ಉಡುಪಿ ಕಾಲೇಜೊಂದರಲ್ಲಿನ ವಿಡಿಯೋ ಪ್ರಕರಣ ಇಡೀ ರಾಜ್ಯದಲ್ಲೇ ಸದ್ದು ಮಾಡುತ್ತಿರುವ ಬೆನ್ನಲ್ಲೇ ಇದೀಗ ಹುಬ್ಬಳ್ಳಿಯಲ್ಲೂ ಅಂತಹದೊಂದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ! ಇಲ್ಲಿನ ಕಾಲೇಜೊಂದರ ಹೆಸರಿನ instagram ಖಾತೆಯನ್ನು ಹ್ಯಾಕ್ ಮಾಡಿ ಅಶ್ಲೀಲ ಪೋಟೋಗಳನ್ನು ಅಪ್ಲೋಡ್ ಮಾಡಿರುವುದಷ್ಟೇ ಅಲ್ಲ, ಪೊಲೀಸರಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ
ಹುಬ್ಬಳ್ಳಿ (ಆ.5) : ಉಡುಪಿ ಕಾಲೇಜೊಂದರಲ್ಲಿನ ವಿಡಿಯೋ ಪ್ರಕರಣ ಇಡೀ ರಾಜ್ಯದಲ್ಲೇ ಸದ್ದು ಮಾಡುತ್ತಿರುವ ಬೆನ್ನಲ್ಲೇ ಇದೀಗ ಹುಬ್ಬಳ್ಳಿಯಲ್ಲೂ ಅಂತಹದೊಂದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ!
ಇಲ್ಲಿನ ಕಾಲೇಜೊಂದರ ಹೆಸರಿನ Instagram ಖಾತೆಯನ್ನು ಹ್ಯಾಕ್ ಮಾಡಿ ಅಶ್ಲೀಲ ಪೋಟೋ(obscene photo)ಗಳನ್ನು ಅಪ್ಲೋಡ್ ಮಾಡಿರುವುದಷ್ಟೇ ಅಲ್ಲ, ಪೊಲೀಸರಿಗೆ ಬೆದರಿಕೆ ಹಾಕಿ ಸಾಮಾಜಿಕ ಜಾಲತಾಣ(Social medial)ದಲ್ಲಿ ಹರಿಬಿಡಲಾಗಿದೆ. ಇದು ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ಪ್ರಕರಣವೀಗ ಅಕ್ಷರಶಃ ವಾಣಿಜ್ಯ ನಗರಿಯನ್ನು ತಲ್ಲಣಗೊಳಿಸಿದೆ.
ನಗರದ ಸಮರ್ಥ ಪಿಯು ಕಾಲೇಜು ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿನಿಯರನ್ನೇ ಟಾರ್ಗೆಟ್ ಮಾಡುತ್ತಿದ್ದು, ಇನ್ಸಾ$್ಟಗ್ರಾಮ್‌ನಲ್ಲಿ ವಿದ್ಯಾರ್ಥಿನಿಯರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಅವರದೇ ಕಾಲೇಜಿನ ಹೆಸರಿನ ಖಾತೆಯಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ವಿಷಯ ಬೆಳಕಿಗೆ ಬರುತ್ತಿದ್ದಂತೆ ಪೊಲೀಸ್ ಕಮೀಷನರ್ ಕಾರ್ಯಪ್ರವೃತ್ತರಾಗಿ ಕಾಲೇಜಿಗೆ ಭೇಟಿ ನೀಡಿ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿನಿಯರೊಂದಿಗೆ ವಿಚಾರಣೆ ನಡೆಸಿದ್ದಾರೆ.
ಮಂಗಳೂರು: ಲೋನ್ ಆ್ಯಪ್‌ನಲ್ಲಿ ಸಾಲ ಪಡೆದ ವ್ಯಕ್ತಿಯ ಮಾನಹರಣ, ದೂರು
ಆಗಿದ್ದೇನು?
