ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್: ರಾಜ್ಯ ಸರ್ಕಾರಕ್ಕೆ ಒಂದು ವಾರ ಗಡುವು ಕೊಟ್ಟ ಶ್ರೀರಾಮಸೇನೆ!

By Ravi JanekalFirst Published Oct 16, 2024, 3:31 PM IST
Highlights

ನಾವು ರಾಜ್ಯ ಸರ್ಕಾರಕ್ಕೆ ಒಂದು ವಾರ ಗಡುವು ಕೊಡುತ್ತೇವೆ ತನ್ನ ನಿರ್ಧಾರದಿಂದ ಹಿಂದೆ ಸರಿದರೆ ಸರಿ, ಕೇಸ್ ವಾಪಸ್ ಪಡೆಯದೇ ಇದ್ದರೆ ಹುಬ್ಬಳ್ಳಿ ಬಂದ್ ಮಾಡುವುದಾಗಿ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಹುಬ್ಬಳ್ಳಿ (ಅ.16): ನಾವು ರಾಜ್ಯ ಸರ್ಕಾರಕ್ಕೆ ಒಂದು ವಾರ ಗಡುವು ಕೊಡುತ್ತೇವೆ ತನ್ನ ನಿರ್ಧಾರದಿಂದ ಹಿಂದೆ ಸರಿದರೆ ಸರಿ, ಕೇಸ್ ವಾಪಸ್ ಪಡೆಯದೇ ಇದ್ದರೆ ಹುಬ್ಬಳ್ಳಿ ಬಂದ್ ಮಾಡುವುದಾಗಿ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಶ್ರೀರಾಮ ಸೇನೆ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಅವರು, ಜಿಹಾದಿ ಮುಸ್ಲಿಮರು ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ್ರು. ಪೊಲೀಸರಿಗೇ ಕಲ್ಲಿನಿಂದ ಹೊಡೆದು, ಜೀಪ್ ಪಲ್ಟಿ ಮಾಡಿದ್ದಲ್ಲದೇ ಅದರ ಮೇಲೆ ಹತ್ತಿ ಜಿಹಾದಿಗಳು ಘೋಷಣೆ ಕೂಗಿದ್ದರು. ಇಷ್ಟು ಸಾಲದಕ್ಕೆ ಹನಮಂತ ದೇವಸ್ಥಾನಕ್ಕೆ ಹಾನಿಮಾಡಿದ್ದರು. ಮುಸ್ಲಿಂ ಜಿಹಾದಿಗಳೇ ನಿಮಗೆ ದೇವಸ್ಥಾನ ಏನು ಮಾಡಿತ್ತು? ಯಾಕೆ ದಾಳಿ ಮಾಡಿದ್ರಿ? ಧಮ್, ತಾಕತ್ ಇದ್ರೆ ಬನ್ನಿ ಇನ್ನೊಮ್ಮೆ ನಮ್ಮಗುಡಿ ಮುಟ್ಟಿ ನೋಡಿ ಹಿಂದೂಗಳ ತಾಕತ್ ಏನೆಂದು ತೋರಿಸುತ್ತೇವೆ ಎಂದು ಸವಾಲು ಹಾಕಿದರು.

Latest Videos

ಬೆಂಗಳೂರಲ್ಲಿ ಭಾರಿ ಮಳೆ ಅವಾಂತರ: 'ಮಳೆ ನೀರು ವಾಪಸ್ ಆಕಾಶಕ್ಕೆ ಕಳಿಸೋಕೆ ಆಗುತ್ತಾ?' ಗೃಹಸಚಿವ ಬೇಜವಾಬ್ದಾರಿ ಹೇಳಿಕೆ

ದೇವಸ್ಥಾನ ಒಡೆಯುವ ಜಿಹಾದಿ ಮುಸ್ಲಿಮರನ್ನು ಹದ್ದುಬಸ್ತಿನಲ್ಲಿಡಬೇಕಿತ್ತು. ಆದರೆ ಸಿದ್ದರಾಮಯ್ಯನ ನೀಚ, ನಿರ್ಲಜ್ಜ ಸರ್ಕಾರ ಪೊಲೀಸ್ ಠಾಣೆಗೆ ಬೆಂಕಿ ಇಟ್ಟ, ಹಿಂದೂ ದೇವಸ್ಥಾನಕ್ಕೆ ಹಾನಿಮಾಡಿದ ಜಿಹಾದಿಗಳ ಕೇಸ್ ವಾಪಸ್ ಪಡೆದಿದ್ದಾರೆ. ಏಯ್ ಸಿದ್ದರಾಮಯ್ಯ ಕರ್ನಾಟಕವನ್ನು ತಾಲಿಬಾನ್ ಮಾಡಲು ಹೊರಟಿದ್ದೀಯಾ? ರಾಜ್ಯದಲ್ಲಿ ಲಾಡೆನ್‌ಗಳನ್ನು ಬೆಳೆಸ್ತಾ ಇದ್ದೀಯಾ? ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಗೃಹಮಂತ್ರಿಗಳೇ ನಾಲಗೆಗೆ ಲಕ್ವ ಹೊಡೆದಿದೆಯಾ?

