ಸಾವರ್ಕರ್ ಈ ದೇಶದ ಶ್ರೇಷ್ಠ ಪುತ್ರ ಎಂದು ಸ್ವತಃ ಇಂದಿರಾ ಗಾಂಧಿ ಹೇಳಿದ್ದರು: ಸಿಎಂ ಬೊಮ್ಮಾಯಿ

By Gowthami K  |  First Published Aug 21, 2022, 8:40 PM IST

ಸಾವರ್ಕರ್ ಬಗ್ಗೆ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ದೇಶದ ಶ್ರೇಷ್ಠ ಪುತ್ರ ಎಂದಿದ್ದು ದಾಖಲೆಗಳಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 


ಹಾವೇರಿ (ಆ.21): ಸಾವರ್ಕರ್ ಬಗ್ಗೆ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ದೇಶದ ಶ್ರೇಷ್ಠ ಪುತ್ರ ಎಂದಿದ್ದು ದಾಖಲೆಗಳಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ರು. ಸಾವರ್ಕರ್ ವಿಚಾರವಾಗಿ ಪರ ವಿರೋಧ ಹೇಳಿಕೆ, ಗಲಾಟೆ ಕುರಿತು ಸಿಎಂ ಪ್ರತಿಕ್ರಿಯೆ ನೀಡಿದ್ರು. ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರಲ್ಲಿ ಗೊಂದಲ ಸೃಷ್ಟಿ ಮಾಡಬಾರದು. ಒಂದು ವರ್ಗಕ್ಕೆ ನೋವುಂಟು ಮಾಡಬಾರದು. ಟಿಪ್ಪು ಸುಲ್ತಾನ್ ಬಗ್ಗೆ ಕಾಂಟ್ರೋವರ್ಸಿ ಇದೆ. ಸಾಮಾಜಿಕವಾಗಿ ಶಾಂತಿಯಿಂದ ಇರಬೇಕು. ದೇಶದಲ್ಲಿನ ಸವಾಲುಗಳನ್ನು ಹೇಗೆ ಎದುರಿಸಬೇಕು ಅನ್ನೋದರ ಬಗ್ಗೆ ಚರ್ಚೆಗಳು ನಡೆಯಬೇಕು ಎಂದು ತಿಳಿಸಿದರು. ಜನೋತ್ಸವ ಅಲ್ಲ ಭ್ರಷ್ಟೋತ್ಸವ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ತಿರುಗೇಟು ನೀಡಿದ ಸಿಎಂ, ಅವರ ಆಡಳಿತವನ್ನು‌ ಜನರು ನೋಡಿ ತಿರಸ್ಕಾರ ಮಾಡಿದ್ದಾರೆ. ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್. ದೇಶದಲ್ಲಿ ಭ್ರಷ್ಟಾಚಾರ ಆರಂಭಿಸಿದ್ದೇ ಕಾಂಗ್ರೆಸ್ ಎಂದು ಸಿಎಂ ಬೊಮ್ಮಾಯಿ ಆರೋಪಿಸಿದರು. ನೆಲ, ಜಲ ಏನನ್ನೂ ಬಿಡಲಿಲ್ಲ. ಇದನ್ನೆಲ್ಲ ಮಾಡಿದ್ದಕ್ಕೆ ಜನರು ನಿಮ್ಮನ್ನು ತಿರಸ್ಕರಿಸಿದ್ದಾರೆ. ಅವರು ಸಿದ್ದರಾಮೋತ್ಸವ ಮಾಡಿದರು. ನಾವು ಜನೋತ್ಸವ ಮಾಡ್ತಿದ್ದೇವೆ. ಎಲ್ಲವನ್ನೂ ಜನರು ತೀರ್ಮಾನ ಮಾಡುತ್ತಾರೆಂದು ಟಾಂಗ್​ ಕೊಟ್ಟರು.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಂಬಂಧ ಪಂಚಮಸಾಲಿಪೀಠ ಶ್ರೀಗಳು ಗಡುವು ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಈ ಕುರಿತಂತೆ ಗುರುಗಳ ಜೊತೆ ಮಾತನಾಡುವುದಾಗಿ ತಿಳಿಸಿದರು. ಇದೇ ವೇಳೆ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಬೊಮ್ಮಾಯಿ, ಅದು ಪಕ್ಷದ ಆಂತರಿಕ ವಿಚಾರ. ಹೈಕಮಾಂಡ್ ಜೊತೆ ಚರ್ಚೆ ಮಾಡಿ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳುತ್ತೇವೆ ಎಂದರು. 

