ಮಾನವ ಕಳ್ಳ ಸಾಗಣೆಗೆ ಸಹಕಾರ: ಇಂಡಿಗೋ ಏರ್‌ಲೈನ್ಸ್‌ ಸಿಬ್ಬಂದಿ ಸೆರೆ

By Kannadaprabha News  |  First Published Oct 29, 2019, 10:01 AM IST

ಹಣ ಪಡೆದು, ಸೂಕ್ತ ದಾಖಲೆ ಇಲ್ಲದ ಇಬ್ಬರು ಮಹಿಳೆಯರಿಗೆ ಇಮಿಗ್ರೇಷನ್‌ ಕ್ಲಿಯರೆನ್ಸ್‌ ಕೊಡಿಸಲು ಯತ್ನಿಸಿದ ಆರೋಪದ ಮೇಲೆ ಇಂಡಿಗೋ ಏರ್‌ಲೈನ್ಸ್‌ ಸಿಬ್ಬಂದಿಯೊಬ್ಬ ಸಿಕ್ಕಿ ಬಿದ್ದಿದ್ದಾನೆ. ಮಹಿಳೆಯರಿಬ್ಬರನ್ನು ಕುವೈತ್‌ ದೇಶಕ್ಕೆ ಮಾನವ ಕಳ್ಳ ಸಾಗಣೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.


ಬೆಂಗಳೂರು(ಅ.29): ಹಣ ಪಡೆದು, ಸೂಕ್ತ ದಾಖಲೆ ಇಲ್ಲದ ಇಬ್ಬರು ಮಹಿಳೆಯರಿಗೆ ಇಮಿಗ್ರೇಷನ್‌ ಕ್ಲಿಯರೆನ್ಸ್‌ ಕೊಡಿಸಲು ಯತ್ನಿಸಿದ ಆರೋಪದ ಮೇಲೆ ಇಂಡಿಗೋ ಏರ್‌ಲೈನ್ಸ್‌ ಸಿಬ್ಬಂದಿಯೊಬ್ಬ ಸಿಕ್ಕಿ ಬಿದ್ದಿದ್ದಾನೆ.

ಇಂಡಿಗೋ ಏರ್‌ಲೈನ್ಸ್‌ ಸಿಬ್ಬಂದಿ ಮಲ್ಲಿಕಾರ್ಜುನ ಬಂಧಿತ. ಮಹಿಳೆಯರಿಬ್ಬರನ್ನು ಕುವೈತ್‌ ದೇಶಕ್ಕೆ ಮಾನವ ಕಳ್ಳ ಸಾಗಾಣಿಕೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇನ್ನು ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ವಿಮಾನ ನಿಲ್ದಾಣ ಪೊಲೀಸರು ಹೇಳಿದ್ದಾರೆ.

Tap to resize

Latest Videos

ಮೈಸೂರಲ್ಲೇ ಫಿಲ್ಮ್‌ಸಿಟಿ ನಿರ್ಮಾಣಕ್ಕೆ ಚಿತ್ರರಂಗ ಆಗ್ರಹ

ಇಂಡಿಗೋ ಏರ್‌ಲೈನ್ಸ್‌ ಸಿಬ್ಬಂದಿ ಮಲ್ಲಿಕಾರ್ಜುನ್‌ಗೆ ಏಜೆಂಟ್‌ ನರಸಿಂಹಯ್ಯ ಎಂಬಾತ ಫೋನ್‌ ಪೇ ಮೂಲಕ .5 ಸಾವಿರ ಕಳುಹಿಸಿ, ಅ.24ರಂದು ಇಬ್ಬರು ಮಹಿಳೆಯರು ವಿಮಾನ ನಿಲ್ದಾಣಕ್ಕೆ ಬರುತ್ತಾರೆ. ಕೆಲಸಕ್ಕಾಗಿ ಕುವೈತ್‌ಗೆ ಹೋಗುತ್ತಿದ್ದು, ಪ್ರವಾಸ ವೀಸಾದಡಿ ಕೊಲಂಬೋಗೆ ತೆರಳಿ, ಕೆಲಸದ ವೀಸಾ ತೋರಿಸಿ ಅಲ್ಲಿಂದ ಕುವೈತ್‌ಗೆ ತೆರಳುತ್ತಾರೆ. ನಿಯಮದ ಪ್ರಕಾರ ಕೆಲವೊಂದು ದಾಖಲೆ ಹೊಂದಿಸುವುದು ಕಷ್ಟವಾಗಿದೆ. ಕುವೈತ್‌ಗೆ ಹೋಗುವುದನ್ನು ಮರೆಮಾಚಿ ಮಹಿಳೆಯರಿಬ್ಬರಿಗೆ ಚೆಕ್‌ ಇನ್‌ ಮತ್ತು ಇಮಿಗ್ರೇಷನ್‌ನಲ್ಲಿ ಕ್ಲಿಯರೆನ್ಸ್‌ ಕೊಡಿಸುವಂತೆ ಸೂಚಿಸಿದ್ದ.

ಕಾಂಗ್ರೆಸ್‌ಗೆ ಹಾರುವ ಸುಳಿವು ನೀಡಿದ ಬಿಜೆಪಿ ಮುಖಂಡ

ಅದರಂತೆ ಮಲ್ಲಿಕಾರ್ಜುನ್‌, ಮಹಿಳೆಯರಿಗೆ ಇಮಿಗ್ರೇಷನ್‌ನಲ್ಲಿ ಕ್ಲಿಯರೆನ್ಸ್‌ ಕೊಡಿಸಲು ಯತ್ನಿಸಿದ್ದು, ಅನುಮಾನಗೊಂಡ ಅಧಿಕಾರಿಗಳು ತಪಾಸಣೆ ನಡೆಸಿದಾಗ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಮಹಿಳೆಯರನ್ನು ಮಾನವ ಕಳ್ಳಸಾಗಾಣಿಕೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

click me!