48 ಗಂಟೆ ಡೆಡ್‌ಲೈನ್‌: ಕರ್ನಾಟಕದಲ್ಲಿರುವ ಪಾಕಿಗಳಿಗೆ ಶುರು ಆತಂಕ, ಎಲ್ಲೆಲ್ಲಿ ವಾಸವಿದ್ದಾರೆ? ಇಲ್ಲಿದೆ ಮಾಹಿತಿ..

Published : Apr 25, 2025, 05:41 PM ISTUpdated : Apr 25, 2025, 09:09 PM IST
48 ಗಂಟೆ ಡೆಡ್‌ಲೈನ್‌: ಕರ್ನಾಟಕದಲ್ಲಿರುವ ಪಾಕಿಗಳಿಗೆ ಶುರು ಆತಂಕ, ಎಲ್ಲೆಲ್ಲಿ ವಾಸವಿದ್ದಾರೆ? ಇಲ್ಲಿದೆ ಮಾಹಿತಿ..

ಸಾರಾಂಶ

ಪಹಲ್ಗಾಮ್ ನರಮೇಧದ ಹಿನ್ನೆಲೆಯಲ್ಲಿ, ಭಾರತ ಸರ್ಕಾರ ಎಲ್‌ಟಿವಿ ಹೊರತುಪಡಿಸಿ ಪಾಕಿಸ್ತಾನಿ ಪ್ರಜೆಗಳ ಎಲ್ಲಾ ವೀಸಾಗಳನ್ನು ರದ್ದುಗೊಳಿಸಿದೆ. ಪಾಕ್ ಪ್ರಜೆಗಳನ್ನು ಗಡಿಪಾರು ಮಾಡಲು ರಾಜ್ಯಗಳಿಗೆ ಸೂಚಿಸಲಾಗಿದೆ. ಮಂಗಳೂರಿನಲ್ಲಿ ವೀಸಾ ರದ್ದತಿಯಿಂದ ಪಾಕ್ ಮೂಲದ ಇಬ್ಬರು ವಿವಾಹಿತ ಮಹಿಳೆಯರು ಆತಂಕದಲ್ಲಿದ್ದಾರೆ.  

ಬೆಂಗಳೂರು (ಏ.25): ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರಿಂದ 26 ಹಿಂದೂ ಪ್ರವಾಸಿಗರ ನರಮೇಧ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಪಾಕಿಸ್ತಾನಿ ಪ್ರಜೆಗಳಿಗೆ ನೀಡಿದ್ದ ಎಲ್ಲಾ ರೀತಿಯ ವೀಸಾಗಳನ್ನು ಭಾರತ ಸರ್ಕಾರ ರದ್ದು ಮಾಡಿದ. ಅಂದಾಜು 17 ಮಾದರಿಯ ವೀಸಾಗಳನ್ನು ಭಾರತ ರದ್ದು ಮಾಡಿದೆ. ಎಲ್‌ಟಿವಿ ವೀಸಾ ಅಂದರೆ ಲಾಂಗ್‌ ಟರ್ಮ್‌ ವೀಸಾ ಇದ್ದವರನ್ನು ಹೊರತುಪಡಿಸಿ ಮತ್ತೆಲ್ಲರಿಗೂ ಭಾರತದಿಂದ ಹೊರಹೋಗುವಂತೆ ತಿಳಿಸಲಾಗಿದೆ.

ಈ ಬಗ್ಗೆ ಕೇಂದ್ರ ಗೃಹಸಚಿವ ಇಂದು ದೇಶದ ಎಲ್ಲಾ ಸಿಎಂಗಳಿಗೆ ಕರೆ ಮಾಡಿ ಆಯಾ ರಾಜ್ಯದಲ್ಲಿರುವ ಪಾಕಿಸ್ತಾನದ ಪ್ರಜೆಗಳನ್ನು ಹುಡುಕಿ ಅವರನ್ನು ಗಡಿಪಾರು ಮಾಡುವಂತೆ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲಿಯೇ ಕರ್ನಾಟಕದಲ್ಲಿರುವ ಪಾಕ್‌ ಪ್ರಜೆಗಳಲ್ಲಿ ಆತಂಕ ಶುರುವಾಗಿದೆ.

