ಆನ್‌ಲೈನ್‌ ಶಿಕ್ಷಣ ಕುರಿತು ಇಂದು ಹೈಕೋರ್ಟ್‌ ತೀರ್ಪು

By Kannadaprabha News  |  First Published Jul 7, 2020, 9:21 AM IST

ಕೋವಿಡ್‌-19 ಹಿನ್ನೆಲೆಯಲ್ಲಿ 1ರಿಂದ 5ನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣ ನಿಷೇಧಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಪೋಷಕರು, ಶಿಕ್ಷಕರು ಹಾಗೂ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಸಲ್ಲಿಸಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್‌ ಮಂಗಳವಾರ ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ.


 ಬೆಂಗಳೂರು (ಜು. 07):  ಕೋವಿಡ್‌-19 ಹಿನ್ನೆಲೆಯಲ್ಲಿ 1ರಿಂದ 5ನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣ ನಿಷೇಧಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಪೋಷಕರು, ಶಿಕ್ಷಕರು ಹಾಗೂ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಸಲ್ಲಿಸಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್‌ ಮಂಗಳವಾರ ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ.

ಸೋಮವಾರ ಅರ್ಜಿಗಳ ಕುರಿತು ಕೆಲಕಾಲ ವಾದ ಪ್ರತಿವಾದ ಆಲಿಸಿದ ನಂತರ ವಿಚಾರಣೆ ಪೂರ್ಣಗೊಳಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಹಾಗೂ ನ್ಯಾಯಮೂರ್ತಿ ಆರ್‍. ನಟರಾಜ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ಮಂಗಳವಾರಕ್ಕೆ ತೀರ್ಪು ಕಾಯ್ದಿರಿಸಿತು.

Tap to resize

Latest Videos

undefined

ಸರ್ಕಾರದ ಪರ ಅಡ್ವೋಕೇಟ್‌ ಜನರಲ… ಪ್ರಭುಲಿಂಗ ನಾವದಗಿ ಬಲವಾಗಿ ವಾದ ಮಂಡಿಸಿ, ರಾಜ್ಯದಲ್ಲಿ ಆನ್‌ಲೈನ್‌ ಶಿಕ್ಷಣವನ್ನು ನಿಷೇಧ ಮಾಡಿಲ್ಲ. ರಾಜ್ಯ ಸರ್ಕಾರ ಆನ್‌ಲೈನ್‌ ಶಿಕ್ಷಣಕ್ಕೆ ವಿರುದ್ಧವಾಗಿಲ್ಲ. ಸದ್ಯ ಮಕ್ಕಳ ಶಿಕ್ಷಣಕ್ಕಿಂತ ಅವರ ಆರೋಗ್ಯದ ಕಾಳಜಿ ಸರ್ಕಾರದ ಆದ್ಯತೆಯಾಗಿದೆ. ತಜ್ಞರ ಸಮಿತಿ ವರದಿ ಬರುವವರೆಗೆ ಮಧ್ಯಂತರ ವ್ಯವಸ್ಥೆ ಮಾಡಲಾಗಿದೆ. ವರದಿ ಆಧರಿಸಿ ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸಲಾಗತ್ತದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ಬೇಕೋ.? ಬೇಡ್ವೋ.?

ಅಲ್ಲದೆ, ಸರ್ಕಾರದ ನಿಲುವನ್ನು ಕೇವಲ ಶಿಕ್ಷಣ, ಶೈಕ್ಷಣಿಕ ಹಕ್ಕು ಮತ್ತು ಮೂಲಭೂತ ಹಕ್ಕುಗಳ ಪರಿಧಿಯಲ್ಲಿ ನೋಡಬಾರದು. ಇದರಲ್ಲಿ ಇನ್ನೂ ಅನೇಕ ಅಂಶಗಳು ಅಡಕವಾಗಿವೆ. ‘ಆನ್‌ಲೈನ್‌ ಶಿಕ್ಷಣ ವಿಚಾರದಲ್ಲಿ ಸರ್ಕಾರ ಏಕಪಕ್ಷೀಯ ಹಾಗೂ ಕಾನೂನು ಬಾಹಿರವಾಗಿ ತೀರ್ಮಾನ ತೆಗೆದುಕೊಂಡಿದೆ. ಐಸಿಎಸ್‌ಸಿ, ಸಿಬಿಎಸ್‌ಸಿ ಶಾಲೆಗಳ ಮೇಲೆ ನಿಯಂತ್ರಣ ಹೇರಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ’ ಎಂಬ ಅರ್ಜಿದಾರರ ವಾದವನ್ನು ಒಪ್ಪಲಾಗದು ಎಂದು ತಿಳಿಸಿದರು.

ಸಂವಿಧಾನ ಕಲಂ 126 ಹಾಗೂ ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಮೇಲಾಗಿ, ರಾಜ್ಯದಲ್ಲಿ 1ರಿಂದ 10ನೇ ತರಗತಿವರೆಗೆ ಸರ್ಕಾರಿ ಶಾಲೆಗಳಲ್ಲಿ 44.57 ಲಕ್ಷ, ಖಾಸಗಿ ಅನುದಾನಿತ ಶಾಲೆಗಳಲ್ಲಿ 13.16 ಲಕ್ಷ, ಅನುದಾನ ರಹಿತ ಶಾಲೆಗಳಲ್ಲಿ 45.45 ಲಕ್ಷ, ಇತರೆ ಶಾಲೆಗಳಲ್ಲಿ 1.50 ಲಕ್ಷ ಸೇರಿ ಒಟ್ಟು 1.44 ಕೋಟಿ ಮಕ್ಕಳಿದ್ದಾರೆ.

ಈ ಪೈಕಿ ಐಸಿಎಸ್‌ಸಿ, ಸಿಬಿಎಸ್‌ಸಿ ಪಠ್ಯಕ್ರಮದ 8 ಲಕ್ಷ, ರಾಜ್ಯ ಪಠ್ಯಕ್ರಮದ 93.9 ಲಕ್ಷ ಹಾಗೂ ಇತರೆ ಪಠ್ಯಕ್ರಮದ 3.34 ಲಕ್ಷ ಮಕ್ಕಳಿದ್ದಾರೆ. ಇಷ್ಟುಸಂಖ್ಯೆಯ ಮಕ್ಕಳು, ಗ್ರಾಮೀಣ-ನಗರ ಅನುಪಾತ, ಮಾಧ್ಯಮ, ಡಿಜಿಟಲ… ಮೂಲ ಸೌಕರ್ಯ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಡ್ವೋಕೇಚ್‌ ಜನರಲ… ನ್ಯಾಯಾಲಯಕ್ಕೆ ಮನದಷ್ಟುಮಾಡಿಕೊಟ್ಟರು.

click me!