ಎಷ್ಟು ವರ್ಷ ಜನರ ಪ್ರಾಣ ತೆಗಿತೀರಿ: ಬೆಸ್ಕಾಂಗೆ ಹೈಕೋರ್ಟ್‌ ಕಿಡಿ

Published : Oct 07, 2024, 10:55 AM IST
ಎಷ್ಟು ವರ್ಷ ಜನರ ಪ್ರಾಣ ತೆಗಿತೀರಿ: ಬೆಸ್ಕಾಂಗೆ ಹೈಕೋರ್ಟ್‌ ಕಿಡಿ

ಸಾರಾಂಶ

ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳು ತಮ್ಮ ನಿರ್ಲಕ್ಷ್ಯದಿಂದ ಜನರ ಜೀವ ತೆಗೆಯು ತ್ತಾರೆ. ಅವರ ನಿರ್ಲಕ್ಷ್ಯದಿಂದ ನಾಗರಿಕರು ಸತ್ತರೂ ಯಾವೊಬ್ಬ ಅಧಿಕಾರಿಯೂ ಹೊಣೆ ಹೊತ್ತುಕೊಳ್ಳುವುದಿಲ್ಲ. 

• ವೆಂಕಟೇಶ್ ಕಲಿಸಿ

ಬೆಂಗಳೂರು (ಅ.07): ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳು ತಮ್ಮ ನಿರ್ಲಕ್ಷ್ಯದಿಂದ ಜನರ ಜೀವ ತೆಗೆಯು ತ್ತಾರೆ. ಅವರ ನಿರ್ಲಕ್ಷ್ಯದಿಂದ ನಾಗರಿಕರು ಸತ್ತರೂ ಯಾವೊಬ್ಬ ಅಧಿಕಾರಿಯೂ ಹೊಣೆ ಹೊತ್ತುಕೊಳ್ಳುವುದಿಲ್ಲ. ತಪ್ಪಿತಸ್ಥ ಅಧಿಕಾರಿಗಳ ಪ್ರಾಸಿಕ್ಯೂಷನ್‌ಗೆ ಮೇಲಾಧಿಕಾರಿಗಳು ಪೂರ್ವಾನುಮತಿಯೇ ನೀಡಲ್ಲ. ಮೇಲಿಂದ ಕೆಳಗಿನವರೆಗೆ ಎಲ್ಲ ಶ್ರೇಣಿಯ ಸಿಬ್ಬಂದಿ- ಅಧಿಕಾರಿಗಳು ನಿರ್ಲಕ್ಷ್ಯಗಾರರೇ. ಎಷ್ಟು ವರ್ಷ ನಿರ್ಲಕ್ಷ್ಯ ವಹಿಸುತ್ತಾ ಸಾರ್ವಜನಿಕರ ಪ್ರಾಣ ತೆಗೆಯುತ್ತೀರಿ'..! 

ವಿದ್ಯುತ್‌ ಕಂಬದಲ್ಲಿ ತಂತಿ ದುರಸ್ತಿ ವೇಳೆ ವಿದ್ಯುತ್‌ ಪ್ರವಹಿಸಿ ಲೈನ್‌ಮೆನ್ ಸಾವನ್ನಪ್ಪಿದ ಪ್ರಕರಣದಲ್ಲಿ ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಆರೋಪದ ಮೇಲೆ ಚಿಕ್ಕಬಳ್ಳಾಪುರದ ಕೈಗಾರಿಕಾ ಪ್ರದೇಶದ ಬೆಸ್ಕಾಂ ಕಿರಿಯ ಎಂಜಿನಿಯರ್ ಪಿ.ರಜನಿ ವಿರುದ್ಧ ದಾಖಲಾದ ಪ್ರಕರಣ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ವ್ಯಕ್ತಪಡಿಸಿದ ಆಕ್ರೋಶವಿದು. ವಿದ್ಯುತ್ತ್ ಸರಬರಾಜು ಇಲಾಖೆ ಅಧಿಕಾರಿ ಗಳು ಜನರ ಪ್ರಾಣಕ್ಕೆ ಕುತ್ತುಬಾರದಂತೆ ಜವಾ ಬ್ದಾರಿಯಿಂದ ಕರ್ತವ್ಯ ನಿಭಾಯಿಸಬೇಕು ಎಂದು ತಾಕೀತು ಮಾಡಿದ ನ್ಯಾಯಮೂರ್ತಿ ಗಳು, ರಜನಿ ಅವರ ವಕೀಲರು ಸಾಕಷ್ಟು ಮನವಿ ಮಾಡಿದರೂ ಚಿಕ್ಕಬಳ್ಳಾಪುರ 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಅರ್ಜಿದಾರರ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿ ದಸರಾ ರಾಜಕಾಲದ ನಂತರಕ್ಕೆ ವಿಚಾರಣೆ ಮುಂದೂಡಿದರು.

