ಸಿಎಂ ಸಿದ್ದರಾಮಯ್ಯಗೆ ಅವಾಚ್ಯ ಪದಗಳ ನಿಂದನೆ, ಯುವಕನ ರೀಲ್ಸ್ ಹುಟ್ಟಿಸಿತು ವಿವಾದ, ವೈರಲ್ ಆದ ರೀಲ್ಸ್

Published : Apr 11, 2026, 12:05 PM IST
Viral reels insulting Karnataka CM

ಸಾರಾಂಶ

ಇನ್‌ಸ್ಟಾಗ್ರಾಮ್‌ನಲ್ಲಿ ಯುವಕನೊಬ್ಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಅವಾಚ್ಯ ಪದಗಳಿಂದ ನಿಂದಿಸಿ ರೀಲ್ಸ್ ಮಾಡಿದ್ದಾನೆ. ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಟೀಕೆ ಮತ್ತು ನಿಂದನೆಯ ನಡುವಿನ ವ್ಯತ್ಯಾಸದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ವ್ಯಕ್ತಿಗಳ ವಿರುದ್ಧ ಅಸಭ್ಯವಾಗಿ ನಿಂದನೆ ಮಾಡುವ ಘಟನೆಗಳು ಹೆಚ್ಚುತ್ತಿದ್ದು, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಓರ್ವ ಯುವಕ ಅವಾಚ್ಯ ಪದಗಳನ್ನು ಬಳಸಿದ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ‘Prajwal_kannadiga_29’ ಎಂಬ ಹೆಸರಿನ ಪೇಜ್ ನಡೆಸುತ್ತಿರುವ ಯುವಕ, ಸಿಎಂ ಸಿದ್ದರಾಮಯ್ಯರನ್ನು ಉದ್ದೇಶಿಸಿ ರೀಲ್ಸ್‌ಗಳನ್ನು ಮಾಡಿ ಹಂಚಿಕೊಂಡಿದ್ದಾನೆ. ಈ ವೀಡಿಯೊಗಳಲ್ಲಿ ಅವನು ಸಾಮಾನ್ಯ ರಾಜಕೀಯ ಟೀಕೆಯನ್ನು ಮೀರಿಸಿ, ಏಕವಚನದಲ್ಲಿ ಮಾತನಾಡುತ್ತಾ ಅಸಭ್ಯ ಪದಗಳನ್ನು ಬಳಸಿರುವುದು ಕಂಡುಬಂದಿದೆ. ಸಾರ್ವಜನಿಕ ಹುದ್ದೆಯಲ್ಲಿ ಮಾತ್ರವಲ್ಲ ರಾಜ್ಯ ಉನ್ನತ ಹುದ್ದೆಯಲ್ಲಿರಯವ ವ್ಯಕ್ತಿಯ ವಿರುದ್ಧ ಟೀಕೆ ಮಾಡುವುದು ಪ್ರಜಾಸತ್ತಾತ್ಮಕ ಹಕ್ಕಾಗಿದ್ದರೂ, ಅದನ್ನು ಗೌರವಯುತವಾಗಿ ವ್ಯಕ್ತಪಡಿಸಬೇಕಾದ ಹೊಣೆಗಾರಿಕೆಯನ್ನು ಈ ಯುವಕ ಕಡೆಗಣಿಸಿರುವುದು ಸ್ಪಷ್ಟವಾಗಿದೆ.