ಓಟ್‌ ಬ್ಯಾಂಕ್‌ಗಾಗಿ ಪೊಲೀಸ್ ಠಾಣೆಗೆ ಬೆಂಕಿ ಇಟ್ಟ ಜಿಹಾದಿಗಳನ್ನೇ ರಕ್ಷಿಸಲು ಮುಂದಾಗಿದ್ದೀರಿ. ಗೃಹಮಂತ್ರಿಗಳೇ ನಾಲಿಗೆಗೆ ಲಕ್ವ ಹೊಡೆದಿಯಾ? ರಾಜ್ಯದ ಗೃಹಮಂತ್ರಿಗಳಾಗಿ ಭಯೋತ್ಪಾದಕರ ಪರವಾಗಿ ನಿಂತುಕೊಳ್ತಾ ಇದ್ದೀರಲ್ಲ? ಕೇವಲ ಮುಸ್ಲಿಂರಷ್ಟೇ ನಿಮಗೆ ಓಟ್ ಹಾಕಿದ್ರಾ? ಹಿಂದೂಗಳು ಓಟು ಹಾಕಿಲ್ವ? ಒಂದು ದಿನವಾದ್ರೂ 'ಮುಸಲ್ಮಾನರೇ ಹಿಂದೂ ದೇವಸ್ಥಾನಗಳಿಗೆ, ಆಸ್ಪತ್ರೆಗೆ ಯಾಕೆ ಕಲ್ಲು ಹೊಡೆದ್ರಿ ಅಂತಾ ಕೇಳಿದ್ದೀಯಾ? ಪ್ರಶ್ನಿಸಲು ಬಾಯಿಲ್ವ? ನಾಲಗೆಗೆ ಲಕ್ವ ಹೊಡೆದಿದೆಯಾ? ಈಗ ಅವರನ್ನು ಬಿಡಿಸಲು ಓಡಾಡ್ತಾ ಇದ್ದೀಯಾ. ಆ ಮೂಲಕ ಗೃಹಮಂತ್ರಿಯಾಗಿ ರಾಜ್ಯದ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡ್ತಾ ಇದ್ದೀಯಾ? ನಾವು ಯಾವುದೇ ಕಾರಣಕ್ಕೂ ಇದನ್ನು ಇಲ್ಲಿಗೆ ಬಿಡುವುದಿಲ್ಲ ಎಂದು ಪ್ರತಿಭಟನೆಯ ಎಚ್ಚರಿಕೆ ನೀಡಿದರು.

ರಾಜ್ಯ ಸರ್ಕಾರದ ನಡೆಗೆ ವಕೀಲರಿಂದ ಆಕ್ರೋಶ:

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದ ಸರ್ಕಾರದ ನಡೆಗೆ ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯಸರ್ಕಾರದ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲು ಮುಂದಾಗಿದ್ದಾರೆ. ಈಗಾಗಲೇ ಬೀದಿಗಿಳಿದು ಹೋರಾಟ ಆರಂಭಿಸಿರೋ ಬಿಜೆಪಿ, ಹಿಂದೂಪರ ಸಂಘಟನೆಗಳು. ಇದೀಗ ಕಾನೂನು ಹೋರಾಟಕ್ಕೆ ವಕೀಲರ ಪಡೆಯೂ ಸಜ್ಜಾಗಿದೆ. ಸಂಘ ಪರಿವಾರ ಬೆಂಬಲಿತ ವಕೀಲರಿಂದ ಕೋರ್ಟ್ ನಲ್ಲಿ ದಾವೆಗೆ ಸಿದ್ಧತೆ ನಡೆಸಲಾಗಿದೆ. ಸರ್ಕಾರದ ನಿರ್ಧಾರ ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ತೀರ್ಮಾನಿಸಲಾಗಿದೆ.

ಮುಸ್ಲಿಮರ ಹೆಸರು ಕೇಳಿದರೆ ಬಿಜೆಪಿಯವ್ರಿಗೆ ಉರಿ, ಆರೆಸ್ಸೆಸ್ ನಿಜವಾದ ಭಯೋತ್ಪಾದಕರು: ಎಂ ಲಕ್ಷ್ಮಣ್ ಕಿಡಿ

ಗಲಭೆ ವೇಳೆ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲಾಗಿದೆ. ಹಲವು ಪೊಲೀಸರು ಗಾಯಗೊಂಡಿದ್ದಾರೆ. ಗಾಯಗೊಂಡವರ ಮಾಹಿತಿ ಸಂಗ್ರಹಿಸಲು ಮುಂದಾದ ವಕೀಲರು. ಪ್ರಕರಣದಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ಸಂಗ್ರಹಿಸಿ ಕಾನೂನು ಹೋರಾಟಕ್ಕೆ ಮುಂದಾಗಿರುವ ವಕೀಲರ ಪಡೆ.  

click me!