ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ; ಎಡಪಕ್ಷಗಳ ಟೀಕೆಗೆ ಪೇಜಾವರಶ್ರೀ ತಿರುಗೇಟು

Published : Dec 29, 2023, 05:11 PM IST
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ; ಎಡಪಕ್ಷಗಳ ಟೀಕೆಗೆ ಪೇಜಾವರಶ್ರೀ ತಿರುಗೇಟು

ಸಾರಾಂಶ

'ರಾಮ ಎಲ್ಲ ಭಾರತೀಯರಿಗೆ ಸೇರಿದವನು. ಯಾರಿಗೆ ಬರಬೇಕು ಅಂತಾ ಅಪೇಕ್ಷೆ ಇದೆ ಅವರು ಎಲ್ಲರೂ ಬರಬಹುದು. ಅಹ್ವಾನ ಇಲ್ಲದೆಯೂ ರಾಮ ಮಂದಿರಕ್ಕೆ ಬರಬಹುದು' ಎಡಪಕ್ಷಗಳ ಟೀಕೆಗೆ ಪೇಜಾವರ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ತಿರುಗೇಟು ನೀಡಿದರು.

ಮಂಗಳೂರು (ಡಿ.29): 'ರಾಮ ಎಲ್ಲ ಭಾರತೀಯರಿಗೆ ಸೇರಿದವನು. ಯಾರಿಗೆ ಬರಬೇಕು ಅಂತಾ ಅಪೇಕ್ಷೆ ಇದೆ ಅವರು ಎಲ್ಲರೂ ಬರಬಹುದು. ಅಹ್ವಾನ ಇಲ್ಲದೆಯೂ ರಾಮ ಮಂದಿರಕ್ಕೆ ಬರಬಹುದು' ಎಡಪಕ್ಷಗಳ ಟೀಕೆಗೆ ಪೇಜಾವರ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ತಿರುಗೇಟು ನೀಡಿದರು.

ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆ, ಎಡ ಪಕ್ಷಗಳಿಗೆ ಆಹ್ವಾನ ನೀಡದ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪೇಜಾವರ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಕರೆದಿಲ್ಲ ಅಂತಾ ಆದ್ರೆ ಕರೆದಿಲ್ಲ ಎನ್ನೋದೇ ದೊಡ್ಡ ಆಕ್ಷೇಪ. ಕರೆದ ಮೇಲೆ ನಾವು ತಿರಸ್ಕರಿಸುತ್ತೇವೆ ಎನ್ನೋದೇ ದೊಡ್ಡ ಹೆಗ್ಗಳಿಕೆ. ತಿರಸ್ಕಾರ ಮಾಡೋದು ಅವರಿಗೆ ಬಿಟ್ಟದ್ದು, ಅದು ವ್ಯಕ್ತಿಗತವಾದ ವಿಚಾರ. ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ, ರಾಜಕೀಯ ಟೀಕೆಗಳಿಗೆ ಉತ್ತರ ಕೊಡೋದಿಲ್ಲ ಎಂದರು.

ಅಯೋಧ್ಯೆ ಧರ್ಮಪಥದಲ್ಲಿ 40 ಸೂರ್ಯಸ್ತಂಭ ನಿರ್ಮಾಣ: ಉರಿದಾಗ ಸೂರ್ಯನಂತೆ ಕಂಗೊಳಿಸಲಿರುವ ಬೀದಿದೀಪಗಳು

 

ರಾಮಮಂದಿರ ಉದ್ಘಾಟನೆಗೆ ಆಹ್ವಾನ ನೀಡುವಲ್ಲಿ ತಾರತಮ್ಯ ನಡೆಸಿದ್ದಾರೆ ಎಂಬ ಟೀಕೆಗೆ ಗುರಿಯಾಗಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಅಲ್ಲಿರುವ ಸ್ಥಳಾವಕಾಶ ಅಲ್ಪವಾದದ್ದು, ಅಬ್ಬಬ್ಬಾ ಅಂದ್ರೆ ಏಳೆಂಟು ಸಾವಿರ ಜನ ಸೇರಬಹುದು. ಲೋಕದಲ್ಲಿ ಮಹಾತ್ಮರು ಗೌರವಾನಿತ್ವರು ತುಂಬಾ ಮಂದಿ ಇದ್ದಾರೆ. ಯಾರನ್ನು ಕರೆದರೂ ಆಕ್ಷೇಪ ಇರುವಂತಹದ್ದೇ. ಪರಿಸ್ಥಿತಿ ಅವಕಾಶವನ್ನು ಗಮನಿಸಿಕೊಂಡು ಸಮಾಧಾನಪಡಬೇಕು. ಪ್ರಾತಿನಿಧ್ಯವನ್ನು ಆಧರಿಸಿ ಆಹ್ವಾನವನ್ನು ನೀಡಿದ್ದೇವೆ. ಆಹ್ವಾನ ನೀಡದಿರುವ ಬಗ್ಗೆ ಮಂದಿರ, ಟ್ರಸ್ಟ್, ವ್ಯಕ್ತಿಗೆ ಸ್ವಾರ್ಥ, ಲಾಭ ಯಾವುದೂ ಇಲ್ಲ. ಇದು ಮನುಷ್ಯ ಸಹಜವಾದ ಪ್ರಕ್ರಿಯೆ, ಎಲ್ಲರನ್ನೂ ಸಮಾಧಾನಪಡಿಸಲು ಸಾಧ್ಯವಿಲ್ಲ. ಎಲ್ಲರೂ ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಶಾಂತರಾಗಬೇಕು ಎಂದು ತಿಳಿಸಿದರು.

ಸಿದ್ದು ಮುಸ್ಲಿಂ ಪರ ಹೇಳಿಕೆ: ಪೇಜಾವರಶ್ರೀ ಅಸಮಾಧಾನ

ಇನ್ನು ಕಲ್ಲಡ್ಕ ಪ್ರಭಾಕರ್ ಭಟ್ಟರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲು ಮಾಡಿದ ವಿಚಾರ ಸಂಬಂಧ ಮಾತನಾಡಿದ ಸ್ವಾಮೀಜಿ, ಒಬ್ಬರ ಕಡೆಯಿಂದ ಏನೂ ತಪ್ಪು ಆಗದಿದ್ದರೂ ತಪ್ಪು ಎಂದು ಭಾರೀ ಪ್ರತಿಭಟನೆ ಮಾಡ್ತಾರೆ. ಇನ್ನೊಂದು ಕಡೆಯಿಂದ ಏನು ತಪ್ಪು ಆದರೂ ಕಣ್ಮುಚ್ಚಿ, ಬಾಯಿಮಚ್ಚಿ ಕೂಡ್ತಾರೆ. ಇಂತಹ ನಡೆ ಸರಿಯಲ್ಲ. ಅವರ ಹೇಳಿಕೆ ವ್ಯಕ್ತಿಗತವಾಗಿರೋದು. ನಾನು ಆ ಬಗ್ಗೆ ಯಾವುದೇ ಅಭಿಪ್ರಾಯ ಕೊಡೋದು ಸರಿಯಲ್ಲ ಎನ್ನುವ ಮೂಲಕ ಪ್ರತಿಕ್ರಿಯಿಸಲು ನಿರಾಕರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ
ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