ವಿದ್ಯುತ್ ಪಡೆದು ಹಣ ನೀಡದ ಎಸ್ಕಾಂಗಳಿಗೆ ಕೆಇಆರ್‌ಸಿ ಎಚ್ಚರಿಕೆ

By Kannadaprabha News  |  First Published Oct 16, 2024, 11:22 AM IST

ಕಟ್ಟಡಗಳ ಮೇಲ್ಬಾವಣಿ ಮೇಲೆ ಅಳವಡಿಸುವ 'ಸೋಲಾರ್ ರೂಫ್ ಟಾಪ್ ಫೋಟೋ ವೋಲ್ಟಿಕ್‌ ವ್ಯವಸ್ಥೆಗಳಿಂದ' (ಎಸ್‌ಆರ್‌ಟಿಪಿವಿ) ಗ್ರಿಡ್‌ಗೆ ವಿದ್ಯುತ್ ಪಡೆಯಲು ಸೂಕ್ತ ಮೀಟರಿಂಗ್ ವ್ಯವಸ್ಥೆ, ಹಣ ಪಾವತಿಸದ ಎಸ್ಕಾಂಗಳಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಕ್ರಮದ ಎಚ್ಚರಿಕೆ ನೀಡಿದೆ. 


ಬೆಂಗಳೂರು (ಅ.16): ಕಟ್ಟಡಗಳ ಮೇಲ್ಬಾವಣಿ ಮೇಲೆ ಅಳವಡಿಸುವ 'ಸೋಲಾರ್ ರೂಫ್ ಟಾಪ್ ಫೋಟೋ ವೋಲ್ಟಿಕ್‌ ವ್ಯವಸ್ಥೆಗಳಿಂದ' (ಎಸ್‌ಆರ್‌ಟಿಪಿವಿ) ಗ್ರಿಡ್‌ಗೆ ವಿದ್ಯುತ್ ಪಡೆಯಲು ಸೂಕ್ತ ಮೀಟರಿಂಗ್ ವ್ಯವಸ್ಥೆ, ಹಣ ಪಾವತಿಸದ ಎಸ್ಕಾಂಗಳಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಕ್ರಮದ ಎಚ್ಚರಿಕೆ ನೀಡಿದೆ. ಅಲ್ಲದೆ, ಎಲ್ಲಾ ಎಸ್ಕಾಂ ಗಳು ತಮ್ಮ ಜತೆ ವಿದ್ಯುತ್‌ ಖರೀದಿ ಒಪಂದಮಾಡಿ ಕೊಂಡು ಕಟ್ಟಡಗಳ ಮೇಲ್ಬಾವಣಿ ಮೇಲೆ ಅಳ ವಡಿಸಿರುವ 'ಎಸ್‌ಆರ್‌ಟಿಪಿವಿ' ವ್ಯವಸ್ಥೆಗಳಿಗೆ ಗ್ರಾಸ್ ಮೀಟರಿಂಗ್‌ ವ್ಯವಸ್ಥೆ ಮಾಡಬೇಕು. ಜತೆಗೆ ಗ್ರಿಡ್‌ಗೆ ಪಡೆದ ವಿದ್ಯುತ್‌ಗೆ 30 ದಿನ ದಲ್ಲಿ ಹಣ ಪಾವತಿಸಬೇಕು. ಇಲ್ಲದಿದ್ದರೆ ದಂಡದ ಜತೆಗೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಕೆಇಆರ್‌ಸಿ ಆದೇಶ ಹೊರಡಿಸಿದೆ. ಗ್ರಾಹಕರು ಬಿಲ್ ಪಾವತಿ ವಿಳಂಬ ಮಾಡಿ ದರೆ ದಂಡ ವಿಧಿಸುತ್ತಿದ್ದ ಎಸ್ಕಾಂಗಳಿಗೆ ಕೆಇ ಆರ್‌ಸಿಯು ಉಲ್ಟಾ ದಂಡ ಪ್ರಯೋಗಿಸಿದೆ. 

