ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ 100 ಅಡಿ ರಥ ಕುಸಿದು ಬಿದ್ದಿದ್ದು, ರಥದಲ್ಲಿ ಸೌಜನ್ಯ ಪರ ಫಲಕ ಪ್ರದರ್ಶಿಸಿದ್ದೇ ಕಾರಣವೆಂದು ಚರ್ಚೆಗಳು ನಡೆಯುತ್ತಿವೆ. ಸೌಜನ್ಯ ಪ್ರಕರಣದ ಹಿನ್ನೆಲೆ ಹಾಗೂ ರಥ ದುರಂತದ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು (ಮಾ.24): ಹುಸ್ಕೂರು ಮದ್ದೂರಮ್ಮ ಜಾತ್ರೆಗೆ ದೊಡ್ಡನಾಗಮಂಗಲ ಮತ್ತು ರಾಯಸಂದ್ರ ಜನತೆ ತಯಾರಿಸಿದ್ದ 100 ಅಡಿ ಎತ್ತರದ ರಥ (ಕುರ್ಜು) ಎಳೆದುಕೊಂಡು ಹೋಗುವ ಮುನ್ನ ಜಸ್ಟೀಸ್ ಫಾಸ್ ಸೌಜನ್ಯ(Justice For Soujanya) ಎಂಬ ಫಲಕವನ್ನು ತೋರಿಸಿದ್ದರಿಂದಲೇ ಈ ರಥ ಮುರಿದು ಬಿದ್ದಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದೆ. ಜೊತೆಗೆ, ಸೌಜನ್ಯಾಗೆ ನ್ಯಾಯ ಸಿಗುವುದಿಲ್ಲ ಎಂಬ ಅರ್ಥವನ್ನು ಸೂಚಿಸುತ್ತದೆ ಎಂದು ಕೆಲವರು ವಿಶ್ಲೇಷಣೆ ಮಾಡುತ್ತಿದ್ದಾರೆ.
ಕರ್ನಾಟದಕ ಅತಿ ಎತ್ತರದ ರಥಗಳನ್ನು ನಿರ್ಮಾಣ ಮಾಡುವ ಜಾತ್ರೆ ಎಂದರೆ ಅದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲೂಕಿನ ಹುಸ್ಕೂರು ಮದ್ದೂರಮ್ಮ ಜಾತ್ರಾ ಮಹೋತ್ಸವದ ರಥಗಳಾಗಿವೆ. ಇಲ್ಲಿ ಸುತ್ತಲಿನ ಗ್ರಾಮಸ್ಥರು ಮದ್ದೂರಮ್ಮ ದೇವಿಗೆ ತಮ್ಮ ತಮ್ಮ ಗ್ರಾಮದಿಂದ ಕುರ್ಜು (ರಥ) ನಿರ್ಮಿಸಿಕೊಂಡು ಬಂದು ಅರ್ಪಣೆ ಮಾಡುತ್ತಾರೆ. ಪ್ರತಿ ವರ್ಷ ನಡೆಯುವ ಈ ಜಾತ್ರೆಗೆ ಯಾವ ಗ್ರಾಮಸ್ಥರು ಅತಿ ಎತ್ತರದ ರಥವನ್ನು ನಿರ್ಮಾಣ ಮಾಡುತ್ತಾರೋ ಅವರಿಗೆ ಗೌರವಿಸಲಾಗುತ್ತದೆ. ಹೀಗಾಗಿ, ಸುತ್ತಲಿನ 10ಕ್ಕೂ ಅಧಿಕ ಹಳ್ಳಿಗಳ ಜನರು ಅತಿ ಎತ್ತರದ ರಥಗಳನ್ನು ನಿರ್ಮಿಸಲು ಪ್ರತಿವರ್ಷ ಶ್ರಮಿಸುತ್ತಲೇ ಇರುತ್ತಾರೆ.
