ಅನಾರೋಗ್ಯ ಪೀಡಿತ ಮಗುವಿಗೆ ಎರಡೇ ಗಂಟೆಯಲ್ಲಿ ಉಚಿತ ಚಿಕಿತ್ಸೆ ವ್ಯವಸ್ಥೆ ಮಾಡಿದ ಸಿಎಂ ಬೊಮ್ಮಾಯಿ

By Suvarna News  |  First Published Jun 22, 2022, 12:10 AM IST

ಬೆಳಗಾವಿ  ಮಗು ದೃಷ್ಟಿ ದೋಷ ಹಾಗೂ ಮೆದುಳು ಸಂಬಂಧಿತ ಕಾಯಿಲೆಯಿಂದ ಬಳಲುತ್ತಿತ್ತು. ಈ ಮಗುವಿನ ಚಿಕಿತ್ಸೆಗೆ  ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಎರಡೇ ಗಂಟೆಯಲ್ಲಿ ಉಚಿತ ಚಿಕಿತ್ಸೆ ವ್ಯವಸ್ಥೆ ಮಾಡಿದ್ದಾರೆ.


ಬೆಂಗಳೂರು (ಜೂನ್ 22): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಸೂರಿನಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ಮುಗಿಸಿ ಬೆಂಗಳೂರಿನ ತಮ್ಮ ಆರ್ ಟಿ ನಗರ ನಿವಾಸಕ್ಕೆ ಆಗಮಿಸಿದ್ರು. ಸಹಜವಾಗಿ ಅಲ್ಲಿ ನೆರೆದಿದ್ದ ಸಾರ್ವಜನಿಕರನ್ನು ಕುಂದು ಕೊರತೆಯನ್ನ ಆಲಿಸಿದ್ರು. ಅದ್ರಲ್ಲಿ ತೀರ ಬಡತನದಲ್ಲಿದ್ದ ಮಹಿಳೆಯೊರ್ವಳು ತನ್ನ ಚಿಕ್ಕ ಮಗಳಿಗೆ ಇರುವ ಆರೋಗ್ಯ ಸಮಸ್ಯೆಯನ್ನ ಸಿಎಂ ಬೊಮ್ಮಾಯಿ‌ ಬಳಿ ಅಳುತ್ತ ಹೇಳಿಕೊಂಡಳು.

ಆ ಮಹಿಳೆಯ ಹೆಸರು ಶಂಕ್ರಮ್ಮ ಮೂಲತಃ ಬೆಳಗಾವಿ ಜಿಲ್ಲೆಯವರು. ಶಂಕ್ರಮ್ಮನ ಮಗು ಕೃಷ್ಣವೇಣಿ ಎಂದು‌ ಹೆಸರು ಆ ಚಿಕ್ಕ ಮಗು ದೃಷ್ಟಿ ದೋಷ ಹಾಗೂ ಮೆದುಳು ಸಂಬಂಧಿತ ಕಾಯಿಲೆಯಿಂದ ಬಳಲುತ್ತಿತ್ತು. ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗಲಿದೆ ಅದನ್ನ ಬರಿಸುವ ಶಕ್ತಿನನೆಗೆ ಇಲ್ಲ ನಾವು ಕಡು ಬಡತನದಲ್ಲಿದ್ದೇನೆ. ನನ್ನ ಮಗುವಿನ ಜೀವ ಉಳಿಸಿ ಎಂದು ಸಿಎಂ ಬೊಮ್ಮಾಯಿ‌ ಹತ್ತಿರ ಆ ಚಿಕ್ಕ ಕಂದಮ್ಮಳನ್ನ‌ ಹಿಡಿದುಕೊಂಡು ಕಣ್ಣೀರು ಹಾಕುತ್ತ ಸಿಎಂಗೆ ಮನವಿ ಮಾಡಿಕೊಂಡಳು.

