Indradhanush Vaccine: ಇಂದಿನಿಂದ 11 ಜಿಲ್ಲೆಗಳಲ್ಲಿ ಇಂದ್ರಧನುಷ್‌ ಲಸಿಕೆ ಅಭಿಯಾನ

By Kannadaprabha NewsFirst Published Mar 7, 2022, 7:31 AM IST
Highlights

ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರಿಗೆ ಸಂಪೂರ್ಣ ಲಸಿಕಾಕರಣ ಉದ್ದೇಶದ ಇಂದ್ರಧನುಷ್‌ 4.0 ಅಭಿಯಾನ 11 ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳಲಿದೆ.

ಬೆಂಗಳೂರು (ಮಾ.7): ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು (Childrens) ಮತ್ತು ಗರ್ಭಿಣಿ ಮಹಿಳೆಯರಿಗೆ (Preggnent Womens) ಸಂಪೂರ್ಣ ಲಸಿಕಾಕರಣ ಉದ್ದೇಶದ ಇಂದ್ರಧನುಷ್‌ (Indradhanush Vaccine) 4.0 ಅಭಿಯಾನ 11 ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳಲಿದೆ. ಸರ್ಕಾರ ವಯೋಮಾನ ಆಧಾರಿತವಾಗಿ ಸೂಚಿಸಿರುವ ಲಸಿಕೆಗಳನ್ನು ಕಾಲಕಾಲಕ್ಕೆ ಪಡೆಯದಿರುವ ಮಕ್ಕಳು ಮತ್ತು ಗರ್ಭಿಣಿಯರಿಗೆ ಲಸಿಕೆ ನೀಡುವುದು ಈ ಅಭಿಯಾನದ ಉದ್ದೇಶ. ಸೋಮವಾರ ಬೆಂಗಳೂರಿನ ಶ್ರೀ ಅಟಲ್‌ ಬಿಹಾರಿ ವಾಜಪೇಯಿ ಮೆಡಿಕಲ್‌ ಕಾಲೇಜ್‌ನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ (Dr k Sudhakar) ಈ ಅಭಿಯಾನಕ್ಕೆ (Campaign) ಚಾಲನೆ ನೀಡಲಿದ್ದಾರೆ. 

ಬಾಗಲಕೋಟೆ, ಬಳ್ಳಾರಿ, ಬೀದರ್‌, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಗದಗ, ಕಲಬುರಗಿ, ದಾವಣಗೆರೆ, ಬಿಬಿಎಂಪಿ ಮತ್ತು ವಿಜಯಪುರ ಜಿಲ್ಲೆಗಳನ್ನು ಹಾಗೂ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಈ ಸಲಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಅಭಿಯಾನ 2022ರ ಮೇ ತಿಂಗಳವರೆಗೆ ನಡೆಯಲಿದ್ದು, ಪ್ರತಿ ತಿಂಗಳಲ್ಲಿ ಒಂದು ವಾರ ಅಭಿಯಾನ ಚಾಲ್ತಿಯಲ್ಲಿರಲಿದೆ. ಮಾರ್ಚ್ 7ರಿಂದ ಒಂದು ವಾರ, ಏಪ್ರಿಲ್‌ 4ರಿಂದ ಒಂದು ವಾರ ಮತ್ತು ಮೇ 9ರಿಂದ ಒಂದು ವಾರ ಈ ಅಭಿಯಾನ ನಡೆಯಲಿದೆ.

Pulse Polio Drive in Karnataka: ಮಗುವಿಗೆ ಲಸಿಕೆ ಹಾಕಿ ಪೋಲಿಯೋ ಅಭಿಯಾನಕ್ಕೆ ಸಿಎಂ ಚಾಲನೆ

ಲಸಿಕಾಕರಣದಲ್ಲಿ ಕಡಿಮೆ ಪ್ರಗತಿ ಆಗಿರುವ ಪ್ರದೇಶಗಳು, ಲಸಿಕೆ ತಲುಪಿರದ, ತಲುಪಲಾರದ ಪ್ರದೇಶಗಳು, ಕೋವಿಡ್‌ನಿಂದಾಗಿ ಸಾರ್ವತ್ರಿಕ ಲಸಿಕಾ ಸತ್ರಗಳು ತಪ್ಪಿರುವ ಹಳ್ಳಿಗಳು ಮತ್ತು ಪ್ರದೇಶಗಳು, ವಲಸಿಗರನ್ನು ಹೊಂದಿರುವ ನಗರ ಪ್ರದೇಶದ ಕೊಳೆಗೇರಿಗಳು, ಅಲೆಮಾರಿಗಳು ವಾಸಿಸುವ ಸ್ಥಳಗಳು, ಕುರಿ ಕಾಯುವ ಸಮುದಾಯದ ಸ್ಥಳಗಳು, ಇಟ್ಟಿಗೆ ಸುಡುವ ಜಾಗಗಳು, ಕಟ್ಟಡ ನಿರ್ಮಾಣ ಪ್ರದೇಶಗಳು, ಮೀನುಗಾರರು ವಾಸಿಸುವ ಸ್ಥಳಗಳು, ಬುಡಕಟ್ಟು ಜನಾಂಗಗಳು, ಗುಡ್ಡಗಾಡು ಪ್ರದೇಶಗಳು, ನಗರ ಪ್ರದೇಶದ ಸುತ್ತಮುತ್ತಲಿನ ಮೊಹಲ್ಲಾಗಳು, ದಡಾರ, ಗಂಟಲುಮಾರಿ ಮತ್ತು ಧನುರ್ವಾಯು ಪ್ರಕರಣಗಳು ವರದಿಯಾದ ಪ್ರದೇಶಗಳು, ಹೆಚ್ಚು ಸಾಂಕ್ರಾಮಿಕ ರೋಗಗಳು ವರದಿಯಾಗುವ ಪ್ರದೇಶ, ಲಸಿಕೆ ವಿರೋಧ ಅಥವಾ ನಿರಾಕರಣೆ ಪ್ರದೇಶಗಳಲ್ಲಿ ಲಸಿಕಾ ಸತ್ರಗಳನ್ನು ಆಯೋಜಿಸಿ ಅಭಿಯಾನ ಬಿರುಸಾಗಿ ನಡೆಯಲಿದೆ.

