Kashiyatra: ಅಧ್ಯಯನಕ್ಕಾಗಿ ದೇಶದ 100 ಮೇಯರ್‌ಗಳ ಕಾಶಿಯಾತ್ರೆ

Kannadaprabha News   | Asianet News
Published : Dec 17, 2021, 06:07 AM ISTUpdated : Dec 17, 2021, 06:10 AM IST
Kashiyatra: ಅಧ್ಯಯನಕ್ಕಾಗಿ ದೇಶದ 100 ಮೇಯರ್‌ಗಳ ಕಾಶಿಯಾತ್ರೆ

ಸಾರಾಂಶ

*   ಕಾಶಿ ಮಾದರಿ ಅಭಿವೃದ್ಧಿ ದರ್ಶನಕ್ಕೆ ಇಂದು ಸಮ್ಮೇಳನ *   ಆನ್‌ಲೈನ್‌ ಮೂಲಕ ಮೋದಿ ಭಾಷಣ *   ಕರ್ನಾಟಕದ ಐವರು ಮೇಯರ್‌ಗಳು ಭಾಗಿ  

ಬೆಂಗಳೂರು(ಡಿ.17):  ವಾರಾಣಸಿಯಲ್ಲಿ ಇಂದು(ಶುಕ್ರವಾರ) ನಡೆಯಲಿರುವ ಅಖಿಲ ಭಾರತ ಮೇಯರ್‌ಗಳ ಸಮ್ಮೇಳನದಲ್ಲಿ(All India Mayors Conference) ರಾಜ್ಯದಿಂದ 5 ಮಹಾಪೌರರು ಭಾಗವಹಿಸಲಿದ್ದಾರೆ. ಮೈಸೂರಿನ(Mysuru) ಮೇಯರ್‌ ಸುನಂದಾ ಪಾಲನೇತ್ರ, ಶಿವಮೊಗ್ಗದ(Shivamogga) ಸುನೀತಾ ಅಪ್ಪಣ್ಣ, ಮಂಗಳೂರಿನ(Mangaluru) ಪ್ರೇಮಾನಂದ ಶೆಟ್ಟಿ, ದಾವಣಗೆರೆಯ(Davanagere) ಎಸ್‌.ಟಿ.ವೀರೇಶ್‌, ತುಮಕೂರಿನ(Tumakuru) ಕೃಷ್ಣಪ್ಪ ಪಾಲ್ಗೊಳ್ಳಲಿದ್ದಾರೆ. ಇವರೆಲ್ಲ ಗುರುವಾರ ಕಾಶಿ ತಲುಪಿದ್ದಾರೆ.

ವಾರಾಣಸಿ: 

ಬಿಜೆಪಿ(BJP) ಅಧಿಕಾರದಲ್ಲಿರುವ 12 ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ವಾರಾಣಸಿಗೆ(Varanasi) ಭೇಟಿ ನೀಡಿದ ಬೆನ್ನಲ್ಲೇ, ಇದೀಗ ಭಾರತದ(India) 100 ಮೇಯರ್‌ಗಳಿಗೆ ಕಾಶಿ ಭೇಟಿ ಅವಕಾಶ ಒಲಿದುಬಂದಿದೆ. ಶುಕ್ರವಾರ ವಾರಾಣಸಿಯಲ್ಲಿ ‘ಅಖಿಲ ಭಾರತ ಮೇಯರ್‌ಗಳ ಸಮ್ಮೇಳನ’ ನಡೆಯಲಿದೆ.

Kashi Vishwanath Corridor: ಗತಕಾಲದ ವೈಭವದ ಅನುಭವ ನೀಡಲಿದೆ ಈ ಧಾಮ ಎಂದ ಮೋದಿ!

ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ವಾರಾಣಸಿ ಸಂಸದರಾದ ಬಳಿಕ ಕಾಶಿಯು ತುಂಬಾ ಬದಲಾಗಿದೆ ಹಾಗೂ ಅಭಿವೃದ್ಧಿ ಪಥದತ್ತ ಸಾಗಿದೆ. ಈ ಹಿನ್ನೆಲೆಯಲ್ಲಿ ‘ಕಾಶಿ ಮಾದರಿ ಅಭಿವೃದ್ಧಿ’ಯ ದರ್ಶನ ಮೇಯರ್‌ಗಳಿಗೆ ಆಗಬೇಕು ಹಾಗೂ ಅವರು ಕೂಡ ತಮ್ಮ ತಮ್ಮ ನಗರಗಳಲ್ಲಿ ಈ ಮಾದರಿ ಅಳವಡಿಸಿಕೊಳ್ಳಬೇಕು ಎಂಬ ಅಧ್ಯಯನ ಉದ್ದೇಶದಿಂದ ಕಾಶಿಯಲ್ಲಿ ಮೇಯರ್‌ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ಆಗಿ ಸಮ್ಮೇಳನಕ್ಕೆ ಚಾಲನೆ ನೀಡಿ ಭಾಷಣ ಮಾಡಲಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮತ್ತು ಕೇಂದ್ರ ನಗರಾಭಿವೃದ್ಧಿ ಸಚಿವ ಹರ್‌ದೀಪ್‌ ಸಿಂಗ್‌ ಪುರಿ(Hardeep Singh Puri)  ಅವರು ಸಹ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು 100 ಮೇಯರ್‌ಗಳು ಕಾಶಿ ನಗರಕ್ಕೆ ಬಂದಿದ್ದಾರೆ. ಎಲ್ಲಾ ಮೇಯರ್‌ಗಳು ಕಾಶಿ ವಿಶ್ವನಾಥ ದರ್ಶನದ ಜೊತೆಗೆ, ಕಾಶಿ ಅಭಿವೃದ್ಧಿ ಮಾದರಿಯ ಕುರಿತು ಅರಿವು ಪಡೆದುಕೊಳ್ಳಲಿದ್ದಾರೆ.

