ಪಿಎಫ್‌ಐ ನಿಷೇಧದ ನಂತರ ಇನ್ ತಿ ಫದಾ ಆತಂಕ: ಹಿಂದೂ ಜಾಗರಣ ಮುಖಂಡ ಶ್ರೀಕಾಂತ್ ಶೆಟ್ಟಿ ಕಳವಳ

By Govindaraj S  |  First Published Oct 3, 2022, 7:25 PM IST

ಪಿಎಫ್‌ಐ ಮತ್ತು ಸಿಎಫ್‌ಐ ಸೇರಿದಂತೆ ಅದರ ಅಂಗ ಸಂಘಟನೆಗಳನ್ನು ಭಾರತದಲ್ಲಿ ಮುಂದಿನ 5 ವರ್ಷಗಳಿಗೆ ನಿಷೇಧ ಮಾಡಲಾಗಿದೆ. ಆದರೆ ಈ ನಿಷೇಧಿಸಲ್ಪಟ್ಟ ಪಿಎಫ್‌ಐ ಮತ್ತು ಸಿಎಫ್‌ಐ ಸಂಘಟನೆಗಳು ಭಾರತದಲ್ಲಿ ಇನ್ ತಿ ಫದಾ ಮಾದರಿಯಲ್ಲಿ ಸಂಘರ್ಷಕ್ಕೆ ಸಿಎಫ್‌ಐ ಸಂಚು ರೂಪಿಸುತ್ತಿದೆ ಎಂದು ಲೇಖಕ ಶ್ರೀಕಾಂತ್ ಶೆಟ್ಟಿಯವರು ಆತಂಕ ವ್ಯಕ್ತಪಡಿಸಿದರು.


ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ

ಉಡುಪಿ (ಅ.03): ಪಿಎಫ್‌ಐ ಮತ್ತು ಸಿಎಫ್‌ಐ ಸೇರಿದಂತೆ ಅದರ ಅಂಗ ಸಂಘಟನೆಗಳನ್ನು ಭಾರತದಲ್ಲಿ ಮುಂದಿನ 5 ವರ್ಷಗಳಿಗೆ ನಿಷೇಧ ಮಾಡಲಾಗಿದೆ. ಆದರೆ ಈ ನಿಷೇಧಿಸಲ್ಪಟ್ಟ ಪಿಎಫ್‌ಐ ಮತ್ತು ಸಿಎಫ್‌ಐ ಸಂಘಟನೆಗಳು ಭಾರತದಲ್ಲಿ ಇನ್ ತಿ ಫದಾ ಮಾದರಿಯಲ್ಲಿ ಸಂಘರ್ಷಕ್ಕೆ ಸಿಎಫ್‌ಐ ಸಂಚು ರೂಪಿಸುತ್ತಿದೆ ಎಂದು ಲೇಖಕ ಶ್ರೀಕಾಂತ್ ಶೆಟ್ಟಿಯವರು ಆತಂಕ ವ್ಯಕ್ತಪಡಿಸಿದರು. ಭಾನುವಾರ ಸಂಜೆ ಉಡುಪಿಯಲ್ಲಿ ನಡೆದ ದುರ್ಗಾದೌಡ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಇನ್ ತಿ ಫದಾದ ಬಗ್ಗೆ ಉಲ್ಲೇಖ ಮಾಡಿದ ಶ್ರೀಕಾಂತ್ ಶೆಟ್ಟಿಯವರು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಈ ಕುರಿತು ಸವಿಸ್ತಾರವಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದರ ಪೂರ್ಣ ಪಾಠ ಹೀಗಿದೆ.

Tap to resize

Latest Videos

ಏನಿದು ಇನ್ ತಿ ಫದಾ?: ಹಿಂಸಾತ್ಮಕವಾಗಿ ಜನರು ದಂಗೆ ಏಳುವುದು, ಕೈಗೆ ಸಿಕ್ಕಿದ ಶಸ್ತ್ರಾಸ್ತ್ರ ಬಳಸಿ ಹೋರಾಟ ಮಾಡುವುದೇ ಇನ್ ತಿ ಫಿದಾ. ಇಸ್ರೇಲ್ ವಿರುದ್ಧ ಜೆರುಸಲೇಂನಲ್ಲಿ ಅಲ್ ಅಕ್ಸಾ ಮಸೀದಿಯನ್ನು ಮರುಪಡೆಯಲು ಮುಂದಾದಾಗ ಈ ಪದ ಬಳಕೆಯಾಗಿತ್ತು. ಆ ಸಂದರ್ಭದಲ್ಲಿ ಸಾವಿರಾರು ಜನರ ಮಾರಣಹೋಮ ಆಗಿದೆ. ಇಸ್ರೇಲ್ ಕಾರ್ಯಚರಣೆಯನ್ನು ದೌರ್ಜನ್ಯ ಎಂದು ಬಿಂಬಿಸಲಾಗುತ್ತದೆ. ಆದರೆ ಇನ್ ತಿ ಫಿದಾ ಹೆಸರಲ್ಲಿ ಅಲ್ಲಿ ಆಗಿರುವ ಕೊಲೆಗಳನ್ನು, ರಾಜಕೀಯ ಹತ್ಯೆಗಳನ್ನು ಮರೆಮಾಚಲಾಗಿದೆ. 1952 ರಲ್ಲಿ ಈಜಿಪ್ಟ್ ನಲ್ಲಿ ಇನ್ ತಿ ಫಿದಾ ಎಂಬ ಶಬ್ದದ ಬಳಕೆಯಾಗಿದೆ. ಗಾಝಾ ಪಟ್ಟಿಯಲ್ಲೂ ಸಹ ಈ ಪದ ಬಹಳ ಸದ್ದು ಮಾಡಿದ್ದು, ಇರಾಕ್, ಮೊರಕ್ಕೋ, ವೆಸ್ಟರ್ನ್‌ ಸಹಾರ ಪ್ರದೇಶಗಳಲ್ಲಿ ಇನ್ ಹಿ ಫಿದಾ  ಹೋರಾಟ ಜಾಲ್ತಿಯಲ್ಲಿದೆ ಎಂದು ಶ್ರೀಕಾಂತ್ ಶೆಟ್ಟಿ ಹೇಳಿದರು.

