ಜೆಜೆನಗರ ಚಂದ್ರು ಕೊಲೆ ಪ್ರಕರಣ ಗೃಹ ಸಚಿವ ಅರಗ ಜ್ಞಾನೇಂದ್ರ ಎಡವಟ್ಟು!

By Suvarna News  |  First Published Apr 6, 2022, 5:39 PM IST

ಜೆಜೆ ನಗರದಲ್ಲಿ ಮಂಗಳವಾರ ರಾತ್ರಿ ನಡೆದ ಯುವಕನೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆ ನೀಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಎಡವಟ್ಟು ಮಾಡಿಕೊಂಡಿದ್ದಾರೆ. ಇದರ ನ್ನಲ್ಲಿಯೇ ವಿಪಕ್ಷಗಳು ಅವರ ಮೇಲೆ ಮುಗಿಬಿದ್ದಿವೆ.


ವರದಿ : ಮಂಜುನಾಥ್ ಏಷಿಯಾ ನೆಟ್ ಸುವರ್ಣನ್ಯೂಸ್

ಬೆಂಗಳೂರು (ಏ.6): ಜೆಜೆ ನಗರ ಚಂದ್ರು (JJNagar Chandru) ಕೊಲೆ ಪ್ರಕರಣ (Murder Case) ಸಂಬಂಧ ಗೊಂದಲ ಸೃಷ್ಟಿಯಾಗಿತ್ತು.. ಅಷ್ಟಕ್ಕೂ ಗೊಂದಲಕ್ಕೆ ಕಾರಣವಾಗಿದ್ದು ಗೃಹ ಮಂತ್ರಿಗಳ (Home Minister) ಹೇಳಿಕೆ.. ಹೌದು ಇಂದು ಬಿಜೆಪಿ ಕಛೇರಿಯಿಂದ (BJP Office)ಬಂದಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರ (Araga Jnanendra) ಮಾಧ್ಯಮದ ಮುಂದೆ ನಾನು ಪೊಲೀಸರಿಂದ ಮಾಹಿತಿ ತರಿಸಿಕೊಂಡಿದ್ದೇನೆ ಜೆಜೆನಗರದಲ್ಲಿ ನಡೆದ ಚಂದ್ರು ಕೊಲೆ ಭಾಷೆಗಾಗಿ (ಕನ್ನಡ ಹಾಗೂ ಉರ್ದುವಿನ) ನಡೆದ ಕೊಲೆ ಇದು ಅಮಾನವೀಯ ಕೊಲೆ ಇದನ್ನ ನಾವು ಖಂಡಿಸುತ್ತೇವೆ ಕೊಲೆ ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡಿಸುತ್ತೇವೆ ಎಂದಿದ್ದರು.

Tap to resize

Latest Videos

ಇದರ ಬೆನ್ನಲ್ಲೆ ಸಿಟಿ ರವಿ (CT Ravi) ಕೂಡಾ ಭಾಷೆಗಾಗಿ ಕೊಲೆಯಾಗಿದೆ ಅಂತ ಹೇಳಿದ್ದಾರೆ.. ತದನಂತರ ಮಾಧ್ಯಮಗಳಲ್ಲಿ ಪ್ರಕರಣದ ಸತ್ಯಾಸತ್ಯೆ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ನಗರ ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿ ಬೈಕ್ ಗಳ ನಡುವೆ ಡಿಕ್ಕಿಯಾಗಿದ್ದ ಜಗಳ ತಾರಕ್ಕಕ್ಕೇರಿ ಕೊಲೆಯಾಗಿದೆ ಎಂದಿದ್ರು.. 

ಯೂಟರ್ನ್ ಹೊಡೆದ ಗೃಹ ಸಚಿವ ಅರಗ ಜ್ಞಾನೇಂದ್ರ: ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ನಗರ ಪೊಲೀಸ್ ಆಯುಕ್ತರ ಬಳಿ ಮಾಹಿತಿ ಪಡೆದು ಗೃಹ ಮಂತ್ರಿ ಅರಗ ಜ್ಞಾನೇಂದ್ರ ನನಗೆ ಮಾಹಿತಿ ಕೊರತೆ ಇತ್ತು ಮಾಧ್ಯಮದವರು ಪ್ರಶ್ನೆ ಕೇಳಿದ ತಕ್ಷ ಣ ನಾನು  ಈ ರೀತಿ ಹೇಳಿಬಿಟ್ಟೆ ನನ್ನಿಂದ ತಪ್ಪಾಗಿದೆ ಎಂದು ಕ್ಷಮೆಯಾಚನೆ ಮಾಡಿದ್ರು..

ಜೆಜೆ ನಗರ ಚಂದ್ರು ಕೊಲೆ ಪ್ರಕರಣ: ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಎಚ್‌ಡಿಕೆ ವಾಗ್ದಾಳಿ
ಅಸಲಿ ಘಟನೆ ಏನು..?:
ಎರಡು ದಿನದ ಹಿಂದೆ ಯಷ್ಟೆ ಛಲವಾದಿ ಪಾಳ್ಯದ ನಿವಾಸಿಯಾಗಿರೋ ಚಂದ್ರು ತನ್ನ ಸ್ನೇಹಿತ ಸೈಮನ್ ಬರ್ತಡೆಗೆ ಜೆಜೆನಗರ ತೆರಳಿದ್ರು.. ಹೊಟೆಲ್ ಒಂದರಲ್ಲಿ ಚಿಕನ್ ರೋಲ್ ತಿಂದ ವಾಪಸ್ ಆಗುವಾಗ ಶಾಹಿದ್ ಎಂಬಾತನ ಬೈಕ್ ಗೆ ಡಿಕ್ಕಿಹೊಡೆದಿದ್ದ ಈ ವೇಳೆ ಶಾಹಿದ್, ಸೈಮನ್ ಚಂದ್ರು ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿತ್ತು.. ಕೂಡಲೆ ತನ್ನ ಬಳಿಯಿದ್ದ ಡ್ರಾಗರ್ ತೆಗೆದು ಚಂದ್ರು ತೊಡೆಗೆ  ಬಲವಾಗಿ ಇರಿದಿದ್ದ ಶಾಹಿದ್.. ಜೊತೆಗೆ ಏರಿಯಾದ ಮತ್ತೊಬ್ಬ ಶಾಹಿದ್ ಹಾಗೂ ಮತ್ತೊಬ್ಬ ತಲವಾರ್ ನಿಂದ ಹಲ್ಲೆ ಮಾಡಿದ್ದಾರೆ.. ತೀವ್ರ ರಕ್ತಸ್ರಾವವಾಗಿ ಚಂದ್ರು ಮೃತಪಟ್ಟಿದ್ದಾನೆ ಘಟನೆ ಸಂಬಂಧ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

click me!