ನಮ್ಮ ಕುಡಿಯುವ ಅಗತ್ಯಗಳನ್ನು ಪೂರೈಸಲು ಸಾಕಷ್ಟು ನೀರಿಲ್ಲ. ಮುಂಗಾರು ವಿಳಂಬದಿಂದಾಗಿ ತೀವ್ರ ಕೊರತೆಯಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾದ ನಂತರ ಹೇಳಿದ್ದಾರೆ.
ಹೊಸದಿಲ್ಲಿ/ಬೆಂಗಳೂರು: ಪ್ರಸ್ತುತ ರಾಜ್ಯದ ಜಲಾಶಯಗಳಲ್ಲಿ ಸಾಕಷ್ಟು ನೀರಿಲ್ಲದ ಕಾರಣ ನೆರೆಯ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವ ಸ್ಥಿತಿಯಲ್ಲಿಲ್ಲ ಎಂದು ಕರ್ನಾಟಕ ಶುಕ್ರವಾರ ಹೇಳಿದೆ. ನ್ಯಾಯಾಧಿಕರಣ ರಚನೆಗೆ ಸುಪ್ರೀಂ ಕೋರ್ಟ್ ಜುಲೈ 5 ರ ನಿರ್ದೇಶನ ನೀಡಿದ್ದರೂ, ಸದ್ಯ ನೀರು ಬಿಡಲು ಸಾಧ್ಯವೇ ಇಲ್ಲ ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
"ನಮ್ಮ ಕುಡಿಯುವ ಅಗತ್ಯಗಳನ್ನು ಪೂರೈಸಲು ಸಾಕಷ್ಟು ನೀರಿಲ್ಲ. ಮುಂಗಾರು ವಿಳಂಬದಿಂದಾಗಿ ತೀವ್ರ ಕೊರತೆಯಿದೆ" ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾದ ಒಂದು ದಿನದ ನಂತರ ಹೇಳಿಕೆ ನೀಡಿದ್ದಾರೆ. ಅಲ್ಲದೆ, ನೀರು ಬಿಡುಗಡೆ ಮಾಡಲು ಬಯಸಿದರೂ ನಮಗೆ ನೀರಿಲ್ಲ, ಬೆಂಗಳೂರು ನಗರವೂ ಕಾವೇರಿ ನದಿಯ ಮೇಲೆ ಅವಲಂಬಿತವಾಗಿದೆ ಎಂದೂ ಉಪ ಮುಖ್ಯಮಂತ್ರಿಯೂ ಆಗಿರುವ ಡಿಕೆಶಿ ಹೇಳಿದ್ದಾರೆ.
ದವಸ ಧಾನ್ಯ ಬೆಲೆ ಏರಿಕೆಗೆ ಕಾರಣ ಏನು? ಇನ್ನೆಷ್ಟು ದಿನ ಬೆಲೆ ಏರಿಕೆಯಾಗಲಿದೆ ನೋಡಿ..
ಕರ್ನಾಟಕವು ಕೇಂದ್ರ ಮತ್ತು ವಿವಿಧ ರಾಜ್ಯಗಳ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಸಭೆಯನ್ನು ಆಯೋಜಿಸಲಿದ್ದು, ಜುಲೈ 8 - 9 ರಂದು ಈ ಸಭೆ ನಡೆಯುವ ಸಾಧ್ಯತೆ ಇದೆ ಎಂದು ಅವರು ಹೇಳಿದರು. ಈ ಸಭೆಗೆ ಮಂಡ್ಯದ ಕೆಆರ್‌ಎಸ್ ಡ್ಯಾಂ ಬಳಿ ಸ್ಥಳವನ್ನು ಹುಡುಕಲು ನಾನು ಅಧಿಕಾರಿಗಳನ್ನು ಕೇಳಿದ್ದೇನೆ. ಇದರಿಂದಾಗಿ ತಮಿಳುನಾಡು ಮತ್ತು ಕೇಂದ್ರ ಅಧಿಕಾರಿಗಳು ನೈಜ ಪರಿಸ್ಥಿತಿಯನ್ನು ನೋಡಬಹುದು ಎಂದೂ ಡಿಕೆಶಿ ಹೇಳಿದರು.