ಪ್ರವೀಣ್ ನೆಟ್ಟಾರು ಪತ್ನಿಗೆ ಖಾಯಂ ಸರ್ಕಾರಿ ಉದ್ಯೋಗ ನೀಡಿ: ಮುತಾಲಿಕ್ ಆಗ್ರಹ

ಹೆಸರು ಬದಲಿಸಿಕೊಂಡ ಸಿಎಫ್‌ಐ: ಕೇರಳದ ಸಿಎಫ್‌ಐ ಸಂಘಟನೆ ಇದ್ದಕ್ಕಿದ್ದಂತೆ ತನ್ನ ಹೆಸರನ್ನು ಇನ್ ತಿ ಫದಾ ಎಂದು ಬದಲಾಯಿಸಿಕೊಂಡಿದೆ. ಕರಾವಳಿ ಭಾಗದಲ್ಲೂ ಕೂಡ ಈ ರೀತಿಯ ಜನ ಸಂಘರ್ಷ ನಡೆಸಲು ಪಿ.ಎಫ್.ಐ, ಸಿ.ಎಫ್.ಐ ಸಂಚು ರೂಪಿಸುತ್ತಿದೆ. ಅವರ ಕಮ್ಯುನಿಟಿ ಗ್ರೂಪ್ ಗಳಲ್ಲಿ ಈ ತರಹದ ಮೇಸೇಜ್ ಗಳು ಹರಿದಾಡುತ್ತಿದ್ದು, ಆಂತರಿಕ ಭದ್ರತೆ ದೃಷ್ಟಿಯಿಂದ ಪೋಲಿಸ್ ಇಲಾಖೆ ಗುಪ್ತಚರ ಮಾಹಿತಿ ಕಲೆ ಹಾಕಿದೆ. ಇನ್ ಹಿ ಫಿದಾ ಒಂದು ಅಪಾಯದ ಮುನ್ಸೂಚನೆಯಾಗಿದೆ. ಸರಕಾರ ಕೂಡ ಈ ಬಗ್ಗೆ ಎಚ್ಚರ ವಹಿಸಬೇಕು ಎಂದವರು ಹೇಳಿದರು.

ಕರಾವಳಿ ಭಾಗದಲ್ಲಿ ಒಂದು ಸಮುದಾಯದ ಬಾಹುಳ್ಯ ಹೆಚ್ಚುತ್ತಿದೆ, ಕರಾವಳಿಯ ಅನೇಕ ಭಾಗಗಳಲ್ಲಿ ಕೇರಳದ ಜನರು ವಾಸಿಸುತ್ತಿದ್ದಾರೆ. ಕೇರಳ ಮತೀಯವಾದಿಗಳ ಕೈ ಗೆ ಸಿಲುಕಿ ನಲುಗುತ್ತಿದೆ. ಭಟ್ಕಳ ಡಜನ್ ಗಟ್ಟಲೇ ಭಯೋತ್ಪಾದಕರನ್ನು ಉತ್ಪಾದಿಸುತ್ತಿದೆ, ತಮ್ಮ ಅಸ್ಥಿತ್ವಕ್ಕಾಗಿ ಅನೇಕ ಬಗೆಯ ಹೋರಾಟ ನಡೆಸುತ್ತಿದ್ದಾರೆ. ನಾವು ಎಚ್ಚೆತ್ತುಕೊಳ್ಳದಿದ್ದರೆ ಕಾಶ್ಮೀರದಲ್ಲಿ ಆದ ಪರಿಸ್ಥಿತಿ ನಮಗಾಗಬಹುದು. ಹಿಂದು ಸಮಾಜ ಕಾಶ್ಮೀರದಲ್ಲಿ ಪ್ರತಿರೋಧನೆಯನ್ನೇ ಮಾಡಲಿಲ್ಲ. ನಾವು ಕನಿಷ್ಠ ಪ್ರತಿರೋಧವನ್ನಾದರೂ ಒಡ್ಡಬೇಕು. ಅಂತಾರಾಷ್ಟ್ರೀಯ ಸಂಚಿನ ಭಾಗವಾಗಿ ಕರಾವಳಿಯಲ್ಲಿ ಉಗ್ರಗಾಮಿ ಚಟುವಟಿಕೆಗಳು ನಡೆಯುತ್ತಿದೆ. ಸಿರಿಯಾದ ಐಸಿಸ್ ಮೂವ್ಮೆಂಟ್ ಗೆ ಕೇರಳದ ಹುಡುಗರನ್ನು ಸೇರ್ಪಡೆಗೊಳಿಸುತ್ತಿದ್ದಾರೆ ಎಂದರು.