ಏನಿದು ಸಮಸ್ಯೆ?: ಇಂಧನ ಇಲಾ ಖೆಕೆಇಆರ್‌ಸಿಯ 2016 ನಿಯಮಗಳ ಅಡಿ ವಸತಿ, ವಾಣಿಜ್ಯ, ಕಾರ್ಖಾನೆ ಮತ್ತಿತರ ಕಟ್ಟಡಗಳ ಮೇಲ್ಬಾ ವಣಿ ಮೇಲೆ ಎಸ್‌ಆರ್‌ಟಿಪಿ ವಿದ್ಯುತ್ ಅಳವಡಿಸಿ ಪೂರೈಸಲು ಅವಕಾಶ ಮಾಡಿಕೊಟ್ಟಿತ್ತು. 2022 ಜು.18ರಂದು ಕೆಇ ಆರ್‌ಸಿಯು, ಎಸ್‌ಆರ್‌ಟಿಪಿವಿ ಗಳಿಂ ದ ಗ್ರಿಡ್‌ಗೆ ಪೂರೈಕೆ ಮಾಡುವ ವಿದ್ಯುತ್‌ಗೆ ನೆಟ್‌ ಮೀಟರಿಂಗ್ ಹಾಗೂ ಗ್ರಾಸ್ ಮೀಟ ರಿಂಗ್ ವ್ಯವಸ್ಥೆ ಮಾಡಬೇಕು. ನೆಟ್ ಮೀಟರಿಂಗ್ ಅಡಿ ಎಸ್‌ಆರ್‌ಟಿಪಿವಿ ವ್ಯವಸ್ಥೆ ಮಾಡಿಕೊಂಡಿರುವ ವ್ಯಕ್ತಿ ವಿದ್ಯುತ್ ಬಳಕೆ ಮಾಡಿಕೊಂಡು ಉಳಿದ ವಿದ್ಯುತ್‌ನ್ನು ಗ್ರಿಡ್‌ಗೆ ಪೂರೈಸಬಹುದು. 

Tap to resize

Latest Videos

ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಇನ್ನೂ ಕಗ್ಗಂಟು!

ಇನ್ನು ಗ್ರಾಸ್‌ ಮೀಟರಿಂಗ್‌ ಅಡಿ ಉತ್ಪಾದನೆಯಾಗುವ ವಿದ್ಯುತ್‌ನ್ನು ಗ್ರಿಡ್‌ ಗೆ ಪೂರೈಸಬೇಕು. ಸ್ವಂತಕ್ಕೆ ಬಳಸುವಂತಿಲ್ಲ. ಈ ಮೀಟರಿಂಗ್‌ ವ್ಯವಸ್ಥೆ ಬದಲಿಸಿಕೊಳ್ಳಲು ಸಹ ಅವಕಾಶ ನೀಡಬೇಕು ಎಂದು ಎಸ್ಕಾಂಗಳಿಗೆ ಆದೇಶಿಸಿತ್ತು. ಕೆಇಆರ್‌ಸಿ ಆದೇಶ ಪಾಲಿಸದ ಎಸ್ಕಾಂಗಳು: ಆದರೆ 2023ರ ಜೂ.23 ರಂದು ಬೆಸ್ಕಾಂ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಕೆಆ ರ್‌ ಆದೇಶ ಉಲ್ಲಂಘನೆ ಮಾಡಲಾಗಿದೆ ಎಂದು ಕೆಇಆರ್‌ಸಿ ಮುಂದೆ ದೂರು ದಾಖಲಾಗಿತ್ತು. ಬೆಸ್ಕಾಂ ನೆಟ್ ಮೀಟರಿಂಗ್‌ನಿಂದ ಗ್ರಾಸ್ ಮೀಟರಿಂಗ್‌ಗೆ ಬಿಲ್ಲಿಂಗ್ ಮಾರ್ಪಾಡು ಮಾಡಿ ಕೊಳ್ಳಲು ಅವಕಾಶ ಕಲ್ಪಿಸುತ್ತಿಲ್ಲ. 

ಮೀಟರಿಂಗ್ ವ್ಯವಸ್ಥೆ ಹಾಗೂ ಹಣ ಪಾವತಿಯಲ್ಲಿ ಸಮಸ್ಯೆ ಸೃಷ್ಟಿಸಲಾಗುತ್ತಿದೆ ಎಂದು ದೂರುದಾರರು ತಿಳಿಸಿದ್ದರು. ಈ ವೇಳೆ ಪರಿಶೀಲಿಸಿದಾಗ ಎಲ್ಲಾ ಎಸ್ಕಾಂಗಳು ಕೆಇಆರ್‌ಸಿ ಆದೇಶ ಉಲ್ಲಂಘನೆ ಮಾಡುತ್ತಿರುವುದು ಸ್ಪಷ್ಟಗೊಂಡಿದೆ. ಹೀಗಾಗಿ ಹೊಸದಾಗಿ ಆದೇಶ ಹೊರಡಿಸಿರುವ ಕೆಇಆರ್‌ಸಿ, ಎಸ್‌ಆರ್‌ಟಿಪಿವಿ ಗ್ರಾಹಕರು ನೆಟ್ ಮೀಟರಿಂಗ್‌ನಿಂದ ಗ್ರಾಸ್ ಮೀಟರಿಂಗ್ ಗೆ ಬದಲಾವಣೆ ಬಯಸಿದರೆ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು. ಇದಕ್ಕಾಗಿ ಸಪ್ಲಿಮೆಂಟಲ್ ಪವರ್ ಪರ್ಚೇಸ್ ಅಗ್ರಿಮೆಂಟ್ (ಎಸ್ಪಿಪಿಎ) ಮಾಡಬೇಕು. 

