಹೇಳಿಕೆ
ಮಾನ್ವಿ ತಾಲೂಕ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಹೆಚ್.ಶರ್ಫುದ್ದೀನ್ ಪೋತ್ನಾಳ್ ಮಾತನಾಡಿ, ಒಂದು ಸದೃಢ ಸಮಾಜವನ್ನು ಕಟ್ಟಲಿಕ್ಕೆ ಮೇಲು-ಕೀಳು ಎಂಬ ಭಾವನೆಗಳನ್ನ ತೊಲಗಿಸಿ ಮಾನವರೆಲ್ಲರೂ ಸಮಾನರು. ಒಂದೇ ದೇವನ ಮಕ್ಕಳು ಎಂದು ಬಾಳಬೇಕೆಂದರು. ಪ್ರವಾದಿಯರ ವಚನ, ಇತರೆ ಧಾರ್ಮಿಕ ಗುರುಗಳ ವಿಚಾರ ಜತೆಗೆ ದೇಶದ ಸಂವಿಧಾನದ ಹಕ್ಕುಗಳನ್ನು ಪಾಲಿಸಬೇಕು ಎಂದರು. ಇಂತಹ ವಿಚಾರಗಳು ಇಂದಿನ ಸಮಾಜದಲ್ಲಿ ಎಲ್ಲಾ ಧರ್ಮ ಮತ್ತು ವಿವಿಧ ಜಾತಿಗಳ ಅನುಯಾಯಿಗಳಿಗೆ ತಿಳಿಸುವ ಅಗತ್ಯವಿದೆ ಎಂದರು.
ಕಾಂಗ್ರೆಸ್ ಮುಖಂಡ ಸೈಯದ್ ಖಾಲಿದ್ ಖಾದ್ರಿ ಗುರು ಮಾತನಾಡಿದರು. ಸಂವಾದ ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಸೈಯ್ಯದ್ ಅಕ್ಬರ್ ಪಾಷಾ, ಪಿ. ರವಿಕುಮಾರ್ ವಕೀಲ್, ಜನಶಕ್ತಿ ಪಕ್ಷದ ಮುಖಂಡ ಮಾರೆಪ್ಪ ಹರವಿ, ಖಾಸಗಿ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ರಾಜು ತಾಳಿಕೋಟಿ, ಮಹಿಬೂಬ್ ಪಟೇಲ್ ಸೇರಿ ಅನೇಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಕಾರ್ಯಕ್ರಮಕ್ಕೆ ಮುಖ್ಯ ಕಾರಣಿಕರ್ತರಾದ ಮೌಲಾನಾ ಶೇಕ್ ಫರೀದ್ ಉಮರಿ ಪುರಸಭೆ ಸದಸ್ಯರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಆಫೀಸ್ ಅಮ್ಜದ್ ಕುರಾನ್ ಪಾರಾಯಣ ಮಾಡಿದರು. ಎಂ.ಎಚ್.ಮುಖೀಂ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಮೊಹಮ್ಮದ್ ಉಮರ್ ನಿರೂಪಣೆ ಮಾಡಿದರು.
'ಮಂಗಳಾದೇವಿ'ಯಲ್ಲೂ ಧರ್ಮ ದಂಗಲ್ ಸದ್ದು: ಮುಸ್ಲಿಮರ ವ್ಯಾಪಾರ ತಡೆದ್ರೆ ತಕರಾರು ತೆಗೆಯುತ್ತೇವೆ ಎಂದ ಸಮಿತಿ!
ಈ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಮುಖಂಡರಾದ ಭೀಮರಾಯ ಸೀತಿಮನಿ, ಸುರೇಶ್, ಭೀಮರಾಯ ಶಿಕ್ಷಕರು, ಮಹೆಬೂಬ್ ಪಟೇಲ್. ಅಬ್ದುಲ್ ರಜಾಕ್ ಮಾಸ್ಟರ್. ಜೆಡಿಎಸ್ ಮುಖಂಡ ಖಲೀಲ್ ಖುರೇಶಿ, ಮೊಹಮ್ಮದ್ ಉಮರ್ ಪ್ರಾಚಾರ್ಯರು. ಸಬ್ಜಲಿ ಮಾಸ್ಟರ್ ಹಾಗೂ ಜಮಾತೆ ಇಸ್ಲಾಮಿನ ಅಧ್ಯಕ್ಷ ಅಬ್ದುಲ್ ರೆಹಮಾನ್, ಉಪಾಧ್ಯಕ್ಷ ಅಬ್ದುಲ್ ರಹೀಮ್ ಅಭಿಯಾನದ ಸಂಚಾಲಕ ಎಂಎಎಚ್ ಮುಕೀಮ್, ವೆಲ್ಫೇರ್ ಪಾರ್ಟಿ ಮುಖಂಡ ಶೇಖ್ ಬಾಬಾ ಹುಸೇನ್ ಸೇರಿ ವಿವಿಧ ಶಾಲಾ ಶಿಕ್ಷಕರು ಮತ್ತು ಪ್ರಾಚಾರ್ಯರುಗಳು ಇದ್ದರು.