ನಗರದಲ್ಲಿ ಮತ್ತೆ ಫ್ಲೆಕ್ಸ್‌, ಬ್ಯಾನರ್‌ಗೆ ಅವಕಾಶ ನೀಡಿ ಆದಾಯ ಗಳಿಸಲು ಬಿಬಿಎಂಪಿ ಚಿಂತನೆ?

Published : Aug 05, 2023, 05:04 AM ISTUpdated : Aug 05, 2023, 05:05 AM IST
ನಗರದಲ್ಲಿ ಮತ್ತೆ ಫ್ಲೆಕ್ಸ್‌, ಬ್ಯಾನರ್‌ಗೆ ಅವಕಾಶ ನೀಡಿ ಆದಾಯ ಗಳಿಸಲು ಬಿಬಿಎಂಪಿ ಚಿಂತನೆ?

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ನಿಷೇಧಿಸಲಾದ ಫ್ಲೆಕ್ಸ್‌, ಬ್ಯಾನರ್‌ ಸೇರಿದಂತೆ ವಿವಿಧ ಮಾದರಿಯ ಜಾಹೀರಾತು ಫಲಕಗಳ ಅಳವಡಿಕೆಗೆ ಮತ್ತೆ ಅವಕಾಶ ನೀಡಿ ಆ ಮೂಲಕ ಬಿಬಿಎಂಪಿಯು ವಾರ್ಷಿಕ .1 ಸಾವಿರ ಕೋಟಿ ಆದಾಯ ಗಳಿಸುವ ಸಾಧ್ಯತೆಯತ್ತ ಚಿಂತನೆ ನಡೆಸಿದೆ.

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಆ.5) :  ರಾಜಧಾನಿ ಬೆಂಗಳೂರಿನಲ್ಲಿ ನಿಷೇಧಿಸಲಾದ ಫ್ಲೆಕ್ಸ್‌, ಬ್ಯಾನರ್‌ ಸೇರಿದಂತೆ ವಿವಿಧ ಮಾದರಿಯ ಜಾಹೀರಾತು ಫಲಕಗಳ ಅಳವಡಿಕೆಗೆ ಮತ್ತೆ ಅವಕಾಶ ನೀಡಿ ಆ ಮೂಲಕ ಬಿಬಿಎಂಪಿಯು ವಾರ್ಷಿಕ .1 ಸಾವಿರ ಕೋಟಿ ಆದಾಯ ಗಳಿಸುವ ಸಾಧ್ಯತೆಯತ್ತ ಚಿಂತನೆ ನಡೆಸಿದೆ.

ಅಧಿಕಾರಿಗಳು ನಡೆಸುತ್ತಿರುವ ಚರ್ಚೆ ಜಾರಿ ರೂಪಕ್ಕೆ ಬಂದರೆ ನಗರದಲ್ಲಿ ಮತ್ತೆ ಫ್ಲೆಕ್ಸ್‌, ಬ್ಯಾನರ್‌, ಹೋಲ್ಡಿಂಗ್‌ ಸೇರಿದಂತೆ ವಿವಿಧ ಮಾದರಿಯ ಜಾಹೀರಾತುಗಳು ನಾಯಿ ಕೊಡೆಗಳಂತೆ ತಲೆ ಎತ್ತಲಿವೆ.

ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಗೆ 243ರಿಂದ 225ಕ್ಕೆ ಇಳಿಸಲು ಸರ್ಕಾರ ಸಿದ್ಧತೆ?

ಸದ್ಯ ನಗರದಲ್ಲಿ ಫ್ಲೆಕ್ಸ್‌, ಬ್ಯಾನರ್‌ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿ ಜಾಹೀರಾತು ಅಳವಡಿಸಲು ಅವಕಾಶವಿಲ್ಲ. ಈ ಬಗ್ಗೆ ನ್ಯಾಯಾಲಯವೂ ನಿಷೇಧ ಹೇರಿಸಿದೆ. ಆದರೀಗ ಬಿಬಿಎಂಪಿಯ ಅಧಿಕಾರಿಗಳು ನಗರದಲ್ಲಿ ಮತ್ತೆ ಫ್ಲೆಕ್ಸ್‌, ಬ್ಯಾನರ್‌ ಸೇರಿದಂತೆ ವಿವಿಧ ಮಾದರಿಯ ಜಾಹೀರಾತು ಪ್ರದರ್ಶನ ಅವಕಾಶ ನೀಡುವ ನಿಟ್ಟಿನಲ್ಲಿ ಸಭೆಗಳನ್ನು ನಡೆಸುತ್ತಿದ್ದಾರೆ.

