ಹಂಪಿ ಸೇರಿ ಪ್ರಮುಖ ಐತಿಹಾಸಿಕ ತಾಣಗಳೀಗ ಪ್ರವಾಸಿಗರಿಗೆ ಮುಕ್ತ!

By Kannadaprabha News  |  First Published Jul 7, 2020, 9:34 AM IST

ಹಂಪಿ ಸೇರಿ ಪ್ರಮುಖ ಐತಿಹಾಸಿಕ ತಾಣಗಳೀಗ ಪ್ರವಾಸಿಗರಿಗೆ ಮುಕ್ತ| ನಿನ್ನೆ ನೀರಸ ಪ್ರತಿಕ್ರಿಯೆ, ಬಾದಾಮಿಗೆ ಬಂದಿವರು ಕೇವಲ 25 ಮಂದಿ


ಬಾಗಲಕೋಟೆ(ಜು.07): ಕೊರೋನಾ ಸೋಂಕು ನಿಯಂತ್ರಣದ ಸಲುವಾಗಿ ಹೇರಲಾಗಿದ್ದ ಲಾಕ್‌ಡೌನ್‌ ಸಡಿಲಿಕೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಇದೀಗ ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಸೇರಿದಂತೆ ಪ್ರಮುಖ ಐತಿಹಾಸಿಕ ಪ್ರವಾಸಿ ತಾಣಗಳು ಸೋಮವಾರದಿಂದ ಮುಕ್ತವಾಗಿವೆ.

ಶಿವಮೊಗ್ಗದಲ್ಲಿ ಕೊರೋನಾ ಅಟ್ಟಹಾಸ; 24 ಮಂದಿಗೆ ಸೋಂಕು

Tap to resize

Latest Videos

ರಾಜ್ಯ ಸರ್ಕಾರ ಕಳೆದ ಮೇ 7 ರಿಂದ ಲಾಕ್‌ಡೌನ್‌ ಸಡಿಲಿಕೆಗೊಳಿಸಿದ್ದರಿಂದ ಹಂಪಿಯ ಶ್ರೀ ವಿರೂಪಾಕ್ಷೇಶ್ವರಸ್ವಾಮಿ, ಉದ್ಧಾನ ವೀರಭದ್ರ, ಕೋದಂಡರಾಮ ದೇವಸ್ಥಾನ ಮತ್ತಿತರ ಕಡೆಗಳಿಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಉಳಿದ ಸ್ಮಾರಕಗಳ ವೀಕ್ಷಣೆಗೆ ಪುರಾತತ್ವ ಇಲಾಖೆ ಅನುಮತಿ ನೀಡಿರಲಿಲ್ಲ. ಇದೀಗ ಕಮಲಾಪುರದ ವಸ್ತು ಸಂಗ್ರಹಾಲಯ ಸಹ ಸೋಮವಾರದಿಂದ ತೆರೆಯಲಾಗಿದ್ದು, ಇದರಿಂದ ಹಂಪಿ ವೀಕ್ಷಣೆ ಜತೆಗೆ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಲು ಅವಕಾಶ ಸಿಕ್ಕಿದೆ.

ಭಾರತೀಯ ಪುರಾತತ್ವ ಇಲಾಖೆಯ ನಿರ್ದೇಶನದಂತೆ ಸುರಕ್ಷಿತ ಕ್ರಮಗಳಾದ ಮಾಸ್ಕ್‌, ಸ್ಯಾನಿಟೈಜರ್‌ ಬಳಕೆ ಮಾಡಲಾಗಿತ್ತು. ಸ್ಮಾರಕಗಳ ರಕ್ಷಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಇಲಾಖೆಯ ಸಿಬ್ಬಂದಿ ಜತೆಗೆ ಖಾಸಗಿ ಭದ್ರತಾ ಸಿಬ್ಬಂದಿಯನ್ನು ಸಹ ಕೇಂದ್ರ ಪುರಾತತ್ವ ಇಲಾಖೆ ನಿಯೋಜನೆ ಮಾಡಿದೆ. ಪ್ರಮುಖ ಸ್ಮಾರಕಗಳ ಬಳಿ ಮಾರ್ಕ್ಗಳನ್ನು ಮಾಡಲಾಗಿದ್ದು, ಸಾಮಾಜಿಕ ಅಂತರಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆನ್‌ಲೈನ್‌ ಮೂಲಕ ಟಿಕೆಟ್‌ ಪಡೆದುಕೊಂಡು ಬರಲೂ ಪ್ರವಾಸಿಗರುಗೆ ಅವಕಾಶ ಕಲ್ಪಿಸಲಾಗಿದೆ.

ಹಂಪಿಯಲ್ಲಿ ನಡುಗಿದ ಭೂಮಿ: ಸುಳ್ಳು ಸುದ್ದಿ ಎಂದ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ

ಮೊದಲ ದಿನ ನೀರಸ ಪ್ರತಿಕ್ರಿಯೆ: ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿರುವ ಮೊದಲ ದಿನವಾದ ಸೋಮವಾರ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸಿಲ್ಲ. ಬಾದಾಮಿಯ ಗುಹಾಂತರ ದೇವಾಲಯಕ್ಕೆ ಕೇವಲ 25 ಪ್ರವಾಸಿಗರು ಮಾತ್ರ ವೀಕ್ಷಣೆಗೆ ಬಂದಿದ್ದರು ಎಂದು ಪುರಾತತ್ವ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

click me!