ಸರ್ಕಾರಿ, ಸಾರಿಗೆ ನೌಕರರ ಬಳಿಕ ಆಕ್ರೋಶ ಹೊರಹಾಕಿದ ಹೋಮ್ ಗಾರ್ಡ್ಸ್: ಸರ್ಕಾರಕ್ಕೆ ಮನವಿ ಪತ್ರ

By Govindaraj SFirst Published Mar 27, 2023, 11:04 AM IST
Highlights

ಸರ್ಕಾರಿ ನೌಕರರು, ಸಾರಿಗೆ ನೌಕರರು ಹಾಗೂ ವಿಪ್ರಕ ನೌಕರರು ಆಕ್ರೋಶ ಹೊರಹಾಕಿದ ಬಳಿಕ ಇದೀಗ ಹೋಮ್ ಗಾರ್ಡ್ಸ್‌ಗಳು ಹಲವು ಬೇಡಿಕೆಗಳನ್ನಿಟ್ಟುಕೊಂಡು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ. 

ಬೆಂಗಳೂರು (ಮಾ.27): ಸರ್ಕಾರಿ ನೌಕರರು, ಸಾರಿಗೆ ನೌಕರರು ಹಾಗೂ ವಿಪ್ರಕ ನೌಕರರು ಆಕ್ರೋಶ ಹೊರಹಾಕಿದ ಬಳಿಕ ಇದೀಗ ಹೋಮ್ ಗಾರ್ಡ್ಸ್‌ಗಳು ಹಲವು ಬೇಡಿಕೆಗಳನ್ನಿಟ್ಟುಕೊಂಡು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ. ಸಂಬಳ ಹಾಗೂ ಬಸ್ ಪಾಸ್‌ಗಾಗಿ ಸರ್ಕಾರದ ಮುಂದೆ ಹೋಮ್ ಗಾರ್ಡ್ಸ್‌ಗಳು ಬೇಡಿಕೆಯನ್ನಿಟ್ಟಿದ್ದು, ರಾಜ್ಯದಲ್ಲಿ 47 ಸಾವಿರ ಹೋಮ್ ಗಾರ್ಡ್ಸ್‌ಗಳಿದ್ದಾರೆ ಎಲ್ಲರನ್ನೂ ಪೊಲೀಸರಂತೆ ಖಾಯಂಗೊಳಿಸಬೇಕು. ನಾವು ಕೂಡ ಪೊಲೀಸರಂತೆಯೇ ಗೃಹ ಇಲಾಖೆಗೆ ಸೇವೆ ಸಲ್ಲಿಸುತ್ತಿದ್ದೇವೆ. 

ಮನೆ ಬಾಡಿಗೆ, ಬಸ್ ಪಾಸ್ ವೆಚ್ಚ, ವಿದ್ಯುತ್, ನೀರಿನ ಬಿಲ್ ಹೀಗೆ ನೂರಾರು ಬಿಲ್ ಕಟ್ಟಬೇಕು.ಈಗ ನಮಗೆ 25,500 ಸಂಬಳ ಇದೆ, ಇದರಲ್ಲಿ ಎಲ್ಲವೂ ಕಟ್ಟಿ ಮಕ್ಕಳ ವಿದ್ಯಾಭ್ಯಾಸ ಮಾಡಿಸಬೇಕು. ಪ್ರತಿ ದಿನ ನೂರಾರು ಕಿಲೋಮೀಟರ್ ಪ್ರಯಾಣ ಮಾಡಿ ಡ್ಯೂಟಿಗೆ ಬರಬೇಕು. ಅದಕ್ಕೂ ನೂರಾರು ರೂಪಾಯಿ ಪ್ರತಿದಿನ ಖರ್ಚು ಮಾಡಬೇಕು. ಹೀಗಾಗಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿಯಲ್ಲಿ ಪೊಲೀಸರಂತೆ ನಮಗೂ ಉಚಿತವಾಗಿ ಓಡಾಡೋಕೆ ಅವಕಾಶ ಮಾಡಿಕೊಡಬೇಕು. ಹೀಗೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಹೋಮ್ ಗಾರ್ಡ್ಸ್‌ಗಳು ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ಮೀಸಲಾತಿ ಒಪ್ಪುವಂತೆ ಶ್ರೀಗಳಿಗೆ ಸರ್ಕಾರದ ಬೆದರಿಕೆ: ಡಿ.ಕೆ.ಶಿವಕುಮಾರ್‌

