ಕೋವಿಡ್‌ನಿಂದ ಪ್ರಾಣ ಹಾನಿಯ ಸಾಧ್ಯತೆ ತಗ್ಗಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಿದ್ದರೂ ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಸೋಂಕಿತರ ಸಾವಿನ ಸಂಖ್ಯೆ ಏರಿಕೆ ಕಂಡಿದೆ. ಆಗಸ್ಟ್ ತಿಂಗಳ ಕಳೆದ ಹನ್ನೊಂದು ದಿನದಲ್ಲಿ 17, 20 ವರ್ಷದವರು ಸೇರಿ 30 ಮಂದಿ ಮರಣವನ್ನಪ್ಪಿದ್ದಾರೆ.
ರಾಕೇಶ್ ಎನ್.ಎಸ್.
ಬೆಂಗಳೂರು (ಆ.12): ಕೋವಿಡ್‌ನಿಂದ ಪ್ರಾಣ ಹಾನಿಯ ಸಾಧ್ಯತೆ ತಗ್ಗಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಿದ್ದರೂ ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಸೋಂಕಿತರ ಸಾವಿನ ಸಂಖ್ಯೆ ಏರಿಕೆ ಕಂಡಿದೆ. ಆಗಸ್ಟ್ ತಿಂಗಳ ಕಳೆದ ಹನ್ನೊಂದು ದಿನದಲ್ಲಿ 17, 20 ವರ್ಷದವರು ಸೇರಿ 30 ಮಂದಿ ಮರಣವನ್ನಪ್ಪಿದ್ದಾರೆ. ಇದರೊಂದಿಗೆ ಸಹ ಅಸ್ವಸ್ಥತೆ (ಕೋಮಾರ್ಬಿಡಿಟಿ) ಹೊಂದಿಲ್ಲದವರು ಅಸುನೀಗುತ್ತಿರುವುದು ಆತಂಕ ಮೂಡಿಸಿದೆ.
undefined
ಮೂರನೇ ಅಲೆ ಕಡಿಮೆ ಆಗುತ್ತಿದ್ದಂತೆ ಸಾವಿನ ಪ್ರಮಾಣ ಒಂದಂಕಿಗೆ ಇಳಿದಿತ್ತು. ಏಪ್ರಿಲ್ ತಿಂಗಳಿನಲ್ಲಿ 5, ಮೇ ಮಾಸದಲ್ಲಿ 6, ಜೂನ್‌ನಲ್ಲಿ 10, ಜುಲೈಯಲ್ಲಿ 29 ಮಂದಿ ಮರಣವನ್ನಪ್ಪಿದ್ದರು. ಆದರೆ ಈಗ ಆಗಸ್ಟ್ ತಿಂಗಳ ಮೊದಲ ಹನ್ನೊಂದು ದಿನದಲ್ಲೇ 30 ಮಂದಿ ಸಾವನ್ನಪ್ಪಿದ್ದಾರೆ. ಹಾಗೆಯೇ ಕಳೆದ ಕೆಲ ದಿನಗಳಿಂದ ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿರುವುದು ಹೆಚ್ಚುತ್ತಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಂಭವವಿದೆ.
Corona Crisis: ಕರ್ನಾಟಕದಲ್ಲಿ ಕೋವಿಡ್‌ಗೆ ಒಂದೇ ದಿನ 5 ಬಲಿ: 145 ದಿನದ ಗರಿಷ್ಠ
ಗುರುವಾರ ಮೃತಪಟ್ಟಆರು ಮಂದಿಯಲ್ಲಿ ನಾಲ್ವರಿಗೆ ಯಾವುದೇ ಸಹ ಅಸ್ವಸ್ಥತೆ ಇರಲಿಲ್ಲ. ಕಳೆದ ಕೆಲ ದಿನಗಳಿಂದ ಸಹ ಅಸ್ವಸ್ಥತೆ ಹೊಂದಿಲ್ಲದ ಹದಿಹರೆಯದವರು, ಯುವಕರು, ಮಧ್ಯ ವಯಸ್ಕರು ಕೋವಿಡ್‌ನಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿರುವುದು ಹೆಚ್ಚುತ್ತಿದೆ. ಬುಧವಾರ 20 ವರ್ಷದ ಯುವತಿ, ಮಂಗಳವಾರ 60 ವರ್ಷದ ಹಿರಿಯ ನಾಗರಿಕರೊಬ್ಬರು ಸಹ-ಅಸ್ವಸ್ಥತೆ (ಕೋ ಮಾರ್ಬಿಡಿಟಿ) ಹೊಂದಿಲ್ಲದಿದ್ದರೂ ಮರಣವನ್ನಪ್ಪಿದ್ದರು.
