ಕ್ವಾರಂಟೈನ್‌ ಕೇಂದ್ರದಲ್ಲಿ ಬಿಹಾರಿಗಳ ಪುಂಡಾಟ!

By Kannadaprabha NewsFirst Published Apr 28, 2020, 7:16 AM IST
Highlights

ಕ್ವಾರಂಟೈನ್‌ ಕೇಂದ್ರದಲ್ಲಿ ಬಿಹಾರಿಗಳ ಪುಂಡಾಟ| ದಾಂಧಲೆ: ಹೊಂಗಸಂದ್ರದ ಬಿಹಾರಿಗಳಿಂದ ಕಿರಿಕ್‌| ಇಂಥದ್ದೇ ಊಟ ಬೇಕೆಂದು ಮೊಂಡಾಟ

ಬೆಂಗಳೂರು(ಏ.28): ಪಾದರಾಯನಪುರದ ಪುಂಡರ ಪುಂಡಾಟ ನಿಯಂತ್ರಣಕ್ಕೆ ಬರುತ್ತಿದಂತೆ ಇದೀಗ ಕ್ವಾರಂಟೈನ್‌ ಸೆಂಟರ್‌ನಲ್ಲಿ ಹೊಂಗಸಂದ್ರ ಬಿಹಾರಿಗಳ ದಾಂಧಲೆಗೆ ಬಿಬಿಎಂಪಿ ಅಧಿಕಾರಿಗಳು ರೋಸಿ ಹೋಗಿದ್ದಾರೆ.

ಏ.19ರಂದು ಪಾದರಾಯನಪುರದಲ್ಲಿ ಕೊರೋನಾ ಸೋಂಕಿತರೊಂದಿಗೆ ಸಂಪರ್ಕ ಹೊಂದಿದವರನ್ನು ಕ್ಯಾರೆಂಟೈನ್‌ ಮಾಡಲು ಹೋದ ಬಿಬಿಎಂಪಿ ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸರ ಮೇಲೆ ಅಲ್ಲಿನ ಕೆಲ ದುಷ್ಕರ್ಮಿಗಳು ಆರೋಗ್ಯ ಸಿಬ್ಬಂದಿ ಹಲ್ಲೆ ನಡೆಸಿ ಪುಂಡಾಟ ಮರೆದಿದ್ದರು. ಇದೀಗ ಹೊಂಗಸಂದ್ರದ ಬಿಹಾರಿಗಳ ಪುಂಡಾಟ ಆರಂಭವಾಗಿದೆ.

ಬಿಹಾರಿ ವ್ಯಕ್ತಿಯೊಬ್ಬನಿಂದ ಸ್ಫೋಟಗೊಂಡ ಕೊರೋನಾ ಬಾಂಬ್‌ಗೆ 29 ಮಂದಿಗೆ ಸೋಂಕು ಹರಡಿದ್ದು, ಅವರೊಂದಿಗೆ ಸಂಪರ್ಕ ಹೊಂದಿರುವ 212 ಮಂದಿಯನ್ನು ಬೊಮ್ಮನಹಳ್ಳಿಯ ಪೇಯಿಂಗ್‌ ಗೆಸ್ಟ್‌ (ಪಿಜಿ)ನಲ್ಲಿ ಬಿಬಿಎಂಪಿ ಅಧಿಕಾರಿಗಳು ಕ್ವಾರೆಂಟೈನ್‌ ಮಾಡಿ ಮೂರು ಹೊತ್ತು ಊಟ, ಕುಡಿಯಲು ನೀರಿನ ಬಾಟಲ್‌ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಿದ್ದಾರೆ.

ನಾನ್‌ವೆಜ್‌ ಆಹಾರ ಕೊಡಿ: ಕಾನ್ಪುರ ಆಸ್ಪತ್ರೆಯಲ್ಲಿ ತಬ್ಲೀಘಿ ದಾಂಧಲೆ!

