ಸಿಟಿ ರವಿ ಭೇಟಿಗೆ ವಕೀಲರಿಗೂ ಅವಕಾಶ ನೀಡದ ಬೆಳಗಾವಿ ಪೊಲೀಸ್, ಆಕ್ರೋಶಗೊಂಡ ಬಿಜೆಪಿ!

Published : Dec 19, 2024, 09:37 PM IST
ಸಿಟಿ ರವಿ ಭೇಟಿಗೆ ವಕೀಲರಿಗೂ ಅವಕಾಶ ನೀಡದ ಬೆಳಗಾವಿ ಪೊಲೀಸ್, ಆಕ್ರೋಶಗೊಂಡ ಬಿಜೆಪಿ!

ಸಾರಾಂಶ

ಸಿಟಿ ರವಿ ಬಂಧಿಸಿರುವ ಬೆಳಗಾವಿ ಪೊಲೀಸರು ವಕೀಲರ ಭೇಟಿಗೂ ಅವಕಾಶ ನೀಡಿಲ್ಲ. ಇದು ಸಿಟಿ ರವಿ ವಕೀಲರ ಆಕ್ರೋಶಕ್ಕೆ ಕಾರಣವಾಗಿದೆ. ಮಾನವಹಕ್ಕುಗಳ ಆಯೋಗಕ್ಕೆ ದೂರು ನೀಡುವುದಾಗಿ ಎಚ್ಚರಿಸಿದ್ದಾರೆ.  

ಬೆಳಗಾವಿ(ಡಿ.19) ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಕ್ಷೇಪಾರ್ಹ ಪದ ಬಳಕೆ ಮಾಡಿದ ಆರೋಪಡಿ ಬೆಳಗಾವಿ ಪೊಲೀಸರು ಸಿಟಿ ರವಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಸಿಟಿ ರವಿ ಭೇಟಿಗೆ ವಕೀಲರಿಗೂ ಅವಕಾಶ ನೀಡದೆ ವಿಚಾರಣೆ ನಡೆಸಿದ್ದಾರೆ ಅನ್ನೋಪ ಕೇಳಿಬಂದಿದೆ. ಸಿಟಿ ರವಿ ವಕೀಲ ಚೇತನ್ ಮನೇರಿಕರ ಆರೋಪಿಸಿದ್ದಾರೆ.  ಆರೋಪಿ ಭೇಟಿಗೆ ಸುಪ್ರೀಂ ಕೋರ್ಟ್ ಪ್ರಕಾರ ಅವಕಾಶವಿದೆ. ಆದರೆ ಬೆಳಗಾವಿ ಪೊಲೀಸರು ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಮಾನವ ಹಕ್ಕು ಹಾಗೂ ಪೊಲೀಸ್ ಡಿಜಿಪಿಗೆ ದೂರು ನೀಡುವುದಾಗಿ ಎಚ್ಚರಿಸಿದ್ದಾರೆ.

ವಿಧಾನಪರಿಷತ್ತಿನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಅನ್ನೋ ಗಂಭೀರ ಆರೋಪ ಸಿಟಿ ರವಿ ಮೇಲೆ ಕೇಳಿಬಂದಿದೆ. ಇದರ ಬೆನ್ನಲ್ಲೇ ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇತ್ತ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರು ಸುವರ್ಣ ಸೌಧದ ಒಳಗೆ ನುಗ್ಗಿ ಸಿಟಿ ರವಿ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ.  ಸುವರ್ಣ ಸೌಧದಲ್ಲಿ ಹೈಡ್ರಾಮ ನಡೆಯುತ್ತಿದ್ದಂತೆ ಬೆಳಗಾವಿ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ.

ಪ್ರಜಾಪ್ರುಭುತ್ವ ದೇಗುಲದಲ್ಲೇ ಹೊಡೆದಾಟ? ಅಲ್ಲಿ ರಾಹುಲ್ ತಳ್ಳಾಟ ಆರೋಪ, ಇಲ್ಲಿ ಸಿಟಿ ರವಿ ಮೇಲೆ ಹಲ್ಲೆ!

ಸಿಟಿ ರವಿ ಬಂಧಿಸಿದ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಬೆಳಗಾವಿ ಡಿಸಿಪಿ ಸಮ್ಮುಖದಲ್ಲಿ ವಿಚಾರಣೆ ಆರಂಭಿಸಿದ್ದಾರೆ. ಹಿರೇಬಾಗೇವಾಡಿ ಠಾಣೆ ಪಿಐ ಆರ್‌ಆರ್‌ ಪಾಟೀಲ್ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ನಡೆಸುತ್ತಿರುವ ಆರೋಪಿ ಸಿಟಿ ರವಿಯನ್ನು ಭೇಟಿಯಾಗಲು ವಕೀಲರು ಆಗಮಿಸಿದ್ದಾರೆ. ವಕೀಲಾರದ ಚೇನ್ ಮನೇರಿಕರ ಹಾಗೂ ಜಿಎಂ ದೇಸಾಯಿ ಆಗಮಿಸಿದ್ದಾರೆ. ಆದರೆ ಇವರ ಬೇಟಿಗೆ ಬೆಳಗಾವಿ ಪೊಲೀಸರು ಅವಕಾಶ ನೀಡಿಲ್ಲ ಅನ್ನೋ ಆರೋಪ ಕೇಳಿಬಂದಿದೆ. 

