ಹಣಕ್ಕಾಗಿ ಮಂಗಳಮುಖಿಯರ ಗ್ಯಾಂಗ್‌ ಫೈಟ್‌!

Published : Oct 29, 2019, 09:01 AM IST
ಹಣಕ್ಕಾಗಿ ಮಂಗಳಮುಖಿಯರ ಗ್ಯಾಂಗ್‌ ಫೈಟ್‌!

ಸಾರಾಂಶ

ಹಣ ಹಂಚಿಕೊಳ್ಳುವ ವಿಚಾರವಾಗಿ ಮಂಗಳಮುಖಿಯರ ಗ್ಯಾಂಗ್‌ವೊಂದು ಮತ್ತೊಂದು ಗ್ಯಾಂಗ್‌ನ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಮಂಗಳಮುಖಿಯರನ್ನು ಆರ್‌ಎಂಸಿ ಯಾರ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾಗಡಿ ರಸ್ತೆಯ ಸುಮಿತ್ರಾ ಗ್ಯಾಂಗ್‌ ಹಾಗೂ ಆರ್‌ಎಂಸಿ ಯಾರ್ಡ್‌ನ ಆಶಾಮ್ಮ ಗ್ಯಾಂಗ್‌ ನಡುವೆ ಮಾರಾಮಾರಿ ನಡೆದಿದೆ. ಆಶಾಮ್ಮ ಗ್ಯಾಂಗ್‌ನ ವಾಣಿಶ್ರೀ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬೆಂಗಳೂರು(ಅ.29): ಹಣ ಹಂಚಿಕೊಳ್ಳುವ ವಿಚಾರವಾಗಿ ಮಂಗಳಮುಖಿಯರ ಗ್ಯಾಂಗ್‌ವೊಂದು ಮತ್ತೊಂದು ಗ್ಯಾಂಗ್‌ನ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಮಂಗಳಮುಖಿಯರನ್ನು ಆರ್‌ಎಂಸಿ ಯಾರ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಾಗಡಿ ರಸ್ತೆಯ ಸುಮಿತ್ರಾ (36), ರೇಣುಕಾ (30), ಬಬ್ಲು (23), ಶೈಲು ಅಲಿಯಾಸ್‌ ಶೈಲೇಶ್‌ (22), ವಿನು ಅಲಿಯಾಸ್‌ ಮಂಜ (24), ದೀಪು (27), ಲಯ ಅಲಿಯಾಸ್‌ ಲೋಕೇಶ್‌ (30), ಸುಶ್ಮಿತಾ (29), ವೈಶು ಅಲಿಯಾಸ್‌ ಅಭಿ (22), ಆರತಿ ಅಲಿಯಾಸ್‌ ಕಾರ್ತಿ (24) ಬಂಧಿತರು.

ಗುಪ್ತ್ ಗುಪ್ತಾಗಿ ನಡೆಯುತ್ತೆ ಮಂಗಳಮುಖಿಯರ ಶವಸಂಸ್ಕಾರ!...

ಮಾಗಡಿ ರಸ್ತೆಯ ಸುಮಿತ್ರಾ ಗ್ಯಾಂಗ್‌ ಹಾಗೂ ಆರ್‌ಎಂಸಿ ಯಾರ್ಡ್‌ನ ಆಶಾಮ್ಮ ಗ್ಯಾಂಗ್‌ ನಡುವೆ ಮಾರಾಮಾರಿ ನಡೆದಿದೆ. ಆಶಾಮ್ಮ ಗ್ಯಾಂಗ್‌ನ ವಾಣಿಶ್ರೀ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮಂಗಳಮುಖಿಯರು ನಗರದಲ್ಲಿ ತಮ್ಮದೇ ಆದ ಸಂಘ ಕಟ್ಟಿಕೊಂಡಿದ್ದು, ಆಶಾಮ್ಮ ಸಂಘದ ಅಧ್ಯಕ್ಷರಾಗಿದ್ದಾರೆ. ಸುಮಿತ್ರಾ ಮತ್ತು ಆಶಾಮ್ಮ ನಡುವೆ ಇತ್ತೀಚೆಗೆ ವೈಮನಸ್ಸು ಉಂಟಾಗಿತ್ತು. ಸಂಘದಿಂದ ಹೊರ ಬಂದ ಸುಮಿತ್ರಾ ಪ್ರತ್ಯೇಕ ಗ್ಯಾಂಗ್‌ ಕಟ್ಟಿಕೊಂಡಿದ್ದಳು.

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅಂಗಡಿಗಳಿಂದ ಸಂಗ್ರಹಿಸಿದ್ದರಲ್ಲಿ ಪಾಲು ಕೊಡುವಂತೆ ಸುಮಿತ್ರಾ, ಆಶಾಮ್ಮಳನ್ನು ಕೇಳಿದ್ದಳು. ಈ ವಿಚಾರಕ್ಕೆ ಎರಡು ಗ್ಯಾಂಗ್‌ ನಡುವೆ ಅ.25ರಂದು ನಂಜಪ್ಪ ವೃತ್ತದಲ್ಲಿ ಜಗಳ ನಡೆದಿತ್ತು. ಈ ಸಂಬಂಧ ಸಂಬಂಧ ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೆಪ್ಪರ್‌ ಸ್ಪ್ರೇ ಮಾಡಿ 15 ಲಕ್ಷ ದರೋಡೆ ಮಾಡಿದ ಆಫ್ರಿಕನ್ನರು

ಇದಾದ ಬಳಿಕ ಸುಮಿತ್ರಾ ಗ್ಯಾಂಗ್‌, ಆರ್‌ಎಂಸಿ ಯಾರ್ಡ್‌ನಲ್ಲಿರುವ ಆಶಾಮ್ಮ ಮನೆಗೆ ನುಗ್ಗಿ ಹಲ್ಲೆ ನಡೆಸಿತ್ತು. ಅಲ್ಲದೆ, ಆಶಾಮ್ಮ ಗ್ಯಾಂಗ್‌ನ ವಾಣಿಶ್ರೀ ಹಾಗೂ ಪ್ರೀತಿ ಮೇಲೆ ಆರೋಪಿಗಳು ಮಾರಪ್ಪನಪಾಳ್ಯದ ಉಲ್ಲಾಸ್‌ ಟಾಕೀಸ್‌ ಎದುರು ಮಾರಣಾಂತಿಕ ಹಲ್ಲೆ ನಡೆಸಿತ್ತು. ವಾಣಿಶ್ರೀ ಅವರ ಕೂದಲು ಕತ್ತರಿಸಿದ್ದ ಆರೋಪಿಗಳು, ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದರು. 25 ಗ್ರಾಂ ಚಿನ್ನದ ಸರ, ಮೊಬೈಲ್‌ ಹಾಗೂ ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡೆಲಿವರಿ ಬಾಯ್ಸ್‌ಗೆ ಲಿಫ್ಟ್ ಬಳಸಬೇಡಿ ಎಂದ ಮೇಘನಾ ಫುಡ್ಸ್; ಪೋಸ್ಟರ್ ವೈರಲ್‌ ಆಗ್ತಿದ್ದಂತೆ ಕ್ಷಮೆಯಾಚನೆ
ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!