ಮಂಗಳೂರಿನ ಯುವತಿಯರಿಗೆ ಆತಂಕ: ವೀಸಾ ರದ್ದು ಆಗಲಿರುವ ಬೆನ್ನಲ್ಲಿಯೇ ಮಂಗಳೂರಿನಲ್ಲಿರುವ ಇಬ್ಬರು ಪಾಕ್ ಯುವತಿಯರಿಗೆ ಅತಂಕ ಶುರುವಾಗಿದೆ. ಮಂಗಳೂರಿನ‌ ಇಬ್ಬರು ಯುವಕರನ್ನು ಪಾಕ್‌ ಯುವತಿಯರು ವಿವಾಹವಾಗಿದ್ದರು. ವಿವಾಹ‌ ಸಂಬಂಧದ ಮೂಲಕ‌ ಭಾರತಕ್ಕೆ ಬಂದಿರುವ ಯುವತಿಯರನ್ನು ವಾಪಸ್ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ. ಇಂಟೇರಿಮ್ ವೀಸಾ ಪಡೆದು ಇವರು ಭಾರತಕ್ಕೆ ಬಂದಿದ್ದಾರೆ. FRRO ಕಚೇರಿಯಿಂದ ನಿರ್ದೇಶನಕ್ಕೆ  ಹಿರಿಯ ಪೊಲೀಸ್ ಅಧಿಕಾರಿಗಳು ಕಾಯುತ್ತಿದ್ದಾರೆ. ಕರಾವಳಿಯ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಹಲವಾರು ಪಾಕಿಸ್ತಾನಿ ಪ್ರಜೆಗಳು ವಾಸವಾಗಿದ್ದಾರೆ. ವಿವಾಹ ಸಂಬಂಧದಲ್ಲಿ ಇರುವ ಭಾರತಕ್ಕೆ ಬಂದಿದ್ದಾರೆ. ಹೀಗಾಗಿ ವಾಪಾಸ್ ಕಳುಹಿಸುವ ವಿಚಾರದಲ್ಲಿ ಪೊಲೀಸ್ ಇಲಾಖೆಗೆ ಗೊಂದಲವಿದೆ. ಇನ್ನೊಂದೆಡೆ ಕೇಂದ್ರ ಸರ್ಕಾರ, ಎಲ್‌ಟಿವಿ ಹೊರತಾಗಿ ಇರುವ ಎಲ್ಲಾ ವೀಸಾಗಳನ್ನು ರದ್ದು ಮಾಡಿದ್ದು ಉಳಿದವರೆಲ್ಲರೂ ಹೊರಹೋಗಬೇಕು ಎಂದು ತಿಳಿಸಲಾಗಿದೆ.

ತುಮಕೂರಿನಲ್ಲಿ ಮೂವರು ಪಾಕಿಗಳು: ತುಮಕೂರು ಜಿಲ್ಲೆಯಲ್ಲಿ ಮೂವರು ಪಾಕ್ ಪ್ರಜೆಗಳು ವಾಸವಾಗಿದ್ದಾರೆ. ಎಲ್ಲರೂ ಮಹಿಳೆಯರಾಗಿದ್ದಾರೆ. ತುಮಕೂರಿನ ಗಂಡು ಪಾಕಿಸ್ತಾನದ ಯುವತಿ ನಡುವೆ ಮದುವೆ ಆಗಿತ್ತು. ತುಮಕೂರು ನಗರದ ಗಂಡನ ಮನೆಯಲ್ಲೇ ಮೂವರು ಮಹಿಳೆಯರು ಪ್ರತ್ಯೇಕವಾಗಿ ವಾಸವಿದ್ದಾರೆ. ಓರ್ವ ಮಹಿಳೆ 1962 ರಲ್ಲಿ ಮದುವೆಯಾಗಿ ಇಲ್ಲಿಗೆ ಬಂದಿದ್ದರು. ಆ ಮಹಿಳೆ ಭಾರತದ ಪ್ರಜೆ ಎಂದು ಕೋರ್ಟ್‌ ಘೋಷಣೆ ಮಾಡಿದೆ. ಆದರೆ, ಭಾರತ ಸರ್ಕಾರ ಈವರೆಗೂ ಆಕೆಗೆ ಪೌರತ್ವ ನೀಡಿಲ್ಲ. ಇನ್ನುಳಿದ ಇಬ್ಬರು ಮಹಿಳೆಯರು ಕಳೆದ 10 ವರ್ಷದ ಹಿಂದೆ ಮದುವೆಯಾಗಿ ಬಂದವರು. ಇಬ್ಬರೂ ದೀರ್ಘ ಅವಧಿಯ ವೀಸಾ ಪಡೆದು ಇಲ್ಲಿ ವಾಸವಿದ್ದಾರೆ.