ಈ ವರ್ಷ ದೊಡ್ಡ ನಾಗಮಂಗಲ ಹಾಗೂ ರಾಯಸಂದ್ರ ಎರಡು ಗ್ರಾಮಗಳ ಜನರು ಸೇರಿಕೊಂಡು 100 ಅಡಿ ಎತ್ತರದ ರಥವನ್ನು ನಿರ್ಮಿಸಿದ್ದಾರೆ. ಈ ರಥವನ್ನು ಶನಿವಾರ ಸಂಜೆ ಮದ್ದೂರಮ್ಮ ದೇವಸ್ಥಾನದ ಬಳಿಗೆ ಎಳೆದುಕೊಂಡು ಹೋಗುವಾಗ ಭಾರೀ ಗಾಳಿ ಹಾಗೂ ಮಳೆ ಬಂದಿದ್ದರಿಂದ ಜನರು ರಥವನ್ನು ಎಳೆಯುತ್ತಿದ್ದಾಗಲೇ ಗಾಳಿಯ ಒತ್ತಡಕ್ಕೆ ಸಿಲುಕು ಧರೆಗುರುಳಿತು. ಈ ಅವಘಡದಲ್ಲಿ ರಥದಡಿ ಸಿಲುಕಿ ಒಬ್ಬ ವ್ಯಾಪಾರಿ ಸಾವನ್ನಪ್ಪಿದರೆ, ಮತ್ತೊಬ್ಬರಿಗೆ ಗಂಭೀರ ಗಾಯವಾಗಿತ್ತು. ಸುಮಾರು 20 ಜನರು ಸಣ್ಣಪುಟ್ಟ ಗಾಯಗಳಾಗು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ರಥ ಉರುಳು ಬೀಳಲು ಜಸ್ಟೀಸ್ ಫಾರ್ ಸೌಜನ್ಯಎಂಬ ಫಲಕವನ್ನು ರಥದ ಮೇಲೆ ಹೋಗಿ ಪ್ರದರ್ಶನ ಮಾಡಿದ್ದೇ ಕಾರಣ ಎಂಬಂತೆ ಕೆಲವರು ಆರೋಪ ಮಾಡುತ್ತಿದ್ದಾರೆ.
ಇದನ್ನೂ ಓದಿ: ಆನೇಕಲ್‌ನಲ್ಲಿ ಮದ್ದೂರಮ್ಮ ಜಾತ್ರೆಯ 100 ಅಡಿ ಎತ್ತರದ ರಥ ಬಿದ್ದ ರಹಸ್ಯ ಬಿಚ್ಚಿಟ್ಟ ಸ್ಥಳೀಯರು!
ಸತ್ಯಾಸತ್ಯತೆ ಏನು?
ಮದ್ದೂರಮ್ಮ ಜಾತ್ರೆಗೆ ಗುಟ್ಟಹಳ್ಳಿಯಲ್ಲಿ ನಿರ್ಮಿಸಲಾಗಿದ್ದ ರಥದಲ್ಲಿ ಜಸ್ಟೀಸ್ ಫಾರ್ ಸೌಜನ್ಯ ಎಂಬ ಫಲಕವನ್ನು ಪ್ರದರ್ಶನ ಮಾಡಲಾಗಿತ್ತು. ಆದರೆ, ಇಲ್ಲಿ ಉರುಳಿಬಿದ್ದ ರಥ ದೊಡ್ಡನಾಗಮಂಲದ ರಥವಾಗಿದೆ. ಆದ್ದರಿಂದ ಸೌಜನ್ಯಾ ಫೋಟೋ ಪ್ರದರ್ಶನ ಮಾಡಿದ ರಥ ಇಲ್ಲಿ ಬಿದ್ದಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಕೆಲವರು ಎರಡೂ ವಿಡಿಯೋಗಳನ್ನು ಮಿಶ್ರಣ ಮಾಡಿ, ಸೌಜನ್ಯಾ ಫೋಟೋ ತೋರಿಸಿದ್ದರಿಂದ ರಥ ಉರುಳಿ ಬಿದ್ದಿದೆ ಎಂದು ತೋರಿಸಿದ್ದಾರೆ. ಇವರೆಡೂ ರಥಗಳು ಬೇರೆ ಬೇರೆ ಎಂದು ಇನ್ನು ಕೆಲವು ನೆಟ್ಟಿಗರು ಸ್ಪಷ್ಟನೆ ನೀಡಿದ್ದಾರೆ.