ಈ ಹಿಂದೆ ನಗರಾಭಿವೃದ್ಧಿ ಇಲಾಖೆಯಿಂದ ‘ಬಿಬಿಎಂಪಿ ಜಾಹೀರಾತು ನಿಯಮಗಳು 2019’ರ ಕರಡನ್ನು ರೂಪಿಸಿದ್ದಲ್ಲದೇ, ಈ ಕುರಿತು ಅಧಿಸೂಚನೆಯನ್ನೂ ಹೊರಡಿಸಿದೆ. ಈ ಹೊಸ ನಿಯಮವು ನೆಲದಲ್ಲಿ, ಚಾವಣಿಗಳ ಮೇಲೆ ಖಾಸಗಿ ಹೋರ್ಡಿಂಗ್‌ಗಳಿಗೆ ಹಾಗೂ ಬಿಲ್ಬೋರ್ಡ್‌ಗಳನ್ನು ಅಳವಡಿಸುವುದಕ್ಕೆ ಅವಕಾಶ ಕಲ್ಪಿಸಲಿತ್ತು. ಆದರೆ, ನ್ಯಾಯಾಲಯ ಜಾಹೀರಾತು ಫಲಕ ಅಳವಡಿಕೆ ಅವಕಾಶ ನೀಡಬಾರದು ಎಂದು ಆದೇಶಿಸಿತ್ತು. ಈ ಬಗ್ಗೆ ಬಿಬಿಎಂಪಿಯ ಕೌನ್ಸಿಲ್‌ ಸಭೆಯಲ್ಲಿಯೂ ನಿರ್ಣಯ ತೆಗೆದುಕೊಳ್ಳಲಾಗಿತ್ತು.

ಹೊಸ ನೀತಿ ರಚನೆ?: ಜಾಹೀರಾತು ಅಳವಡಿಕೆ ಮತ್ತು ಅನಧಿಕೃತವಾಗಿ ಜಾಹೀರಾತು ಅಳವಡಿಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ಉದ್ದೇಶದಿಂದ ಇದೀಗ ಬಿಬಿಎಂಪಿಯ ಅಧಿಕಾರಿಗಳು ಹೊಸದಾಗಿ ನೀತಿ ರೂಪಿಸುವುದಕ್ಕೆ ಮುಂದಾಗಿದ್ದಾರೆ. ನಗರದ ಯಾವ ಸ್ಥಳದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಬೇಕು, ಯಾವ ಸ್ಥಳದಲ್ಲಿ ಅವಕಾಶ ನೀಡಬಾರದು ಎಂಬುದರ ಬಗ್ಗೆ ತಜ್ಞರು ಮತ್ತು ಅಧಿಕಾರಿಗಳು ಸ್ಪಷ್ಟವಾಗಿ ನೀತಿ-ನಿಯಮ ರಚನೆ ಮಾಡುತ್ತಿದ್ದಾರೆ.

ಇನ್ನು ಕಳೆದ ಬಾರಿ ನೀತಿ ರಚನೆ ಸಂದರ್ಭದಲ್ಲಿ ಕೆಲವು ಗೊಂದಲ ಉಂಟಾಗಿದ್ದವು. ಇದರಿಂದ ಸಮಸ್ಯೆ ಆಗಿತ್ತು. ಆ ಎಲ್ಲಾ ಗೊಂದಲ ಸರಿಪಡಿಸಿಕೊಂಡು ನೀತಿ ರಚನೆ ಮಾಡುವುದಕ್ಕೆ ಚರ್ಚೆ ನಡೆಯುತ್ತಿದೆ. ಅಂತಿಮವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸರ್ಕಾರ ಅನುಮೋದನೆ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