'ಶಾಸಕಾಂಗದ ಅಧಿಕಾರದ ಮಾನ್ಯ, ಕಾನೂನುಬದ್ಧ ಬಳಕೆ..' ವಕ್ಫ್‌ ಕಾಯ್ದೆಯ ಕುರಿತು ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಉತ್ತರ

ಮೈಸೂರಿನಲ್ಲಿ 8 ಮಂದಿಯ ವಾಸ:ಪಾಕಿಸ್ತಾನ ಪ್ರಜೆಗಳನ್ನು ಗುರುತಿಸಿ ವಾಪಾಸ್‌ ಕಳಿಸಲು ಗೃಹ ಸಚಿವ ಅಮಿತ್‌ ಶಾ ಮನವಿ ಮಾಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಅಧಿಕೃತವಾಗಿ ಯಾವುದೇ ಪಾಕ್ ಪ್ರಜೆಗಳು ವಾಸ ಇಲ್ಲ. ಮೈಸೂರು ನಗರದಲ್ಲಿ ಅಧಿಕೃತವಾಗು 8 ಜನರು ವಾಸವಾಗಿರುವ ಬಗ್ಗೆ ಮಾಹಿತಿ ಇದೆ. 5 ಜನ ವಯಸ್ಕರರು ಮತ್ತು ಮೂವರು ಮಕ್ಕಳು ವಾಸವಾಗಿದ್ದಾಋಏ. ಪಾಕ್ ಪ್ರಜೆಗಳ ಸಂಪೂರ್ಣ ಮಾಹಿತಿಯನ್ನು ಪೊಲೀಸರು ಹಾಗೂ ಜಿಲ್ಲಾಡಳಿತ ಕಲೆಹಾಕಿದೆ. ನಗರದಲ್ಲಿ ಇನ್ನು ಯಾರಾದರೂ ವಾಸವಾಗಿದ್ದಾರಾ ಅನ್ನೋ ಬಗ್ಗೆ ತನಿಖೆ ನಡೆಯುತ್ತಿದೆ. ಮಾಹಿತಿ ಕಲೆ ಹಾಕಿದ ನಂತರ ಕೇಂದ್ರದ ನಿರ್ದೇಶನ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

Pahalgam Attack: 'ಧರ್ಮ ಕೇಳಿ ಕೊಲ್ಲಲಾಗಿದೆ..' ಹುರಿಯತ್‌ ಒಪ್ಪಿಕೊಂಡರೂ, ನಮ್ಮವರು ಒಪ್ಪಿಕೊಳ್ಳೋದಿಲ್ಲ!

ಯಾದಗಿರಿಯಲ್ಲಿ ಒಬ್ಬ ಪಾಕ್‌ ಪ್ರಜೆ: ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ನೀಡಿರು ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ ಒಬ್ಬ ಪಾಕಿಸ್ತಾನಿ ಪ್ರಜೆ ವಾಸವಿದ್ದಾನೆ ಎನ್ನಲಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಇಬ್ಬರು:  ಚಿಕ್ಕ್ಕಬಳ್ಳಾಪುರದಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳು ಇದ್ದಾರೆ ಎಂದು SP ಕುಶಾಲ್ ಚೌಕ್ಸಿ ಮಾಹಿತಿ ನೀಡಿದ್ದಾರೆ. ಅವರಿಬ್ಬರೂ ಗಂಡ-ಹೆಂಡತಿ ಎಂದು ತಿಳಿಸಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ ಒಬ್ಬ ಮಹಿಳೆ ವಾಸ: ರಾಯಚೂರು ಜಿಲ್ಲೆಯಲ್ಲಿ ಒಬ್ಬರು ಪಾಕಿಸ್ತಾನದ ಮಹಿಳೆ ವಾಸವಾಗಿದ್ದಾರೆ. ಕಳೆದ 20 ವರ್ಷಗಳ ಹಿಂದೆ ಪಾಕಿಸ್ತಾನದ ಯುವತಿಯೊಬ್ಬಳು ರಾಯಚೂರಿನ ಯುವಕನ ಜೊತೆಗೆ ಮದುವೆಯಾಗಿ ಇಲ್ಲಿಗೆ ಬಂದಿದ್ದಳು ಎಂದು ರಾಯಚೂರು ಎಸ್ ಪಿ ಎಂ.ಪುಟ್ಟಮಾದಯ್ಯ ‌ಮಾಹಿತಿ ನೀಡಿದ್ದಾರೆ.