ಸೌಜನ್ಯಪ್ರಕರಣದ ಹಿನ್ನೆಲೆಯೇನು?
ಕಳೆದ 13 ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಪಾಂಗಳದ ವಿದ್ಯಾರ್ಥಿನಿ ಸೌಜನ್ಯಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣವೂ ಈಗಲೂ ನಿಗೂಢವಾಗಿಯೇ ಇದೆ ಎಂದು ಕೆಲವರು ಹೇಳುತ್ತಿದ್ದಾರೆ. ಈಗಾಗಲೇ ಆರೋಪಿಗಳು ಪ್ರಕರಣವನ್ನು ಮುಚ್ಚಿಹಾಕಲು ಎಲ್ಲ ಸಂಚು ರೂಪಿಸಿದ್ದರೂ, ಸೌಜನ್ಯಾಗೆ ನ್ಯಾಯಕ್ಕಾಗಿ ಆಗ್ರಹಿಸಿ ಸಾವಿರಾರು ಹೋರಾಟಗಾರರು ನಿರಂತರವಾಗಿ ಹೋರಾಟ ಮಾಡುತ್ತಲೇ ಇದ್ದಾರೆ. ಇತ್ತೀಚೆಗೆ ಸಮೀರ್ ಎಂಬ ಯೂಟ್ಯೂಬರ್ ಸೌಜನ್ಯಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವಿಡಿಯೋ ಮಾಡಿ ಹಂಚಿಕೊಂಡಿದ್ದರು.
ಇದನ್ನೂ ಓದಿ: ಕರ್ನಾಟಕದ ಆರುಷಿಯಾದ ಸೌಜನ್ಯ: ಮರು ತನಿಖೆ ಸಾಧ್ಯವೇ ಇಲ್ಲ ಎಂದು ಹೈಕೋರ್ಟ್ ಹೇಳಿದ್ದೇಕೆ? ತಪ್ಪು ಆಗಿದ್ದೆಲ್ಲಿ!
ಮೊದಲ ವಿಡಿಯೋವನ್ನು ವೀಕ್ಷಣೆ ಮಾಡಿದ ನ್ಯಾಯಾಲಯದ ಆಧಾರ ರಹಿತ ವಿಡಿಯೋ ಎಂದು ಅದನ್ನು ಡಿಲೀಟ್ ಮಾಡಿಸಿತ್ತು. ಆದರೆ, ಪುನಃ ಸಮೀರ್ ಎಂಬಾತ ಕೆಲವು ದಾಖಲೆಗಳನ್ನು ಇಟ್ಟುಕೊಂಡು 2ನೇ ವಿಡಿಯೋ ಮಾಡಿದ್ದಾನೆ. ಇದರ ಬೆನ್ನಲ್ಲಿಯೇ ರಾಜ್ಯಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಜಸ್ಟೀಸ್ ಫಾರ್ ಸೌಜನ್ಯಎಂಬ ಕೂಗು ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿದೆ. ನೂರಾರು ಸೋಶಿಯಲ್ ಮೀಡಿಯಾ ಇನ್ಲ್ಯೂಯೆನ್ಸರ್ ಅವರು ಜಸ್ಟೀಸ್ ಫಾಸ್ ಸೌಜನ್ಯಪರವಾಗಿ ಬೆಂಬಲಿಸಿ ನಿಂತಿದ್ದರು.