ನ್ಯಾಯಾಧಿಕರಣ ಸ್ಥಾಪಿಸುವ ಕುರಿತು ತಮಿಳುನಾಡಿನೊಂದಿಗೆ ಮಾತುಕತೆ ನಡೆಸಲು ಸಮಯ ಕೋರಿದ ಡಿಕೆಶಿ
2020 ರಿಂದ, ತಮಿಳುನಾಡಿಗೆ ಹೆಚ್ಚಿನ ಪ್ರಮಾಣದ ಕಾವೇರಿ ನೀರು ಹರಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆಯಾಗಿ, ರಾಜ್ಯವು ಜೂನ್ 2021 ಮತ್ತು ಮೇ 2022 ರ ನಡುವೆ ಸುಮಾರು 281 ಟಿಎಂಸಿ ಅಡಿ (ಸಾವಿರ ಮಿಲಿಯನ್ ಘನ ಅಡಿಗಳು) ಪಡೆದಿದೆ. ಇದರ ಪರಿಣಾಮವಾಗಿ, ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ನಿಗದಿಪಡಿಸಿದ 177.25 ಟಿಎಂಸಿ ಅಡಿ ಕ್ವಾಂಟಮ್‌ಗಿಂತ 103.8 ಟಿಎಂಸಿ ಅಡಿ ಹೆಚ್ಚು ಪಡೆದುಕೊಂಡಿದೆ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ದೇಶದ ಬಹುತೇಕ ರಾಜ್ಯಗಳಲ್ಲಿ ಟೊಮೆಟೋ 100 ರೂ.ಗೆ ಜಂಪ್: ಬೆಲೆ ಏರಿಕೆ ತಡೆಯಲು ಸರ್ಕಾರದಿಂದ ‘ಟೊಮೆಟೋ ಗ್ರಾಂಡ್ ಚಾಲೆಂಜ್’
ಈ ಮಧ್ಯೆ, ಗುರುವಾರ ಕೆಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾದಾಗ ನ್ಯಾಯಮಂಡಳಿ ಸ್ಥಾಪಿಸುವ ತಮ್ಮ ಬೇಡಿಕೆಯನ್ನು ಮರುಪರಿಶೀಲಿಸಲು ತಮಿಳುನಾಡು ಜೊತೆ ಮತ್ತೆ ಮಾತುಕತೆಗೆ ಡಿ.ಕೆ. ಶಿವಕುಮಾರ್ ಸಮಯ ಕೋರಿದ್ದಾರೆ. ಅಲ್ಲದೆ, ತಮಿಳುನಾಡಿನೊಂದಿಗೆ ಮಾತುಕತೆಗೆ ಮುನ್ನ ನ್ಯಾಯಮಂಡಳಿ ರಚಿಸಬಾರದು. ಕಾಂಗ್ರೆಸ್ ಈ ಹಿಂದೆ ಎಂದೂ ಮಾತುಕೆತೆಗ ಅವಕಾಶವಿರಲಿಲ್ಲ ಎಂದು ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.
ಇನ್ನು, ಕೋಲಾರ ಮತ್ತು ಚಿಕ್ಕಬಳ್ಳಾಪುರದ ಎರಡು ಜಿಲ್ಲೆಗಳ ಕೆರೆಗಳನ್ನು ತುಂಬಿಸಲು ಸಹಾಯ ಮಾಡಿದ ಕೋರಮಂಗಲ ಮತ್ತು ಚಲ್ಲಘಟ್ಟ ಕಣಿವೆ (ಕೆಸಿ ವ್ಯಾಲಿ) ಗೆ ದ್ವಿತೀಯ ಸಂಸ್ಕರಿಸಿದ ಒಳಚರಂಡಿ ನೀರನ್ನು ಬಿಡುಗಡೆ ಮಾಡುವುದಕ್ಕೆ ತಮಿಳುನಾಡು ಆಕ್ಷೇಪಣಾ ಅರ್ಜಿ ಸಲ್ಲಿಸಿದೆ. ಈ ಅರ್ಜಿಯ ನಂತರ ಜುಲೈ 5 ರ ಮೊದಲು ನ್ಯಾಯಮಂಡಳಿ ರಚಿಸುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ನಿರ್ದೇಶಿಸಿದೆ.
ಇದನ್ನೂ ಓದಿ: ಮುಂಗಾರು ಚುರುಕು: ಉತ್ತರ ಭಾರತದ ಹಲವೆಡೆ ಭೂಕುಸಿತ, ರಸ್ತೆ ಬಂದ್; ಹಿಮಾಚಲದಲ್ಲಿ ನೂರಾರು ಪ್ರವಾಸಿಗರು ಅತಂತ್ರ; ಹಲವರು ಬಲಿ
ಇನ್ನೊಂದೆಡೆ, ಜಲಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು 2019 ರಲ್ಲಿ ತಮಿಳುನಾಡು ಜೊತೆಗಿನ ತನ್ನ ದೂರಿನಲ್ಲಿ ನೀರಿನ ಪ್ರಮಾಣದ ಕುರಿತು ವಿವಾದವನ್ನು ಇತ್ಯರ್ಥಗೊಳಿಸಲು ಹೊಸ ಮಾತುಕತೆಗೆ ಮಧ್ಯಸ್ಥಿಕೆ ವಹಿಸುವಂತೆ ಜಲಶಕ್ತಿ ಅಧಿಕಾರಿಗಳನ್ನು ಕೇಳಿದರು. ಹಾಗೂ, ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಾಣವಾಗುವ ವಿವಾದಿತ ಮೇಕೆದಾಟು ಸಮತೋಲನ ಜಲಾಶಯದ ಮಹತ್ವ ಮತ್ತು ಹೆಚ್ಚುವರಿ ನೀರನ್ನು ಹೇಗೆ ಕುಡಿಯುವ ಉದ್ದೇಶಗಳಿಗಾಗಿ ಬಳಸಬಹುದು ಎಂದು ರಾಜ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೇಂದ್ರ ಸಚಿವರಿಗೆ ತಿಳಿಸಿದರು. ಮೇಕೆದಾಟು ಬಹುಪಯೋಗಿ ಯೋಜನೆಯು ರಾಮನಗರ ಜಿಲ್ಲೆಯ ಕನಕಪುರ ಬಳಿ ಸಮತೋಲನ ಜಲಾಶಯವನ್ನು ನಿರ್ಮಿಸುವುದನ್ನು ಒಳಗೊಂಡಿರುತ್ತದೆ.
ಇದನ್ನೂ ಓದಿ: ಅಸ್ಸಾಂ ಪ್ರವಾಹ ಸ್ಥಿತಿ ಮುಂದುವರಿಕೆ: 16 ಜಿಲ್ಲೆಗಳ 4.88 ಲಕ್ಷ ಜನರಿಗೆ ತೀವ್ರ ಸಂಕಷ್ಟ