ತುಮಕೂರು: ಪೊಲೀಸ್ ಠಾಣೆಗೆ ಗೃಹ ಸಚಿವ ದಿಢೀರ್ ಭೇಟಿ , ಕಡತಗಳ ಪರಿಶೀಲನೆ

By Ravi Janekal  |  First Published Dec 29, 2023, 7:31 PM IST

ಗೃಹ ಸಚಿವ ಡಾ.‌ ಜಿ.ಪರಮೇಶ್ವರ ಅವರು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದಿಡೀರ್ ಭೇಟಿ ನೀಡಿ, ಅಪರಾಧ ಪ್ರಕರಣಗಳ ಅಂಕಿ-ಅಂಶವನ್ನು ಪರಿಶೀಲಿಸಿದರು.  ಬೀಟ್ ವ್ಯವಸ್ಥೆಯನ್ನು ಸರಿಯಾಗಿ ನಿಭಾಯಿಸುವಂತೆ ನಿರ್ದೇಶನ‌ ನೀಡಿದರು. ಪೊಲೀಸ್ ಇ-ಬೀಟ್ ವ್ಯವಸ್ಥೆಯ ಮಾಹಿತಿಯನ್ನು ಕೇಳಿದರು. ಗ್ರಾಮಾಂತರ ಠಾಣೆಗೆ ಎಎಸ್ಐ, ಹೆಚ್‌ಸಿ ಅವಶ್ಯಕತೆ ಇದೆ. ಈ ಬಗ್ಗೆ ಮೇಲಾಧಿಕಾರಿಗಳ ಪತ್ರ ಬರೆಯಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಯವರು ಸಚಿವರಿಗೆ ಮಾಹಿತಿ ನೀಡಿದರು.


ವರದಿ : ಮಹಂತೇಶ್ ಕುಮಾರ್, ಏಷ್ಯನೆಟ್ ಸುವರ್ಣ ನ್ಯೂಸ್ ತುಮಕೂರು.

ತುಮಕೂರು ಡಿ.29) : ಗೃಹ ಸಚಿವ ಡಾ.‌ ಜಿ.ಪರಮೇಶ್ವರ ಅವರು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದಿಡೀರ್ ಭೇಟಿ ನೀಡಿ, ಅಪರಾಧ ಪ್ರಕರಣಗಳ ಅಂಕಿ-ಅಂಶವನ್ನು ಪರಿಶೀಲಿಸಿದರು. 

Tap to resize

Latest Videos

undefined

ಬೀಟ್ ವ್ಯವಸ್ಥೆಯನ್ನು ಸರಿಯಾಗಿ ನಿಭಾಯಿಸುವಂತೆ ನಿರ್ದೇಶನ‌ ನೀಡಿದರು. ಪೊಲೀಸ್ ಇ-ಬೀಟ್ ವ್ಯವಸ್ಥೆಯ ಮಾಹಿತಿಯನ್ನು ಕೇಳಿದರು. ಗ್ರಾಮಾಂತರ ಠಾಣೆಗೆ ಎಎಸ್ಐ, ಹೆಚ್‌ಸಿ ಅವಶ್ಯಕತೆ ಇದೆ. ಈ ಬಗ್ಗೆ ಮೇಲಾಧಿಕಾರಿಗಳ ಪತ್ರ ಬರೆಯಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಯವರು ಸಚಿವರಿಗೆ ಮಾಹಿತಿ ನೀಡಿದರು.

ತುಮಕೂರು ಬಳಿ ಸಚಿವ ಮಧು ಬಂಗಾರಪ್ಪ ಅವರಿದ್ದ ಕಾರು ಅಪಘಾತ

ಹಳ್ಳಿಗಳಲ್ಲಿ ಗಲಾಟೆ, ಪ್ರೇಮ ಪ್ರಕರಣದ ಗಲಾಟೆ, ದ್ವೇಷ ಸೇರಿದಂತೆ ಇನ್ನಿತರ ಪ್ರಕರಣಗಳನ್ನು ಬೀಟ್ ಸಿಬ್ಬಂದಿಗಳು ಸೂಕ್ಷ್ಮವಾಗಿ ಗಮನಹರಿಸಬೇಕು. ಘಟನೆಯ ಬಗ್ಗೆ ಸ್ಥಳೀಯರಿಂದ ಸೂಕ್ಷ್ಮ ಒಳ ಮಾಹಿತಿಯನ್ನು ಸಂಗ್ರಹಿಸಬೇಕು. ಅಗತ್ಯವಿದ್ದರೆ ಪ್ರಕರಣಕ್ಕೆ ಸಂಬಂಧಿಸಿದ ಎರಡು ಕಡೆಯವರಿಗೂ ತಿಳಿ (ಬುದ್ಧಿ) ಹೇಳಬೇಕು. ಅಲ್ಲದೆ, ಅವರ ಮೇಲೆ‌ ನಿಗಾ ಇಟ್ಟು, ಸ್ಥಳೀಯರಿಂದ ಆಗಾಗ ಮಾಹಿತಿ‌ ಪಡೆದುಕೊಳ್ಳುವುದು ಕಡ್ಡಾಯ. ಇಂತಹ ಘಟನೆಗಳ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು, ಡೈರಿಯಲ್ಲಿ ನಮೂದಿಸಬೇಕು. ಈ ರೀತಿಯಾಗಿ ಪೊಲೀಸ್ ಬೀಟ್ ವ್ಯವಸ್ಥೆಯನ್ನು ಕೈಗೊಳ್ಳಬೇಕು. ಹಬ್ಬ, ಜಾತ್ರೆ, ಉರುಸ್ ಮುಂತಾದ ಸಂದರ್ಭಗಳಲ್ಲಿ ಮೇಲಾಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿನ ಕಿಡಿಗೇಡಿಗಳ ಮೇಲೆ ನಿಗಾವಹಿಸುವಂತೆ ನಿರ್ದೇಶನ ನೀಡಿದರು.

