Belagavi Violence: ಭಾಷೆಗಾಗಿ ನಾನು ಪ್ರಾಣ ಕೊಡಲೂ ಸಿದ್ಧ: ಶಿವಣ್ಣ

Kannadaprabha News   | Asianet News
Published : Dec 20, 2021, 06:08 AM IST
Belagavi Violence: ಭಾಷೆಗಾಗಿ ನಾನು ಪ್ರಾಣ ಕೊಡಲೂ ಸಿದ್ಧ: ಶಿವಣ್ಣ

ಸಾರಾಂಶ

*   ನಮ್ಮ ಬಾವುಟ ಸುಟ್ಟರೆ ತಾಯಿಯನ್ನೇ ಸುಟ್ಟ ಹಾಗೆ *   ನೋಡ್ಕೊಂಡು ಸುಮ್ಮನೆ ಇರಲ್ಲ: ದುನಿಯಾ ವಿಜಿ *   ದೊಡ್ಡ ಧ್ವನಿಯಲ್ಲಿ ಖಂಡಿಸಬೇಕು: ಪ್ರಜ್ವಲ್‌

ಬೆಂಗಳೂರು(ಡಿ.20):  ಭಾಷೆಗಾಗಿ ನಾನು ಪ್ರಾಣ ಕೊಡೋದಕ್ಕೂ ಸಿದ್ಧ. ಭಾಷೆಯನ್ನು ಅಗೌರವಿಸುವಂತಹ ಕೆಲಸ ಮಾಡಬೇಡಿ ಎಂದು ಚಿತ್ರನಟ ಶಿವರಾಜ್‌ ಕುಮಾರ್‌(Shiva Rajkumar) ಹೇಳಿದ್ದಾರೆ. ಬೆಂಗಳೂರಿನಲ್ಲಿ(Bengaluru) ಭಾನುವಾರ ‘ಬಡವ ರಾಸ್ಕಲ್‌’(Badava Rascal) ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮ ಅನೇಕ ತಾರೆಯರ ಭಾಷಾಭಿಮಾನಕ್ಕೆ ಸಾಕ್ಷಿಯಾಯಿತು. ಈ ವೇಳೆ ಮಾತನಾಡಿದ ಶಿವಣ್ಣ, ‘ನಮ್ಮ ಬಾವುಟ ಸುಟ್ಟರೆ ತಾಯಿಯನ್ನೇ ಸುಟ್ಟಹಾಗೆ. ಇಂತಹ ಕೆಲಸ ಮಾಡುವುದು ಅಕ್ಷಮ್ಯ. ಕನ್ನಡಿಗರಿಗೆ(Kannadigas) ಏನೂ ಪವರ್‌ ಇಲ್ಲ ಅಂತೆಲ್ಲ ತಿಳಿದುಕೊಳ್ಳಬೇಡಿ’ ಎಂದು ಶಿವಣ್ಣ ಕನ್ನಡ ಬಾವುಟ(Kannada Flag) ಸುಟ್ಟವರ ವಿರುದ್ಧ ಕಿಡಿಕಾರಿದರು.

‘ಯಾವ ರಾಜ್ಯದಲ್ಲಿ ಯಾವ ಭಾಷೆ ಇದೆಯೋ ಅದಕ್ಕೆ ಮರಾರ‍ಯದೆ ಕೊಡೋದು ಧರ್ಮ. ಭಾಷೆ ಎಲ್ಲರಿಗೂ ಮುಖ್ಯ. ನೆಲದ ಭಾಷೆಗೆ ಅಗೌರವ ತೋರುವಂತಹ ಕೆಲಸ ಮಾಡಬೇಡಿ. ಕನ್ನಡ ಬಾವುಟ ಸುಡುವುದು ಎಷ್ಟುಸರಿ? ಅಂಥಾ ಕೆಲಸ ಯಾವತ್ತಿಗೂ ಮಾಡಬೇಡಿ. ಸರ್ಕಾರ ಈ ಬಗ್ಗೆ ಗಮನ ಕೊಡಬೇಕು. ಬರೀ ವೋಟಿಗಾಗಿ ಕಾಯೋದರಲ್ಲಿ ಅರ್ಥ ಇಲ್ಲ ಎಂದರು.

Belagavi: ಬಾಯ್ಬಿಡದ ಸಾಹಿತಿ, ನಟರ ವಿರುದ್ಧ ಆಕ್ರೋಶ

ಕನ್ನಡಿಗರಿಗೆ ಸ್ವಾಭಿಮಾನ ಮುಖ್ಯ: ನಟಿ ತಾರಾ

‘ನಾವು ಕನ್ನಡಿಗರು ಎಲ್ಲ ಭಾಷೆಗಳನ್ನೂ ಒಳಗೆ ಬಿಟ್ಟುಕೊಳ್ಳುತ್ತೇವೆ. ಆದರೆ ನಮ್ಮ ಭಾಷೆಯ ಬಗ್ಗೆಯೂ ಕಾಳಜಿ ಮಾಡಬೇಕು. ಇಂತಹ ಸಮಯದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕಿರುವುದು ಬಹಳ ಮುಖ್ಯ. ಒಂದು ಭಾಷೆಯ ಧ್ವಜವನ್ನು ಸುಡುವುದು ಅಂದರೆ ಅದು ಭಾಷೆಯ ಮೇಲೆ ನಡೆಸುವ ದೌರ್ಜನ್ಯದ ಸಂಕೇತ’ ಎಂದು ತಾರಾ ಅನೂರಾಧ(Tara Anuradha) ಈ ವೇಳೆ ಹೇಳಿದ್ದಾರೆ.

