* ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣವರ್ ಗೆ ವಕ್ಕರಿಸಿದ ಕೊರೋನಾ
* ಟ್ವೀಟ್ ಮೂಲಕ ಕೊರೊನಾ ಪಾಸಿಟಿವ್ ಎಂದು ತಿಳಿಸಿದ ರವಿ ಡಿ ಚನ್ನಣ್ಣವರ್
* ಬೆಂಗಳೂರು ಗ್ರಾಮಾಂತರ ಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರವಿ ಡಿ ಚನ್ನಣ್ಣವರ್
ಬೆಂಗಳೂರು, (ಮೇ.10): ಕೊರೋನಾ ಆತಂಕದ ಮಧ್ಯೆ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರಿಗೂ ಕೊರೋನಾ ಕಾಡತೊಡಗಿದೆ.
ಹೌದು..ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ರವಿ ಡಿ ಚೆನ್ನಣ್ಣನವರಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಹೋಂ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
undefined
ಕರ್ನಾಟಕದ ಮಾಜಿ ಶಾಸಕ ಕೊರೋನಾಗೆ ಬಲಿ
ಈ ಕುರಿತಂತೆ ಟ್ವಿಟ್ಟರ್‌ನಲ್ಲಿ ತಿಳಿಸಿರುವರವಿ ಡಿ ಚೆನ್ನಣ್ಣನವರ್, ನನಗೂ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿದೆ. ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿಯೇ ಹೋಂ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದಿದ್ದಾರೆ. ಅಲ್ಲದೇ ಸ್ಟೇ ಹೋಂ, ಸ್ಟೇ ಸೇಫ್ ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
Tested positive,we take risk to safeguard you all. 🙏
— Ravi D Channannavar (@DCPraviIPS)ಕೊರೋನಾ ಆತಂಕದ ಮಧ್ಯೆ ಪೊಲೀಸರು ಕುಟುಂಬವನ್ನು ಬಿಟ್ಟು ಹಗಲು ರಾತ್ರಿ ಎನ್ನದೇ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಎಲ್ಲರೂ ಮನೆಯಲ್ಲೇ ಇರಿ ಕೊರೋನಾವನ್ನು ಕಟ್ಟಿಹಾಕಲು ಕೈಜೋಡಿಸಿ.