ಸಿಎಂ ವೈಯಕ್ತಿಕ ವಿಚಾರಗಳನ್ನೂ ಎಳೆದು ನಿಂದನೆ

ಈ ರೀಲ್ಸ್‌ಗಳಲ್ಲಿ ಕೇವಲ ರಾಜಕೀಯ ವಿಷಯಗಳನ್ನೇ ಅಲ್ಲದೆ, ಸಿಎಂ ಅವರ ವೈಯಕ್ತಿಕ ವಿಚಾರಗಳನ್ನೂ ಎಳೆದು ನಿಂದನೆ ಮಾಡಲಾಗಿದೆ ಎಂಬ ಆರೋಪ ಇದೆ. ಇದರಿಂದ ಸಾಮಾಜಿಕ ಜಾಲತಾಣ ಬಳಕೆದಾರರಲ್ಲಿ ಅಸಮಾಧಾನ ಹೆಚ್ಚಾಗಿದೆ. ಇನ್ನೂ, ವೀಡಿಯೊಗಳಿಗೆ ಬಂದ ಕಾಮೆಂಟ್‌ಗಳಲ್ಲಿಯೂ ಇದೇ ರೀತಿಯ ಅಸಭ್ಯ ಪದ ಬಳಕೆ ಮುಂದುವರಿದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಫೇಸ್‌ಬುಕ್, ಎಕ್ಸ್ (ಟ್ವಿಟ್ಟರ್), ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅನೇಕರು “ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇದ್ದರೂ, ಈ ರೀತಿಯ ನಿಂದನೆ ಸರಿಯಲ್ಲ” ಎಂದು ಹೇಳಿದ್ದಾರೆ. ಸಾರ್ವಜನಿಕ ನಾಯಕರುಗಳ ಬಗ್ಗೆ ಮಾತನಾಡುವಾಗ ಕನಿಷ್ಠ ಮಟ್ಟದ ಸಂಯಮ ಮತ್ತು ಗೌರವ ಕಾಪಾಡಬೇಕು ಎಂಬ ಅಭಿಪ್ರಾಯವೂ ಬಲವಾಗಿ ವ್ಯಕ್ತವಾಗಿದೆ.

ವ್ಯಾಪಕ ಆಕ್ರೋಶ

ಸಾಮಾಜಿಕ ಜಾಲತಾಣಗಳು ಅಭಿಪ್ರಾಯ ವ್ಯಕ್ತಪಡಿಸಲು ಉತ್ತಮ ವೇದಿಕೆಗಳಾಗಿದ್ದರೂ, ಅವುಗಳನ್ನು ಜವಾಬ್ದಾರಿಯುತವಾಗಿ ಬಳಸುವ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ. ಟೀಕೆ ಮತ್ತು ನಿಂದನೆ ನಡುವಿನ ವ್ಯತ್ಯಾಸವನ್ನು ಅರಿತು, ಸೌಜನ್ಯಪೂರ್ಣ ಸಂವಹನಕ್ಕೆ ಮಹತ್ವ ನೀಡಬೇಕು ಎಂಬ ಸಂದೇಶವನ್ನು ಸಾರ್ವಜನಿಕರು ಹಂಚಿಕೊಂಡಿದ್ದಾರೆ. ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ನಿಯಂತ್ರಣವಿಲ್ಲದ ಭಾಷೆಯ ಬಳಕೆಯ ಪರಿಣಾಮಗಳನ್ನು ಮತ್ತೊಮ್ಮೆ ಬೆಳಕಿಗೆ ತಂದಿದ್ದು, ಇಂತಹ ನಡವಳಿಕೆಗಳಿಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೆಲವರಿಂದ ಕೇಳಿಬರುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

US-Iran peace talks in Pakistan: ಕದನ ನಿಲ್ಲಿಸುವ ದಲ್ಲಾಳಿತನಕ್ಕೆ ಪಾಕ್‌ ಇಳಿದಿದ್ದೇಕೆ!?
ಪಿಯು ಬೋರ್ಡ್ ಮತ್ತೊಂದು ಎಡವಟ್ಟು: ಹಿಂದಿ ಆಯ್ತು ಈಗ ಗಣಿತ ವಿಷಯಕ್ಕೆ, 80ಕ್ಕೆ 42 ಇದ್ದಿದ್ದು 33ಕ್ಕೆ ಇಳಿದಿದೆ!