
ಬೆಂಗಳೂರು: ನಗರದಲ್ಲಿರುವ ಭಾರತೀಯ ರೈಲ್ವೆ ವಿಪತ್ತು ನಿರ್ವಹಣಾ ಸಂಸ್ಥೆಯಿಂದ (ಐಆರ್‌ಐಡಿಎಂ) ತಾಂಜೇನಿಯಾದ ಪ್ರತಿನಿಧಿಗಳಿಗೆ ರೈಲ್ವೆ ಅಪಘಾತದ ತುರ್ತು ಪರಿಸ್ಥಿತಿ ಎದುರಿಸುವ ಎರಡು ವಾರಗಳ ತರಬೇತಿ ಶಿಬಿರ ಸೋಮವಾರದಿಂದ ಆರಂಭವಾಗಿದೆ.
ವಿದೇಶಾಂಗ ಸಚಿವಾಲಯದ ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಯೋಗ ಕಾರ್ಯಕ್ರಮದಡಿ ಈ ತರಬೇತಿ ನೀಡಲಾಗುತ್ತಿದೆ. ಮೊದಲ ಬ್ಯಾಚ್‌ನಲ್ಲಿ ತಾಂಜೇನಿಯಾದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ 15 ಸಿಬ್ಬಂದಿ ಪಾಲ್ಗೊಂಡಿದ್ದು, ಎರಡು ವಾರಗಳ ರೈಲ್ವೆ ತುರ್ತು ಪರಿಸ್ಥಿತಿ ನಿರ್ವಹಣೆಯ ಕೌಶಲ್ಯ ಪಡೆಯಲಿದ್ದಾರೆ.
ರೈಲ್ವೆ ಅಪಘಾತಗಳು, ವಿಶೇಷವಾಗಿ ಸೇತುವೆಗಳ ಮೇಲೆ ಅಥವಾ ನದಿ, ಸಮುದ್ರದ ಬಳಿ ಸಂಭವಿಸುವ ತುರ್ತು ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದೆ. ಜತೆಗೆ ರೈಲ್ವೆ ಅಪಘಾತಗಳ ಸಮಯದಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬ ಬಗ್ಗೆ ಅವರ ತಿಳಿವಳಿಕೆಯನ್ನು ಹಚ್ಚಿಸಲಾಗುತ್ತದೆ.
ತರಬೇತಿಯನ್ನು ರೈಲ್ವೆ ಮಂಡಳಿಯ (ಸುರಕ್ಷತೆ) ಮಹಾನಿರ್ದೇಶಕ ಹಿತೇಂದ್ರ ಮಲ್ಹೋತ್ರಾ ಉದ್ಘಾಟಿಸಿದರು. ನೈಋತ್ಯ ರೈಲ್ವೆಯ ಮುಖ್ಯ ಭದ್ರತಾ ಅಧಿಕಾರಿ ರಾಮಕೃಷ್ಣ, ತಾಂಝಾನಿಯಾದ ಅಬ್ರಾಮ್ ಜಿ. ನೆಟ್ಝಿದ್ಯೋ ಸೇರಿ ಇತರರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