ಕಳೆದ ಮೂರು ತಿಂಗಳಿಂದ ಮಹಾನಗರದ ಕೆಲ ಕಾಲೇಜಿನ ವಿದ್ಯಾರ್ಥಿಗಳ ಇನ್ಸಾ$್ಟಗ್ರಾಮ್ ಹ್ಯಾಕ್ ಮಾಡಲಾಗಿದೆ. ಇನ್ಸಾ$್ಟಗ್ರಾಮ್‌ನಲ್ಲಿರುವ ಫೋಟೋಗಳನ್ನು ಅಸಹ್ಯಕರವಾಗಿ ಎಡಿಟ್ ಮಾಡಲಾಗುತ್ತಿದೆ. ನಂತರ ಅವುಗಳನ್ನು ಜಾಲತಾಣಗಳಲ್ಲಿ ಹರಿಬಿಡುತ್ತಿರುವುದಲ್ಲದೇ ಮುಂದಿನ ಟಾರ್ಗೆಟ್ ಯಾರು ಎಂಬುದನ್ನೂ ಹಾಕಲಾಗುತ್ತದೆ. ಈಗಾಗಲೇ ಕೆಲ ವಿದ್ಯಾರ್ಥಿನಿಯರ ಫೋಟೋಗಳನ್ನು ಎಡಿಟ್ ಮಾಡಿ ವೈರಲ್ ಮಾಡಲಾಗಿದೆ. ಕೆಲ ವಿದ್ಯಾರ್ಥಿನಿಯರು ಹೆದರಿ ಮನೆಯಲ್ಲಿ ಈ ವಿಷಯ ತಿಳಿಸದೇ ಸುಮ್ಮನಿದ್ದರೆ, ಇನ್ನೂ ಕೆಲ ವಿದ್ಯಾರ್ಥಿನಿಯರು ಕಾಲೇಜಿನ ಆಡಳಿತ ಮಂಡಳಿ ಹಾಗೂ ಸೈಬರ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಪಾಲಕರು ಈ ವಿಷಯ ಕುರಿತು ಆಡಳಿತ ಮಂಡಳಿ ಜತೆ ಚರ್ಚೆ ಮಾಡಿದ ಮರುಕ್ಷಣವೇ ಸೈಬರ್ ವಂಚಕರಿಗೆ ಗೊತ್ತಾಗಿದೆ. ಇದಕ್ಕೆ ಪ್ರತಿಯಾಗಿ ಸೈಬರ್ ವಂಚಕರು ನೀವು ಯಾರಿಗೆ ಹೇಳಿದರೂ ನಮ್ಮನ್ನು ಹಿಡಿಯಲು ಸಾಧ್ಯವಿಲ್ಲ. ಇನ್ನಷ್ಟುಚಿತ್ರಗಳು ಬರುತ್ತವೆ ಎಂಬ ಬೆದರಿಕೆ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಪೊಲೀಸರಿಗೂ ಅವಹೇಳನ ಮಾಡಲಾಗಿದೆ ಎಂಬುದು ವಿದ್ಯಾರ್ಥಿನಿಯರ ಅಳಲು. ಪೊಲೀಸರಿಗೆ ಸವಾಲೆಸೆದು ಧಮ್ ಇದ್ದರೆ ನಮ್ಮನ್ನು ಹಿಡಿಯಿರಿ ಎಂದು ಪೊಸ್ಟ್ ಮಾಡಲಾಗಿದೆ. ಕೆಳಗಡೆ ಜೈ ಟಿಪ್ಪು ಸುಲ್ತಾನ್ ಎಂಬ ಅಡಿ ಬರಹ ಕೂಡ ಬರೆದಿದ್ದಾರೆ. ಈ ಪ್ರಕರಣ ಇದೀಗ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಕಾಲೇಜಿನಲ್ಲಿ ನಡೆಯುವ ಪ್ರತಿ ಘಟನಾವಳಿಗಳು, ವಿದ್ಯಾರ್ಥಿನಿಯರ ಕಾಲೇಜಿನಲ್ಲಿನ ಚಟುವಟಿಕೆ ಅದ್ಹೇಗೆ ಸೈಬರ್ ವಂಚಕರಿಗೆ ಗೊತ್ತಾಗುತ್ತದೆ ಎಂಬುದು ಇದೀಗ ಎದ್ದಿರುವ ಪ್ರಶ್ನೆ. ಇದನ್ನೆಲ್ಲ ನೋಡಿದರೆ ಸೈಬರ್ ವಂಚಕರ ಗುಂಪಿನಲ್ಲಿ ಕಾಲೇಜಿನಲ್ಲಿನ ಯಾರಾದರೂ ಶಾಮೀಲಾಗಿದ್ದಾರೆಯೇ ಎಂಬ ಅನುಮಾನ ಪೊಲೀಸರನ್ನು ಕಾಡುತ್ತಿದೆ. ಜತೆಗೆ ಯುವತಿಯರು ಯಾರಾರಯರ ಮೇಲೆ ಅನುಮಾನ ಪಟ್ಟಿದ್ದಾರೋ ಅವರನ್ನು ಕರೆದು ವಿಚಾರಣೆ ನಡೆಸಿದ್ದಾರೆ.
