ಯಾದಗಿರಿಯ ಮುಸ್ಲಿಂ ಯುವಕ ಜಂಗಮ ದೀಕ್ಷೆ ಪಡೆದು ನಿಜಲಿಂಗಸ್ವಾಮಿಯಾಗಿದ್ದು ಹೇಗೆ? ಪಾಠ ಕಲಿಸಿದ ಶಿಕ್ಷಕ ಹೇಳಿದ್ದೇನು ಗೊತ್ತಾ?

Published : Aug 06, 2025, 11:33 PM ISTUpdated : Aug 06, 2025, 11:36 PM IST
kalaburagi news

ಸಾರಾಂಶ

ನಿಸಾರ್‌ನ ಈ ಆಧ್ಯಾತ್ಮಿಕ ಒಲವಿಗೆ ಅವರ ಧರ್ಮದ ಕೆಲವರು ವಿರೋಧ ವ್ಯಕ್ತಪಡಿಸಿದ್ದರಂತೆ. ಆದಾಗ್ಯೂ, 2020ರಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಫಸ್ಟ್ ಕ್ಲಾಸ್‌ನಲ್ಲಿ ಉತ್ತೀರ್ಣರಾದ ನಿಸಾರ್, ಲಿಂಗ ದೀಕ್ಷೆ ಪಡೆದ ಬಳಿಕ ಕಾವಿ ಬಟ್ಟೆ ಧರಿಸಿ ಶಾಲೆಗೆ ಅಂಕಪಟ್ಟಿ ಪಡೆಯಲು ಬಂದಿದ್ದರು. 

ಕಾಳಗಿ ಆ(.6): ಯಾದಗಿರಿಯ ಮುಸ್ಲಿಂ ಯುವಕ ಮಹಮದ್ ನಿಸಾರ್ ಜಂಗಮ ದೀಕ್ಷೆ ಪಡೆದು ನಿಜಲಿಂಗಸ್ವಾಮೀಜಿಯಾಗಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಚೌಡಹಳ್ಳಿ ಗ್ರಾಮದ ಮಠದಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಆದರೆ, ಅವರ ಮೂಲ ಧರ್ಮ ಬಯಲಾದ ನಂತರ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದರು. ಈ ವಿವಾದದ ಪರಿಣಾಮವಾಗಿ ನಿಜಲಿಂಗಸ್ವಾಮೀಜಿ ಮಠ ತ್ಯಜಿಸಿ ಊರಿಗೆ ಹಿಂದಿರುಗಿದ್ದಾರೆ.

ಘಟನೆ ಸಂಬಂಧ ಮಹ್ಮದ್ ನಿಸಾರಗೆ ಹೈಸ್ಕೂಲನಲ್ಲಿ ಪಾಠ ಮಾಡಿದ್ದ ಶಿಕ್ಷಕ ಮಹೇಶ ಬಡಿಗೇರನ್ನ ವಿಚಾರಿಸಿದಾಗ ಅವರ ಹೇಳಿದ್ದಿಷ್ಟು, ಕಾಳಗಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಓದಿದ ನಿಸಾರ್, ತಮ್ಮ ಶಿಕ್ಷಕ ಮಹೇಶ್ ಬಡಿಗೇರ್ ಅವರ ಪ್ರಕಾರ, ಎಂಟನೇ ತರಗತಿಯಲ್ಲಿದ್ದಾಗಲೇ ಬಸವಣ್ಣನವರ ಸುಮಾರು 300 ವಚನಗಳನ್ನು ಬರೆಯುತ್ತಿದ್ದರು. ಬಸವ ತತ್ವದಲ್ಲಿ ಗಾಢ ಆಸಕ್ತಿ ಹೊಂದಿದ್ದ ನಿಸಾರ್, ಉರ್ದು ಮಾಧ್ಯಮದಲ್ಲಿ ಓದುತ್ತಿದ್ದರೂ, ಯಾವಾಗಲೂ ಫಸ್ಟ್ ಕ್ಲಾಸ್‌ನಲ್ಲಿ ಉತ್ತೀರ್ಣರಾಗಿ, ಓದಿನ ಜೊತೆಗೆ ಲಿಂಗ ಪೂಜೆ ಮತ್ತು ವಚನಗಳ ಜಪದಲ್ಲಿ ತೊಡಗಿಕೊಂಡಿದ್ದರು.

ಆದರೆ, ನಿಸಾರ್‌ನ ಈ ಆಧ್ಯಾತ್ಮಿಕ ಒಲವಿಗೆ ಅವರ ಧರ್ಮದ ಕೆಲವರು ವಿರೋಧ ವ್ಯಕ್ತಪಡಿಸಿದ್ದರಂತೆ. ಆದಾಗ್ಯೂ, 2020ರಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಫಸ್ಟ್ ಕ್ಲಾಸ್‌ನಲ್ಲಿ ಉತ್ತೀರ್ಣರಾದ ನಿಸಾರ್, ಲಿಂಗ ದೀಕ್ಷೆ ಪಡೆದ ಬಳಿಕ ಕಾವಿ ಬಟ್ಟೆ ಧರಿಸಿ ಶಾಲೆಗೆ ಅಂಕಪಟ್ಟಿ ಪಡೆಯಲು ಬಂದಿದ್ದರು. 'ನಿಸಾರ್ ಒಳ್ಳೆಯ ಹುಡುಗ, ಆಧ್ಯಾತ್ಮಿಕತೆಯಲ್ಲಿ ತುಂಬಾ ಆಸಕ್ತಿಯಿರುವವನು,' ಎಂದು ಶಿಕ್ಷಕ ಮಹೇಶ್ ಬಡಿಗೇರ್ ಹೇಳಿದ್ದಾರೆ.

ಎಸ್‌ಎಸ್‌ಎಲ್‌ಸಿ ಬಳಿಕ ಡಿಪ್ಲೋಮಾ ಮಾಡುವ ಯೋಜನೆ ಹಾಕಿಕೊಂಡಿದ್ದ ನಿಸಾರ್, ಇದೀಗ ಸ್ವಾಮೀಜಿಯಾಗಿ ತಮ್ಮ ಆಧ್ಯಾತ್ಮಿಕ ಪಯಣವನ್ನು ಮುಂದುವರೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!