ಮೊದಲನೇ ಸುತ್ತಿನಲ್ಲಿ 30,234 ಮಕ್ಕಳು ಮತ್ತು 7,521 ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಎರಡು ವರ್ಷದೊಳಗಿನ ಮಕ್ಕಳು ಹೆಪಟೈಟಸ್‌ ಬಿ, ಓ.ಪಿ.ವಿ., ಬಿ.ಸಿ.ಜಿ., ರೋಟಾ, ಐ.ಪಿ.ವಿ., ಪಿ.ಸಿ.ವಿ., ಪೆಂಟಾವಲೆಂಟ್‌, ದಡಾರ ರುಬೆಲ್ಲಾ, ಪಿ.ಸಿ.ವಿ ವರ್ಧಕ,. ಜೆಇ, ವಿಟಮಿನ್‌ ಎ, ಓ.ಪಿ.ವಿ. ವರ್ಧಕ ಲಸಿಕೆಯನ್ನು ಪಡೆಯಬೇಕು ಎಂದು ಸರ್ಕಾರ ನಿಗದಿ ಪಡಿಸಿದೆ. ವಿಶೇಷ ಲಸಿಕಾ ಸತ್ರಗಳ ಜೊತೆಗೆ ರಾಜ್ಯದ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತದೆ. ಸಮೀಪದ ಲಸಿಕಾ ಕೇಂದ್ರ ಯಾವುದೆಂದು ತಿಳಿಯಲು ನಿಯರ್‌ಬೈ ವ್ಯಾಕ್ಸಿನೇಷನ್‌ ಸೆಂಟರ್‌ ಆಂಡ್ರಾಯಿಡ್‌ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಮನವಿ ಮಾಡಿದೆ.

Covid 19 Crisis: ಕೊರೋನಾ ಸೋಂಕು ತಗ್ಗಿದೆ, ಕೆಲಸ ಆರಂಭಿಸಿ: ಕೇಂದ್ರ

10 ಕೋಟಿ ಡೋಸ್‌ ಲಸಿಕೆ ಮೈಲಿಗಲ್ಲು: ರಾಜ್ಯದಲ್ಲಿ ಲಸಿಕೆ ಅಭಿಯಾನ (Covid Vaccination) ಆರಂಭಗೊಂಡು 404 ದಿನಗಳ ಬಳಿಕ ಒಟ್ಟು 10 ಕೋಟಿ ಡೋಸ್‌ ಲಸಿಕೆ ನೀಡಿದ ಮಹತ್ವದ ಸಾಧನೆಯನ್ನು ಕರ್ನಾಟಕ (Karnataka) ಮಾಡಿದೆ. ದೇಶದಲ್ಲಿ 10 ಕೋಟಿ ಲಸಿಕೆ ನೀಡಿದ ಆರನೇ ರಾಜ್ಯವಾಗಿ ಕರುನಾಡು ಹೊರಹೊಮ್ಮಿದೆ. ಅದರಲ್ಲೂ ದಕ್ಷಿಣ ಭಾರತದ ಮೊದಲ ರಾಜ್ಯ ಎಂಬ ಖ್ಯಾತಿಗೆ ಪಾತ್ರವಾಗಿದೆ. ಮೊದಲ, ಎರಡನೇ ಮತ್ತು ಮುನ್ನೆಚ್ಚರಿಕೆ ಡೋಸ್‌ (Booster Dose) ಸೇರಿ ರಾಜ್ಯದಲ್ಲಿ ಈವರೆಗೆ ಒಟ್ಟು 10.01 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಬಿಹಾರ ರಾಜ್ಯ ಕರ್ನಾಟಕಕ್ಕಿಂತ ಹೆಚ್ಚು ಲಸಿಕೆ ವಿತರಣೆ ಮಾಡಿದೆ. ಆದರೆ ದಕ್ಷಿಣ ಭಾರತದಲ್ಲಿ ಈ ಸಾಧನೆ ಮಾಡಿದ ಏಕೈಕ ರಾಜ್ಯ ಕರ್ನಾಟಕ.

ಸುಧಾಕರ್‌ ಅಭಿನಂದನೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್‌ (Dr K Sudhakar), ಇದೊಂದು ಸಾಧನೆ ಎಂದು ಬಣ್ಣಿಸಿದ್ದು, ಈ ಸಾಧನೆಗೆ ಕಾರಣರಾದ ಎಲ್ಲ ಆರೋಗ್ಯ ಕಾರ್ಯಕರ್ತರನ್ನು ಮತ್ತು ಜಿಲ್ಲಾಡಳಿತಗಳನ್ನು ಅಭಿನಂದಿಸಿದ್ದಾರೆ.

click me!