
ಸುವರ್ಣ ವಿಧಾನಸಭೆ(ಡಿ.20): ಉತ್ತರ ಕರ್ನಾಟಕ ಭಾಗದ ಮತ್ತಷ್ಟು ಅಭಿವೃದ್ಧಿಗೆ ಡಾ| ಗೋವಿಂದರಾವ್ ನೇತೃತ್ವದ ಸಮಿತಿ ನೀಡಲಿರುವ ವರದಿಯ ಶಿಫಾರಸು ಅನುಷ್ಠಾನ, ಕೃಷ್ಣಾ ಮೇಲ್ದಂಡೆ ಯೋಜ ನೆಯ ಮೂರನೇ ಹಂತಕ್ಕೆ ಒಂದೇ ಹಂತ ದಲ್ಲಿ 73 ಸಾವಿರ ಎಕರೆ ಭೂಮಿ ಭೂ ಸ್ವಾಧೀನಕ್ಕೆ ಕ್ರಮ, ಮಹದಾಯಿ ಯೋಜ ನೆ ಒಪ್ಪಿಗೆ ನೀಡುವಂತೆ ಕೇಂದ್ರ ರಾಷ್ಟ್ರೀ ಯ ವನ್ನಜೀವಿ ಮಂಡಳಿ ಮೇಲೆ ಒತ್ತಡ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ನಡೆದ ಚರ್ಚೆಗೆ ಸುದೀರ್ಘವಾಗಿ ಉತ್ತರಿಸಿದ ಅವರು, ಡಾ। ಡಿ.ಎಂ.ನಂಜುಂಡಪಸಮಿತಿವರದಿಯಶಿಫಾರಸಿನಂತೆ ಕಳೆದ ಎಂಟು ವರ್ಷಗಳಿಂದ ₹17,850 ಕೋಟಿ ಖರ್ಚು ಮಾಡಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಇದೇ ಸದನದಲ್ಲಿ ತಾವು ಎಂಟು ಭರವಸೆಗಳನ್ನು ನೀಡಿದ್ದೆವು. ಉತ್ತರ ಕರ್ನಾಟಕ ಭಾಗದ 59 ತಾಲೂಕು ಮತ್ತು ದ.ಕರ್ನಾಟಕದ 55 ತಾಲೂಕುಗಳನ್ನು ಅತ್ಯಂತ ಹಿಂದುಳಿದ ಪ್ರದೇಶ ಗಳೆಂದು ಗುರುತಿಸಿ ಪ್ರಾದೇಶಿಕ ಆಸಮತೋಲನ ನಿವಾರಣೆಗೆ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಲು ಹೇಳಿತ್ತು.
ಬೆಂಗ್ಳೂರಲ್ಲಿ ಕಸ ವಿಲೇವಾರಿಗೆ ಮಾಫಿಯಾದ್ದೇ ಅಡ್ಡಿ: ಡಿ.ಕೆ.ಶಿವಕುಮಾರ್
ಎರಡೂ ಭಾಗದ ಅತ್ಯಂತ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ 2007- 08 ರಿಂದ 2023-24 ರವರೆಗೆ ಉತ್ತರ ಕರ್ನಾಟಕಕ್ಕೆ 35 ಸಾವಿರ ಕೋಟಿಗೂ ಹೆಚ್ಚಿನ ಅನುದಾನ ನೀಡಲಾಗಿದೆ. ನಂಜುಂಡಪ್ಪ ವರದಿ ಹೇಳಿದ್ದ ಕ3] ಸಾವಿರ ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಈ ಪೈಕಿ ಉತ್ತರ ಕರ್ನಾಟಕದ ಕಲಬುರಗಿ ಮತ್ತು ಬೆಳಗಾವಿ ವಿಭಾಗಗಳಿಗೆ ₹17,850 ಕೋಟಿ ವರದಿಯ ಅಡಿ ಖರ್ಚು ಮಾಡಲಾಗಿದೆ ಎಂದರು.
