
ಹುಬ್ಬಳ್ಳಿ(ಆ.01): ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಸಿದ್ಧಾರೂಢ ಅಜ್ಜನ ಚರಿತ್ರೆಯ ಕೃತಿಯನ್ನು ಶ್ರೀಮಠದ ಧರ್ಮದರ್ಶಿ ಡಾ.ಗೋವಿಂದ ಮಣ್ಣೂರ ವೈಯಕ್ತಿಕವಾಗಿ ಕಳುಹಿಸಿಕೊಟ್ಟಿದ್ದಾರೆ. ಅದೀಗ ವೈರಲ್ ಆಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್, ತಮಗೆ ಓದಲು ಪುಸ್ತಕಗಳ ವ್ಯವಸ್ಥೆ ಮಾಡಿ ಎಂದು ಜೈಲಧಿಕಾರಿಗಳಿಗೆ ಮನವಿ ಮಾಡಿದ್ದರು. ಜೈಲಲ್ಲಿರುವ ಕಾರಣ ಅವರ ಆತ್ಮಬಲ ಕುಸಿದಿದೆ. ಅವರಲ್ಲಿ ಆಧ್ಯಾತ್ಮಿಕ ಬಲ ಬರಲಿ ಎಂದು ಆಶಿಸಿ, ಡಾ.ಮಣ್ಣೂರ ಅವರು ಶ್ರೀಸಿದ್ಧಾರೂಢರ ಚರಿತ್ರೆಯ ಪುಸ್ತಕವನ್ನು ಕೊರಿಯರ್ ಮೂಲಕ ಕಳುಹಿಸಿದ್ದಾರೆ. ಈ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿದ ಮಣ್ಣೂರ, ದರ್ಶನ್ ಅವರ ಆಧ್ಯಾತ್ಮಿಕ ಬಲ ಹೆಚ್ಚಲಿ ಎಂದು ಆಶಿಸಿ ಈ ಪುಸ್ತಕ ವೈಯಕ್ತಿಕವಾಗಿ ಕಳುಹಿಸಿದ್ದೇನೆ ಎಂದರು.
ದರ್ಶನ್ ಬಗ್ಗೆ ಸುಳ್ಳು 'ಬಿಲ್ಡಪ್' ಕೊಟ್ಟಿದ್ದ ಅಭಿಮಾನಿ ಸಿದ್ಧಾರೂಢಗೆ ಮತ್ತೆ ಜೈಲುವಾಸ?
ನಟ ದರ್ಶನ್ ಈ ಹಿಂದೆ ಹುಬ್ಬಳ್ಳಿಯ ಸಿದ್ಧಾರೂಢಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿರುವ ಫೋಟೋ ಹಾಗೂ ಪೋಸ್ಟ್ ಮಾಡಿರುವ ಕವರ್ ಈಗ ವೈರಲ್ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