ಶಾಲಾ ಕಾಲೇಜುಗಳಲ್ಲಿ ಅದರದೇ ಆದ ಡ್ರೆಸ್ ಕೋಡ್ ಇರುತ್ತದೆ. ಎಲ್ಲ ವಿದ್ಯಾರ್ಥಿಗಳು ಅದನ್ನು ಪಾಲಿಸಬೇಕು. ಪಾಲಿಸಲ್ಲ ಎಂದರೆ ಏನರ್ಥ? ಇವೆಲ್ಲ ತಿಳಿಯದಷ್ಟು ಸಿಎಂ ತಿಳಿವಳಿಕೆ ಇಲ್ಲದವರೇನಲ್ಲ. ಹಿಜಾಬ್ ನಿಷೇಧ ವಾಪಸ್ ಮಾಡುವುದಾಗಿ ಘೋಷಣೆ ಮಾಡಿರುವ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರು (ಡಿ.23): ಶಾಲಾ ಕಾಲೇಜುಗಳಲ್ಲಿ ಅದರದೇ ಆದ ಡ್ರೆಸ್ ಕೋಡ್ ಇರುತ್ತದೆ. ಎಲ್ಲ ವಿದ್ಯಾರ್ಥಿಗಳು ಅದನ್ನು ಪಾಲಿಸಬೇಕು. ಪಾಲಿಸಲ್ಲ ಎಂದರೆ ಏನರ್ಥ? ಇವೆಲ್ಲ ತಿಳಿಯದಷ್ಟು ಸಿಎಂ ತಿಳಿವಳಿಕೆ ಇಲ್ಲದವರೇನಲ್ಲ. ಹಿಜಾಬ್ ನಿಷೇಧ ವಾಪಸ್ ಮಾಡುವುದಾಗಿ ಘೋಷಣೆ ಮಾಡಿರುವ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.
ಹಿಜಾಬ್ ಕುರಿತಂತೆ ಮಾಧ್ಯಮಗಳು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಿಜಾಬ್ ನಿಷೇಧ ವಾಪಸ್ ಮಾಡುತ್ತೇವೆ ಅನ್ನೋದು ಕಾಂಗ್ರೆಸ್ ಸರ್ಕಾರದ ಮುಸ್ಲಿಂ ತುಷ್ಟೀಕರಣದ ಪರಾಕಾಷ್ಠೆ. ಶಾಲೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಕೊಟ್ಟರೆ ನಾಳೆ ಯಾರಾದ್ರೂ ಕೇಸರಿ ಶಾಲು ಹಾಕಿ ಬಂದರೆ ಒಪ್ತಾರಾ? ಹಿಜಾಬ್ ಬ್ಯಾನ್ ಯಾರು ಮಾಡಿದ್ದಾರೆ? ಡ್ರೆಸ್ ಕೋಡ್ ಬ್ಯಾನ್ ಮಾಡಲು ಹೋದ್ರೆ ಅರಾಜಕತೆ ಉಂಟಾಗಲಿದೆ. ಇದನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಹಿಜಾಬ್ ನಿಷೇಧ ವಾಪಸ್ ; ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ತಿಳಿಸಿದ ಮಂಡ್ಯದ 'ಹಿಜಾಬ್ ಲೇಡಿ' ಖ್ಯಾತಿಯ ಮಸ್ಕಾನ್
ಇನ್ನು ಸಂಸದರನ್ನು ಅಮಾನತು ಮಾಡಿರುವ ವಿಚಾರಕ್ಕೆ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿರುವ ಸಂಬಂಧ ಮಾತನಾಡಿದ ಅವರು, ಕಾಂಗ್ರೆಸ್ ನವರು ಇತಿಹಾಸವನ್ನು ಮರೆತಿದ್ದಾರಾ? 1984 ರಲ್ಲೂ ಈ ರೀತಿಯ ಭದ್ರತಾ ಲೋಪ ಆಗಿತ್ತು. ಬೇರೆ ಬೇರೆ ರಾಜ್ಯ ಗಳ ವಿಧಾನಸಭೆಯಲ್ಲಿ ಇವರೂ ಸದಸ್ಯ ರನ್ನು ಅಮಾನತ್ತು ಮಾಡಿದ್ರು. ಕರ್ನಾಟಕದಲ್ಲಿ ಕೂಡಾ ಇತ್ತೀಚಿಗೆ ಬಿಜೆಪಿ ಸದಸ್ಯರನ್ನು ಅಮಾನತ್ತು ಮಾಡಿದ್ರು. ಸಂಸತ್ತಿನಲ್ಲಿ ಭದ್ರತಾ ಲೋಪ ಆದ ಹಿನ್ನಲೆಯಲ್ಲಿ ಕಾಂಗ್ರೆಸ್ ನವರು ಪ್ಲೆ ಕಾರ್ಡ್ ಹಿಡಿದು ಪ್ರತಿಭಟನೆ ಮಾಡ್ತಾ ಇದ್ರು. ನಿಯಮದ ಪ್ರಕಾರ ಪ್ಲೆಕಾರ್ಡ್ ಗಳನ್ನು ಹಿಡಿದು ಒಳಗೆ ತರುವಂತಿಲ್ಲ. ಕಾಂಗ್ರೆಸ್ ಗೆ ನಿಯಮದ ಪ್ರಕಾರ ಸದನ ನಡೆಸುವುದು ಇಷ್ಟ ಇರಲಿಲ್ಲ. ಪಂಚ ರಾಜ್ಯಗಳ ಚುನಾವಣಾ ಸೋಲಿನ ಹತಾಶೆಯಿಂದ ಕಾಂಗ್ರೆಸ್ ಈ ರೀತಿ ಮಾಡಿದೆ ಎಂದು ತಿರುಗೇಟು ನೀಡಿದರು.
ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ವಾಪಸ್: ಸಿಎಂ ಸಿದ್ದರಾಮಯ್ಯ