ಎಲೆಬಿಚ್ಚಾಲೆ ಗ್ರಾಪಂ ಸಿಬ್ಬಂದಿ ನಿರ್ಲಕ್ಷ್ಯ ಕಸದ ವಾಹನದಲ್ಲಿ ರಾಷ್ಟ್ರಧ್ವಜ ವೈರಲ್

By Ravi Janekal  |  First Published Sep 30, 2024, 10:11 AM IST

ತಾಲೂಕಿನ ಎಲೆಬಿಚ್ಚಾಲೆ ಗ್ರಾಮ ಪಂಚಾಯ್ತಿಯಲ್ಲಿ ಸಿಬ್ಬಂದಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಸರ್ಕಾರದ ನಿಯಮದಂತೆ ಗ್ರಾಮ ಪಂಚಾಯ್ತಿ ಕಟ್ಟಡದ ಮೇಲೆ ರಾಷ್ಟ್ರಧ್ವಜ ಹಾರಿಸದೆ ರಾಷ್ಟ್ರಧ್ವಜವನ್ನು ಪಂಚಾಯ್ತಿ ಸಿಬ್ಬಂದಿ ಕಸದ ವಾಹನದಲ್ಲಿ ಬಿಸಾಕಿದ್ದಾರೆ.


ರಾಯಚೂರು (ಸೆ.30): ತಾಲೂಕಿನ ಎಲೆಬಿಚ್ಚಾಲೆ ಗ್ರಾಮ ಪಂಚಾಯ್ತಿಯಲ್ಲಿ ಸಿಬ್ಬಂದಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಸರ್ಕಾರದ ನಿಯಮದಂತೆ ಗ್ರಾಮ ಪಂಚಾಯ್ತಿ ಕಟ್ಟಡದ ಮೇಲೆ ರಾಷ್ಟ್ರಧ್ವಜ ಹಾರಿಸದೆ ರಾಷ್ಟ್ರಧ್ವಜವನ್ನು ಪಂಚಾಯ್ತಿ ಸಿಬ್ಬಂದಿ ಕಸದ ವಾಹನದಲ್ಲಿ ಬಿಸಾಕಿದ್ದಾರೆ.

ಕಸದ ವಾಹನದಲ್ಲಿ ರಾಷ್ಟ್ರಧ್ವಜ ಇಟ್ಟಿರುವ ಫೋಟೊ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಪಂಚಾಯಿತಿ ಕಚೇರಿಗಳ ಮುಂದೆ ರಾಷ್ಟ್ರಧ್ವಜ ಹಾರಾಡಿಸಬೇಕು ಎಂಬ ಸರ್ಕಾರಿ ಸುತ್ತೋಲೆ. ಆಗಸ್ಟ್ 15ರಿಂದ ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಬೇಕು ಎಂದು ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ತಿಳಿಸಲಾಗಿತ್ತು. ಅದರಂತೆ ಧ್ವಜಾರೋಹಣ ಮಾಡಿ ಗೌರವಯುತವಾಗಿ ಕೆಳಗಿಳಿಸದೆ ಸರ್ಕಾರದ ಆದೇಶ ಉಲ್ಲಂಘನೆ ಮಾಡಿದ ಪಂಚಾಯ್ತಿ ಸಿಬ್ಬಂದಿ. ನಿತ್ಯ ಧ್ವಜ ಹಾರಿಸಿ ಸಂಜೆ ಕಸದ ಗಾಡಿಯಲ್ಲಿ ಧ್ವಜ ಇರಿಸಲಾಗ್ತಿದೆ. ಸುಮಾರು ತಿಂಗಳಿಂದ ಕಸದ ಗಾಡಿಯಲ್ಲಿ ರಾಷ್ಟ್ರಧ್ವಜ ಇಡುತ್ತಿರುವ ಸಿಬ್ಬಂದಿ. ಬೆಳಗ್ಗೆ ಗ್ರಾಮ ಪಂಚಾಯ್ತಿ ಬೀಗ ತೆಗೆಯಲು ತೊಂದರೆ ನೆಪವೊಡ್ಡಿ ಕಸದ ಗಾಡಿಯಲ್ಲಿ ರಾಷ್ಟ್ರಧ್ವಜ ಇಡುತ್ತಿರುವ ಸಿಬ್ಬಂದಿ. ಸದ್ಯ ಕಸದ ವಾಹನ ಧ್ವಜ ಇರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದ್ಲಲಿ ವೈರಲ್ ಆಗಿದ್ದು, ಸಾರ್ವಜನಿಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

Tap to resize

Latest Videos

undefined

ಅಶೋಕ ಚಕ್ರದ ಜಾಗದಲ್ಲಿ ಚಂದ್ರ-ನಕ್ಷತ್ರ; ಈದ್ ಮಿಲಾದ್ ವೇಳೆ ರಾಷ್ಟ್ರಧ್ವಜಕ್ಕೆ ಅವಮಾನ ಮತ್ತೊಂದು ಪ್ರಕರಣ ಬಯಲಿಗೆ!

-ಪಂಚಾಯಿತಿ ಕಚೇರಿಗಳ ಮುಂದೆ ರಾಷ್ಟ್ರಧ್ವಜ (ರಾಷ್ಟ್ರಧ್ವಜ ಸಂಹಿತೆಯಂತೆ) ಹಾರಾಡಿಸುವುದು ಕಡ್ಡಾಯ. ಇದರ ಹೊಣೆಯನ್ನು ಆಯಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ವಹಿಸಿಕೊಳ್ಳಬೇಕು. ಕಾರ್ಯದರ್ಶಿ, ಬಿಲ್ ಕಲೆಕ್ಟರ್, ವಾಟರ್ ಮೆನ್ ಅವರಲ್ಲೊಬ್ಬರು ಧ್ವಜಾರೋಹಣ, ಅವರೋಹಣ ನಡೆಸಬೇಕು. ಭಾನುವಾರವೂ ಸೇರಿದಂತೆ ಎಲ್ಲ ಸರ್ಕಾರಿ ರಜಾ ದಿನಗಳಲ್ಲಿಯೂ ಧ್ವಜ ಹಾರಾಡಿಸಬೇಕು, ಸ್ಥಳೀಯ ಖಾದಿ ಭಂಡಾರದಿಂದ ಧ್ವಜ ಖರೀದಿಸಬೇಕು. ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಕಸದ ವಾಹನದಲ್ಲಿ ರಾಷ್ಟ್ರ ಧ್ವಜ ಇಟ್ಟಿರುವ ಸಿಬ್ಬಂದಿ.

click me!