Latest Videos

undefined

ಮಂಗಳೂರು ಕೋಮು ಸೂಕ್ಷ್ಮ ಪ್ರದೇಶಕ್ಕೆ ವೀರ ಸಾವರ್ಕರ್ ಹೆಸರು!

ಇತ್ತೀಚೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಯಲ್ಲಿನ ನೆರೆ ಹಾನಿ ವೀಕ್ಷಣೆ ತೆರಳಿದ್ದರು. ಈ ವೇಳೆ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಸಂಪತ್​ಗೆ ಜೀವ ಬೆದರಿಕೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು, ಈ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ. ಸಂಪತ್ ಹೇಳಿಕೆಯನ್ನೂ ತನಿಖೆ ನಡೆಸುತ್ತೇವೆ. ಸಿದ್ದರಾಮಯ್ಯರಿಗೂ ಜೀವ ಬೆದರಿಕೆ ಅಂತಾ ಸುದ್ದಿ ಮಾಡಿದ್ರಿ. ಆ ಬಗ್ಗೆಯೂ ತನಿಖೆ ಮಾಡಿಸುತ್ತೇವೆ ಎಂದು ಹೇಳಿದ್ರು. ಘಟನೆಯನ್ನು ವಿರೋಧಿಸಿ ಆಗಸ್ಟ್ 26 ರಂದು ‘ಮಡಿಕೇರಿ ಚಲೋ’ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಆಯೋಜಿಸಲು ಕಾಂಗ್ರೆಸ್ ನಿರ್ಧರಿಸಿದೆ.

ಇನ್ನೊಂದೆಡೆ ಬೆಳಗಾವಿ ಗಣೇಶೋತ್ಸವದಲ್ಲಿ ಈ ಬಾರಿ ಸಾವರ್ಕರ್ ಹವಾ ನಡೆಯಲಿದೆ. ಬೆಳಗಾವಿಯ ಗಣೇಶೋತ್ಸವ ಮಂಟಪಗಳಲ್ಲಿ ಸಾವರ್ಕರ್ ಅವರ ಭಾವಚಿತ್ರ ಹಾಕಲು ನಿರ್ಧರಿಸಲಾಗಿದೆ. 350 ಕ್ಕೂ ಹೆಚ್ಚು ಗಣೇಶೋತ್ಸವ ಮಂಡಳಿಗಳ ಸಭಾಂಗಣದಲ್ಲಿ ಸಾವರ್ಕರ್ ಅವರ ಫೋಟೋವನ್ನು ಪ್ರದರ್ಶಿಸಲಾಗುತ್ತದೆ. ಬೆಳಗಾವಿಯ ಬಿಜೆಪಿ ಶಾಸಕರಾದ ಅಭಯ ಪಾಟೀಲ ಮತ್ತು ಅನಿಲ ಬೆನಕೆ ಅವರು ಪ್ರತಿ ಗಣೇಶ ಮಂಟಪದಲ್ಲಿ ವಿನಾಯಕ ದಾಮೋದರ ಸಾವರ್ಕರ್ ಅವರ ಫೋಟೋ ಹಾಕಲು ಬೆಂಬಲ ನೀಡಿದ್ದಾರೆ. ಸಾವರ್ಕರ್ ಅವರ ಫೋಟೋದೊಂದಿಗೆ ಅವರ ಐತಿಹಾಸಿಕ ಬರಹಗಳನ್ನು ಸಹ ಪ್ರದರ್ಶಿಸಲಾಗುತ್ತದೆ.

Gadag: ಸಾವರ್ಕರ್ ಇವರ ಆರಾಧ್ಯ ದೈವ: ಇವರ ಮನೆ ಹೆಸರೂ ವೀರ ಸಾವರ್ಕರ್! 

1950ರಲ್ಲಿ ಸಾವರ್ಕರ್ ಹಿಂಡಲಗಾ ಜೈಲಿನಲ್ಲಿದ್ದರು. ವಿಚಾರಣಾಧೀನ ಕೈದಿಯಾಗಿ 100 ದಿನ ಹಿಂಡಲಗಾ ಜೈಲಿನಲ್ಲಿದ್ದ. 1950 ಜುಲೈ 13 ರಂದು ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬಿಡುಗಡೆಯಾದರು. 

click me!