ಬಿಜೆಪಿಯವರು ಚುನಾವಣೆಗೆ ಮೊದಲು ರಾಜ್ಯದಲ್ಲಿ 28ಕ್ಕೆ 28 ಸ್ಥಾನ ಗೆಲ್ಲುತ್ತೇವೆ ಅಂದಿದ್ರಲ್ಲ ಎಲ್ಲಿ ಹೋಯ್ತು 28 ಸ್ಥಾನ? ಮುಂದಿನ ದಿನಗಳಲ್ಲಿ ಜನರೇ ಬಿಜೆಪಿಗೆ ಪಾಠ ಕಲಿಸಲಿದ್ದಾರೆ ಎಂದು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಕೊಡಗು (ಜೂ.11): ಬಿಜೆಪಿಯವರು ಚುನಾವಣೆಗೆ ಮೊದಲು ರಾಜ್ಯದಲ್ಲಿ 28ಕ್ಕೆ 28 ಸ್ಥಾನ ಗೆಲ್ಲುತ್ತೇವೆ ಅಂದಿದ್ರಲ್ಲ ಎಲ್ಲಿ ಹೋಯ್ತು 28 ಸ್ಥಾನ? ಮುಂದಿನ ದಿನಗಳಲ್ಲಿ ಜನರೇ ಬಿಜೆಪಿಗೆ ಪಾಠ ಕಲಿಸಲಿದ್ದಾರೆ ಎಂದು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಇಂದು ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆಗೂ ಮುನ್ನ ಕುಮಾರಸ್ವಾಮಿಯವರು ಕಾಂಗ್ರೆಸ್ ಅನ್ನು ಹಿಗ್ಗಾ ಮುಗ್ಗಾ ಬೈದಿದ್ದರು. ಕುಮಾರಸ್ವಾಮಿ ಅವರಿಗೆ ಈಗ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಕೊಡಲಾಗಿದೆ. ಕೇವಲ ಭಾಷಣ ಮಾಡುವುದಲ್ಲ, ಕಾಂಗ್ರೆಸ್ ಪಕ್ಷವನ್ನು ಬೈಯುವುದಲ್ಲ ಕುಮಾರಸ್ವಾಮಿಯವರೇ, ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಬೆಂಗಳೂರು ಒಂದರಲ್ಲಿ ಹೆಚ್ಎಎಲ್ ಸೇರಿದಂತೆ 10 ಕೈಗಾರಿಕೆಗಳನ್ನು ಮುಚ್ಚಿದೆ. ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಕೆಲಸ ಮಾಡಿದಂತೆ ಈ ಕೈಗಾರಿಕೆಗಳ ಪುನರ್ ಆರಂಭಕ್ಕೆ ಕೆಲಸ ಮಾಡಿ ಸಂಪುಟ ದರ್ಜೆ ಮತ್ತು ರಾಜ್ಯಖಾತೆ ಎರಡನ್ನು ರಾಜ್ಯಕ್ಕೆ ನೀಡಲಾಗಿದೆ. ಅಭಿವೃದ್ಧಿ ಕೆಲಸ ಮಾಡಿ ಎಂದು ಆಗ್ರಹಿಸಿದರು.
undefined
ಮಂಡ್ಯ ಕೇಂದ್ರ ಸಚಿವ ರಾಜೀನಾಮೆ ಕೊಟ್ಟು ಚನ್ನಪಟ್ಟಣ ಉಳಿಸಿಕೊಳ್ತಾರೆ: ಡಿಕೆ ಸುರೇಶ್ ವ್ಯಂಗ್ಯ
ನಮ್ಮ ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳಿವೆ. ಇವುಗಳನ್ನು ನೀವು ಬಗೆಹರಿಸುತ್ತೀರಾ? ಸಚಿವ ಸಂಪುಟದಲ್ಲಿ ಇವುಗಳನ್ನು ಪ್ರಸ್ತಾಪಿಸುತ್ತೀರಾ? ಮೇಕೆದಾಟು, ಕಾವೇರಿ ನೀರು ಹಂಚಿಕೆ, ಕಳಸಬಂಡೂರಿ, ಮಹದಾಯಿ ಜಲವಿವಾದಗಳನ್ನು ಬಗೆಹರಿಸಿ. ಇದರ ಜೊತೆಗೆ ಪಾರಂಪರಿಕ ಅರಣ್ಯ ಹಕ್ಕು ಸಮಸ್ಯೆ ಇದೆ. ರಾಜ್ಯದ ಜಿಎಸ್ ಟಿ ಇನ್ನೂ ಭಾರಿ ಪ್ರಮಾಣದಲ್ಲಿ ಬರಬೇಕಾಗಿದೆ. ಬರ ಪರಿಹಾರ ಕೇವಲ 3 ಸಾವಿರ ಕೋಟಿ ಅಷ್ಟೇ ಬಂದಿದೆ. ಇವುಗಳನ್ನು ಬಗೆಹರಿಸಿ ಎಂದು ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದರು.
