ಮಾಂಸ ತಿನ್ನದೇ ಇರುವವರು ಹಲಾಲ್ ಕಟ್ ವಿವಾದ ಸೃಷ್ಟಿಸಿದ್ದಾರೆ ಎಂದು ಕಾಂಗ್ರೆಸ್ ನ ಹಿರಿಯ ನಾಯಲ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ವರದಿ: ಗುರುರಾಜ ಹೂಗಾರ , ಏಷ್ಯಾನೆಟ್ ಸುವರ್ಣನ್ಯೂಸ್
ಹುಬ್ಬಳ್ಳಿ (ಎ.5) : ಮುಸ್ಲಿಂರು ಹಲಾಲ್ ಕಟ್ ಮಾಡಿದ್ದೆ ನಾವು ತಿನ್ನೋದು, ಮಾಂಸ ತಿನ್ನದೇ ಇರುವವರು ಈ ವಿವಾದ ಸೃಷ್ಟಿ ಮಾಡ್ತಿದ್ದಾರೆ ಅಂತ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮುಸ್ಲಿಮರ ನಂಬಿಕೆ ಹಲಾಲ್ ಮಾಡೋದು, ಕುರಿಗಳಲ್ಲಿ ರಕ್ತ ಇರಬಾರದು ಅನ್ನೋದು ಅವರ ನಂಬಿಕೆ, ನಾವು ಕುರಿ ಕಡಿದರೆ ಅವರನ್ನೇ ಕರೆಸಿ ಕ್ಲೀನ್ ಮಾಡಸ್ತಿದ್ವಿ, ಮುಸ್ಲಿಂರು ಹಲಾಲ್ ಕಟ್ ಮಾಡಿದ್ದೆ ನಾವು ತಿನ್ನೋದು ಬಿಜೆಪಿಯವರು ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುತ್ತಿದ್ದಾರೆ ಅಂತ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಹಿಜಬ್ ಆಯ್ತು, ಹಲಾಲ್ ಕಟ್ ಆಯ್ತು ಈಗ ಧ್ವನಿವರ್ಧಕ ವಿಚಾರಕ್ಕೆ ಬಂದಿದಾರೆ, ಮಾವಿನಹಣ್ಣು ಮಾರಾಟದಲ್ಲಿಯೂ ವಿವಾದ ಸೃಷ್ಟಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದೆಲ್ಲವೂ ಬಿಜೆಪಿಗೆ ತಿರುಗುಬಾಣವಾಗಲಿದೆ. ಜನರ ಮುಂದೆ ಹೋಗೋಕೆ ಅವರ ಬಳಿ ಸಾಧನೆಗಳಿಲ್ಲ. ಅದನ್ನ ಮರೆ ಮಚೋಕೆ ಧಾರ್ಮಿಕ ವಿಚಾರಕ್ಕೆ ಮುಂದಾಗಿದ್ದಾರೆ. ಈಗ ಮಸೀದಿಯಲ್ಲಿ ಮೈಕ್ ಬಳಸೋದು ವಿಷಯ ಈಗ ಬಂದಿದೆ.
Kannadaprabha Recruitment 2022: ವೃತ್ತಿಪರರಿಗೆ ಕನ್ನಡಪ್ರಭ ದಿನ ಪತ್ರಿಕೆ ಅರ್ಜಿ ಆಹ್ವಾನ
ಮಾವಿನ ಹಣ್ಣು ಹಿಂದೂ ಮುಸ್ಲಿಂ ಬಹಳ ವರ್ಷದಿಂದ ವ್ಯಾಪಾರ ಮಾಡ್ತಿದ್ದಾರೆ. ನಮ್ಮೂರಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಹಣ್ಣು ಕೊಡ್ತಿದ್ವಿ. ಆದ್ರೆ ಬಿಜೆಪಿ ಮತಗಳ ಕ್ರೂಢೀಕರಣ ಮಾಡಬೇಕು ಅಂತ ಹೀಗೆ ಮಾಡ್ತಿದ್ದಾರೆ. ಧರ್ಮದ ಹೆಸರಿನ ಮೇಲೆ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಇದೆಲ್ಲ ಹುನ್ನಾರ ಜನರಿಗೆ ಗೊತ್ತಾಗುತ್ತೆ.
