
ಬೆಂಗಳೂರು (ಜೂ.24) : ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯ ಸಿದ್ದರಾಮಯ್ಯನವರ ಕಿವಿ ಹಸಿದವರ ಕೂಗಿಗೆ ಯಾವಾಗಲೂ ತೆರದಿರುತ್ತೆ ಎಂದು ಹಿರಿಯ ಸಾಹಿತಿ ನಾಡೋಜ ಹಂ.ಪ.ನಾಗರಾಜಯ್ಯ ಹೇಳಿದರು.
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದದ 20ನೇ ವಾರ್ಷಿಕೋತ್ಸವದ ಪ್ರಶಸ್ತಿ ಪ್ರಧಾನ ಸಮಾರಂಭ(20th Anniversary Awards Ceremony of Karnataka Kannada Writers and Publishers Association )ದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ(CM Siddaramaiah)ನವರು ಬಡವರ, ದೀನದಲಿತರ ಅಭಿವೃದ್ಧಿಗೆ ಅನ್ನಭಾಗ್ಯ ಯೋಜನೆ ರೂಪಿಸಿದಾಗ ಅನೇಕ ಆರೋಪಗಳು ಕೇಳಿ ಬರುತ್ತವೆ. ಇಂತಹ ಯೋಜನೆಗಳ ಬಗ್ಗೆ ದೂಷಿಸಬಾರದು. ಅನ್ನಭಾಗ್ಯ ಯೋಜನೆ(Annabhagya schemee)ಯ ಬಗ್ಗೆ ಸಾಕಷ್ಟು ಜನ ಸಾಕಷ್ಟು ಮಾತನಾಡಿದ್ರು. ಆದರೆ ಇಂಥ ಯೋಜನೆಗಳ ಬಗ್ಗೆ ನಾವು ಒಳ್ಳೆಯದನ್ನೇ ಮಾತನಾಡಬೇಕು. ಬಡವರ ಪರ ಇಂಥ ಯೋಜನೆಗಳು ಮುಂದುವರಿಯಬೇಕು ಕರ್ನಾಟಕದ ಕೆನೆಪದರ ಇಂದು ಇಲ್ಲಿದೆ. ಸಾಹಿತ್ಯದ ನಾಲ್ಕು ಕಂಬಗಳು ಇಲ್ಲಿದೆ ಎಂದರು.
ಕೇಂದ್ರ ಸರ್ಕಾರ ಅಕ್ಕಿ ಇದ್ರೂ ಕೊಡ್ತಿಲ್ಲ; ಬಿಎಸ್‌ವೈಗೆ ಪ್ರತಿಭಟನೆ ಮಾಡಲು ಯಾವ ನೈತಿಕತೆ ಇದೆ? ಸಿಎಂ ವಾಗ್ದಾಳಿ!
ಸಿದ್ದರಾಮಯ್ಯರ ಪತ್ನಿ ಬೇಗ ಗುಣಮುಖರಾಗಲಿ:
ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರು ಬೇಗ ಹುಷಾರಾಗಲಿ, ಅವರು ಆದಷ್ಟು ಬೇಗ ಬಸ್ ನಲ್ಲಿ ಪ್ರಯಾಣ ಮಾಡುವಂತರಾಗಲಿ. ಮನೆಯವರು ಆಸ್ಪತ್ರೆಯಲ್ಲಿದ್ರೂ ದೆಹಲಿಗೆ ಹೋಗಿಬಂದ್ರು, ಸಾರ್ವಜನಿಕ ವಲಯದಲ್ಲಿರುವವರು ಕೆಲವು ತ್ಯಾಗಕ್ಕೂ ಸಿದ್ದರಿರಬೇಕು ಎಂದರು. ಮುಂದುವರಿದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಹಿತ್ಯ, ಪ್ರಕಾಶ, ಬರಹಗಾರ, ಮುದ್ರಕರಿಗೆ ಸಹಾಯವಾಗುವ ರೀತಿಯಲ್ಲಿ ಬಜೆಟ್ ನಲ್ಲಿ ಯೋಜನೆ ರೂಪಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ. 14 ನೇ ಬಜೆಟ್ ಮಂಡಿಸುತ್ತಿರುವ ಅವರು ಅದನ್ನ ಪುರಸ್ಕರಿಸಬೇಕು. ಅನೇಕ ಭಾಗ್ಯ ನೀಡಿರುವ ಅವರು ಸಾಹಿತ್ಯ ಭಾಗ್ಯವನ್ನು ನೀಡಬೇಕು ಎಂದು ಮನವಿ ಮಾಡಿದರು.
ಹೆಣ್ಣುಮಕ್ಕಳು ಮಾತನಾಡದ ಪರಿಸ್ಥಿತಿಯಲ್ಲಿದ್ದೇವೆ: ಮಲ್ಲಿಕಾ ಘಂಟಿ
ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಮಾತನಾಡಿ, ನಾನು ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಮಾತಾಡ್ತೀನಿ. ಮಾತನಾಡಿದ್ದಕ್ಕೆ ನನ್ನ ಮೇಲೆ ಕೇಸ್ ಬಿದ್ದಿರುವ ರಾಜಕೀಯ ಪರಿಸ್ಥಿತಿ ಯಲ್ಲಿ ಇದ್ದೀವಿ. ಹಿಂದೆ ಮಾತನಾಡಿದ್ದಕ್ಕೆ ಕೇಸ್ ಬಿದ್ದಿದೆ ನಾಳೆ ನಾನು ಕೋರ್ಟ್ ಗೆ ಹೋಗಬೇಕಿದೆ. ಹೆಣ್ಣುಮಕ್ಕಳು ಮಾತನಾಡದ ಪರಿಸ್ಥಿತಿಯಲ್ಲಿ ತಂದಿಟ್ಟಿದ್ದಾರೆ ಎಂದರು.
ಕೇಂದ್ರ ಸರ್ಕಾರ ಅಕ್ಕಿ ಇದ್ರೂ ಕೊಡ್ತಿಲ್ಲ; ಬಿಎಸ್‌ವೈಗೆ ಪ್ರತಿಭಟನೆ ಮಾಡಲು ಯಾವ ನೈತಿಕತೆ ಇದೆ? ಸಿಎಂ ವಾಗ್ದಾಳಿ!
ನಾನು ಮಾತನಾಡಿದ ಒಂದು ಸಾಲನ್ನ ಮಾತ್ರ ಮಾಧ್ಯಮಗಳು ಬಿತ್ತರಿಸುತ್ತವೆ. ಅದನ್ನ ಇಟ್ಟುಕೊಂಡು ವಾಟ್ಸಾಪ್ ಯುನಿವರ್ಸಿಟಿ ಪ್ರಚಾರ ಮಾಡಿ ನಮ್ಮನ್ನ ಹೊಡೆಯುತ್ತಿದ್ದಾರೆ. ನಮಗೆ ಹೇಗೆ ಹೊಡೆಯುತ್ತಾರೆ ಅಂದರೆ, ನಮ್ಮ ಕಡೆ ಹೇಳ್ತಾರೆ, ಸೀರೆ ಕಳಚಿ ಹೊಡೆಯೋದು ಎಂದು ಆ ರೀತಿ ನಮ್ಮನ್ನ ಹೊಡೆಯುತ್ತಿದ್ದಾರೆ.ಹೀಗಾಗಿ ಬರೆದುಕೊಂಡು ಬಂದು ಮಾತಾಡ್ತಿದೇನೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