ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 6 ತಿಂಗಳಿಂದ ಬರೀ ವಿವಾದ ಮಾಡಿದ್ದೆ ಆಯ್ತು: ಮಾಜಿ ಸ್ಪೀಕರ್ ಕೆಜಿ ಬೋಪಯ್ಯ ಕಿಡಿ

By Ravi Janekal  |  First Published Dec 23, 2023, 4:19 PM IST

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಆರು ತಿಂಗಳಿಂದ ಬರೀ ವಿವಾದ ಮಾಡಿದ್ದೇ ಆಯ್ತು. ಅಭಿವೃದ್ಧಿ, ಸಾಧನೆ ಶೂನ್ಯ ಎಂದು ಸರ್ಕಾರದ ವಿರುದ್ಧ ಮಾಜಿ ಸ್ಪೀಕರ್ ವಿರಾಜಪೇಟೆ ಮಾಜಿ ಶಾಸಕ ಕೆ.ಜಿ ಬೋಪಯ್ಯ ಕಿಡಿಕಾರಿದರು.


ಕೊಡಗು (ಡಿ.23): ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಆರು ತಿಂಗಳಿಂದ ಬರೀ ವಿವಾದ ಮಾಡಿದ್ದೇ ಆಯ್ತು. ಅಭಿವೃದ್ಧಿ, ಸಾಧನೆ ಶೂನ್ಯ ಎಂದು ಸರ್ಕಾರದ ವಿರುದ್ಧ ಮಾಜಿ ಸ್ಪೀಕರ್ ವಿರಾಜಪೇಟೆ ಮಾಜಿ ಶಾಸಕ ಕೆ.ಜಿ ಬೋಪಯ್ಯ ಕಿಡಿಕಾರಿದರು.

ಹಿಜಾಬ್ ನಿಷೇಧ ವಾಪಸ್ ಪಡೆಯುತ್ತೇವೆಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರ ಸಂಬಂಧ ಇಂದು ಕೊಡಗಿನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಸರ್ಕಾರ ಒಂದು ವರ್ಗದ ಜನರನ್ನು ಓಲೈಸಿ ವೋಟ್ ಬ್ಯಾಂಕ್ ಮಾಡುತ್ತಿದೆ ಸ್ವಲ್ಪ ದಿನದ ಹಿಂದೆ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಕೋಡುತ್ತೇವೆ ಎಂದಿದ್ದರು. ನೀವೇ ಯೋಚನೆ ಮಾಡಿ ರಾಜ್ಯದಲ್ಲಿ ಬರಗಾಲ ಬಂದು ಜನ ಸಾಯುತ್ತಿದ್ದಾರೆ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ನೀಡುವುದಕ್ಕೆ ಹಣವಿಲ್ಲ ಎಂದು ಹೇಳುವ ಸಿದ್ದರಾಮಯ್ಯ, ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡುತ್ತೇವೆ ಎಂದು ಘೋಷಣೆ ಮಾಡ್ತಾರೆ. ರಾಜ್ಯದ ರೈತರ ಬಗ್ಗೆ ಸರ್ಕಾರಕ್ಕೆ ಚಿಂತೆಯಿಲ್ಲದಂತಾಗಿದೆ ಎಂದು ವಾಗ್ದಾಳಿ ನಡೆಸಿದರು.

Tap to resize

Latest Videos

undefined

ಮಹಮ್ಮದ್ ಬಿನ್ ತುಘಲಕ್ ಎಂಬ ಹುಚ್ಚು ದೊರೆ ರೀತಿ ಆಡ್ತಿದ್ದಾರೆ; ಸಿಎಂ ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ

ಹಿಜಾಬ್ ಗಲಭೆ ವಿಚಾರ ವಿದ್ಯಾರ್ಥಿಗಳಿಗೆ ಮರೆತೇ ಹೋಗಿತ್ತು. ಈ ಹಿಂದೆ ನಮ್ಮ ಸರ್ಕಾರ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲರೂ ಯುನಿಫಾರ್ಮ್ ಗಳು ಹಾಕಬೇಕೆಂದು ಹಿಜಾಬ್ ನಿಷೇಧಿಸಿತ್ತು. ಶಿಕ್ಷಣ ಸಂಸ್ಥೆಯಲ್ಲಿ ಧಾರ್ಮಿಕ ಭಾವನೆ ಧರ್ಮ ಯಾವುದೂ ಇರಬಾರದು ಎನ್ನುವುದು ನಮ್ಮ ಉದ್ದೇಶ ಆಗಿತ್ತು. ಹಿಜಾಬ್ ವಿಷಯವನ್ನು ಕೆಲವು ಧರ್ಮಾಂಧರು ವಿವಾದ ಮಾಡಿ ಕಿಡಿ ಹಚ್ಚಿದರು. ಇದರಿಂದ ಸಾಕಷ್ಟು ತೊಂದರೆ ಆಯಿತು. ವಿದ್ಯಾರ್ಥಿಗಳು ನೋವು ಅನುಭವಿಸಿದರು.

ಪ್ರಧಾನಿ ಮೋದಿ ₹5000 ಕೊಡ್ತಾರೆ ಅನ್ನೋ ವದಂತಿ; ಗ್ಯಾಸ್ ಅಂಗಡಿ ಮುಂದೆ ಮಹಿಳೆಯರು ನೂಕುನುಗ್ಗಲು!

ಈಗ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಂ ಮತಗಳು ಸಾಲಿಡ್ ಆಗಿ ಬೇಕು ಅಂತ ಈ ರೀತಿ ಮಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಏನು ಬೇಕಾದರೂ ಆಗಲಿ ಎನ್ನುವುದು ಇವರ ಉದ್ದೇಶ. ಕನಿಷ್ಠ ಶಿಕ್ಷಣ ಸಚಿವರಿಗಾದರೂ ಇದರ ಬಗ್ಗೆ ಚಿಂತನೆ ಇರಬೇಕಿತ್ತು. ಆದರೆ ಶಿಕ್ಷಣ ಸಚಿವರದ್ದು ಯೆಸ್ ಬಾಸ್ ಎನ್ನುವ ಸ್ಥಿತಿಯಾಗಿದೆ 
ಶಿಕ್ಷಣ ಸಂಸ್ಥೆಯಲ್ಲಿ ಧರ್ಮ ಧರ್ಮ ಎಂದು ಹೊಡೆದಾಡಿಕೊಳ್ಳಬೇಕಾ? ಎಂದು ಸರ್ಕಾರವನ್ನು ಪ್ರಶ್ನಿಸಿದರು.

click me!