ಮಹಾವೀರ ಜಯಂತಿ ರಜಾ ದಿನ ಬದಲು: ನೌಕರರೇ ಸರ್ಕಾರದ ಆದೇಶ ನೋಡಿ

Published : Apr 01, 2023, 07:57 PM ISTUpdated : Apr 01, 2023, 08:04 PM IST
ಮಹಾವೀರ ಜಯಂತಿ ರಜಾ ದಿನ ಬದಲು: ನೌಕರರೇ ಸರ್ಕಾರದ ಆದೇಶ ನೋಡಿ

ಸಾರಾಂಶ

ಮಹಾವೀರ ಜಯಂತಿ ಅಂಗವಾಗಿ ಏ.3ರ ಸೋಮವಾರ ನಿಡಲಾಗಿದ್ದ ರಜೆಯನ್ನು ರದ್ದುಗೊಳಿಸಿ ಏ.4ರ ಮಂಗಳವಾರ ರಜೆ ಪಡೆದುಕೊಳ್ಳುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು (ಏ.01): ರಾಜ್ಯಾದ್ಯಂತ ಸರ್ಕಾರಿ ನೌಕರರಿ ಸೇರಿದಂತೆ ಎಲ್ಲ ಉದ್ಯೋಗಿಗಳಿಗೆ ಮಹಾವೀರ ಜಯಂತಿ ಅಂಗವಾಗಿ ಏ.3ರ ಸೋಮವಾರ ನಿಡಲಾಗಿದ್ದ ರಜೆಯನ್ನು ರದ್ದುಗೊಳಿಸಿ ಏ.4ರ ಮಂಗಳವಾರ ರಜೆ ಪಡೆದುಕೊಳ್ಳುವಂತೆ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಶನಿವಾರದಿಂದ 3 ದಿನ ನಿರಂತರವಾಗಿ ರಜೆ ಪಡೆದುಕೊಳ್ಳಲು ಯೋಜನೆ ರೂಪಿಸಿದ್ದವರಿಗೆ ಸರ್ಕಾರ ಶಾಕ್‌ ನೀಡಿದೆ.

ಪ್ರತಿ ಕ್ಯಾಲೆಂಡರ್‌ ವರ್ಷ ಆರಂಭವಾಗುವ ಎರಡು ತಿಂಗಳು ಮುನ್ನವೇ ಸಾರ್ವತ್ರಿಕ ರಜೆ ದಿನಗಳನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗುತ್ತದೆ. ಅದರಂತೆ, 2022ರ ನವೆಂಬರ್‌ನಲ್ಲಿ ಸರ್ಕಾರ ಬಿಡುಗಡೆ ಮಾಡಿದ್ದ ರಾ ದಿನಗಳ ಪಟ್ಟಿಯಲ್ಲಿ ಏ.3ರಂದು ಮಹಾವೀರ ಜಯಂತಿ ಅಂಗವಾಗಿ ರಜೆ ಎಂದು ಘೋಷಣೆ ಮಾಡಿತ್ತು. ಆದರೆ, ಜನವರಿಯಲ್ಲಿ ಈ ಆದೇಶವನ್ನು ತಿದ್ದುಪಡಿ ಮಾಡಿದ್ದ ಸರ್ಕಾರ ಏ.3ರ ಮಹಾವೀರ ಜಯಂತಿ ರಜೆಯನ್ನು ಏ.4ಕ್ಕೆ ಮುಮದೂಡಿದೆ. ಈಗ ಎಲ್ಲರೂ ಮಹಾವೀರ ಜಯಂತಿ ರಜೆಯನ್ನು ಮಂಗಳವಾರ ಪಡೆದುಕೊಳ್ಳಬಹುದು.

2023ರಲ್ಲಿ ಸರ್ಕಾರಿ ನೌಕರರಿಗೆ ಸಿಗಲಿವೆ 19 ಸರ್ಕಾರಿ ರಜೆ ದಿನ..!