ತುಮಕೂರು ಜಿಲ್ಲೆ ರಾಜ್ಯದಲ್ಲಿ ಶೈಕ್ಷಣಿಕ ನಗರವಾಗಿ ಅಭಿವೃದ್ಧಿ ಹೊಂದಿದೆ. ಹೊರ ರಾಜ್ಯ ಮತ್ತು ಬೇರೆ ಬೇರೆ ಜಿಲ್ಲೆಗಳಿಂದ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳು ಬರುತ್ತಾರೆ. ನಗರದ ಶಾಲಾ-ಕಾಲೇಜು ಹಾಗೂ ವಸತಿ ನಿಲಯಗಳಿಗೆ ಭೇಟಿ ನೀಡಿ, ಅವರ ಸಮಸ್ಯೆಗಳನ್ನು ಆಲಿಸಬೇಕು ಎಂದು ಸೂಚಿಸಿದರು.

ಠಾಣೆಯ ಸಿಬ್ಬಂದಿ ಕಾಟಾಚಾರಕ್ಕೆ ಬೀಟ್ ಹೋಗಿರುವುದು ಕಂಡು ಬಂದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಬೀಟ್ ಹೋಗಿರುವ ಬಗ್ಗೆ, ಜನರನ್ನು ಮಾತಾಡಿಸಿರುವ ರೆಕಾರ್ಡ್ ಬರೆದಿಡಬೇಕು. ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇರಿದಂತೆ ಇನ್ನಿತರ ಮಾದಕ ದ್ರವ್ಯ ಮಾರಾಟ ಮತ್ತು ಸೇವನೆ ಬಗ್ಗೆ ನಿಗಾ ವಹಿಸಬೇಕು. ಮಾದಕ ಸೇವನೆ ಕಂಡುಬಂದರೆ ಅಂತವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಕಾನೂನು ಕ್ರಮ ಜರುಗಿಸುವಂತೆ ಸೂಚನೆ ನೀಡಿದರು. 

ಪರಿಶೀಲನೆ ವೇಳೆ ಪೊಲೀಸ್ ಅಧಿಕ್ಷಕರಾದ ಅಶೋಕ್ ಅವರು, ಜಿಲ್ಲೆಯಲ್ಲಿ 1700 ಪೊಲೀಸ್ ಸಿಬ್ಬಂದಿಗಳ ಕೊರತೆ ಇರುವುದನ್ನು ಗೃಹ ಸಚಿವರಾದ ಜಿ.ಪರಮೇಶ್ವರ ಅವರ ಗಮನಕ್ಕೆ ತಂದರು. ಕೂಡಲೇ, ಆಡಳಿತ ವಿಭಾಗದ ಎಡಿಜಿಪಿ ಸೌಮೆಂದು ಮುಖರ್ಜಿ ಅವರಿಗೆ ಕರೆ ಮಾಡಿ ಮಾತನಾಡಿದರು.

ಯುವನಿಧಿ ಯೋಜನೆ: ನಿರುದ್ಯೋಗಿಗಳಿಗೆ ಈ ಭತ್ಯೆ ಬೂಸ್ಟರ್ ಡೋಸ್ ಇದ್ದಂತೆ, ಸಚಿವ ಪರಮೇಶ್ವರ
 
ರಾಜ್ಯದಲ್ಲಿ ಬೆಳಗಾವಿ ನಂತರದ ಅತಿದೊಡ್ಡ ಜಿಲ್ಲೆ ತುಮಕೂರು. ಬೆಂಗಳೂರಿಗೆ ಹೊಂದಿಕೊಂಡಿರುವ ಪ್ರಮುಖ ನಗರವೂ ಹೌದು. ಅಗತ್ಯ ಸಂಖ್ಯೆಯ ಪೊಲೀಸ್ ಸಿಬ್ಬಂದಿಗಳು ಬೇಕು. ಕನಿಷ್ಟ 2500 ಹುದ್ದೆಗಳನ್ನು ತುಮಕೂರು ಜಿಲ್ಲೆಗೆ ನೀಡಬೇಕು. ತುಮಕೂರು ಮಾತ್ರವಲ್ಲದೇ, ಎಲ್ಲ ಜಿಲ್ಲೆಗಳಲ್ಲಿ  ಪೊಲೀಸ್ ಸಿಬ್ಬಂದಿಗಳ ಅಗತ್ಯತೆಯ ಇರುವ ಕುರಿತು ಮಾಹಿತಿ ಪಡೆದು, ಪ್ರಸ್ತಾವನೆ ಸಿದ್ಧಪಡಿಸುವಂತೆ ಆಡಳಿತ ವಿಭಾಗದ ಎಡಿಜಿಪಿ ಸೌಮೆಂದು ಮುಖರ್ಜಿ ಅವರಿಗೆ ಗೃಹ ಸಚಿವರು ನಿರ್ದೇಶನ‌ ನೀಡಿದರು.

click me!