ಆದರೆ, ಕ್ವಾರೆಂಟೈನ್‌ ಸೆಂಟರ್‌ನಲ್ಲಿ ಇರುವ ಬಿಹಾರಿ ಮೂಲ ಎಂಟಂತ್ತು ಮಂದಿ ದಾಂಧಲೆ ನಡೆಸಿದ್ದಾರೆ. ವೈದ್ಯಕೀಯ ಸಿಬ್ಬಂದಿ ಹಾಗೂ ಬಿಬಿಎಂಪಿ ಸಿಬ್ಬಂದಿ ನಿರ್ದೇಶನಗಳನ್ನು ಪಾಲನೆ ಮಾಡುತ್ತಿಲ್ಲ. ದಿನದಿಂದ ದಿನಕ್ಕೆ ಅವರ ಬೇಡಿಕೆ ಹೆಚ್ಚಾಗುತ್ತಿವೆ. ಬಯಕೆಯ ಊಟ ಸೇರಿದಂತೆ ನಿರ್ವಹಿಸಲಾಗದ ಬೇಡಿಕೆಗಳನ್ನು ಮುಂದಿಟ್ಟು ತಲೆ ನೋವು ತಂದಿದ್ದಾರೆ. ಹೀಗಾಗಿ, ಮಂಗಳವಾರದಿಂದ ಬಿಹಾರಿಗಳು ಇರುವ ಕ್ವಾರೆಂಟೈನ್‌ ಸೆಂಟರ್‌ನಲ್ಲಿ ಪೊಲೀಸ್‌ ಭದ್ರತೆ ಹೆಚ್ಚಿಸುವಂತೆ ಸೂಚನೆ ನೀಡಲಾಗಿದೆ ಎಂದು ವಿಶೇಷ ಆಯುಕ್ತ ಲೋಕೇಶ್‌ ಮಾಹಿತಿ ನೀಡಿದ್ದಾರೆ.

ಮುಂದುವರೆದ ಕಾರ್ಯಾಚರಣೆ:

ಹೊಂಗಸಂದ್ರದಲ್ಲಿ ಕಳೆದ ಎರಡು ದಿನಗಳಿಂದ ಯಾವುದೇ ಹೊಸ ಪ್ರಕರಣಗಳು ದಾಖಲಾಗಿಲ್ಲ. ಆದರೂ ಆ ಭಾಗದ ಜನರ ಆರೋಗ್ಯ ತಪಾಸO, ಪ್ರದೇಶ ಸ್ವಚ್ಛ ಪಡಿಸಿವುದು ಸೋಂಕು ನಿವಾರಕ ದ್ರಾವಣದ ಸಿಂಪಡಣೆ ಮುಂದುವರೆಸಲಾಗಿದೆ. ಒಟ್ಟು 212ಜನರನ್ನು ಕ್ವಾರಂಟೈನ್‌ ಮಾಡಿ ಆರೋಗ್ಯ ತಪಾಸಣೆ ಮಾಡಲಾಗಿದೆ. ಇದರಲ್ಲಿ ಪ್ರಾಥಮಿಕ 175 ಹಾಗೂ 63 ಜನರನ್ನು ದ್ವಿತೀಯ ಸಂಪರ್ಕಿತರು ಎಂದು ಗುರುತಿಸಿಲಾಗಿದ್ದು, ಯಾರಿಗೂ ಸೋಂಕು ಕಾಣಿಸಿಕೊಂಡಿಲ್ಲ. ಮಧುಮೇಹ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆ ಇರುವವರ ಬಗ್ಗೆ ಕಾಳಜಿ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೊನೆಗೂ ಸಿಕ್ಕಿಬಿದ್ದ ಪಾದರಾಯನಪುರ ಪುಂಡರ ಲೀಡರ್! ತಗಲಾಕಿಕೊಂಡಿದ್ದೇ ರೋಚಕ

ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

ಕಳೆದ ಭಾನುವಾರ ರಾರ‍ಯಂಡಮ್‌ ಪದ್ಧತಿಯಲ್ಲಿ ಪಾದರಾಯಪುರದ 22 ಮಂದಿ, ಹೊಂಗಸಂದ್ರ 71 ಮಂದಿಯ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿತ್ತು. ಮಂಗಳವಾರ ಈ 93 ಮಂದಿಯ ಕೊರೋನಾ ಸೋಂಕು ಪರೀಕ್ಷೆಯ ಫಲಿತಾಂಶ ಬಿಬಿಎಂಪಿ ಅಧಿಕಾರಿಗಳ ಕೈ ಸೇರುವ ಸಾಧ್ಯತೆ ಇದ್ದು, ಈ ವಾರ್ಡ್‌ಗಳ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಮಂಗಳವಾರ ಮತ್ತಷ್ಟುಮಂದಿಯನ್ನು ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ವಿಶೇಷ ಆಯುಕ್ತ ಲೋಕೇಶ್‌ ಮಾಹಿತಿ ನೀಡಿದ್ದಾರೆ.

click me!