ರೇವತಿ ನಕ್ಷತ್ರದಲ್ಲಿ Kashi Vishwanath Corridor ಉದ್ಘಾಟಿಸಿದ ಮೋದಿ, ಹೀಗಿದೆ ಈ ನಕ್ಷತ್ರದ ಮಹತ್ವ!

ಪುಷ್ಪವೃಷ್ಠಿ ಮಾಡಿ ಕೆಲಸಗಾರರನ್ನು ಗೌರವಿಸಿದ ಪ್ರಧಾನಿ

ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಗೆ ಜೀವ ತುಂಬುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೆಲಸಗಾರರ ಮೇಲೆ ಪುಷ್ಪವೃಷ್ಠಿ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ( Prime Minister Narendra Modi)ಕಾರ್ಮಿಕರಿಗೆ ಗೌರವ ಅರ್ಪಿಸಿದ್ದರು. ಕಾಶಿ ವಿಶ್ವನಾಥ ದೇವಸ್ಥಾನವನ್ನು ಗಂಗಾನದಿಯ ಘಾಟ್‌ಗಳೊಂದಿಗೆ ಜೋಡಿಸುವ ಭವ್ಯ ಯೋಜನೆ ಇದಾಗಿದ್ದು, ಇದರ 1 ನೇ ಹಂತವನ್ನು ಉದ್ಘಾಟಿಸುವ ಮೊದಲು ಪ್ರಧಾನಿಯವರು ಈ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರನ್ನು ಗೌರವಿಸಿದರು.

ತಮ್ಮ ಮಾಮೂಲಿ  ಫ್ಲೋರೊಸೆಂಟ್ ವರ್ಕ್ ಗೇರ್‌(fluorescent work gear) ಬಟ್ಟೆ ಧರಿಸಿ ಸಮಾರಂಭ ಸ್ಥಳದಲ್ಲಿ ಕೈ ಕಟ್ಟಿ ಕುಳಿತಿದ್ದ ಕಾರ್ಮಿಕರ ಮುಂದೆ ಬಂದ ಪ್ರಧಾನಿ ಅವರ ಮೇಲೆ ಹೂವಿನ ಎಸಳುಗಳ ಸುರಿಮಳೆಗೈದರು. ನಂತರ ಪ್ರಧಾನಿ ಯೋಜನೆಯಲ್ಲಿ ತೊಡಗಿರುವ ಎಲ್ಲಾ ಕಟ್ಟಡ ಕಾರ್ಮಿಕರೊಂದಿಗೆ ನಿಂತು ತೀವ್ರ ಕಾಳಜಿ ವಹಿಸಿ ಗ್ರೂಪ್‌ ಫೋಟೋವನ್ನು ತೆಗೆಸಿಕೊಂಡಿದ್ದರು. ಬಳಿಕ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಮಂತ್ರಿ, ಈ ಭವ್ಯ ಸಂಕೀರ್ಣದ ನಿರ್ಮಾಣದಲ್ಲಿ ಬೆವರು ಸುರಿಸಿದ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ನಾನು ಇಂದು ಧನ್ಯವಾದ ಹೇಳಲು ಬಯಸುತ್ತೇನೆ. ಕೋರೊನಾ ಸಾಂಕ್ರಾಮಿಕ ರೋಗ ಆವರಿಸಿರುವ ಈ ಕಷ್ಟದ ಸಮಯದಲ್ಲಿಯೂ ಅವರು ಕೆಲಸವನ್ನು ಇಲ್ಲಿಗೆ ನಿಲ್ಲಿಸಲಿಲ್ಲ. ಈಗ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆಯುವ ಅವಕಾಶ ಸಿಕ್ಕಿದೆ ಎಂದು ತಿಳಿಸಿದ್ದರು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