* ಬೆಡ್ ಬ್ಲಾಕ್ ದಂಧೆ ಪ್ರಕರಣದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ
* ಹಲವು ಮಹತ್ವದ ವಿಚಾರಗಳನ್ನು ತೆರೆದಿಟ್ಟ ತೇಜಸ್ವಿ ಸೂರ್ಯ
* ಪ್ರಕರಣಕ್ಕೂ ಆ ಲಿಸ್ಟ್ ನಲ್ಲಿರುವ ಹೆಸರುಗಳಿಗೂ ಏನ್ ಸಂಬಂಧ ಅನ್ನೋ ಪ್ರಶ್ನೆಗೆ ಉತ್ತರ ಕೊಡದೇ ಹೋದ ತೇಜಸ್ವಿ ಸೂರ್ಯ
ಬೆಂಗಳೂರು, (ಮೇ.10): ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಬೆಂಗಳೂರಿನಲ್ಲಿ ಕೊರೋನಾ ಸೊಂಕಿತರ ಹೆಸರಿನಲ್ಲಿ ಆಸ್ಪತ್ರೆಗಳಲ್ಲಿನ ಬೆಡ್ ಬುಕ್ಕಿಂಗ್ ದಂಧೆಯನ್ನು ಬಯಲಿಗೆಳೆದು ಸಂಚಲ ಮೂಡಿಸಿದ್ದರು.
ಇದೀಗ ಇಂದು (ಸೋಮವಾರ) ಇದೇ ಬೆಡ್ ದಂಧೆ ವಿಚಾರದ ಬಗ್ಗೆ ತೇಜಸ್ವಿ ಸೂರ್ಯ ಅವರು ಸುದ್ದಿಗೋಷ್ಠಿ ನಡೆಸಿ ಮಹತ್ವದ ವಿಚಾರಗಳನ್ನು ತಿಳಿಸಿದ್ದಾರೆ.
ಬೆಡ್ ಹಂಚಿಕೆಯಲ್ಲಿ ಪಾರದರ್ಶಕತೆ ಇರಲಿಲ್ಲ. ಸುಮಾರು 4000 ಬೆಡ್ ಗಳು ವೇಸ್ಟ್ ಆಗಿ ಬಿದ್ದಿದ್ದವು. 100 ಗಂಟೆಯೊಳಗೆ ಬೆಡ್ ಬುಕಿಂಗ್ ನಲ್ಲಿ ಬದಲಾವಣೆ ತರುವ ಭರವಸೆ ನಾವು ನೀಡಿದ್ವಿ. ಇವತ್ತು ಒಂದಿಷ್ಟು ಬದಲಾವಣೆ ತರಲಾಗಿದೆ ಎಂದು ಎಂದು ಹೇಳಿದರು.
ಬೆಡ್ ಬ್ಲಾಕಿಂಗ್; ಸೂರ್ಯ ಹೇಳಿದ ರಜಿನಾ ಜೋಸೆಫ್ ಯಾರು?
ಬೆಡ್ ಬುಕ್ ಮಾಡಿರುವ ಡಾಕ್ಟರ್ ಹಾಗು ಅಧಿಕಾರಿಯ ಹೆಸರುಗಳ ಮಾಹಿತಿ ಸಿಗಲಿದೆ. ಇದರಿಂದ ಪಾರದರ್ಶಕತೆ ಜಾರಿಯಾಗಲಿದೆ. ಬೆಡ್ ಬುಕಿಂಗ್ ಮಾಹಿತಿ ಆಸ್ಪತ್ರೆ ಹಾಗು ರೋಗಿ ಇಬ್ಬರಿಗೂ ಸಿಗಲಿದೆ. ಈ ಮೊದಲು ಬೆಡ್ ಬುಕ್ ಆಗಿದ್ರೂ, ಆಸ್ಪತ್ರೆಯವರು ಆಗಿಲ್ಲ ಅಂತ ಹೇಳಿ ಕಳುಹಿಸುತ್ತಿದ್ದರು. ಇನ್ಮುಂದೆ ಈ ಸಮಸ್ಯೆ ಇರೊದಿಲ್ಲ ಎಂದು ಭರವಸೆ ನೀಡಿದರು.