ಬೈಎಲೆಕ್ಷನ್‌ನಿಂದ ಡಿಕೆಶಿಗೆ ಚನ್ನಪಟ್ಟಣ ನೆನಪಾಗ್ತಿದೆ: ಎಚ್.ಡಿ.ಕುಮಾರಸ್ವಾಮಿ

ಲೈನ್‌ಮೆನ್ ಸಾವು: ಸಂಗೀತಾ ಎಂಬುವರು ಚಿಕ್ಕಬಳ್ಳಾಪುರ ಜಿಲ್ಲೆ ನಂದಿ ಗ್ರಾಮ ಠಾಣೆಗೆ ಅ.2ರಂದು ದೂರು ನೀಡಿ, 'ಬೆಸ್ಕಾಂ ಲೈನ್ ಮೆನ್ ಆಗಿರುವಪತಿವಿವೇಕಾನಂದಪಾಟೀಲ್, ಚಿಕ್ಕಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್ ಕಂಬದ ಮೇಲೆ ಹತ್ತಿ ತಂತಿ ಸರಿಪಡಿಸುತ್ತಿದ್ದರು. ಆಗ ಅಧಿಕಾರಿಗಳು ಲೈನ್‌ಗೆ ವಿದ್ಯುತ್ ಚಾರ್ಜ್‌ಮಾಡಿದ್ದರಿಂದ ವಿದ್ಯುತ್‌ ಪ್ರವಹಿಸಿ ಕಂಬದ ಮೇಲಿಂದ ಬಿದ್ದು ನನ್ನ ಪತಿ ಸಾವನ್ನಪ್ಪಿದ್ದಾರೆ' ಎಂದು ದೂರಿದ್ದರು. ತನಿಖೆ ನಡೆಸಿದ ಪೊಲೀಸರು ಅರ್ಜಿದಾರರ ವಿರುದ್ಧ ನಿರ್ಲಕ್ಷ್ಯದಿ ದಿಂದ ಸಾವಿಗೆ ಕಾರಣವಾದ (ಐಪಿಸಿ ಸೆಕ್ಷನ್ 304ಎ) ಅಪರಾಧದ ಮೇಲೆ ದೋಷಾರೋಪಪಟ್ಟಿಸಲ್ಲಿಸಿದ್ದರು.ವಿಚಾರಣಾ ಸಮನ್ಸ್ ಜಾರಿ ಮಾಡಿದ್ದರಿಂದ ಪ್ರಕರಣ ರದ್ದು ಕೋರಿದ್ದಲ್ಲದೇ ವಿಚಾರಣೆಗೆ ತಡೆಯಾಜ್ಞೆ ನೀಡುವಂತೆ ರಜನಿ ಹೈಕೋರ್ಟ್ ಮೊರೆ ಹೋಗಿದ್ದರು.