ಕೋವಿಡ್‌ನ ಮೊದಲೆರಡು ಅಲೆಯ ಸಂದರ್ಭದಲ್ಲಿ ಪ್ರತಿದಿನ ನೂರಾರು ಸಾವು ಸಂಭವಿಸುತ್ತಿತ್ತು. 2021ರ ಜನವರಿಯಲ್ಲಿ ಸೃಷ್ಟಿಯಾದ ಮೂರನೇ ಅಲೆಯ ಸಂದರ್ಭದಲ್ಲಿ ಪ್ರತಿ ದಿನ ಹತ್ತಾರು ಸಾವು ವರದಿಯಾಗಿತ್ತು. ಆದರೆ ಮೂರನೇ ಅಲೆ ದುರ್ಬಲಗೊಳ್ಳುತ್ತಿದ್ದಂತೆ ಸಾವಿನ ಸಂಖ್ಯೆ ತಗ್ಗಿತ್ತು. ಏಪ್ರಿಲ್‌ನಿಂದ ಜುಲೈವರೆಗೆ ಅದೆಷ್ಟೋ ದಿನ ಸಾವು ವರದಿಯೇ ಆಗಿರಲಿಲ್ಲ. ಆದರೆ ಕಳೆದ ಹತ್ತು ದಿನದಲ್ಲಿ ಆ.2 ಹೊರತು ಪಡಿಸಿ ಉಳಿದೆಲ್ಲ ದಿನ ಸೋಂಕಿತರ ಸಾವು ವರದಿಯಾಗಿದೆ.
ಕೋವಿಡ್‌ನ ಮೊದಲೆರಡು ಅಲೆಯ ಸಂದರ್ಭದಲ್ಲಿದ್ದಷ್ಟು ಸೋಂಕಿನ ತೀವ್ರತೆ ಸದ್ಯದ ಒಮಿಕ್ರೊನ್‌ನ ಉಪತಳಿಗಳಲ್ಲಿ ಇಲ್ಲ. ಇದರೊಂದಿಗೆ ಲಸಿಕೆ ಅಭಿಯಾನ ಉತ್ತಮವಾಗಿ ನಡೆದಿರುವ ಹಿನ್ನೆಲೆಯಲ್ಲಿ ಕೋವಿಡ್ ಅಪಾಯ ಕಡಿಮೆ ಆಗಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳುವಲ್ಲಿ ಸರ್ಕಾರವು ಮೀನಮೇಷ ಎಣಿಸುತ್ತಿದೆ.
Corona Crisis: ಕರ್ನಾಟಕದಲ್ಲಿ ಪರೀಕ್ಷೆ ಇಳಿಕೆ: ಕೋವಿಡ್ ಕೇಸ್ ಕೂಡ ಭಾರಿ ಇಳಿಕೆ
ಜನರಿಂದ ಮಾರ್ಗಸೂಚಿ ಗಾಳಿಗೆ: ರಾಜ್ಯದಲ್ಲಿ ಕೋವಿಡ್ ಸೋಂಕಿತರ ಮರಣ ಪ್ರಮಾಣ ಹೆಚ್ಚಾಗಿದೆ. ಸಹ ಅಸ್ವಸ್ಥತೆ ಹೊಂದಿಲ್ಲದವರು, ಹದಿ ಹರೆಯದವರು ಮರಣವನ್ನಪ್ಪುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೋವಿಡ್ ಸಾವುಗಳ ಡೆತ್ ಆಡಿಟಿಂಗ್ ನಡೆಸುವಂತೆ ಸರ್ಕಾರಕ್ಕೆ ನಾವು ಶಿಫಾರಸು ಮಾಡಿದ್ದೇವೆ. ಜನ ಕೋವಿಡ್‌ನ ಅಪಾಯವನ್ನು ಮರೆತಿದ್ದಾರೆ. ಮಾಸ್ಕ್ ಹಾಕುತ್ತಿಲ್ಲ, ಲಸಿಕೆ ಪಡೆಯುತ್ತಿಲ್ಲ. ಸಂಪರ್ಕಿತರ ಕೋವಿಡ್ ಪರೀಕ್ಷೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕೋವಿಡ್ ನಿಯಂತ್ರಣಕ್ಕೆ ಕೆಲ ಶಿಫಾರಸುಗಳನ್ನು ಸರ್ಕಾರಕ್ಕೆ ನೀಡಿದ್ದೇವೆ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥರಾದ ಡಾ ಎಂ.ಕೆ.ಸುದರ್ಶನ್ ತಿಳಿಸಿದ್ದಾರೆ.