ಮೈಸೂರು ದಸರಾ ಸಮಯದಲ್ಲಿ ತಮ್ಮಿಂದಲೇ ಪರ್ಸಂಟೇಜ್ ಕೇಳಿದ್ದ ಸರ್ಕಾರವನ್ನು ಜಾಡಿಸಿದ್ದ ಪ್ರಖ್ಯಾತ ಸರೋದ್ ವಾದಕ ರಾಜೀವ್ ತಾರಾನಾಥ್ ಬುಧವಾರ ನಿಧನರಾದರು.
ಮೈಸೂರು (ಜೂ.11): ಪ್ರಖ್ಯಾತ ಸರೋದ್ ವಾದಕ ರಾಜೀವ್ ತಾರಾನಾಥ್ ಬುಧವಾರ ನಿಧನರಾದರು. ವಿಶ್ವ ಮನ್ನಣೆ ಗಳಿಸಿದ್ದ ಸಂಗೀತಲೋಕದ ಧ್ರುವತಾರೆ ಕಳೆದ ವರ್ಷ ಮೈಸೂರು ದಸರಾ ಸಮಯದಲ್ಲಿ ಸಾಕಷ್ಟು ಸುದ್ದಿಯಾಗಿದ್ದರು. ಮೈಸೂರು ದಸರಾ ಸಮಯದಲ್ಲಿ ಕಾರ್ಯಕ್ರಮ ನೀಡಲು ತಮ್ಮಿಂದಲೇ ಸರ್ಕಾರದ ಅಧಿಕಾರಿಗಳು ಲಂಚ ಕೇಳಿದ್ದರು ಎನ್ನುವ ಆರೋಪ ಮಾಡುವ ಮೂಲಕ ರಾಜೀವ್ ತಾರಾನಾಥ್ ಸುದ್ದಿಯಾಗಿದ್ದರು. 91 ವರ್ಷದ ರಾಜೀವ್ ತಾರಾನಾಥ್ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸುಮಾರು 15 ದಿನಗಳಿಂದ ಇವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವು ಕಂಡಿದ್ದಾರೆ.
ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಮೇರು ಕಲಾವಿದರಾಗಿದ್ದ ರಾಜೀವ್ ತಾರಾನಾಥ್ ಸರೋದ್ ವಾದನದಲ್ಲಿ ಅಪ್ರತಿಮ ವಿದ್ವಾಂಸರು. ಸಂಗೀತ ಸೇವೆಗಾಗಿ ಪದ್ಮಶ್ರೀ, ನಾಡೋಜ ಸೇರಿದಂತೆ ಹತ್ತಾರು ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಮೈಸೂರಿನ ಕುವೆಂಪುನಗರದ ನಿವಾಸದಲ್ಲಿ ನಾಳೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೆಲ ದಿನಗಳ ಹಿಂದೆ, ಅವರ ಅನಾರೋಗ್ಯದ ಸುದ್ಧಿ ತಿಳಿದು ರಾಜ್ಯ ಸರಕಾರವೇ ಆಸ್ಪತ್ರೆ ಖರ್ಚು ವೆಚ್ಚ ಭರಿಸಲು ತೀರ್ಮಾನಿಸಿತ್ತು. ಮೈಸೂರು ಉಸ್ತುವಾರಿ ಸಚಿವ ಡಾ. ಮಹಾದೇವಪ್ಪ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದರು.
ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥರಿಗೆ ಅಭಿನಂದನೆ!
undefined
1932 ಅಕ್ಟೋಬರ್ 17 ರಂದು ಜನಿಸಿದ್ದ ರಾಜೀವ್ ತಾರಾನಾಥರು, ಸರಳವಾಗಿಯೇ ಬದುಕಿ, ಸಂಗೀತ ದಿಗ್ಗಜರಾದವರು ರಾಜೀವ್ ತಾರಾನಾಥರು ತಮ್ಮ ಪ್ರಾರಂಭಿಕ ಪಾಠಗಳನ್ನು ತಮ್ಮ ತಂದೆ ಪಂಡಿತ ತಾರಾನಾಥ್ ರಿಂದ ಪಡೆದರು. ಕೇವಲ ಒಂಭತ್ತು ವರ್ಷದವರಿದ್ದಾಗ ಅವರು ಪ್ರಥಮ ಸಂಗೀತ ಕಚೇರಿಯನ್ನು ನಡೆಸಿದರು. ಇಪ್ಪತ್ತರ ತಾರುಣ್ಯದಲ್ಲಿ ಆಕಾಶವಾಣಿಯಲ್ಲಿ ಸಂಗೀತಗಾರರಾಗಿ ಹಾಡುತ್ತಿದ್ದರು.
ವಿಜ್ಞಾನಿ ಕಸ್ತೂರಿ ರಂಗನ್, ಪಂಡಿತ್ ರಾಜೀವ್ ತಾರನಾಥ್ ಅವರಿಗೆ ಪ್ರತಿಷ್ಠಿತ ಬಸವ ಶ್ರೀ ಪ್ರಶಸ್ತಿ