ಈ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ ಸಿಟಿ ರವಿ ಪರ ವಕೀಲರು, ಬೆಳಗಾವಿ ಪೊಲೀಸರ ವಿರುದ್ದ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುವುದಾಗಿ ಎಚ್ಚರಿಸಿದ್ದಾರೆ. ಬೆಳಗಾವಿ ಪೊಲೀಸರು ಸರ್ಕಾರದ ಮಾತಿನಂತೆ ಕೆಲಸ ಮಾಡುತ್ತಿದ್ದಾರೆ. ನಮ್ಮ ಕಕ್ಷಿದಾರ ಬೇಟಿಗೆ ಅವಕಾಶ ನೀಡಿಲ್ಲ.  ಸುಪ್ರೀಂ ಕೋರ್ಟ್ ಪ್ರಕಾರ ಆರೋಪಿ ಭೇಟಿಗೆ ವಕೀಲರಿಗೆ ಅವಕಾಶ ಇದೆ. ಆದರೆ ಬೆಳಗಾವಿ ಪೊಲೀಸರು ಸುಪ್ರೀಂ ಕೋರ್ಟ್ ಆದೇಶವನ್ನೇ ಧಿಕ್ಕರಿಸಿದ್ದಾರೆ. ಬೆಳಗಾವಿ ಪೊಲೀಸರ ವಿರುದ್ದ ಮಾನವ ಹಕ್ಕುಗಳ ಆಯೋಗ ಹಾಗೂ ಡಿಜಿಐಜಿಪಿಗೆ ದೂರು ನೀಡುತ್ತೇವೆ ಎಂದು ವಕೀಲ ಚೇತನ್ ಮನೇರಿಕರ ಆರೋಪಿಸಿದ್ದಾರೆ. 

ವಿಧಾನಪರಿಷತ್ತಿನ ಘಟನೆ ಇದೀಗ ರಾಜ್ಯದಲ್ಲಿ ರಾಜಕೀಯವಾಗಿ ಹೈಡ್ರಾಮ ಸೃಷ್ಟಿಸಿದೆ. ಸಿಟಿ ರವಿ ಅಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಅನ್ನೋ ಕಾರಣಕ್ಕೆ ಬಂಧನವಾಗಿದ್ದರೆ. ಆದರೆ ಇದಕ್ಕೂ ಮುನ್ನ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರೂ ಸುವರ್ಣ ಸೌಧದ ಒಳಗೆ ನುಗ್ಗಿ ಸಿಟಿ ರವಿ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಇಷ್ಟೇ ಅಲ್ಲ ಕಾಂಗ್ರೆಸ್ ಕಾರ್ಯಕರ್ತರು ಸಿಟಿ ರವಿ ಫೋಟೋ ಚಪ್ಪಲಿ ಏಟು ನೀಡು ಛಿ ಥೂ ಎಂದು ಉಗಿದು ಪ್ರತಿಭಟನೆ ಮಾಡಿದ್ದಾರೆ. ಇತ್ತ ಸಿಟಿ ರವಿ ಬಂಧನ ವಿರೋಧಿಸಿ ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ಜೋರಾಗಿದೆ. 

ಲಕ್ಷ್ಮೀಗೆ ವೇ* ಎಂದ ಸಿ.ಟಿ. ರವಿಗೆ ಪರಿಷತ್ ಹೊರಗೆ ಹಲ್ಲೆ, ಒಳಗಡೆ ತಾಯಿ, ಮಗಳು, ಹೆಂಡ್ತಿ ಬಗ್ಗೆ ಬೈಗುಳ!

ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದಾರೆ. ಸಿಟಿ ರವಿ ಪದ ಬಳಕೆ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದರೆ, ಇತ್ತ ಕಾಂಗ್ರೆಸ್ ಗೂಂಡಾ ಕಾರ್ಯಕರ್ತರಿಂದ ಸಿಟಿ ರವಿ ಮೇಲೆ ಹಲ್ಲೆ ಹಾಗೂ ಸಿಟಿ ರವಿ ಬಂಧನ ವಿರೋಧಿಸಿ ಪ್ರತಿಭಟನೆ ಆರಂಂಭಗೊಂಡಿದೆ. ಈ ಪ್ರಕರಣ ರಾಜ್ಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!