* ಭಾರತದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಾಗಲು ಕಾರಣ ಬುರ್ಖಾ ಧರಿಸದಿರುವುದು
* ಹಿಜಾಬ್ ಎನ್ನುವುದು ಮುಸಲ್ಮಾನದಲ್ಲಿ ಪರದೆ ಎಂದರ್ಥ
* ಸೌಂದರ್ಯವನ್ನು ಪರ ಪುರುಷರು ನೋಡಬಾರದು, ಅವರಿಂದ ಮುಚ್ಚಿಡಲು ಹಿಜಾಬ್, ಬುರ್ಕಾ ಬಳಕೆ
ಹುಬ್ಬಳ್ಳಿ(ಫೆ.14): ಬುರ್ಕಾ, ಹಿಜಾಬ್ (Hijab) ಧರಿಸದೆ ಇರುವುದೆ ಭಾರತದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಾಗಲು ಕಾರಣವಾಗಿದೆ ಎಂದು ಮಾಜಿ ಸಚಿವ, ಶಾಸಕ ಜಮೀರ್ ಅಹ್ಮದ್ (Congress MLA Zameer Ahmed) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಜಾಬ್ ಎನ್ನುವುದು ಮುಸಲ್ಮಾನದಲ್ಲಿ ಪರದೆ ಎಂದರ್ಥ. ಇದನ್ನು ಯಾರು ವಿರೋಧ ಮಾಡುತ್ತಿದ್ದಾರೋ ಅವರ ಮನೆಯಲ್ಲಿ ಹೆಣ್ಣು ಮಕ್ಕಳು ಇಲ್ಲ ಎನ್ನಿಸುತ್ತದೆ. ಹೆಣ್ಣುಮಕ್ಕಳಿದ್ದರೆ ಅವರಿಗೆ ಇದರ ಬಗ್ಗೆ ಗೊತ್ತಿರುತ್ತಿತ್ತು. ಮಹಿಳೆಯರ ಸೌಂದರ್ಯವನ್ನು ಪರ ಪುರುಷರು ನೋಡಬಾರದು, ಅವರಿಂದ ಮುಚ್ಚಿಡಲು ಹಿಜಾಬ್, ಬುರ್ಕಾ ಬಳಸಲಾಗುತ್ತದೆ. ನನ್ನ ಪ್ರಕಾರ ಪ್ರಸ್ತುತ ಭಾರತದಲ್ಲೇ ಅತೀ ಹೆಚ್ಚಿನ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಇದಕ್ಕೆ ಕಾರಣವೇನು? ಬುರ್ಕಾ, ಪರದೆಯಲ್ಲಿ ಇರದೇ ಇರುವುದೆ ಇದಕ್ಕೆ ಕಾರಣವಾಗಿದೆ. ಹಿಜಾಬ್ ಇವತ್ತು, ನಿನ್ನೆಯ ವಿಚಾರವಲ್ಲ. ಅನಾದಿ ಕಾಲದಿಂದ ನಡೆದುಬಂದ ಪದ್ಧತಿ. ಅಷ್ಟಕ್ಕೂ ಹಿಜಾಬ್ ಕಡ್ಡಾಯವಲ್ಲ. ಯಾರಿಗೆ ಇಷ್ಟವಿಲ್ಲವೋ ಅವರು ಧರಿಸದಿದ್ದರೂ ನಡೆಯುತ್ತದೆ. ಯಾರಿಗೆ ತಮ್ಮ ಸೌಂದರ್ಯ ಮುಚ್ಚಿಡಬೇಕು ಎಂದೆನಿಸುತ್ತದೊ ಅವರು ಹಿಜಾಬ್ ಧರಿಸುತ್ತಾರೆ ಎಂದರು.
undefined
'ಮುಸ್ಲಿಂ ಎಂದು ಸಾಬೀತು ಮಾಡಲು ಹಿಜಾಬ್ ಧರಿಸಬೇಕಾಗಿಲ್ಲ, ನೆಟ್ಟಿಗರ ವಿರುದ್ಧ ಕಾಶ್ಮೀರಿ ಟಾಪರ್ ಗರಂ
ಒಂದೇ ದಿನದಲ್ಲಿ ಹಿಜಾಬ್ ವಿವಾದ ಬಗೆಹರಿಸುತ್ತಿದ್ದೆವು; ಡಿಕೆಶಿ
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಾ¶್ಟ… ಹಿಂದುತ್ವದ ತಂತ್ರಕ್ಕೆ ಮೊರೆ ಹೋಗಿದ್ದೇವೆ ಎಂಬುದು ಸುಳ್ಳು. ಮಕ್ಕಳ ವಿದ್ಯಾಭ್ಯಾಸ, ಸಮಾಜದ ಸ್ವಾಸ್ಥ್ಯ ಹಾಳಾಗಬಾರದು ಎಂಬ ಕಾರಣದಿಂದಾಗಿ ಆದಷ್ಟುತಾಳ್ಮೆ ವಹಿಸಿದ್ದೇವೆ. ಬಿಜೆಪಿಯವರು ಸರ್ಕಾರವನ್ನು ಸರಿಯಾಗಿ ನಡೆಸಿದ್ದರೆ ಇವತ್ತು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಹಿಜಾಬ್ ವಿವಾದದಿಂದಾಗಿ ದೇಶಕ್ಕೆ ಅವಮಾನ ಆಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಬಗ್ಗೆ ಒಂದು ಅಜೆಂಡಾವನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತಿವೆ. ಒಂದು ವೇಳೆ ನಾವು ಸರ್ಕಾರದಲ್ಲಿ ಇದ್ದಿದ್ದರೆ ಒಂದೇ ದಿನದಲ್ಲಿ ವಿವಾದವನ್ನು ನಿವಾರಣೆ ಮಾಡುತ್ತಿದ್ದೆವು ಎಂದರು.