ಬೆಡ್ ಬುಕ್ ಆದ ನಾಲ್ಕುಗಂಟೆಯೊಳಗೆ ಪೇಶಂಟ್ ಆಸ್ಪತ್ರೆಗೆ ದಾಖಲಾಗಬೇಕು.ನಂದನ್ ನಿಲೇಕಣಿ ಅವರ ತಂಡ, ಇ-ಗರ್ವನೆನ್ಸ್, ಇನ್ಫೋಸಿಸ್ ತಂಡದವರು ತಂತ್ರಜ್ಞಾನ ಅಳವಡಿಸುವಲ್ಲಿ ಶ್ರಮಿಸಿದ್ದಾರೆ. ಮುಂದಿನ 100 ಗಂಟೆಯೊಳಗೆ ಮತ್ತೊಂದಿಷ್ಟು ಬದಲಾವಣೆ ಜಾರಿಯಾಗಲಿದೆ ಎಂದರು.
ಬಲೆಗೆ ಬಿದ್ದ ಬೆಡ್ ಬ್ಲಾಕಿಂಗ್ ಏಜೆಂಟರು, ನೇತ್ರಾ-ರೋಹಿತ್!
ಮೊದಲು ಬೆಡ್ ಸಿಕ್ಕ ಬಳಿಕ ಆಸ್ಪತ್ರೆಗೆ ದಾಖಲಾಗಲು 10 ಗಂಟೆ ಕಾಲ ಅವಕಾಶ ಇರ್ತಿತ್ತು. ಇಷ್ಟು ದೀರ್ಘಾವಧಿಯಲ್ಲಿ ಅವ್ಯವಹಾರ ನಡೀತಿತ್ತು. ಈಗ ರೋಗಿಗೆ ಬೆಡ್ ಸಿಕ್ಕಿದ 4 ಗಂಟೆಯೊಳಗೆ ಹೋಗಿ ದಾಖಲಾಗಬೇಕು. ಮುಂಚೆ ರೋಗಿ ಡಿಸ್ಚಾರ್ಜ್ ಆದ್ರೆ, ಸತ್ರೆ ಅವr ಹೆಸರಿನಲ್ಲೂ ಬೆಡ್ ಬ್ಲಾಕ್ ಆಗ್ತಿತ್ತು, ಆಟೋ ಅನ್ ಬ್ಲಾಕ್ ಆಗ್ತಿತ್ತು. ಇದಕ್ಕೂ ಕಡಿವಾಣ ಹಾಕಲಾಗಿದೆ ಎಂದು ಹೇಳಿದರು.
ಈಗ ಆಟೋ ಅನ್ ಬ್ಲಾಕ್ ಆಗುವ ಅವಕಾಶ ತೆಗೆದು ಹಾಕಿದ್ದೇವೆ. ರೋಗಿಗೆ ಯಾವ ಮಾನದಂಡಗಳ ಆಧಾರದಲ್ಲಿ ಬೆಡ್ ಹಂಚಬೇಕು ಅನ್ನೋದೂ ಪರಿಗಣಿಸ್ತೇವೆ. ಕೆಲವೇ ದಿನಗಳಲ್ಲಿ ಬೆಡ್ ಬೇಕು ಅಂತ ಮನವಿ ಮಾಡಿದ್ರೆ ವೇಟಿಂಗ್ ಲಿಸ್ಟ್ ನಲ್ಲಿ ಹೆಸರು ಬರುತ್ತೆ. ಬೆಡ್ ಪಡೆಯಲು ಕ್ಯೂ ವ್ಯವಸ್ಥೆ ಬರಲಿದೆ ಎಂದು ತಿಳಿಸಿದರು.
ತೇಜಸ್ವಿ ಸೂರ್ಯ + ನಂದನ್ ನಿಲೇಕಣಿ.. ಮಾಫಿಯಾ ಆಟ ಇನ್ನು ನಡೆಯಲ್ಲ!