ಗ್ರಾಹಕರು ಗ್ರಿಡ್‌ಗೆ ಪೂರೈಸಿದ ವಿದ್ಯುತ್‌ಗೆ ಪ್ರತಿ ತಿಂಗಳು ಮೀಟರ್ ರೀಡಿಂಗ್ ಮಾಡಿ ಬಿಲ್ ನೀಡಬೇಕು. ಇದಕ್ಕಾಗಿ ಮೀಟರಿಂಗ್, ವೈರಿಂಗ್‌ ಎಲ್ಲಾ ವ್ಯವಸ್ಥೆ ಮಾಡಿಕೊಡಬೇಕು. 30 ದಿನಗಳೊಳಗೆ ಗ್ರಿಡ್‌ಗೆ ಪೂರೈಸಿದ ವಿದ್ಯುತ್‌ನ ಬಿಲ್‌ನ್ನು ಎಸ್ಕಾಂಗಳು ಪಾವತಿಸಬೇಕು. ಎಸ್ಕಾಂಗಳು ಹಣ ಪಾವತಿ ವಿಳಂಬ ಮಾಡಿದರೆ ನಿಯಮಾನುಸಾರ ಬಡ್ಡಿ ಸಹಿತ ದಂಡ ಪಾವತಿ ಸಬೇಕು ಎಂದು ಇತ್ತೀಚೆಗೆ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ. ಈ ಆದೇಶ ಅನುಷ್ಠಾನದಲ್ಲಿ ಯಾವುದೇ ಲೋಪಗಳು ಉಂಟಾದರೆ ಆಯೋಗವು ವಿದ್ಯುತ್ ಕಾಯ್ದೆ-2003ರ ನಿಯಮಗಳ ಅಡಿ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದೆ.

3 ಹಗರಣ: ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ವಿರುದ್ಧ ರಾಜ್ಯಪಾಲರಿಗೆ ದೂರು

ಏನಿದು ಎಸ್‌ಆರ್‌ಟಿಪಿವಿ ವ್ಯವಸ್ಥೆ?: ರಾಜ್ಯ ಸರ್ಕಾರವು ಕರ್ನಾಟಕ ನವೀಕರಿಸಬಹುದಾದ ಇಂಧನ ನೀತಿ 2022-27ರ ಅಡಿ 2022ರಲ್ಲಿ ಎಸ್ಕಾಂಗಳಿಗೆ ತನ್ನ ಎಲ್ಲಾ ಗ್ರಾಹಕರಿಗೆ ವಸತಿ, ವಾಣಿಜ್ಯ, ಕೈಗಾರಿಕಾ, ಶೈಕ್ಷಣಿಕ ಸಂಸ್ಥೆಗಳು ಇತ್ಯಾದಿಗಳಿಗೆ ಗ್ರಿಡ್ ಸಂಪರ್ಕಿತ ಮೇಲ್ಬಾವಣಿ ಸೌರ ಘಟಕ ಸ್ಥಾಪನೆಗಾಗಿ ಎಸ್ ಆರ್‌ಟಿಪಿವಿ ವ್ಯವಸ್ಥೆಯಡಿ ಅವಕಾಶ ಕಲ್ಪಿಸಿದೆ. ಇದಕ್ಕೆ ಕೆಇಆರ್‌ಸಿ ಕಾಲಕಾಲಕ್ಕೆ ನಿಗದಿಪಡಿ ಸಿದ ಶುಲ್ಕಗಳ ಪ್ರಕಾರ 25 ವರ್ಷಗಳ ಅವಧಿಗೆ ವಿದ್ಯುತ್ ಖರೀದಿ ಒಪ್ಪಂದವನ್ನು ಮಾಡಿಕೊಂಡು ಘಟಕ ಅಳವಡಿಸಿಕೊಳ್ಳಬಹುದು.

click me!