ಈಶ್ವರಪ್ಪ ದೇಶದ್ರೋಹಿ. ಹಿಜಾಬ್ ಪ್ರಕರಣದಲ್ಲಿ ಈಶ್ವರಪ್ಪ ಹೇಗೆ ನಡೆದುಕೊಂಡಿದ್ದಾರೆ? ಅವರಿಗೆ ಎಷ್ಟುಗೌರವ ನೀಡಬೇಕು? ಅವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರು ಏನು ಬೇಕಾದರೂ ಮಾತನಾಡಬಹುದೆ? ಆದರೆ, ನಾನು ಅವರಷ್ಟುಮಟ್ಟಕ್ಕೆ ಇಳಿದು ಮಾತನಾಡಿಲ್ಲ ಎಂದರು. ಬಿಜೆಪಿಯವರಿಗೆ ರಾಜಕಾರಣ ಮುಖ್ಯ. ಆದರೆ, ನಮಗೆ ಸಮಾಜದ ಶಾಂತಿ, ಸೌಹಾರ್ದ ಮುಖ್ಯ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ನಮ್ಮ ಜವಾಬ್ದಾರಿಯೂ ಆಗಿದೆ ಎಂದರು.
ಇಂದಿನಿಂದ 10 ದಿನ ಸದನ ಕದನ
ಹಿಜಾಬ್-ಕೇಸರಿ ವಸ್ತ್ರ ವಿವಾದ ನಿರ್ವಹಣೆ, ಬಿಟ್‌ಕಾಯಿನ್ ಹಗರಣ, ಗುತ್ತಿಗೆ ಕಾಮಗಾರಿಯಲ್ಲಿ ಶೇ.40ರಷ್ಟುಕಮಿಷನ್ ಆರೋಪ, ಕೊರೋನಾದಿಂದ ಸಾವಿಗೀಡಾದ ಕುಟುಂಬಗಳಿಗೆ ಪರಿಹಾರ ನೀಡಿಕೆಯಲ್ಲಿ ವಿಳಂಬ, ಮೇಕೆದಾಟು, ಮಹದಾಯಿ ಯೋಜನೆ ಜಾರಿ ಸೇರಿದಂತೆ ವಿವಿಧ ವಿಷಯಗಳು ಸೋಮವಾರದಿಂದ ಆರಂಭವಾಗಲಿರುವ ಹತ್ತು ದಿನಗಳ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನದಲ್ಲಿ ಸಾಕಷ್ಟುಬಿಸಿ ಬಿಸಿ ಚರ್ಚೆಯಾಗುವ ಸಾಧ್ಯತೆ ಇದೆ.
Hijab Row: ಬಿಗಿಭದ್ರತೆಯಲ್ಲಿ ಹೈಸ್ಕೂಲ್ ಶುರು, ರಾಜ್ಯಾದ್ಯಂತ ಕಟ್ಟೆಚ್ಚರ!
ಇದಲ್ಲದೆ ಬೆಳೆ ವಿಮೆ ಸಮಸ್ಯೆ, ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ಮಿತಿ ನಿಗದಿಪಡಿಸಿರುವುದು, ಎಪಿಎಂಸಿ ಕಾಯ್ದೆ ವಾಪಸು ಪಡೆಯುವುದು, ಕೃಷಿ ಭೂಮಿಯನ್ನು ಖಾಸಗಿಯವರು ಖರೀದಿಸುವ ಅವಕಾಶ ನೀಡುವ ಕಾಯ್ದೆ ವಾಪಸ್ ಪಡೆಯಬೇಕೆಂಬ ವಿಷಯಗಳು ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ತೀವ್ರ ಚರ್ಚೆಗೆ ಒಳಗಾಗುವ ಸಂಭವವಿದೆ.
ಸೋಮವಾರ ಬೆಳಗ್ಗೆ 11 ಗಂಟೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಂತರ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಿರ್ಣಯ ಮಂಡಿಸಿದ ಬಳಿಕ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಗುತ್ತದೆ. ಈ ತಿಂಗಳ 25ರವರೆಗೆ ಅಧಿವೇಶನ ನಡೆಯಲಿದೆ.