ಸರ್ಕಾರಿ ನೌಕರರಿಗೆ ಬಿಕ್‌ ಶಾಕ್‌: ಇನ್ನು ಶನಿವಾರ ಅರ್ಧ ದಿನ ಕೆಲಸ ಮಾಡಿ ಊರಿನತ್ತ ಹೊರಟವರು ಭಾನುವಾರ ಮತ್ತು ಸೋಮವಾರ ನಿರಂತರವಾಗಿ 2 ದಿನ ರಜೆ ಸಿಗುತ್ತದೆ ಎಂದು ಈಗಾಗಲೇ ಪ್ರವಾಸ ಮತ್ತಿತರ ಯೋಜನೆಗಳನ್ನು ಮಾಡಿಕೊಂಡವರಿಗೆ ರಜೆ ಬದಲಾವಣೆ ಮಾಡಿರುವುದು ನುಂಗಲಾರದ ತುತ್ತಾಗಿದೆ. ಈಗ ಎರಡು ದಿನಗಳ ಕಾಲ ರಜೆಯಿದೆ ಎಂದು ಊರಿನತ್ತ ಹೊರಟವರು ಕೂಡ ಒಂದೇ ದಿನಕ್ಕೆ ವಾಪಸ್‌ ಬರುವಂತಹ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಬಗ್ಗೆ ಎಲ್ಲ ಸರ್ಕಾರಿ ಉದ್ಯೋಗಿಗಳು, ಸಾರ್ವಜನಿಕ ಸಂಸ್ಥೆಯ ನೌಕರರು, ಅಭಿವೃದ್ಧಿ ಪ್ರಾಧಿಕಾರ, ಮಂಡಳಿಗಳಲ್ಲಿ ಕೆಲಸ ಮಾಡುವವರು ಹಾಗೂ ಖಾಸಗಿ ಕಂಪನಿ ಉದ್ಯೋಗಿಗಳು ಗಮನಹರಿಸಿ ತಮ್ಮ ರಜೆಯನ್ನು ಬಳಸಿಕೊಳ್ಳಬೇಕು. ಇಲ್ಲವಾದಲ್ಲಿ 2023ನೇ ಸಾಲಿನ ಒಂದು ರಜೆ ಕಡಿತ ಆಗುವುದಂತೂ ಗ್ಯಾರಂಟಿ. ಒಂದು ವೇಳೆ ಈ ಬಗ್ಗೆ ಗಮನ ಹರಿಸದದೇ ಕಚೇರಿಗೆ ಯಾವುದೇ ಮಾಹಿತಿ ಕೊಡದೇ ಚಕ್ಕರ್‌ ಹಾಕಿದಲ್ಲಿ ನೋಟಿಸ್‌ ಕೂಡ ಪಡೆಯಬೇಕಾಗುತ್ತದೆ. 

ಸರ್ಕಾರದ ಆದೇಶದಲ್ಲಿ ಏನಿದೆ?: ಕರ್ನಾಟಕ ಸರ್ಕಾರ ಮಹಾವೀರ ಜಯಂತಿ ರಜೆ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಹಿಂದೆ 3/4/2023ರಂದು ಸರ್ಕಾರಿ ರಜೆ ಘೋಷಣೆ ಮಾಡಲಾಗಿತ್ತು. ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ-1 ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ರಾಜ್ಯ ಶಿಷ್ಟಾಚಾರ) ಅಪೇಕ್ಞಾ ಸತೀಶ್ ಕುಮಾರ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ಆದೇಶದಲ್ಲಿ ಸರ್ಕಾರವು 2023ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿರುವ ಸರ್ಕಾರದ ಅಧಸೂಚನೆ ಸಂಖ್ಯೆ ಸಿಆಸುಇ 16 ಹೆಚ್‌ಹೆಚ್ಎಲ್ 2022 ದಿನಾಂಕ 21/11/2022ರ ಅಧಿಸೂಚನೆ-1 ಪಟ್ಟಿಯಲ್ಲಿನ ಕ್ರಮ ಸಂಖ್ಯೆ (4) ರಲ್ಲಿ ಮಹಾವೀರ ಜಯಂತಿ ಪ್ರಯುಕ್ತ ರಜೆ ಘೋಷಣೆ ಮಾಡಲಾಗಿತ್ತು.

7th Pay Commission:ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಗುಡ್ ನ್ಯೂಸ್; ಡಿಎ, ಫಿಟ್ಮೆಂಟ್ ಫ್ಯಾಕ್ಟರ್ ಏರಿಕೆ ಸಾಧ್ಯತೆ

ಸರ್ಕಾರದಿಂದ ಮಹಾವೀರ ಜಯಂತಿ ಆಚರಣೆ: ಮಹಾವೀರ ಜಯಂತಿ ಸಾರ್ವತ್ರಿಕ ರಜಾ ದಿನವನ್ನು ದಿನಾಂಕ 3/4/2023 ಎಂಬುದಾಗಿ ನಮೂದಿಸಲಾಗಿತ್ತು. ಈಗ ಆದೇಶದಂತೆ ದಿನಾಂಕ 4/4/2023 ಎಂಬುದಾಗಿ ತಿದ್ದಿ ಓದಿಕೊಳ್ಳತಕ್ಕದ್ದು ಎಂದು ತಿಳಿಸಲಾಗಿದೆ. ಕರ್ನಾಟಕ ಸರ್ಕಾರದ ಆದೇಶದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಮಹಾವೀರ ಜಯಂತಿ ಆಚರಣೆ ಮಾಡಲಾಗುತ್ತದೆ. ಸರ್ಕಾರದ ಹಿಂದಿನ ಆದೇಶದಂತೆ 3/4/2023ರ ಸೋಮವಾರ ಮಹಾವೀರ ಜಯಂತಿ ಸರ್ಕಾರಿ ರಜೆ ಇತ್ತು. ಆದರೆ ಪರಿಷ್ಕೃತ ಆದೇಶದಂತೆ 4/4/2023ರ ಮಂಗಳವಾರ ರಜೆ ಘೋಷಣೆ ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