ಸಿಂಧನೂರು: ಅಶ್ಲೀಲ ಮೆಸೇಜ್ 2 ಕೋಮುಗಳ ನಡುವೆ ಘರ್ಷಣೆ, ಪರಿಸ್ಥಿತಿ ಉದ್ವಿಗ್ನ!
instagramಹ್ಯಾಕ್ ಮಾಡಿ ಪೋಟೋಗಳನ್ನು ಅಸಹ್ಯಕರವಾಗಿ ಎಡಿಟ್ ಮಾಡಿ ಹರಿಬಿಟ್ಟಿದ್ದಾರೆ. ಈ ಕುರಿತು ಆಡಳಿತ ಮಂಡಳಿ ಹಾಗೂ ಪೊಲೀಸರಿಗೆ ದೂರು ನೀಡಿದ್ದೇನೆ. ದೂರು ನೀಡಿದ್ದು ಸೈಬರ್ ವಂಚಕರಿಗೆ ಹೇಗೆ ತಿಳಿದಿದೆ ಎಂಬುದೇ ಗೊತ್ತಾಗುತ್ತಿಲ್ಲ. ಇದರಿಂದ ತುಂಬಾ ನೊಂದಿದ್ದು, ಹೊರಗೆ ಹಾಗೂ ಕಾಲೇಜಿಗೆ ಹೋಗಲು ಭಯವಾಗುತ್ತಿದೆ.
- ನೊಂದ ವಿದ್ಯಾರ್ಥಿನಿ
ಆರೋಪಿಗಳ ಪತ್ತೆ ಶೀಘ್ರ:
ಖಾಸಗಿ ಕಾಲೇಜಿನÜ ವಿದ್ಯಾರ್ಥಿನಿಯರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಇನ್ಸಾ$್ಟಗ್ರಾಮ್‌ನಲ್ಲಿ ಹಾಕಿರುವ ಕುರಿತಂತೆ ಸೈಬರ್(ಸೆನ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಲಾಗುತ್ತಿದ್ದು, ಶೀಘ್ರದಲ್ಲಿ ಆರೋಪಿಗಳನ್ನು ಹೆಡಮುರಿ ಕಟ್ಟುತ್ತೇವೆ ಎಂದು ಪೊಲೀಸ್ ಆಯುಕ್ತ ಸಂತೋಷ ಬಾಬು ಹೇಳಿದರು.
ಈ ಪ್ರಕರಣ ನಡೆದಿದೆ ಎನ್ನಲಾದ ಕಾಲೇಜಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯರಿಗೆ ಅನುಮಾನ ಇರುವವರನ್ನು ಕರೆದು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಯುವತಿಯರು ಮಾತನಾಡುತ್ತಿರುವ ಎಲ್ಲ ವಿಚಾರಗಳು ಆರೋಪಿಗಳಿಗೆ ತಿಳಿಯುತ್ತಿವೆ ಎಂಬ ಮಾಹಿತಿ ವಿದ್ಯಾರ್ಥಿಗಳಿಂದ ಲಭ್ಯವಾಗಿದೆ. ಹೀಗಾಗಿ, ವಿದ್ಯಾರ್ಥಿಯೇ ಆಗಿರಬಹುದು ಎಂಬ ಅನುಮಾನವಿದೆ. ಈ ನಿಟ್ಟಿನಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದರು.
ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿದ್ದರ ಬಗ್ಗೆ ನಾಲ್ಕು ವಿದ್ಯಾರ್ಥಿಗಳು ಬಂದು ದೂರು ಕೊಡಲಿದ್ದಾರೆ. ತನಿಖೆ ಚುರುಕುಗೊಳಿಸಿ ಆರೋಪಿಗಳ ಪತ್ತೆಗೆ ಕ್ರಮಕೈಗೊಳ್ಳಲಾಗುವುದು. ಸೈಬರ್ ಕ್ರೈಂ ಠಾಣೆಯಲ್ಲಿ ಇನ್ಸಾ$್ಟಗ್ರಾಮ್ ಸೇರಿದಂತೆ ಇಂತಹ ಹತ್ತು ಹಲವು ಪ್ರಕರಣಗಳು ದಾಖಲಾಗುತ್ತಿವೆ. ಈ ಪ್ರಕರಣ ಕಾಲೇಜಿನಲ್ಲಿ ನಡೆದಿದೆ. ಕಾಲೇಜಿನಲ್ಲಿ ಏನು ಕ್ರಮಕೈಗೊಂಡಿದ್ದಾರೆ ಎಂಬುದರ ಬಗ್ಗೆಯೂ ವಿಚಾರಣೆ ನಡೆಸಲಾಗುವುದು. ಈ ಬಗ್ಗೆ ಕೆಲವರು ಪ್ರಕರಣ ದಾಖಲಿಸಲು ಮುಂದೆ ಬರುತ್ತಿಲ್ಲ. ಈಗ ಪ್ರಕರಣ ದಾಖಲಾಗುತ್ತಿದ್ದು, ಆರೋಪಿಗಳ ಪತ್ತೆ ಹಚ್ಚುತ್ತೇವೆ. ಇಂತಹ ವಿಚಾರಗಳ ಬಗ್ಗೆ ಪಾಲಕರು ಮತ್ತು ವಿದ್ಯಾರ್ಥಿಗಳು ಜಾಗೃತರಾಗಿರಬೇಕು ಎಂದು ಅವರು ಕಿವಿಮಾತು ಹೇಳಿದರು.