Tap to resize

Latest Videos

YOGA HALL IN CHICKPET ಪಾಳು ಬಿದ್ದ ಜಾಗದಲ್ಲಿ ಯೋಗ ಸೆಂಟರ್ ನಿರ್ಮಾಣ

ತನ್ನ ಮಗಳಿಗಾಗಿ ಆಸ್ಪತ್ರೆ ಸುತ್ತಾಡಿದ್ದ ಬಿಲ್ ಗಳನ್ನೆಲ್ಲ ಸಿಎಂಗೆ ತೊರಿಸಿ ಮಗಳ ಚಿಕಿತ್ಸೆಗೆ ಲಕ್ಷಾಂತರ ಖರ್ಚಾಗಲಿದೆ ದಯವಿಟ್ಟು ಸಹಾಯ ಮಾಡಿ ಎಂದು ಕಣ್ಣೀರು ಹಾಕುತ್ತ ಮನವಿ ಮಾಡಿದಳು. ಶಂಕ್ರಮ್ಮನ  ಮನವಿಯನ್ನ ಖುದ್ದು ಆಲಿಸಿದ ಸಿಎಂ ಆಕೆಯ ಮಗಳ ಚಿಕಿತ್ಸೆಗೆ ನೆರವಾಗುತ್ತೇವೆ ಹೆದರಬೇಡ ತಾಯಿ ಎಂದು ಭರವಸೆ ನೀಡಿದ್ರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ‌. 

ಎರಡೇ ಗಂಟೆಯಲ್ಲಿ ಉಚಿತ ಚಿಕಿತ್ಸೆ ವ್ಯವಸ್ಥೆ ಮಾಡಿದ ಸಿಎಂ ಬೊಮ್ಮಾಯಿ: ಶಂಕ್ರಮ್ಮನ ಮಗಳ ಚಿಕಿತ್ಸೆ ನೆರವಾಗುವುದಾಗಿ ಹೇಳಿದ ಎರಡೇ ಗಂಟೆಯಲ್ಲೇ ಉಚಿತ ಚಿಕಿತ್ಸೆಯ ವ್ಯವಸ್ಥೆಯಾಯ್ತು. ಶಂಕ್ರಮ್ಮನ ಮನವಿಗೆ ಸ್ಪಂದಿಸಿದ ಸಿಎಂ ಬೊಮ್ಮಾಯಿ‌ ತಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದ್ರು ಶಂಕ್ರಮ್ಮನ ಮಗಳ ಚಿಕಿತ್ಸೆಯಾಗಬೇಕು ಅದಕ್ಕೆ ಬೇಕಾದ ವ್ಯವಸ್ಥೆ ಕೂಡಲೇ ಮಾಡಿ ಎಂದು ನಿರ್ದೇಶನ ಸಹ ನೀಡಿದ್ರು. 

ಶತಶೃಂಗ ಪರ್ವತದಲ್ಲಿ ಯೋಗ ಮಾಡಿ ದಾಖಲೆ ಸೃಷ್ಠಿಸಿದ ಕೋಲಾರ

ಸಿಎಂ ಆದೇಶ ಮೇರೆಗೆ ಧಾರವಾಡದ ಎಸ್ ಡಿ ಎಂ ಆಸ್ಪತ್ರೆಯ ನಿರ್ದೇಶಕರಿಗೆ ಪತ್ರ ಬರೆದ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಗೋಪಾಲ್ ಶಂಕ್ರಮ್ಮನ ಮಗಳನ್ನ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಿ, ಆ ಚಿಕ್ಕ‌ಕಂದ್ಮಳಿಗೆ ಚಿಕಿತ್ಸೆಯನ್ನ ಮೊದಲು ನೀಡಿ ನಂತರ ಚಿಕಿತ್ಸೆಗೆ ತಗುಲಿದೆ ಬಿಲ್ ನಮ್ಗೆ ಕಳುಹಿಸಿ ಕೊಡಿ. ಮಗುವಿನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಭರಿಸೋದಾಗಿ ಪತ್ರ ತಿಳಿಸಿದ್ದಾರೆ. 

ಮನವಿ ಮಾಡಿದ ಎರಡು ಗಂಟೆಯಲ್ಲಿ ಉಚಿತ ಚಿಕಿತ್ಸೆ ವ್ಯವಸ್ಥೆ ಮಾಡಿದ ಮುಖ್ಯಮಂತ್ರಿಗಳಿಗೆ ಶಂಕ್ರಮ್ಮನ ಧನ್ಯವಾದ ಹೇಳಿದ್ದಾರೆ... ನಾಳೆ ಅಥಾವ ನಾಡಿದ್ದು ಧಾರವಾಡ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಮಗಳನ್ನ ಚಿಕಿತ್ಸೆಗಾಗಿ ದಾಖಲು ಮಾಡಲಿದ್ದಾಳೆ ಶಂಕ್ರಮ್ಮ.
 

click me!