ತೇಜಸ್ವಿ ಸೂರ್ಯ 17 ಜನ ಮುಸ್ಲಿಮರ ಹೆಸರು ಓದಿದೆ, ಅವರನ್ನು ಕೆಲಸ ತೆಗೆಸಿದೆ ಅಂತ ಹೇಳಿದ್ರು. ಆದ್ರೆ, ನಾವು ಹೋಗುವ ಮೊದಲೇ ಈ 17 ಜನರನ್ನ ಕೆಲಸದಿಂದ ತೆಗೆದು ಹಾಕಲಾಗಿತ್ತು. ಇದನ್ನು ಗೌರವ್ ಗುಪ್ತಾ ಅವರೇ ಸ್ಪಷ್ಟಪಡಿಸಿದ್ದಾರೆ. ಆದ್ರೆ ನಾವು ಹೋಗಿ ಅವರನ್ನು ಕೆಲಸದಿಂದ ತೆಗೆಸಿದೆವು ಅಂತ ಸುಳ್ಳು ಆರೋಪಿಸಲಾಗಿದೆ ಎಂದು ಅಸಾಮಧಾನ ವ್ಯಕ್ತಪಡಿಸಿದರು.
ಎರಡನೇ ಸುಳ್ಳು, ನಾವು 16 ಜನ ಮುಸ್ಲಿಮರ ಹೆಸರು ಓದಿ, ಕೋಮು ಬಣ್ಣ ಹಚ್ಚಿದೆವು ಅಂತ. ನಮಗೆ ಉನ್ನತ ಅಧಿಕಾರಿಯೊಬ್ಬರು ಒಂದು ಲಿಸ್ಟ್ ಕೊಟ್ರು. ಆ ಲಿಸ್ಟ್ ನಲ್ಲಿ 16 ಜನರ ಹೆಸರಿದ್ದವು. 205 ಜನರಲ್ಲಿ ಕೇವಲ 16 ಜನ ಮಾತ್ರ ಆಸಮುದಾಯಕ್ಕೆ ಸೇರಿರಲಿಲ್ಲ, ಉಳಿದವರೂ ಕೆಲವರಿದ್ದರು. ನಾನು ಕೋಮು ಬಣ್ಣ ಹಚ್ಚಿದ್ದಿದ್ರೆ ಉಳಿದವರ ಹೆಸರು ಹೇಳಬಹುದಿತ್ತಲ್ವಾ? ಇದೆಲ್ಲ ಕಾಂಗ್ರೆಸ್‌ನ ಸುಳ್ಳುಗಳು ಎಂದು ಸ್ಪಷ್ಟನೆ ನೀಡಿದರು.
ಮೂರನೇ ಸುಳ್ಳು, ಈ 16 ಜನರಿಗೆ ಪೊಲೀಸರು ಕ್ಲೀನ್ ಚಿಟ್ ಕೊಟ್ರು ಅನ್ನೋದು. ಕ್ಲೀನ್ ಚಿಟ್ ಯಾರಿಗೆ ಕೊಡೋದು, ತಪ್ಪು ಮಾಡಿದವರಿಗೆ . ಈ 16 ಜನರನ್ನು ಸಿಸಿಬಿ ವಿಚಾರಣೆಯೇ ಮಾಡಿಲ್ಲ, ಕ್ಲೀನ್ ಚಿಟ್ ಅಂದ್ರೆ ಹೇಗೆ? ಎಂದು ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ಕೊಟ್ಟರು.
ಈ ವೇಳೆ ಆ 13 ಜನರ ಹೆಸರು ಓದುವ ಅಗತ್ಯ ಏನಿತ್ತು ಅನ್ನೋ ಪತ್ರಕರ್ತರ ಪ್ರಶ್ನೆಗೂ ಉತ್ತರ ಕೊಡದ ತೇಜಸ್ವಿ ಸೂರ್ಯ, ಅಜೆಂಡಾ ಇಟ್ಕೊಂಡಿರೋರು ಪ್ರಕರಣ ತಿರುಚಲು ಯತ್ನಿಸ್ತಿದ್ದಾರೆ ಅಂತ ಹೇಳಿ ಎದ್ದು ಹೋದರು.