ಬೆಲೆ ಏರಿಕೆ ಬಗ್ಗೆ ಯಾಕಮಾತನಾಡುತ್ತಿಲ್ಲ?: ಬಿಜೆಪಿಯವರು ಈಗ ಬೆಲೆ ಏರಿಕೆ ಬಗ್ಗೆ ಯಾಕೆ ಮಾತಡಲ್ಲ? ಗೊಬ್ಬರ ಸಹ ಏರಿಕೆ ಆಗಿದೆ, ಗ್ಯಾಸ್, ಅಡುಗೆ ಎಣ್ಣೆ, ಎಲ್ಲವೂ ಜಾಸ್ತಿ ಆಗಿದೆ. ಇದರ ಬಗ್ಗೆ ಅವರು ಮಾತಾಡಲ್ಲ. ಧಾರ್ಮಿಕ ಭಾವನೆ ಕೆರಳಿಸುವಂಥದ್ದು ನಾವು ಖಂಡಿಸುತ್ತೇವೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ.
VIJAYAPURA ಕೆಂಡ ಹಾಯ್ದ ನಾಲ್ಕು ರಾಜ್ಯಗಳ 3 ಸಾವಿರ ಭಕ್ತರು!
ಟಾರ್ಗೆಟ್ 150 ಸೀಟು ಗೆಲ್ಲುವ ಸಾಮರ್ಥ್ಯವಿದೆ: ನಾವು 150 ಸೀಟು ಗೆಲ್ಲೋ ಸಾಮರ್ಥ್ಯವಿರೋದ್ರಿಂದ ರಾಹುಲ್ ಗಾಂಧಿ 150 ಟಾರ್ಗೆಟ್ ಕೊಟ್ಟಿದ್ದಾರೆ. ಖಂಡಿತ ನಮ್ಮ ಟಾರ್ಗೆಟ್ ನಾವು ರೀಚ್ ಆಗುತ್ತೇವೆ ಎಂದಿರುವ ಸಿದ್ದರಾಮಯ್ಯ, ಬಿಜೆಪಿ ಕೋಮು ದ್ವೇಷ ಬಿತ್ತುವ ಬಿಜೆಪಿ ಧೋರಣೆ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡ್ತೇವ, ಕೋವಿಡ್ ಇಲ್ಲಿ ಅಷ್ಟೇ ಅಲ್ಲ ಇಡೀ ಜಗತ್ತಿಗೇ ಇದೆ, ಆದರೂ ಹೂಡಿಕೆ ಕರ್ನಾಟಕಕ್ಕೆ ಬರದೆ ನೆರೆ ರಾಜ್ಯಗಳಿಗೆ ಹೋಗ್ರಿದೆ ಅಂದ್ರೆ ಅರ್ಥವೇನು.? ಎಲ್ಲ ಉದ್ಯಮಗಳು ರಾಜ್ಯದಲ್ಲಿ ಮುಚ್ಚಿ ಹೋಗುತ್ತಿವೆ. ನಾವು ಸುಳ್ಳು ಹೇಳಲ್ಲ, ನಾವು ಸತ್ಯ ಹೇಳಿಕೊಂಡು ಜನರ ಮುಂದೆ ಹೋಗ್ತೀವೆ. ಬೋಗಸ್ ಧರ್ಮ ಪ್ರಚಾರ ನಾವು ಮಾಡುವುದಿಲ್ಲ ಬಿಜೆಪಿಯ ಅಪಪ್ರಚಾರದ ವಿರುದ್ಧ ಜನ ಜಾಗೃತಿ ಮೂಡಿಸುತ್ತೇವೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.