.1 ಸಾವಿರ ಕೋಟಿ ಆದಾಯ: ನಗರದಲ್ಲಿ ಜಾಹೀರಾತು ಪ್ರದರ್ಶನ ನಿಷೇಧಿಸಿದರೂ ಅನಧಿಕೃತವಾಗಿ ಪ್ರದರ್ಶನ ತಡೆಗಟ್ಟುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಕಾನೂನು ರೂಪಿಸಿ ನಿಯಮದಡಿ ಪ್ರದರ್ಶನಕ್ಕೆ ಅವಕಾಶ ನೀಡುವುದರಿಂದ ಬಿಬಿಎಂಪಿಗೆ ವಾರ್ಷಿಕವಾಗಿ ಸುಮಾರು .1 ಸಾವಿರ ಕೋಟಿವರೆಗೆ ಆದಾಯ ಸಂಗ್ರಹಿಸಬಹುದು. ನಗರದ ಮೂಲ ಸೌಕರ್ಯ ಅಭಿವೃದ್ಧಿಗೆ ಈ ಹಣ ಸಹಕಾರಿ ಆಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಈ ಹಿಂದೆ ಸಾಕಷ್ಟುಆಕ್ಷೇಪ

ನಗರಾಭಿವೃದ್ಧಿ ಇಲಾಖೆಯಿಂದ ಜಾಹೀರಾತು ನೀತಿ ರೂಪಿಸಿ ಜಾರಿಗೆ ಮುಂದಾದ ಸಂದರ್ಭದಲ್ಲಿ ಸಾಕಷ್ಟುಆಕ್ಷೇಪ ವ್ಯಕ್ತವಾಗಿತ್ತು. ಜಾಹೀರಾತು ಅಳವಡಿಕೆ ಅವಕಾಶ ನೀಡಿದರೆ, ನಗರದ ಸೌಂದರ್ಯ ಹಾಳಾಗಲಿದೆ. ಹೀಗಾಗಿ, ಯಾವುದೇ ರೀತಿಯ ಜಾಹೀರಾತು ಅಳವಡಿಕೆಗೆ ಅವಕಾಶ ನೀಡಬಾರದು ಎಂದು ಸಾರ್ವಜನಿಕರು ನ್ಯಾಯಾಲಯದ ಹೊರೆ ಸಹ ಹೋಗಿದ್ದರು ಎಂಬುದನ್ನು ಸ್ಮರಿಸಬಹುದು.

ಬಿಬಿಎಂಪಿ ಚುನಾವಣೆ ಮಾಡುತ್ತೇವೆ: ಡಿಸಿಎಂ ಡಿ.ಕೆ.ಶಿವಕುಮಾರ್‌

ಇನ್ನು ನಗರದಲ್ಲಿ ಅನಧಿಕೃತವಾಗಿ ಅಳವಡಿಕೆ ಮಾಡುವ ಫ್ಲೆಕ್ಸ್‌, ಬ್ಯಾನರ್‌ಗಳ ತೆರವು ಕುರಿತು ನ್ಯಾಯಾಲಯ ನಿರಂತರವಾಗಿ ವಿಚಾರಣೆ ನಡೆಸುತ್ತಿದೆ. ಬಿಬಿಎಂಪಿ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆಯುತ್ತಿದೆ.

ನಗರದಲ್ಲಿ ಕಾನೂನಾತ್ಮಕವಾಗಿ ಜಾಹೀರಾತು ಅಳವಡಿಕೆಗೆ ಅವಕಾಶ ನೀಡಿ ಆ ಮೂಲಕ ಆದಾಯ ಸಂಗ್ರಹಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗುತ್ತಿದೆ. ಇದರಿಂದ ಬಿಬಿಎಂಪಿಗೆ ವಾರ್ಷಿಕ .1 ಸಾವಿರ ಕೋಟಿ ಆದಾಯ ಬರುವ ನಿರೀಕ್ಷೆ ಇದೆ.

-ಜಯರಾಮ ರಾಯಪುರ, ವಿಶೇಷ ಆಯುಕ್ತ, ಬಿಬಿಎಂಪಿ ಹಣಕಾಸು ವಿಭಾಗ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಅಧಿವೇಶನಕ್ಕೂ ಮೊದಲೇ ಬ್ರದರ್ಸ್ ಒಗ್ಗಟ್ಟು: ಬಿಜೆಪಿ ಮೇಲೆ ಸವಾರಿ ಮಾಡಲು ಕಾಂಗ್ರೆಸ್ ಸಜ್ಜು
ಉಡುಪಿ: ಧರ್ಮ-ಸಂವಿಧಾನ ಬೇರೆಯಲ್ಲ:-ಪವನ್ ಕಲ್ಯಾಣ ಬಣ್ಣನೆ