ಪ್ಯಾಲೇಸ್ತೀನ್ ನ ಐಡಿಯಾಲಾಜಿಯನ್ನು ನಮ್ಮ ಜಿಲ್ಲೆಯಲ್ಲಿ ಜಾರಿಗೊಳಿಸುವ ಕೆಲಸವನ್ನು ಪಿ.ಎಫ್.ಐ, ಸಿ.ಎಫ್.ಐ ಮಾಡುತ್ತಿತ್ತು. ಸಂಘಟನೆಗಳು ಮತಾಂದ ಶಕ್ತಿಗಳು ಅವಿತುಕೊಳ್ಳಲಿರುವ ಹುತ್ತವಾಗಿದ್ದು, ಹುತ್ತದಿಂದ ಹಾವನ್ನು ಎಳೆದರೆ ಮತ್ತೊಂದು ಕಡೆ ಹೋಗಿ ಅವಿತುಕೊಳ್ಳುತ್ತದೆ. ನಮ್ಮ ಸಾಂಸ್ಕೃತಿಕ ವೈವಿಧ್ಯತೆಯನ್ನು ನಾಶಗೊಳಿಸಲು ವಿದೇಶ ಹಣ ಬಳಕೆಯಾಗುತ್ತಿದೆ. ಉಗ್ರ ನಿಗ್ರಹ ಕಾಯ್ದೆಯಡಿ ಕೇಸು ದಾಖಲಿಸಬೇಕು. ಸಂಘಟನೆ ನಿಷೇಧ ಮಾಡಿದರೆ, ಬೋರ್ಡ್ ಕಳಚಿದ ಹಾಗೆ, ನಾಳೆ ಮತ್ತೊಂದು ಬೋರ್ಡ್ ಹಾಕಿಕೊಳ್ಳುತ್ತಾರೆ. ಈ ಎಲ್ಲಾ ಸಂಘಟನೆಗಳು ಸಿಮಿಯ ಪ್ರತಿರೂಪವಾಗಿದೆ. ಸಿಮಿಯ ಸುಪ್ರೀಂ ಕೌನ್ಸಿಲ್ ನಲ್ಲಿ ಇದ್ದವರೇ ಇಲ್ಲೂ ಇದ್ದಾರೆ. 

ದೇವಸ್ಥಾನಗಳಲ್ಲಿ ಮನಬಂದಂತೆ ವರ್ತಿಸುವುದು ಸರಿಯಲ್ಲ, ವಸ್ತ್ರ ಸಂಹಿತೆ ಅಗತ್ಯ: ಪ್ರಮೋದ್ ಮುತಾಲಿಕ್‌

ಕರಾವಳಿ ಸಾಮರಸ್ಯಕ್ಕೆ ಮನೆ ಮಾತಾದ ಪ್ರದೇಶವಾಗಿದೆ. ನೈಜ ಇಸ್ಲಾಂನ ಹೆಸರಲ್ಲಿ ಅರಬ್ ಮಾದರಿಯನ್ನು ಇಲ್ಲಿ ಜಾರಿ ಮಾಡಲಾಗುತ್ತಿದೆ. ಭಾರತೀಯ ಮುಸಲ್ಮಾನರ ಅರಬ್ ಮುಸಲ್ಮಾನರನ್ನಾಗಿ ಪರಿವರ್ತಿಸಲಾಗುತ್ತಿದೆ. ಕರಾವಳಿ ಮುಸಲ್ಮಾನರು ಪೂರ್ವಜರ ತಂತುಗಳನ್ನು ಕಡಿದುಕೊಳ್ಳುತ್ತಿದ್ದಾರೆ. ಭಾರತೀಯ ಮುಸಲ್ಮಾನರಿಗೆ ಸಂಶೀರ್ ಬಹದ್ದೂರ್, ಇಬ್ರಾಹಿಂ ಗಾರ್ಡಿ, ಅಬ್ದುಲ್ ಹಮೀದ್ ಮುಂತಾದ ಸ್ವಾತಂತ್ರ್ಯ ಹೋರಾಟಗಾರ ಬಗ್ಗೆ ತಿಳಿದುಕೊಳ್ಳಬೇಕು, ಭಾರತೀಯ ಮುಸಲ್ಮಾನರು ಬಾಬರ್ ವಂಶದವರಲ್ಲ ಎಂದರು.

click me!