ಉತ್ತರ ಕನ್ನಡದಿಂದ ಯಾವುದೇ ಗಡಿಪಾರಿಲ್ಲ: ಉತ್ತರಕನ್ನಡ ಜಿಲ್ಲೆಯಲ್ಲಿ 15 ಮಂದಿ ಪಾಕಿಸ್ತಾನಿ ಪ್ರಜೆಗಳಿದ್ದಾರೆ. 14 ಜನರು ಭಟ್ಕಳದಲ್ಲಿದ್ದು, ಒರ್ವರು ಕಾರವಾರದಲ್ಲಿದ್ದಾರೆ. 10 ಮಂದಿ ಮಹಿಳೆಯರಾಗಿದ್ದು, ಮೂವರು ಮಕ್ಕಳಿದ್ದಾರೆ, ಒಬ್ಬರದ್ದು ನ್ಯಾಯಾಲಯದಲ್ಲಿ ಪ್ರಕರಣ‌ ನಡೆಯುತ್ತಿದೆ. ಎಲ್ಲರೂ ಲಾಂಗ್ ಟರ್ಮ್ ವೀಸಾ ಪಡೆದುಕೊಂಡು ಇಲ್ಲಿ ನೆಲೆಸಿದ್ದಾರೆ ಹೊನ್ನಾವರದ ವಲ್ಕಿಯ ಯುವತಿ ಪಾಕಿಸ್ತಾನದಲ್ಲಿ ಮದುವೆಯಾಗಿದ್ದು, ಅಲ್ಲಿನ ಸರ್ಕಾರದ ತಿರ್ಮಾನಕ್ಕಾಗಿ ಕಾಯುತ್ತಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿ ಯಾವುದೇ ಪಾಕಿಸ್ತಾನಿ ಪ್ರಜೆಯನ್ನು ಗಡಿಪಾರು ಮಾಡಲು ಆಗುವುದಿಲ್ಲ ಎಂದ ಎಸ್ಪಿ ಎಂ.‌ನಾರಾಯಣ್ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಇಬ್ಬರ ವಾಸ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಬ್ಬರು ಪಾಕಿಸ್ಥಾನದ ಪ್ರಜೆ ವಾಸವಿದ್ದಾರೆ ಎನ್ನುವ ಮಾಹಿತಿ ಇದೆ..

ಕೊಪ್ಪಳದಲ್ಲಿ ಇಬ್ಬರು ಮಹಿಳೆಯರು: ಕೊಪ್ಪಳ‌ ಜಿಲ್ಲೆಯಲ್ಲಿ ಇಬ್ಬರು ಪಾಕಿಸ್ತಾನ ಮಹಿಳೆಯರು ಇದ್ದಾರೆ. ಅದರಲ್ಲಿ ಒಬ್ಬರು 1983ರಲ್ಲಿ ಇಲ್ಲಿನ ಪ್ರಜೆಯನ್ನು ಮದುವೆಯಾಗಿದ್ದಾರೆ. ಮತ್ತೊಬ್ಬರು 2006 ರಲ್ಲಿನ ಇಲ್ಲಿನ ಪ್ರಜೆಯನ್ನು ಮದುವೆಯಾಗಿದ್ದಾರೆ. ಇದರಲ್ಲಿ 2006 ರಲ್ಲಿ ಮದುವೆಯಾಗಿರುವ ಮಹಿಳೆ ಸದ್ಯ ಪಾಕಿಸ್ತಾನಕ್ಕೆ ತನ್ನ ಪಾಲಕರನ್ನು ಭೇಟಿಯಾಗಲು ಹೋಗಿದ್ದಾಳೆ. ಹೀಗಾಗಿ ಸದ್ಯ ಕೊಪ್ಪಳ‌ ಜಿಲ್ಲೆಯಲ್ಲಿ ಒಬ್ಬ ಮಹಿಳೆ ಮಾತ್ರ ಇದ್ದಾಳೆ ಎಂದು ಎಸ್‌ಪಿ ಡಾ ರಾಮ್ ಅರಸಿದ್ದಿ ಮಾಹಿತಿ ನೀಡಿದ್ದಾರೆ.
 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!