ಪ್ರದೇಶಾಭಿವೃದ್ಧಿ ಮಂಡಳಿ: ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸಂವಿಧಾನ 371(ಜೆ) ಪರಿ ಚ್ಚೇದದ ಮೂಲಕ ವಿಶೇಷ ಸ್ಥಾನಮಾನ ನೀಡಿದ್ದರಿಂದ ನಮ್ಮ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪಿಸಿತು. ಈ ಮಂಡಳಿ ಮೂಲಕ 2013-14 ರಿಂದ ಇದುವರೆಗೆ ₹19,878 ಕೋಟಿ ಬಜೆಟ್‌ನಲ್ಲಿ ಒದಗಿಸಲಾಗಿದೆ. 13,229 ಕೋಟಿ ಗಳನ್ನು ಬಿಡುಗಡೆ ಮಾಡಿದ್ದು, ಇದುವರೆಗೆ ೮11,500 ಕೋಟಿ ಖರ್ಚು ಮಾಡಲಾಗಿದೆ. 35,885 ಕಾಮಗಾರಿ ಕೈಗೆತ್ತಿಕೊಂಡಿದ್ದು, 27,264 ಕಾಮಗಾರಿ ಪೂರ್ಣಗೊಳಿಸಿದೆ. ಮಂಡಳಿಗೆ 2024-25ನೇ ಸಾಲಿನ ಆಯವ ಯದಲ್ಲಿ ಕ5,000 ಕೋಟಿ ಘೋಷಿಸಿ ಅನುದಾನ ಹಂಚಿಕೆ ಮಾಡಲಾಗಿದೆ. ಈಗಾಗಲೇ 3100 ಕೋಟಿಗಳಿಗೂ ಹೆಚ್ಚು ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಲಕ್ಷ್ಮೀಗೆ ವೇ* ಎಂದ ಸಿ.ಟಿ. ರವಿಗೆ ಪರಿಷತ್ ಹೊರಗೆ ಹಲ್ಲೆ, ಒಳಗಡೆ ತಾಯಿ, ಮಗಳು, ಹೆಂಡ್ತಿ ಬಗ್ಗೆ ಬೈಗುಳ!
ಕಲಬುರಗಿಯಲ್ಲಿ 221.52 ಕೋಟಿ ವೆಚ್ಚದಲ್ಲಿ 150 ಹಾಸಿಗೆಯ ಮಕ್ಕಳ ಆರೋಗ್ಯ ಘಟಕ ಸ್ಥಾಪನೆಗೆ ಸಂಪುಟ ಅನುಮೋದನೆ ನೀಡಿದೆ. ಜಿಮ್ಸ್ ಆಸ್ಪತ್ರೆಯ ಆವರಣದಲ್ಲಿಯೇ ೬90 ಕೋಟಿ ವೆಚ್ಚ ದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು 672 ಕೋಟಿ ವೆಚ್ಚದಲ್ಲಿ 150 ಹಾಸಿಗೆಗಳ ಸಾಮರ್ಥದ ಕ್ಯಾನರ್ ಆಸ್ಪತ್ರೆಯ ಕಟ್ಟಡ ನಿರ್ಮಿಸಲಾಗುತ್ತಿದ್ದು, ಈ ಮೂರು ಆಸ್ಪತ್ರೆಗಳ ಕಾಮಗಾರಿಗೆ ಈ ವರ್ಷ 75 ಕೋಟಿ ಅನುದಾನ ನೀಡಲು ನಿರ್ಧರಿಸಲಾಗಿದೆ. ಪ್ರಗತಿಯಲ್ಲಿರುವ ಕ162.80 ಕೋಟಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹಶೀಘ್ರ ಸಾರ್ವಜನಿಕರಿಗೆ ಬಳಕೆಗೆ ಬರಲಿದೆ. 30.14 ಕೋಟಿ ವೆಚ್ಚದಲ್ಲಿ 50 ಹಾಸಿಗೆ ಸಾಮರ್ಥದ ತೀವ್ರ ನಿಗಾ ಘಟಕ ಮತ್ತು ₹15.57 ಕೋಟಿ ವೆಚ್ಚದಲ್ಲಿ 30 ಹಾಸಿಗೆ ಸಾಮರ್ಥ್ಯದ ಸುಟ್ಟ ಗಾಯಗಳ ಘಟಕಕ್ಕೆ ಇತ್ತೀಚೆಗೆ ಅಡಿಗಲ್ಲು ಹಾಕಲಾಗಿದೆ. ಒಟ್ಟಾರೆ ಈ ಭಾಗದಲ್ಲಿ ವೈದ್ಯಕೀಯ / 2013-14 50 2023-240 ಸುಮಾರು ಕ915.50 ಕೋಟಿ ಅನುದಾನ ಒದಗಿಸಿದ ಎಂದು ವಿವರಿಸಿದರು.
ನಾಡಿದ್ದು ಕಲಬುರಗಿ ಜಯದೇವ ಹೃದ್ರೋಗ ಆಸ್ಪತ್ರೆ ಉದ್ಘಾಟನೆ
ಕೆ.ಕೆ.ಆರ್.ಡಿ.ಬಿಯಿಂದ ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ 371 ಹಾಸಿಗೆಯ ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆಯ ಆಸ್ಪತ್ರೆಯ ಶಾಖಾ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು 262.20 ಕೋಟಿ ಪರಿಷ್ಕೃತ ಅಂದಾಜಿಗೆ ಅನು ಮೋದನೆ ನೀಡಿದ್ದು, ಡಿ.22ಕ್ಕೆ ಈ ಆಸ್ಪತ್ರೆ ಯನ್ನು ಲೋಕಾರ್ಪಣೆ ಮಾಡಲಾಗುವುದು ಮುಖ್ಯಮಂತ್ರಿಗಳು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