ಕ್ರೀಡಾಂಗಣಕ್ಕೆ ನೀರಾವರಿ ನಿಗಮದ ಜಾಗ ಉಚಿತವಾಗಿ ನೀಡಲ್ಲ: ಕಾರಜೋಳ

By Kannadaprabha News  |  First Published Sep 14, 2022, 4:00 AM IST
  • ಕ್ರೀಡಾಂಗಣಕ್ಕೆ ನೀರಾವರಿ ನಿಗಮದ ಜಾಗ ಉಚಿತವಾಗಿ ನೀಡಲ್ಲ: ಕಾರಜೋಳ
  • ಸಿರವಾರದಲ್ಲಿ ಸರ್ಕಾರಿ ಕ್ರೀಡಾಂಗಣಕ್ಕೆ 8 ಎಕರೆ ಭೂಮಿ ಉಚಿತವಾಗಿ ನೀಡಲು ನಕಾರ
  • ಮಾರುಕಟ್ಟೆದರದ ಶೇ.50ರಷ್ಟುಹಣ ನೀಡಿದರೆ ಜಾಗ ನೀಡುವ ಭರವಸೆ

ವಿಧಾನಸಭೆ (ಸೆ.14): ರಾಯಚೂರಿನ ಮಾನ್ವಿ ವಿಧಾನಸಭಾ ಕ್ಷೇತ್ರದ ಸಿರವಾರದಲ್ಲಿ ಸರ್ಕಾರಿ ಕ್ರೀಡಾಂಗಣ ನಿರ್ಮಾಣಕ್ಕೆ ಕರ್ನಾಟಕ ನೀರಾವರಿ ನಿಗಮದ 8 ಎಕರೆಯನ್ನು ಉಚಿತವಾಗಿ ನೀಡಲು ಸಾಧ್ಯವಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.

ಬೆಳ್ತಂಗಡಿ ಏತ ನೀರಾವರಿ ಮಾರ್ಚ್‌ಗೆ ಲೋಕಾರ್ಪಣೆ: ಸಚಿವ ಗೋವಿಂದ ಕಾರಜೋಳ

Latest Videos

ಜೆಡಿಎಸ್‌ ಸದಸ್ಯ ರಾಜಾ ವೆಂಕಟಪ್ಪ ನಾಯಕ್‌(MLA Rajavenkatappa Nayak) ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ಆ ಭಾಗದಲ್ಲಿ ಪ್ರತಿ ಎಕರೆಗೆ 11.84 ಲಕ್ಷ ರು. ಬೆಲೆ ಇದೆ. ರಾಜ್ಯ ಸರ್ಕಾರದ ಕ್ರೀಡಾ ಇಲಾಖೆಗೆ ಅಗತ್ಯವಿರುವುದರಿಂದ ಶೇ.50 ರಷ್ಟುಹಣವನ್ನು ಪಾವತಿಸಿದರೆ ಹಸ್ತಾಂತರಿಸುವುದಾಗಿ ಹೇಳಿದ್ದೇವೆ. ಇದು ನೀರಾವರಿ ನಿಗಮದ ಆಸ್ತಿಯಾಗಿದ್ದು, ನಾವು ಬೇರೆ ಇಲಾಖೆಗೆ ಉಚಿತವಾಗಿ ಹಸ್ತಾಂತರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ನಂಜನಗೂಡಿನಲ್ಲಿ ವಸತಿ ಶಾಲೆ:

ಕಾಂಗ್ರೆಸ್‌(Congress) ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ(Dr.Yathindra siddaramaiah) ಅವರ ಗಮನ ಸೆಳೆಯುವ ಸೂಚನೆಗೆ ಸಮಾಜ ಕಲ್ಯಾಣ ಸಚಿವರ ಪರವಾಗಿ ಉತ್ತರಿಸಿದ ಕಾರಜೋಳ ಅವರು, ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅನಿವಾರ್ಯತೆ ಬಗ್ಗೆ ಅರಿವಿದೆ. ಅಲ್ಲಿ ಕಟ್ಟಡ ನಿರ್ಮಿಸದಿರುವುದರಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಯೂ ಗಮನದಲ್ಲಿದೆ.

ಕಬಿನಿ ಜಲಾಶಯಕ್ಕೆ ಸಚಿವ ಗೋವಿಂದ ಕಾರಜೋಳ ಭೇಟಿ: ಪರಿಶೀಲನೆ

ಆದರೆ ಒಂದೇ ಸಲ 25 ಕೋಟಿ ರು.ಗೆ ಅಂದಾಜುವೆಚ್ಚ ಸಿದ್ಧಪಡಿಸಲಾಗಿದೆ. ಬಜೆಟ್‌ನಲ್ಲಿ ಪ್ರಸ್ತಾಪಿಸದೆ ಒಂದೇ ಸಲ ಇಷ್ಟೊಂದು ಅನುದಾನ ಬಿಡುಗಡೆ ಮಾಡುವುದು ಕಷ್ಟ. ಹೀಗಾಗಿ ಮುಂದಿನ ದಿನಗಳಲ್ಲಿ ಆದ್ಯತೆಯಾಗಿ ಪರಿಗಣಿಸಿ ಖಂಡಿತ ವಸತಿ ಶಾಲೆ ಕಟ್ಟಡ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.

click me!