ನೋಡ್ಕೊಂಡು ಸುಮ್ಮನೆ ಇರಲ್ಲ: ದುನಿಯಾ ವಿಜಿ

‘ನಮಗೆ ಬೇರೆ ಯಾವ ಭಾಷೆಯ ಮೇಲೂ ದ್ವೇಷ ಇಲ್ಲ. ನಮ್ಮ ಭಾಷೆಯ ಮೇಲಿನ ಅಭಿಮಾನ ಅಂದರೆ ಬೇರೆ ಭಾಷೆಯ ಬಗೆಗೆ ದ್ವೇಷ ಅಲ್ಲ. ಕನ್ನಡದ ಬಾವುಟ ಸುಟ್ಟಿರೋದು ಕನ್ನಡಕ್ಕಾದ ದೊಡ್ಡ ಅವಮಾನ. ಇದನ್ನೆಲ್ಲ ನಾವು ನೋಡ್ಕೊಂಡು ಸುಮ್ಮನೆ ಇರಲ್ಲ ಅನ್ನೋದು ಎಲ್ಲರಿಗೂ ಗೊತ್ತಿದೆ. ಸರ್ಕಾರ(Government of Karnataka) ತಕ್ಷಣ ಬಾವುಟ ಸುಡುವ ದುಷ್ಕೃತ್ಯ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದುನಿಯಾ ವಿಜಯ್‌(Duniya Vijay) ಅಬ್ಬರಿಸಿದ್ದಾರೆ.

ಈ ವೇಳೆ ಮಾತನಾಡಿದ ಹಂಸಲೇಖ, ಶಿವಣ್ಣ ನಾಯಕರಾಗಿ ಸೂಚನೆ ಕೊಟ್ಟರೆ ನಾವೆಲ್ಲ ಅವರನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು. ರಂಗಾಯಣ ರಘು, ನೀನಾಸಂ ಸತೀಶ್‌ ಮತ್ತಿತರರು ಶಿವಣ್ಣ ಅವರ ಮಾತಿಗೆ ದನಿಗೂಡಿಸಿದರು.

Belagavi Riot: ಉದ್ಧವ್ ದೇವ್ರಲ್ಲ, ಡಿಕೆ ಶಿವಕುಮಾರ್ ಸಾಚ ಅಲ್ಲ, ಗುಡುಗಿದ ಈಶ್ವರಪ್ಪ

ದೊಡ್ಡ ಧ್ವನಿಯಲ್ಲಿ ಖಂಡಿಸಬೇಕು: ಪ್ರಜ್ವಲ್‌

ಇದಕ್ಕೂ ಮುನ್ನ ‘ಅರ್ಜುನ್‌ ಗೌಡ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ನಟ ಪ್ರಜ್ವಲ್‌ ದೇವರಾಜ್‌(Prajwal Devaraj) ಬಾವುಟ ಸುಟ್ಟಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಬಾವುಟ ಸುಡುವಂತಹ ಕೃತ್ಯಗಳು ನಡೆದಾಗ ನಾವೆಲ್ಲ ದೊಡ್ಡ ಧ್ವನಿಯಲ್ಲಿ ಖಂಡಿಸಬೇಕು. ಇದಕ್ಕೆ ಹಿಂದೆ ಮುಂದೆ ನೋಡೋದು, ಯೋಚನೆ ಮಾಡ್ತಾ ಕೂರುವ ಅಗತ್ಯ ಇಲ್ಲ. ಇಂತಹ ಅವಮಾನ ಮರುಕಳಿಸಬಾರದು. ಆ ರೀತಿ ನಮ್ಮ ಪ್ರತಿಭಟನೆ ಇರಬೇಕು’ ಎಂದು ಹೇಳಿದರು. ಬೇರೆ ಭಾಷೆಗಳಿಂದ ಹೆಚ್ಚಾಗಿ ನಮ್ಮ ಕನ್ನಡತನವನ್ನು(Kannada) ಗೌರವಿಸಿ, ನಮ್ಮ ಭಾಷೆಯ ಚಿತ್ರ ನೋಡಿ. ನಾವೆಲ್ಲ ಒಗ್ಗಟ್ಟಾಗಿ ಸ್ವಾಭಿಮಾನದ ಎಚ್ಚರಿಕೆ ಕೊಡೋಣ.

ನಾನು ಬಹಳ ಪ್ರಾಕ್ಟಿಕಲ್‌ ಆಗಿ ಮಾತನಾಡುತ್ತೇನೆ. ನಮ್ಮ ಬಾವುಟ ಸುಟ್ಟರೆ ತಾಯಿಯನ್ನೇ(Mother) ಸುಟ್ಟಹಾಗೆ ಅಲ್ಲವಾ? ಅಂಥ ದುಷ್ಕೃತ್ಯ ಎಸಗಬೇಡಿ. ಎಲ್ಲರೂ ಎಲ್ಲದಕ್ಕೂ ಮರ್ಯಾದೆ ಕೊಡಬೇಕು. ಬೇರೆಯವರಿಗೆ ನಾವು ಮರ್ಯಾದೆ ಕೊಡುತ್ತೇವೆ. ನಮಗೂ ಮರ್ಯಾದೆ ಕೊಡಿ. ನಾವು ಎಲ್ಲರಿಗೂ ಜಾಗ ಕೊಡ್ತೀವಿ. ನೀವು ಎಲ್ಲಾ ಸಿನಿಮಾಗಳನ್ನೂ ನೋಡಿ. ಆದರೆ ಕನ್ನಡ ಸಿನಿಮಾ ಹೆಚ್ಚು ನೋಡಿ. ದಯವಿಟ್ಟು ಎಲ್ಲರೂ ನಾಡು ನುಡಿಗೆ ಗೌರವ ಕೊಡಿ’ ಎಂದು ಶಿವಣ್ಣ ಹೇಳಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಮಧುಗಿರಿ - ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು