ಲಾಕ್‌ಡೌನ್ ಸಡಿಲಿಕೆ: ಕರ್ನಾಟಕದಲ್ಲಿ ನಾಲ್ಕು ವಲಯಗಳ ವಿಂಗಡಣೆ

By Suvarna NewsFirst Published Apr 27, 2020, 9:08 PM IST
Highlights

ಆರ್ಥಿಕ ದೃಷ್ಟಿಯಿಂದ ಒಂದೆಡೆ ಲಾಕ್‌ಡೌನ್ ಸಡಿಲಿಕೆ ಮಾಡಬೇಕೆನ್ನುವ ಚಿಂತನೆಗಳು ನಡೆದಿವೆ. ಆದ್ರೆ, ಮತ್ತೊಂದೆಡೆ ಕೊರೋನಾ ಕೇಸ್‌ಗಳ ಸಂಖ್ಯೆಯಲ್ಲೂ ಸಹ ಹೆಚ್ಚಳವಾಗುತ್ತಿದೆ. ಇದರಿಂದ ರಾಜ್ಯ ಸರ್ಕಾರ ನಾಲ್ಕು ಝೋನ್‌ಗಳಾಗಿ ವಿಂಗಡಿಸಿದೆ.

ಬೆಂಗಳೂರು(ಏ.27): ಎರಡನೇ ಹಂತದ ಲಾಕ್‌ಡೌನ್ ಇದೇ ಮೇ. 3ಕ್ಕೆ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಮುಂದೇನು ಮಾಡ್ಬೇಕು ಎನ್ನುವ ಚಿಂತನೆಯಲ್ಲಿ ರಾಜ್ಯ ಸರ್ಕಾರ ಇದೆ.

ಇದಕ್ಕಾಗಿ ರಾಜ್ಯ ಆರೋಗ್ಯ ಇಲಾಖೆ ನಾಲ್ಕು ವಲಯಗಳನ್ನಾಗಿ ವಿಂಗಡಿಸಿದ್ದು, ಇದರ ಆಧಾರದ ಮೇಲೆ ಲಾಕ್‌ಡೌನ್‌ ಸಡಿಲಿಕೆ ಮುಂದಾಗಿದೆ.

ಮೇ.3ರ ಬಳಿಕವೂ ಕುಡುಕರಿಗೆ ಲಾಕ್‌ಡೌನ್, ಅಮೀರ್‌ಗೆ ಎಚ್ಚರಿಸಿದ್ದ ಕಿಂಗ್ ಖಾನ್; ಏ.27ರ ಟಾಪ್ 10 ಸುದ್ದಿ!

ಇಷ್ಟು ದಿನ ಮೂರು ರೋನ್‌ನ್​​ಗಳ ಇದ್ದವು. ಆದ್ರೆ, ಈಗ ರಾಜ್ಯ ಸರ್ಕಾರ ರೆಡ್ ಝೋನ್, ಗ್ರೀನ್ ಝೋನ್, ಯೆಲ್ಲೋ ಝೋನ್ ಮತ್ತು ಆರೆಂಜ್  ಹೀಗೆ ನಾಲ್ಕು ಝೋನ್ ಆಗಿ ವಿಂಗಡಣೆ ಮಾಡಿದೆ.

ಇನ್ನು, ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆಗೆ ಅನುಗುಣವಾಗಿ ನಾಲ್ಕು ಜೋನ್ ಆಗಿ ವಿಂಗಡನೆ ಮಾಡಲಾಗಿದೆ. ಗ್ರೀನ್ ಝೋನ್ ಅಂದರೆ ಒಂದೂ ಕೊರೋನಾ‌ ಪಾಸಿಟಿವ್ ಇಲ್ಲದ ಜಿಲ್ಲೆಗಳು, ಯೆಲ್ಲೋ ಝೋನ್ ಅಂದರೆ 1 ರಿಂದ 5 ಕೊರೋನಾ ಪಾಸಿಟಿವ್ ಇರುವ ಜಿಲ್ಲೆಗಳು, ಆರೆಂಜ್ ಝೋನ್ ಅಂದರೆ 6 ರಿಂದ 14 ಕೊರೋನಾ ಪಾಸಿಟಿವ್ ಇರುವ ಜಿಲ್ಲೆಗಳು, ರೆಡ್ ಝೋನ್ ಅಂದರೆ 15 ಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಇರುವ ಜಿಲ್ಲೆಗಳು ಎಂದು ಗುರುತಿಸಲಾಗಿದೆ.

ಝೋನ್‌ಗಳ ಆಧಾರದ ಮೇಲೆ ಸಡಿಲಿಕೆ
ಹೌದು..ಯಾವ ಜಿಲ್ಲೆ ಯಾವ ಝೋನ್‌ನಲ್ಲಿ ಇವೆ ಎನ್ನುವುದನ್ನು ಆಧಾರದ ಮೇಲೆ ಲಾಕ್‌ಡೌನ್ ಸಡಿಲ ಮಾಡಲು ರಾಜ್ಯ ಸರ್ಕಾರ ಚಿಂತಿಸುತ್ತಿದೆ. ಉದಾಹರಣೆಗೆ ಗ್ರೀನ್ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಸಡಿಲಿಕೆ ಮಾಡುವ ಯೋಜನೆ. ಆದ್ರೆ, ಅಂತರ್ ಜಿಲ್ಲೆಗಳ ಸಂಚಾರಕ್ಕೆ ನಿಷೇಧ ಇರಲಿದೆ. ಅಯಾ ಜಿಲ್ಲೆಗಳಲ್ಲೇ ಓಡಾಡಬಹುದು. ಹೀಗೆ ವಲಯವಾರು ಸ್ಥಿತಿಗತಿಗಳ ಆಧಾರದ ಮೇಲೆ ಲಾಕ್‌ಡೌನ್ ಸಡಿಲಿಕೆ ಮಾಡುವ ಸಾಧ್ಯತೆಗಳು ಹೆಚ್ಚಿವೆ.

ಗ್ರೀನ್‌ ಝೋನ್‌ಗಳಲ್ಲಿ ಫ್ಯಾಕ್ಟರಿ ಆರಂಭಕ್ಕೆ ಓಕೆ
ಹೌದು..ಮೇಲೆ ತಿಳಿಸಿದಂತೆ ಲಾಕ್‌ಡೌನ್ ಸಡಿಲಿಕೆ ಮಾಡಲು ನಾಲ್ಕು ಝೋನ್‌ಗಳನ್ನಾಗಿ ಮಾಡಲಾಗಿದೆ. ಇದೀಗ ಗ್ರೀನ್‌ ಝೋನ್‌ಗಳಲ್ಲಿರುವ ಜಿಲ್ಲೆಗಳಲ್ಲಿ ಕೈಗಾರಿಕೆಗಳನ್ನು (ಫ್ಯಾಕ್ಟರಿ) ಆರಂಭಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ರಾಜ್ಯದಲ್ಲಿ ಯಾವ್ಯಾವ ಜಿಲ್ಲೆಗಳು ಯಾವ ಝೋನ್​​ನಲ್ಲಿವೆ?

* ರೆಡ್ ಝೋನ್ ಜಿಲ್ಲೆಗಳು- 
1.‎ಮೈಸೂರು, 2. ‎ಬೆಳಗಾವಿ 3. ಬಾಗಲಕೋಟೆ, 4. ವಿಜಯಪುರ, 5. ‎ಕಲಬುರಗಿ, 6.ಬೆಂಗಳೂರು ನಗರ

* ಆರೆಂಜ್ ಝೋನ್ ಜಿಲ್ಲೆಗಳು
1. ಬೀದರ್, 2.  ಧಾರಾವಾಡ, 3.‎ಬಳ್ಳಾರಿ, 4.‎ದಕ್ಷಿಣ ಕನ್ನಡ, 5.‎ಮಂಡ್ಯ

* ಯೆಲ್ಲೋ ಝೋನ್ ಜಿಲ್ಲೆಗಳು
1. ಉತ್ತರ ಕನ್ನಡ, 2. ‎ಬೆಂಗಳೂರು ಗ್ರಾಮಾಂತರ, 3 ‎ಗದಗ, 4 ‎ತುಮಕೂರು, 5 ‎ಚಿಕ್ಕಬಳ್ಳಾಪುರ

* ಗ್ರೀನ್ ಜೋನ್ ಜಿಲ್ಲೆಗಳು
1 ಚಿಕ್ಕಮಗಳೂರು, 2 ‎ಶಿವಮೊಗ್ಗ, 3 ‎ರಾಮನಗರ, 4 ‎ಯಾದಗಿರಿ, 5 ‎‌ಕೊಪ್ಪಳ, 6 ‎ಹಾವೇರಿ, 7 ‎ರಾಯಚೂರು, 8 ‎ಹಾಸನ, 9 ‎ಚಾಮರಾಜನಗರ, 10 ‎ಕೋಲಾರ, 11 ಉಡುಪಿ, 12 ‎ಕೊಡಗು, 13 ‎ದಾವಣಗೆರೆ, 14 ‎ಚಿತ್ರದುರ್ಗ

click me!