
ಬೆಂಗಳೂರು (ಏ.18): ಒಂದು ಹಂತದಲ್ಲಿ ಟಿಕ್‌ಟಾಕ್‌ನಿಂದ ಎದುರಾಗ್ತಿದ್ದ ಆತಂಕ ಈಗ ಇನ್ಸ್‌ಟಾಗ್ರಾಮ್‌ನಿಂದಲೂ ಆಗುತ್ತಿದೆ. ಇನ್ಸ್‌ಟಾಗ್ರಾಮ್‌ನಲ್ಲಿ ರೀಲ್ಸ್ ಪೋಸ್ಟ್ ಮಾಡಿ ವೈರಲ್ ಮಾಡುವ ನಿಟ್ಟಿನಲ್ಲಿ ಇನ್‌ಫ್ಲುಯೆನ್ಸರ್‌ಗಳು ಯಾವ ಮಟ್ಟಕ್ಕಾದರೂ ಇಳಿಯುಲು ಸಿದ್ಧರಾಗಿದ್ದಾರೆ. ಇನ್ನು ಅವರ ದಾರಿಯನ್ನೇ ಚಿಕ್ಕಪುಟ್ಟ ಇನ್‌ಫ್ಲುಯೆನ್ಸರ್‌ಗಳು ಹಿಡಿಯುತ್ತಿದ್ದಾರೆ. ಇದರಿಂದಾಗಿ ದಿನೇ ದಿನೆ ರೀಲ್ಸ್ ಗೋಜಿಗೆ ಬೀಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈಗ ಈ ರೀಲ್ಸ್ ಹುಚ್ಚು ಸರ್ಕಾರಿ ವಾಹನಗಳ ಮೇಲೂ ಆಗುತ್ತಿದೆ. ಇಷ್ಟು ದಿನ ನಮ್ಮ ಮೆಟ್ರೋ, ಬಿಎಂಟಿಸಿ ಹಾಗೂ ಏರ್‌ಪೋರ್ಟ್‌ಗಳಲ್ಲಿ ರೀಲ್ಸ್‌ಗಳನ್ನು ಮಾಡುತ್ತಿದ್ದರು. ಇದೀಗ ಕೆಎಸ್‌ಆರ್‌ಟಿಸಿ ಬಸ್‌ನಲ್ಲೂ ಇಂಥ ವಿಡಿಯೋಗಳನ್ನು ಮಾಡುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ನಲ್ಲೂ ರೀಲ್ಸ್ ಮಾಡಿದ್ದ ವ್ಯಕ್ತಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಪ್ರಸಾದ್ ಜಾಕಿ ಎಂಬ ಯುವಕನಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ರೀಲ್ ಮಾಡಿದ್ದು, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಇರುವ ಗೇರ್ ಲಿವರ್ ಕಿತ್ತು ಎಸೆಯುವ ರೀಲ್ ಮಾಡಿದ್ದಾನೆ.
ಬಸ್ ಚಾಲನೆ ವೇಳೆ ಚಾಲಕ ಗೇರ್ ಹಾಕಲು ಮಂದಾದ ವೇಳೆ ಅದನ್ನು ಪ್ರಸಾದ್ ನಗೆಪಾಟಲು ಮಾಡಿದ್ದಾನೆ. ಪ್ರಯಾಣಿಕರನ್ನ ಇಳಿಸಿ, ಚಾಲಕನ ಸೀಟ್‌ನಿಂದ ಡ್ರೈವರ್ ಇಳಿಯುತ್ತಿದ್ದಂತೆ ಪ್ರಸಾದ್ ಎಂಬ ಯುವಕ, ಗೇರ್ ಲಿವರ್ ಕಿತ್ತು ಹಾಕುವ ರೀತಿಯಲ್ಲಿ ರೀಲ್ಸ್ ಮಾಡಿದ್ದಾನೆ. ಚಾಲಕ ಇಲ್ಲದ ವೇಳೆ ರೀಲ್ಸ್ ಮಾಡುತ್ತಾ ಗೇರ್ ಲಿವರ್ ಮುರಿಯಲು ಯತ್ನಿಸಿದ್ದನ್ನು ವಿಡಿಯೋ ಮಾಡಲಾಗಿದೆ.
Mandya: ಐಸ್ ಕ್ರೀಮ್ ತಿಂದು ಒಂದೂವರೆ ವರ್ಷದ ಅವಳಿ ಕಂದಮ್ಮಗಳ ಸಾವು?
ಅದನ್ನ ವಿಡಿಯೋ ಮಾಡಿ ಇನ್ಸ್‌ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಯುವಕನ ಹುಚ್ಚಾಟ ಕಂಡು ನೆಟ್ಟಿಗರು ಫುಲ್ ಗರಂ ಆಗಿದ್ದಾರೆ. ಪ್ರಸಾದ್ ಜಾಕಿ ಹೆಸರಿನ ಖಾತೆ ವಿರುದ್ಧ ಗರಂ ಆದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣವೇ ಈತನನ್ನು ಬಂಧಿಸಿ ಎಂದು ಮನವಿ ಮಾಡಿದ್ದಾರೆ. ಯುವಕನ ಹುಚ್ಚಾಟದಿಂದ ಬಸ್ ಅಪಘಾತವಾಗುವ ಸಂಭವವಿತ್ತು ಎಂದೂ ಎಚ್ಚರಿಸಿದ್ದಾರೆ.
ಹುಟ್ಟುಹಬ್ಬ ಸಂಭ್ರಮದಲ್ಲಿ ಕೇಕ್ ಕತ್ತರಿಸಿ ತಿಂದ 10 ವರ್ಷ ಬಾಲಕಿ ನಿಧನ, ಕುಟುಂಬಸ್ಥರು ಅಸ್ವಸ್ಥ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