ಗೃಹ ರಕ್ಷಕದಳ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರ: ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ಹಾಗೂ ಗೃಹ ರಕ್ಷಕರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಮುಂಬರುವ ವಿಧಾನಸಭೆ ಚುನಾವಣೆ ಶಾಂತಿಯುತವಾಗಿ ನಡೆಯಲು ಈಗಿನಿಂದಲೇ ಸನ್ನದ್ಧರಾಗಿ, ಮುಂಜಾಗೃತ ಕ್ರಮಗಳನ್ನು ನಿರ್ವಹಿಸುವಂತೆ ಪಿಐ ಆನಂದ ವಾಗ್ಮೊಡೆ ಹೇಳಿದರು. ನಗರದ ಡಿವೈಎಸ್‌ಪಿ ಕಚೇರಿ ಆವರಣದಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಪ್ರಯುಕ್ತ ಗೃಹರಕ್ಷಕ ದಳ ಮತ್ತು ಪೌರ ರಕ್ಷಣೆಯ ಮಹಾ ಸಮಾದೇಷ್ಟರ ನಿರ್ದೇಶನದಂತೆ ಗೃಹ ರಕ್ಷಕದಳ ಸಿಬ್ಬಂದಿಗಳಿಗೆ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಂದೋಬಸ್ತು ಕರ್ತವ್ಯ ನಿರ್ವಹಣೆ ಕುರಿತು ತಿಳಿಸಿದರು.

ಬಳ್ಳಾರಿ ಗ್ರಾಮೀಣದಲ್ಲಿ ದೋಸ್ತಿಗಳ ನಡುವೆ ಕುಸ್ತಿ: ಕಾಂಗ್ರೆಸ್‌ನಿಂದ ಶಾಸಕ ನಾಗೇಂದ್ರಗೆ ಟಿಕೆಟ್‌

ಜಿಲ್ಲಾ ಬೋಧಕರಾದ ವಿದ್ಯಾವತಿ ಮಾತನಾಡಿ, ಗೃಹ ರಕ್ಷಕದಳ ಕಾರ್ಯಗಳು ಹಾಗೂ ಸೇವೆಗಳ ಕುರಿತು ತಿಳಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಂಪನಿ ಕಮಾಂಡರ್‌ ಯಲ್ಲಪ್ಪ ಹುಲಿಕಲ್‌, ಚುನಾವಣೆ ನೀತಿ ಸಂಹಿಂತೆ ಪ್ರಾರಂಭವಾದಾಗಿನಿಂದ ಮುಗಿಯುವ ಅವಧಿಯಲ್ಲಿ ಗೃಹ ರಕ್ಷಕರು ನಿರ್ವಹಿಸಬೇಕಾದ ಕರ್ತವ್ಯ ಕುರಿತು ತಿಳಿಸಿದರು. ಸೀನಿಯರ್‌ ಪ್ಲಾಟೂನ್‌ ಕಮಾಂಡರ್‌ ವೆಂಕಟೇಶ ಸುರಪುಕರ್‌, ಪ್ಲಾಟೂನ್‌ ಕಮಾಂಡರ್‌ ರಮೇಶ ಅಂಬೂರೆ, ಹುಣಸಗಿ ಘಟಕಾಧಿಕಾರಿ ಮಹ್ಮದ್‌ ಆಸೀಫ್‌ ಇದ್ದರು. ಸುರಪುರ ತಾಲೂಕಿನ 60 ಹಾಗೂ ಹುಣಸಗಿ ತಾಲೂಕಿನ 40 ಗೃಹರಕ್ಷಕರು ಕಾರ್ಯಾಗಾರದಲ್ಲಿದ್ದರು.

click me!