ಜನರ ಜೀವಿಸುವ ಹಕ್ಕು ಕಿತ್ತುಕೊಳ್ಳಬೇಡಿ: ಇತ್ತೀಚೆಗೆ ಅರ್ಜಿ ವಿಚಾರಣೆಗೆ ಬಂದಿದ್ದಾಗ ರಜನಿ ಪರ ವಕೀಲರು, ಜನರಿಂದ ವಿದ್ಯುತ್ ಸಮಸ್ಯೆ ದೂರು ಬಂದರೆ, ಲೈನ್‌ಮೆನ್ ಕ್ಲಿಯ ರೆನ್ಸ್ ಸರ್ಟಿಫಿಕೇಷನ್ ಪಡೆದುಕೊಳ್ಳಬೇಕು. ಅದನ್ನು ಮೃತರು ಪಡೆಯದೆ ಹಾಗೂ ಅಧಿಕೃತವಾಗಿ ಮೇಲಾಧಿಕಾರಿಗಳಿಂದ ಅನು ಮತಿ ಪಡೆಯದೇ ಸ್ಥಳಕ್ಕೆ ಹೋಗಿದ್ದರು ಎಂದರು. ವಾದ ಆಕ್ಷೇಪಿಸಿದ ನ್ಯಾಯಮೂರ್ತಿಗಳು, ಜನರ ಜೀವಿಸುವ ಹಕ್ಕನ್ನು ಕಸಿದುಕೊಳ್ಳುವ ಇಂತಹ ಅಧಿಕಾರಿಗಳ ವಿರುದ್ಧ ನಾನಿದ್ದೇನೆ ಎಂದು ಕಟುವಾಗಿ ನುಡಿದರು. ಅರ್ಜಿದಾರರ ಪರ ವಕೀಲರು, ಘಟನೆಗೂ ಅರ್ಜಿದಾರರು ಯಾವುದೇ ಸಂಬಂಧವಿಲ್ಲ. ಮೊದಲಿಗೆ ಎಫ್‌ಐಆರ್‌ನಲ್ಲಿ ಅರ್ಜಿದಾರರು ಆರೋಪಿಯಾಗಿರಲಿಲ್ಲ. ದೋಷಾರೋಪ ಪಟ್ಟಿಯಲ್ಲಿ ಅರ್ಜಿದಾರರ ಹೆಸರು ಸೇರಿಸಿ, ಮೊದಲಿದ್ದ ಆರೋಪಿಗಳನ್ನು ಕೈಬಿಡಲಾಗಿದೆ. 

ಜಾತಿ ಗಣತಿಗೆ ಬಿಜೆಪಿ ವಿರೋಧವಿಲ್ಲ, ವೈಜ್ಞಾನಿಕವಾಗಿರಲಿ: ಬಿ.ವೈ.ವಿಜಯೇಂದ್ರ

ಅರ್ಜಿದಾರರಿಗೆ ವಿದ್ಯುತ್ ನಿರೀಕ್ಷಕರು ಕ್ಲೀನ್ ಚಿಟ್ ನೀಡಿದ್ದು, ಆ ವರದಿ ಪರಿಶೀಲಿಸಬೇಕು ಎಂದು ಕೋರಿದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ನ್ಯಾಯಮೂರ್ತಿಗಳು,ವಿದ್ಯುತ್ ನಿರೀಕ್ಷಕರ ಹೆಸರು ತೆಗೆಯಬೇಡಿ. ಅವರು ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅವರು ಯಾವೊಂದು ಪ್ರಕರಣದಲ್ಲೂ ಹೇಳಿಯೇ ಇಲ್ಲ. ಎಲ್ಲ ಪ್ರಕರಣದಲ್ಲಿ ಆರೋಪಿ ಅಧಿಕಾರಿಗಳನ್ನು ದೋಷಮುಕ್ತಗೊಳಿಸುತ್ತಾರೆ. ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ಪ್ರಾಸಿ ಕ್ಯೂಷನ್‌ಗೆಅನುಮತಿ ಕೇಳಿದರೆಕೊಡುವುದಿಲ್ಲ. ಬೆಸ್ಕಾಂ ಅಧಿಕಾರಿಗಳು ತಾವು ಯಾವುದಕ್ಕೂ ಜವಾಬ್ದಾರಲ್ಲ ಎನ್ನುತ್ತಾರೆ. ಮೊದಲು ನಿಮ್ಮ ಮನೆಯನ್ನು (ಬೆಸ್ಕಾಂ, ಕೆಪಿಟಿಸಿಎಲ್ ಕಚೇರಿ) ಸರಿಯಾದ ಕ್ರಮದಲ್ಲಿ ಇಟ್ಟುಕೊಳ್ಳಬೇಕು. ಈ ಪ್ರಕರಣದ ವಿಚಾರಣೆ ಮುಂದುವರಿಸಿದರೆ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವ ಇತರೆ ಅಧಿಕಾರಿಗಳ ಮೇಲೂ ವಿಚಾರಣೆಗೆ ಆದೇಶಿಸಬೇಕಾಗುತ್ತದೆ. ಸದ್ಯ ಅರ್ಜಿದಾರರ ಮೇಲಿನ ವಿಚಾರಣೆಗೆ ತಡೆ ನೀಡುವುದಿಲ್ಲ ಎಂದು ತೀಕ್ಷ್ಣವಾಗಿ ನುಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

20000 ರೈತರ ಜತೆ ಸೇರಿ ಡಿ. 9ಕ್ಕೆ ಸುವರ್ಣಸೌಧಕ್ಕೆ ಮುತ್ತಿಗೆ : ಬಿವೈವಿ
ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