ಯಾವ ಗ್ಯಾರಂಟಿ ನಿಲ್ಲಿಸೊಲ್ಲ:
ಲೋಕಸಭಾ ಚುನಾವಣಾ ಬಳಿಕ ಗ್ಯಾರಂಟಿ ಯೋಜನೆ ಬಂದ್ ಆಗುತ್ತೆ ಎಂಬ ವದಂತಿಗೆ ಪ್ರತಿಕ್ರಿಯಿಸಿದ ಅವರು, ಯಾವ ಗ್ಯಾರಂಟಿ ಯೋಜನೆಗಳನ್ನೂ ನಿಲ್ಲಿಸೊಲ್ಲ. ರಾಜಕೀಯಕ್ಕಾಗಿ ನಾವು ಇಂತಹ ಯೋಜನೆಗಳನ್ನು ತಂದಿಲ್ಲ. ಬಡವರಿಗೆ ಅಗತ್ಯ ಇರುವವರಿಗೆ ಈ ಯೋಜನೆಗಳನ್ನ ಉಳಿಸಿಕೊಳ್ಳಬೇಕಿದೆ. ಇದನ್ನ ಪರಮಾರ್ಶಿಸಿ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದೇನೆ ಎನ್ನುವ ಮೂಲಕ ನಿನ್ನೆ ಹೇಳಿಕೆಗೆ ಎಂ ಲಕ್ಷ್ಮಣ್ ಇಂದು ಉಲ್ಟಾ ಹೊಡೆದರು.
ಬಿಜೆಪಿಗೆ ಜನ ಬೆಂಬಲಿಸಿದ್ದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದೇ ಒಳ್ಳೆಯದು: ಕಾಂಗ್ರೆಸ್ ನಾಯಕ ಲಕ್ಷ್ಮಣ
ಇನ್ನು ಅದೃಷ್ಟ ಬದಲಾಯಿಸುತ್ತೆ ಎಂದು ಡಿಕೆ ಶಿವಕುಮಾರ ಸರ್ಕಾರಿ ಬಂಗಲೆ ಬದಲಾಯಿಸುತ್ತಿರುವ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ನಾವೇ ಸ್ಟೋರಿ ಕ್ರಿಯೆಟ್ ಮಾಡೋದನ್ನ ಮೊದಲು ನಿಲ್ಲಿಸಬೇಕು. ಡಿಕೆಶಿ ಇರೋ ಹಾಲಿ ಬಿಲ್ಡಿಂಗ್ ಸೋರುತ್ತಿದೆ. ತಾತ್ಕಾಲಿಕವಾಗಿ ಒಂದು ತಿಂಗಳಮಟ್ಟಿಗೆ ಮನೆ ಬದಲಾವಣೆ ಮಾಡುವ ಚಿಂತನೆಯಲ್ಲಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ಎಸ್‌ಸಿ ಎಸ್ಟಿ ಮತ್ತು ಒಬಿಸಿಯವರಿಗೆ ಸಚಿವ ಸ್ಥಾನ ನೀಡಿಲ್ಲ ಮೊದಲು ಅದರ ಬಗ್ಗೆ ಚರ್ಚೆ, ಡಿಬೇಟ್ ಮಾಡೋಣ ಬನ್ನಿ. ಒಂದೇ ಸಮುದಾಯಕ್ಕೆ ಸೇರಿದವರಿಗೆ ಹೆಚ್ಚು ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ನೀಡಿದ್ದಾರೆ. ಯಾಕೆ ಅವರಿಗೆ ಮಾತ್ರ ಕ್ಯಾಬಿನೆಟ್ ದರ್ಜೆ ಸ್ಥಾನ ನೀಡಲಾಗಿದೆ. ಮನೆ ಬದಲಾಯಿಸಿದರು, ಅದೃಷ್ಟ ಖುಲಾಯಿಸಿತು ಇಂತದ್ದೆಲ್ಲ ಸಣ್ಣ ಸಣ್ಣ ವಿಚಾರ ತರುವ ಬದಲು ಇದರ ಬಗ್ಗೆ ಚರ್ಚೆ ಮಾಡಬೇಕು ಎಂದರು.